Back
Home » ಗಾಸಿಪ್
ಬುಮ್ರಾ ಜೊತೆ ಪ್ರೀತಿಯಲ್ಲಿ ಬಿದ್ರಾ 'ನಟಸಾರ್ವಭೌಮ' ನಾಯಕಿ?
Oneindia | 8th Jun, 2019 05:42 PM
 • ಅನುಪಮಾ ಬಮ್ರಾ ಮಧ್ಯೆ ಏನಿದೆ?

  ಅನುಪಮಾ ಮತ್ತು ಬುಮ್ರಾ ನಡುವೆ ನಿಜಕ್ಕು ಏನು ನಡೀತಿದೆ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಅನುಪಮಾ ಸೌತ್ ಸಿನಿ ಇಂಡಸ್ಟ್ರಿಯಾ ನಟಿ. ಮಲಯಾಳಂ ಚಿತ್ರರಂಗದ ಮೂಲಕ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂದಲ್ಲೂ ಮಿಂಚಿದ್ದಾರೆ. ಇವರು ಗುಜರಾತ್ ಮೂಲದವರಾದ ಬುಮ್ರಾಗೆ ಹೇಗೆ ಪರಿಚಯವಾದ್ರು ಎನ್ನುವುದೇ ಅನೇಕರ ಪ್ರಶ್ನೆ.


 • ಅನುಪಮಾರನ್ನ ಫಾಲೋ ಮಾಡುತ್ತಿರುವ ಬುಮ್ರಾ

  ಟೀಂ ಇಂಡಿಯ ಆಟಗಾರ ಬುಮ್ರಾ ಮತ್ತು ನಟಿ ಅನುಪಮಾ ಇಬ್ಬರು ಪ್ರೀತಿಯ ಗೂಡಲ್ಲಿ ಬಂದಿಯಾಗಿದ್ದಾರೆ ಎಂದು ಸುದ್ದಿಯಾಗಲು ಕಾರಣವಾಗಿದ್ದು ಟ್ವಿಟ್ಟರ್. ಟ್ವಿಟ್ಟರ್ ನಲ್ಲಿ ಬುಮ್ರಾ ಯಾವ ನಟಿಯನ್ನು ಫಾಲೋ ಮಾಡುತ್ತಿಲ್ಲ. ಕೇವಲ 25ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಆದ್ರೆ ಅದರಲ್ಲಿ ನಟಿ ಅನುಪಮಾ ಅವರು ಒಬ್ಬರು. ಕೇವಲ ಫಾಲೋ ಮಾತ್ರವಲ್ಲದೆ ಅನುಪಮಾ ಅವರ ಫೋಟೋಗಳಿಗೆ ಲೈಕ್ ಒತ್ತಿ ಶೇರ್ ಕೂಡ ಮಾಡುತ್ತಿದ್ದಾರೆ. ಇದು ಅನೇಕರ ಅನಮಾನಗಳಿಗೆ ಕಾರಣವಾಗಿದೆ.

  ಶ್ರುತಿ ಪಾತ್ರ ನೀಡಿದಕ್ಕೆ ಧನ್ಯವಾದ ತಿಳಿಸಿದ ಅನುಪಮ


 • ಅನುಪಮಾ ಕೂಡ ಫಾಲೋ ಮಾಡುತ್ತಿದ್ದಾರೆ

  ಬುಮ್ರಾ ಮಾತ್ರವಲ್ಲದೆ ಅನುಪಮಾ ಕೂಡ ಬುಮ್ರಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಬುಮ್ರಾ ಹಾಕಿದ ಪ್ರತಿಯೊಂದು ಪೋಸ್ಟ್ ಗಳಿಗೂ ಅನುಪಮಾ ಲೈಕ್ ಒತ್ತಿ ಶೇರ್ ಮಾಡುತ್ತಾರೆ. ಅನುಪಮಾ ಯಾವ ಆಟಗಾರನ್ನು ಫಾಲೋ ಮಾಡುತ್ತಿಲ್ಲ ಆದ್ರೆ ಬುಮ್ರಾ ಅವರನ್ನು ಮಾತ್ರ

  ಫಾಲೋ ಮಾಡುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾಗಿ ಏನು ಇದೆ ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.


 • ಬುಮ್ರಾ ಪ್ರೀತಿ ಬಗ್ಗೆ ಹೇಳಿದ್ದೇನು ಅನುಪಮಾ?

  ಸದ್ಯ ಬುಮ್ರಾ ವರ್ಲ್ಡ್ ಕಪ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಅನುಪಮಾ ಅವರನ್ನು ಕೇಳಿದ್ರೆ ಇಬ್ಬರು ಉತ್ತಮ ಸ್ನೇಹಿತರಷ್ಟೆ, ಅದೂ ಬಿಟ್ರೆ ಇನ್ನೇನು ಇಲ್ಲ, ಎನ್ನುವ ಉತ್ತರ ನೀಡುತ್ತಿದ್ದಾರೆ. ಆದ್ರೆ ನೆಟ್ಟಿಗರು ಮಾತ್ರ ಇಬ್ಬರದು ಕೇವಲ ಸ್ನೇಹ ಅಲ್ಲ. ಇಬ್ಬರ ನಡುವೆ ಪ್ರೀತಿ ಇದೆ ಇನ್ನುವ ಮಾತುಗಳನ್ನು ಹೇಳುತ್ತಿದ್ದಾರೆ.

  ಪ್ರೀತಿಯಿಂದ ಸ್ವಾಗತಿಸಿದ ಕನ್ನಡಿಗರಿಗೆ ಧನ್ಯವಾದ ಹೇಳಿದ ಅನುಪಮಾ


 • ನಟಸಾರ್ವಭೌಮ ಚಿತ್ರದ ನಾಯಕಿ

  ಅನುಪಮಾ 'ನಟಸಾರ್ವಭೌಮ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರಪ್ರಿಯರ ಮುಂದೆಯು ಬಂದಿದ್ದಾರೆ. ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ್ದ ಅನುಪಮಾ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ. ಸದ್ಯ ಮಲಯಾಳಂ ಚಿತ್ರವೊಂದರಲ್ಲಿ ಅಭಿನಯಿಸುವ ಜೊತೆಗೆ ಸಹಾಯಕ ನಿರ್ದೇಶಕಿಯಾಗಿಯು ಕೆಲಸ ಮಾಡುತ್ತಿದ್ದಾರೆ.
ಸಿನಿಮಾ ತಾರೆಯರಿಗೆ ಕ್ರಿಕೆಟರ್ಸ್ ಮೇಲೆ ಪ್ರೀತಿ ಆಗುವುದು ಸಹಜ. ಸಾಕಷ್ಟು ಚಿತ್ರ ತಾರೆಯರು ಕ್ರಿಕೆಟ್ ಆಟಗಾರರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೆ ಪ್ರೀತಿ, ಪ್ರೇಮ, ಡೇಟಿಂಗ್ ಅಂತ ಓಡಾಡುತ್ತಿರುವ ಬಗ್ಗೆ ಸಾಕಷ್ಟು ರೂಮರ್ಸ್ ಕೂಡ ಹರಿದಾಡುತ್ತಿರುತ್ತೆ. ಕ್ರಿಕೆಟರ್ಸ್ ಮತ್ತು ಸಿನಿ ಮಂದಿಯ ಪ್ರೀತಿಯ ಕತೆ ಇವತ್ತು ನಿನ್ನೆಯದಲ್ಲ. ಅನಾದಿ ಕಾಲದಿಂದನೂ ಇದೆ.

ಈಗ ಅದೇ ಸಾಲಿಗೆ ಮತ್ತೊಂದು ಲವ್ ಸ್ಟೋರಿ ಸೇರ್ಪಡೆಯಾಗಿದೆ. ಈಗಾಗಲೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದೂ ಮತ್ಯಾರು ಅಲ್ಲ, ಭಾರತೀಯ ಕ್ರಿಕೆಟ್ ತಂಡದ ಆಟಗಾರ, ಬೆಸ್ಟ್ ಬೌಲರ್ ಎನಿಸಿಕೊಂಡಿರುವ ಜಸ್ಪ್ರಿತ್ ಬೂಮ್ರ ಮತ್ತು ಮಲಯಾಳಂನ ಖ್ಯಾತ ನಟಿ ಅನುಪಮಾ ಪರಮೇಶ್ವರನ್.

ಪುನೀತ್ ನಾಯಕಿ ಈಗ ಸಹಾಯಕ ನಿರ್ದೇಶಕಿ

ಹೌದು ಇವರಿಬ್ಬರ ಬಗ್ಗೆ ಈಗಾಗಲೆ ಸಾಕಷ್ಟು ಚರ್ಚೆಗಳು ಪ್ರಾರಂಭವಾಗಿದೆ. ಅನುಪಮಾ ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ನಟಿ, ಬೂಮ್ರ ಉತ್ತರ ಭಾರತದವರು. ಇವರಿಬ್ಬರಿಗೂ ಹೇಗೆ ಪರಿಚಯ, ಹೇಗೆ ಪ್ರೀತಿ ಪ್ರಾರಂಭವಾಗಿದೆ ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತಿದೆ. ಮುಂದೆ ಓದಿ..

   
 
ಹೆಲ್ತ್