Back
Home » ಆರೋಗ್ಯ
ಮೂಳೆಗಳ ಗಾಯಾಳು ಸಮಸ್ಯೆಗೆ ಗಿಡಮೂಲಿಕೆ ಪರಿಹಾರಗಳು
Boldsky | 10th Jun, 2019 12:32 PM

ದೇಹದ ಯಾವುದೇ ಭಾಗದಲ್ಲಿ ನೋವಾದರೂ ಅದನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಎಲುಬುಗಳಿಗೆ ನೋವಾಗದರೆ ಆಗ ಆ ನೋವು ಸಹಿಸಲು ಅಸಾಧ್ಯ ಎನ್ನುವಂತೆ ಇರುತ್ತದೆ. ಯಾಕೆಂದರೆ ಎಲುಬಿನ ನೋವನ್ನು ಒಂದು ಸಲ ಚಿಕಿತ್ಸೆ ನೀಡಿ ನಿವಾರಣೆ ಮಾಡಿದರೂ ಅದು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇದು ಹೆಚ್ಚಾಗಿರುವುದು. ಎಲುಬಿಗೆ ಏಟಾದರೆ ಆಗ ನಾವು ವೈದ್ಯರ ಬಳಿಗೆ ಹೋಗಿ ಬ್ಯಾಂಡೇಜ್ ಸುತ್ತಿಕೊಳ್ಳುತ್ತೇವೆ. ಎಲುಬುಗಳು ಮರುಜೋಡಣೆಯಾಗಲು ತುಂಬಾ ದೀರ್ಘ ಸಮಯ ಬೇಕಾಗುತ್ತದೆ. ಇದಕ್ಕಾಗಿ ನಾವು ತುಂಬಾ ತುಂಬಾ ತಾಳ್ಮೆ ಹಾಗೂ ಸ್ಥಿರತೆಯಿಂದ ಇರಬೇಕು.

ಎಲುಬುಗಳಲ್ಲಿ ಕಂಡುಬರುವಂತಹ ನೋವನ್ನು ನಿವಾರಣೆ ಮಾಡಲು ನೋವು ನಿವಾರಕ ತೆಗೆದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಎಲುಬಿಗೆ ನೋವಾದರೆ ಆಗ ಕೆಲವೊಂದು ಸಲ ಚಲನೆ ಮೇಲೆ ಪರಿಣಾಮ ಬೀರುವುದು. ಈ ವೇಳೆ ನೀವು ತಕ್ಷಣವೇ ಏನಾದರೂ ಔಷಧಿ ತೆಗೆದುಕೊಂಡು ಆ ಕ್ಷಣಕ್ಕೆ ಪರಿಹಾರ ಕಂಡುಕೊಳ್ಳುವಿರಿ. ಆದರೆ ಇದು ದೀರ್ಘಾವಧಿಗೆ ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ನೀವು ಇಂತಹ ಔಷಧಿಯನ್ನು ತೆಗೆದುಕೊಳ್ಳುವ ಮೊದಲು ಕೆಲವೊಂದು ಗಿಡಮೂಲಿಕೆ ಔಷಧಿಗಳನ್ನು ಬಳಸಿಕೊಂಡು ನೋವನ್ನು ನಿವಾರಣೆ ಮಾಡಿಕೊಳ್ಳಬಹುದು. ಇದು ಯಾವುದೇ ರೀತಿಯಿಂದಲೂ ಅಡ್ಡಪರಿಣಾಮ ಕೂಡ ಉಂಟು ಮಾಡುವುದಿಲ್ಲ.

ಮೂಳೆಯ ಗಾಯದ ಬಗ್ಗೆ...

ಅತಿಯಾದ ನೋವು, ಊತ ಮತ್ತು ಬಾಧಿತ ಜಾಗವು ಮೆತ್ತಗಿದ್ದರೆ ಇದು ಮೂಳೆಯ ಗಾಯ ಅಥವಾ ಬಿರುಕು ಬಿಟ್ಟಿರುವುದರ ಸಂಕೇತವಾಗಿದೆ. ಇದರಿಂದಾಗಿ ಮೂಳೆಯ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ ಅದು ದೊಡ್ಡ ಮಟ್ಟದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡಬಹುದು. ರಕ್ತ ಹೆಪ್ಪುಗಟ್ಟುವುದು, ಸೆಳೆತ ಮತ್ತು ಭಾಗಶಃ ಪಾರ್ಶ್ವವಾಯು ಕಾಣಿಸಿಕೊಳ್ಳುವುದು. ಇಂತಹ ಸಮಯದಲ್ಲಿ ಮೂಳೆಗಳಿಗೆ ಸರಿಯಾದ ಚಿಕಿತ್ಸೆ ನೀಡುವುದು ಅತೀ ಅನಿರ್ವಾಯವಾಗಿರುವುದು. ಅದಾಗ್ಯೂ, ಪ್ಲಾಸ್ಟರ್ ಹಾಕಿಸಿಕೊಳ್ಳುವುದು ಪ್ರತೀ ಸಲ ಸಮಸ್ಯೆಗೆ ಪರಿಹಾರವಲ್ಲ. ಕೆಲವೊಂದು ಗಿಡಮೂಲಿಕೆ ಚಿಕಿತ್ಸೆಯಿಂದಲೂ ಮೂಳೆಗಳ ನೋವನ್ನು ವೇಗವಾಗಿ ಶಮನ ಮಾಡಬಹುದು. ಗಿಡಮೂಲಿಕೆ ವಿಧಾನಗಳು ತುಂಬಾ ಜನಪ್ರಿಯವಾಗಿದೆ. ಮೂಳೆಗಳ ಚಿಕಿತ್ಸೆಗೆ ಇರುವ ಕೆಲವೊಂದು ಗಿಡಮೂಲಿಕೆ ಚಿಕಿತ್ಸಾ ಕ್ರಮಗಳು ಈ ರೀತಿಯಾಗಿ ಇದೆ.

ಕಿಣ್ವಗಳನ್ನು ಶಮನ ಮಾಡುವುದು

ಪ್ರತಿನಿತ್ಯವು ಅನಾನಸು ಸೇವನೆ ಮಾಡಿದರೆ ಆಗ ಮೂಳೆಗಳು ತುಂಬಾ ವೇಗವಾಗಿ ಗುಣಮುಖವಾಗುವುದು. ಪ್ರತಿನಿತ್ಯ ಅರ್ಧ ಅನಾನಸು ತಿನ್ನುವ ಮೂಲಕ ಅದರಲ್ಲಿ ಇರುವಂತಹ ಬ್ರೊಮೆಲಿನ್ ಎನ್ನುವಂತಹ ಕಿಣ್ವವು ಮೂಳೆಗಳನ್ನು ಸುಧಾರಣೆ ಮಾಡುವುದು. ಈ ಕಿಣ್ವದ ಸಪ್ಲಿಮೆಂಟ್ ಗಳನ್ನು ಸೇವನೆ ಮಾಡಬಹುದು.

Most Read: ಮೂಳೆ ಮುರಿತ ಸರಿಪಡಿಸಲು ಕೆಲವು ಪವರ್ ಫುಲ್ ಆಹಾರಗಳು

ಕೆಫಿನ್ ಮತ್ತು ಪ್ಯಾಕ್ ಮಾಡಿರುವ ಆಹಾರ ಕಡೆಗಣಿಸಿ

ಮೂಳೆಗಳ ನೋವಿನ ವೇಳೆ ಕೆಫಿನ್ ಮತ್ತಷ್ಟು ನೋವು ಉಂಟು ಮಾಡುವುದು ಮತ್ತು ಮೂಳೆಗಳಿಗೆ ಇದರಿಂದ ಹಾನಿ ಆಗುವುದು. ಇದರಿಂದಾಗಿ ನೀವು ಕೋಲಾ ಮತ್ತು ಅತಿಯಾಗಿ ಚಾ, ಕಾಫಿ ಸೇವನೆಯನ್ನು ಮೂಳೆಗಳಿಗೆ ಗಾಯವಾದ ಸಂದರ್ಭದಲ್ಲಿ ಕಡೆಗಣಿಸಬೇಕು. ಇದಕ್ಕೆ ಚಿಕಿತ್ಸೆಯಿಂದ ನೇರವಾದ ಸಂಬಂಧವಿಲ್ಲದೆ ಇದ್ದರೂ ಕೆಫಿನ್ ನಿಂದ ದೂರವಿದ್ದರೆ ಆಗ ಬೇಗನೆ ಗುಣಮುಖವಾಗುವಂತಹ ಸಾಧ್ಯತೆಯು ಇರುವುದು. ಕೆಂಪು ಮಾಂಸವನ್ನು ಚಿಕಿತ್ಸೆಯ ವೇಳೆ ಸಂಪೂರ್ಣವಾಗಿ ಕಡೆಗಣಿಸಿ. ಸಂಸ್ಕರಿತ ಹಾಗೂ ಪ್ಯಾಕ್ ಮಾಡಲ್ಪಟ್ಟಿರುವಂತಹ ಆಹಾರವನ್ನು ಕೂಡ ಈ ವೇಳೆ ನೀವು ಕಡೆಗಣಿಸಬೇಕು. ಯಾಕೆಂದರೆ ಇದರಲ್ಲಿ ಪೋಸ್ಪರಸ್ ಅಂಶವು ಇದೆ ಮತ್ತು ಇದು ಮೂಳೆಗಳ ಸಾಂದ್ರತೆ ಮೇಲೆ ಪರಿಣಾಮ ಬೀರಬಹುದು.

ಶಮನಕ್ಕೆ ಸಾರಭೂತ ತೈಲಗಳು

ಚರ್ಮದ ಆರೈಕೆ ಮತ್ತು ಆರಾಮ ನೀಡುವಂತಹ ಸಾರಭೂತ ತೈಲಗಳ ಲಾಭಗಳ ಬಗ್ಗೆ ತಿಳಿದಿರುವಂತಹ ಜನರು ಮೂಳೆ ಗಾಯವಾದರೂ ಇವುಗಳನ್ನು ಬಳಸಿಕೊಳ್ಳಬಹುದು. ಫರ್, ಸೈಪ್ರೆಸ್ ಮತ್ತು ಹೆಲಿಚಿರಿಮ್ ಎಣ್ಣೆಗಳನ್ನು ಮೂಳೆಗಳನ್ನು ಸರಿಪಡಿಸಲು ಬಳಸಿಕೊಳ್ಳಬಹುದು. ಅಂಗಾಂಶಗಳು ಮತ್ತು ಮೂಳೆಗಳಿಗೆ ಇದು ಶಮನ ನೀಡುವಂತಹ ಚಿಕಿತ್ಸೆಯಾಗಿದೆ.

ವಿಟಮಿನ್ ಸೇವನೆ ಹೆಚ್ಚಿಸಿ

ಬಸಳೆ, ಬ್ರಾಕೋಲಿ ಮತ್ತು ಇತರ ಕೆಲವೊಂದು ಹಸಿರೆಳೆ ತರಕಾರಿಗಳು ವಿಟಮಿನ್ ಗಳಿಂದ ಸಮೃದ್ಧವಾಗಿದೆ ಮತ್ತು ಇದು ಮೂಳೆಗಳಿಗೆ ಚಿಕಿತ್ಸೆ ನೀಡಲು ತುಂಬಾ ಪರಿಣಾಮಕಾರಿ. ಹಾಲಿನ ಉತ್ಪನ್ನಗಳಾಗಿರುವಂತಹ ಚೀಸ್ ಕೂಡ ಮೂಳೆಗಳನ್ನು ಜೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ಇದು ನಿವಾರಣೆ ಮಾಡುವುದು.

ಮೂಳೆಗಳಿಗೆ ಚಿಕಿತ್ಸೆ ನೀಡುವ ವೇಳೆ ಕಡೆಗಣಿಸಬೇಕಾಗಿರುವ ಆಹಾರಗಳು

*ಆಲ್ಕೋಹಾಲ್

*ಅತಿಯಾದ ಉಪ್ಪು

*ತಂಪು ಪಾನೀಯ ಮತ್ತು ಕೋಲಾ

*ಪ್ಯಾಕ್ ಮಾಡಲ್ಪಟ್ಟಿರುವ ಆಹಾರ

Most Read: ಮೂಳೆಗಳು ಗಟ್ಟಿಮುಟ್ಟಾಗಿರಲು 8 ಟಿಪ್ಸ್

ವಿಶ್ರಾಂತಿ, ದಿನಚರಿ ಮತ್ತು ಪುನರಾವರ್ತನೆ

ಮೂಳೆಗಳು ತುಂಬಾ ನಿಧಾನವಾಗಿ ಮರಜೋಡಣೆಯಾಗುವುದು ಮತ್ತು ಇದರಿಂದಾಗಿ ನೋವು ಎನ್ನುವುದು ಇದ್ದೇ ಇರುತ್ತದೆ. ಇದರಿಂದಾಗಿ ನೀವು ನೈಸರ್ಗಿಕ ಮನೆಮದ್ದನ್ನು ಬಳಸಿಕೊಳ್ಳಬೇಕು. ನೈಸರ್ಗಿಕ ಮತ್ತು ಗಿಡಮೂಲಿಕೆ ಚಿಕಿತ್ಸೆಯು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡರೂ ಅದರಿಂದ ಸಂಪೂರ್ಣ ಫಲಿತಾಂಶ ಪಡೆಯಬಹುದು.

 
ಹೆಲ್ತ್