Back
Home » ಆರೋಗ್ಯ
ಮನೆ ಮದ್ದುಗಳನ್ನು ಬಳಸಿ ಮತ್ತು ಬೆನ್ನು ನೋವಿಗೆ ಹೇಳಿ ಗುಡ್ ಬೈ
Boldsky | 11th Jun, 2019 11:15 AM
 • ಮೇಲೆ ಹೇಳಿದ ಹಾಗೆ ಇತ್ತೀಚಿಗೆ ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ

  ಸಾಮಾನ್ಯದಲ್ಲಿ ಸಾಮಾನ್ಯವಾದ ಈ ಬೆನ್ನು ನೋವನ್ನು ಪ್ರತಿಯೊಬ್ಬರೂ ಅವರ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ , ಒಂದಲ್ಲ ಒಂದು ಕಾರಣದಿಂದ ಅವರ ಜೀವಮಾನದಲ್ಲಿ ಎಂದಾದರೂ ಒಂದು ದಿನ ಅನುಭವಿಸಿಯೇ ಅನುಭವಿಸುತ್ತಾರೆ. ಏನ್. ಐ. ಹೆಚ್.( ನ್ಯಾಷನಲ್ ಇನ್ಸ್ಟಿಟ್ಯುಟ್ಸ್ ಒಫ್ ಹೆಲ್ತ್ ) ನ ವರದಿಯ ಪ್ರಕಾರ 100 ಜನರಲ್ಲಿ ಸುಮಾರು ಮತ್ತು ಕನಿಷ್ಠ 80 ರಷ್ಟು ಮಂದಿ ಜನರು ಈ ರೀತಿಯ ನೋವುಗಳಿಗೆ ಅವರ ದಿನ ನಿತ್ಯದ ಜೀವನದಲ್ಲಿ ಪ್ರತಿಕ್ರಿಯಿಸುತ್ತಲೇ ಇರುತ್ತಾರಂತೆ .


 • ಬೆನ್ನು ನೋವನ್ನು ಹೋಗಲಾಡಿಸುವ ಪ್ರಯತ್ನ ಮಾಡಿ

  ಬೆನ್ನು ನೋವನ್ನು ಬಹಳ ದಿನಗಳಿಂದ ಅನುಭವಿಸುತ್ತಿರುವವರು ಇದೊಂದು ವಾಸಿಯಾಗದ ಖಾಯಿಲೆ ಎಂದು ಭಯವೇನೂ ಪಡಬೇಕಾಗಿಲ್ಲ .ಅದು ಸಾಧಾರಣ ಬೆನ್ನು ನೋವೇ ಆಗಿರಲಿ ಅಥವಾ ತುಂಬಾ ಗಾಢವಾದ ನೋವೇ ಆಗಿರಲೀ . ಸರಿಯಾದ ಚಿಕೆತ್ಸೆ ಮತ್ತು ಸಲಹೆಗಳನ್ನು ಪಾಲನೆ ಮಾಡಿದ್ದೇ ಆದರೆ ಖಂಡಿತ ಇದಕ್ಕೆ ಒಂದು ಪರಿಹಾರ ಇದ್ದೆ ಇರುತ್ತದೆ . ಇಲ್ಲಿ ಕೆಲವೊಂದು ಸಲಹೆಗಳು ನಿಮ್ಮ ಸಹಾಯಕ್ಕೆ ಬರಬಹುದು .


 • ನಿತ್ಯ ನಿಯಮಿತ ವ್ಯಾಯಾಮ

  ಎಲ್ಲಾ ಅನಿಷ್ಟಕ್ಕೂ ಶನೇಶ್ವರನೇ ಕಾರಣ ಎಂಬಂತೆ ಇಂದಿನ ಯುವಜನತೆ ಕಾಣುತ್ತಿರುವ ದೇಹದ ಹಲವಾರು ಸಂಕಟಗಳಿಗೆ ಕಾರಣ ಎಂದರೆ ಅವರು ಸರಿಯಾದ ರೀತಿಯಲ್ಲಿ ದೇಹ ದಂಡನೆ ಮಾಡದಿರುವುದು . ನೋವುಗಳನ್ನು ದೂರವಿಡಬೇಕಾದರೆ ದೇಹಕ್ಕೆ ಕಾಲ ಕಾಲಕ್ಕೆ ನಿಯಮಿತ ವ್ಯಾಯಾಮ ಅತಿ ಅವಶ್ಯ . ರಾತ್ರಿ ಮಲಗಿದರೆ ಬೆಳಗ್ಗೆ ಹಾಸಿಗೆ ಇಂದ ಮೇಲೇಳುವುದೇ ಒಂದು ಹರಸಾಹಸವಾಗಿಬಿಟ್ಟಿದೆ . ಏಕೆಂದರೆ ಏಳಲಿಕ್ಕೂ ಆಗದಂತಹ ಮೈ ಕೈ ನೋವು ಬೆನ್ನು ಮತ್ತು ಸೊಂಟ ನೋವು ಆಗಲೇ ದೇಹದಲ್ಲಿ ತನ್ನ ಪ್ರಭಾವ ಮಿತಿ ಮೀರುವಂತೆ ಮಾಡಿರುತ್ತದೆ . ಆದ್ದರಿಂದ ಸಾಧ್ಯವಾದಷ್ಟು ಬೆಳಗ್ಗೆ ಮತ್ತು ಸಂಜೆ ವಾಕ್ ಮಾಡಲು ಪ್ರಯತ್ನಿಸಿ . ಕೆಲವೊಂದು ಕೈ ಕಾಲು ಸ್ಟ್ರೆಚಿಂಗ್ ಅಂದರೆ ಚಾಚುವಂತಹ ವ್ಯಾಯಾಮಗಳನ್ನು ಒಬ್ಬ ತಜ್ಞರ ಸಹಾಯದಿಂದ ಮಾಡುವು ದನ್ನು ರೂಡಿಸಿ ಕೊಳ್ಳಿ . ಸ್ಟ್ರೆಚ್ ಮಾಡುವ ಎಕ್ಸರ್ಸೈಜ್ ಮಾಡುವುದರಿಂದ ನಿಮ್ಮ ದೇಹಕ್ಕೆ ಬಹಳ ಅನುಕೂಲ ಇದೆ. ' ಎಂದೋರ್ಫಿನ್ ' ಎಂಬ ಅಂಶ ದೇಹದ ನರಗಳಲ್ಲಿ ಬಿಡುಗಡೆ ಆಗಿ ನೋವು ಶುರುವಾಗುವುದನ್ನು ಆರಂಭದಲ್ಲೇ ತಡೆಯುತ್ತದೆ . ಇದರಲ್ಲಿ ಕೆಲವೊಂದು ಸುಲಭವಾದ ವ್ಯಾಯಾಮ ಗಳೆಂದರೆ ಕಾಲು ಚಾಚಿ ಕುಳಿತು ಅಥವಾ ನೇರವಾಗಿ ನಿಂತು ನಿಮ್ಮ ಕಾಲುಗಳ ಬೆರಳುಗಳನ್ನು ಮುಟ್ಟುವಂತಹ ವ್ಯಾಯಾಮ . "ಕೋಬ್ರಾ ಪೋಸ್ " ಅಂತಲೂ ಇದಕ್ಕೆ ಕರೆಯುತ್ತಾರೆ . ಇವು ಕೇವಲ ನಿಮ್ಮ ಬೆನ್ನು ನೋವು ಶುರುವಾಗುವುದಕ್ಕೂ ಮುಂಚಿನ ಮತ್ತು ಬೆನ್ನು ನೋವು ಬರದಂತೆ ತಡೆಯುವ ವ್ಯಾಯಾಮಗಳಷ್ಟೇ. ತೀರಾ ಜಾಸ್ತಿ ಬೆನ್ನು ನೋವು ಹೊಂದಿರುವವರು ಈ ತರಹದ ವ್ಯಾಯಾಮಗಳನ್ನು ಮಾಡಲೇಬೇಡಿ . ಏಕೆಂದರೆ ಇದರಿಂದ ನಿಮ್ಮ ಬೆನ್ನು ನೋವು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ .


 • ದೇಹಕ್ಕೆ ಒಂದು ಒಳ್ಳೆಯ ಮಸಾಜ್

  ಇದು ಬಹಳ ಹಿಂದಿನ ಕಾಲದಿಂದಲೂ ನೋವಿಗೆ ಉಪಶಮನ ಕಾರಿಯಾಗಿ ಬಂದಿರುವ ಒಂದು ತಂತ್ರ. ಕೆಲವರು ನೋವಿರುವ ಜಾಗದಲ್ಲಿ ಎಣ್ಣೆಯಿಂದ ತಿಕ್ಕಿದರೆ ನೋವು ಇನ್ನಷ್ಟು ಜಾಸ್ತಿಯಾಗುತ್ತದೆ ಎಂದು ನಂಬಿದ್ದಾರೆ . ಆದರೆ ಇದು ತಪ್ಪು . ದೇಹದಲ್ಲಿ ಯಾವುದೇ ಭಾಗದಲ್ಲಿ ನೋವಿದ್ದರೂ ಅದಕ್ಕೆ ಮಸಾಜ್ ಅತ್ಯವಶ್ಯ . ನೋವಿರುವ ಜಾಗಕ್ಕೆ ಮಸಾಜ್ ಮಾಡಿದರೆ ಆ ಕ್ಷಣದಲ್ಲಿ ಮಾತ್ರ ನೋವು ಜಾಸ್ತಿಯಾದಂತೆ ಕಂಡರೂ ಸಮಯ ಕಳೆದಂತೆ ಬೇರೆ ಯಾವ ರೀತಿಯ ಪದ್ಧತಿಗಳೂ ಪರಿಣಾಮಕಾರಿಯಾಗದಷ್ಟು ಚೇತರಿಕೆ ನೀವು ಮಸಾಜ್ ನಲ್ಲಿ ಕಾಣಬಹುದು . ಸಾಮಾನ್ಯವಾಗಿ ಮಸಾಜ್ ಗೆ ಸಾಸಿವೆ ಎಣ್ಣೆ ಬಳಕೆ ಮಾಡಿದರೆ ಬಹಳ ಬೇಗನೆ ನೋವಿನಲ್ಲಿ ಗುಣ ಕಾಣಬಹುದು . ಮಸಾಜ್ ಎಂದಿಗೂ ಸ್ನಾನಕ್ಕೆ ಮುಂಚೆ ಮಾಡಿಸಿಕೊಂಡರೆ ಒಳ್ಳೆಯದು . ಮಸಾಜ್ ನ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯ ಚೇತರಿಕೆ ಕಂಡು ಬರುವುದು .


 • ಆದಷ್ಟು ನೇರವಾಗಿ ನಿಂತು ಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ

  ನಿಮಗೆ ವಿಪರೀತ ಬೆನ್ನು ನೋವು ಕಾಡುತ್ತಿದೆ ಎಂದರೆ ಅದಕ್ಕೆ ಕಾರಣ ಈಗಿನ ಜನತೆಯಲ್ಲಿ ಬಹಳಷ್ಟು ಮಂದಿ ಬೆಳಗ್ಗಿನಿಂದ ಸಂಜೆವರೆಗೂ ಕಂಪ್ಯೂಟರ್ ನ ಮುಂದೆ ಕುಳಿತು ಕೆಲಸ ಮಾಡುವುದು . ಇದರಿಂದ ನಿಧಾನವಾಗಿ ನಿಮಗೇ ಅರಿವಿಲ್ಲದಂತೆ ನಿಮ್ಮ ಬೆನ್ನು ಮೂಳೆ ಬಾಗುತ್ತಾ ಬರುತ್ತದೆ . ಜೊತೆಗೆ ನಿಮ್ಮ ಬೆನ್ನು ಹುರಿ ಅಂದರೆ ಸ್ಪೈನಲ್ ಕಾರ್ಡ್ ಕೂಡ. ಇದರಿಂದ ಮುಂದೆ ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ . ಆದ್ದರಿಂದಲೇ ಇದನ್ನು ಆರಂಭದಲ್ಲೇ ತಡೆದರೆ ಒಳ್ಳೆಯದು . ಮೊದಲಿಗೆ ಆದಷ್ಟು ನೀವು ನೇರವಾಗಿ ನಿಂತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ . ದಿನ ಪೂರ್ತಿ ನಿಂತರೂ ಸರಿಯೇ . ನಿಮ್ಮ ಬೆನ್ನು ಮತ್ತು ಕತ್ತು ನೋವು ಹೇಗೆ ನೇರವಾಗಿ ನಿಂತರೆ ಕಡಿಮೆ ಎನ್ನಿಸುತ್ತದೆಯೋ ಹಾಗೆ ನಿಂತುಕೊಳ್ಳಿ . ಈ ರೀತಿ ನೀವು ಪಾಲನೆ ಮಾಡಿದ್ದೆ ಆದರೆ , ನಿಧಾನವಾಗಿ ನಿಮ್ಮ ಬೆನ್ನು ಹುರಿ ನೇರವಾಗಿ ತನ್ನ ಮೊದಲಿನ ಜಾಗಕ್ಕೆ ಬಂದು ದೇಹ ಪೂರ್ತಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ .


 • ನೋವಿಗೆ ಕೋಲ್ಡ್ ಪ್ಯಾಕ್ ಮತ್ತು ಹಾಟ್ ಪ್ಯಾಕ್

  ದೇಹದಲ್ಲಿ ನೋವು ಶುರುವಾದರೆ ಅದರ ಮೇಲೆ ಐಸ್ ಪ್ಯಾಕ್ ಇಟ್ಟು ನೋವು ಕಡಿಮೆ ಮಾಡಿಕೊಳ್ಳುವುದು ಇತ್ತೀಚಿನ ಜನತೆಯಲ್ಲಿ ನಾವು ನೋಡುತ್ತಿರುವ ಒಂದು ಒಳ್ಳೆಯ ಬೆಳವಣಿಗೆ . ನೋವಿರುವ ಜಾಗದ ಮೇಲೆ ತಣ್ಣನೆಯ ಐಸ್ ಪ್ಯಾಕ್ ಇಡುವುದರಿಂದ ತಾತ್ಕಾಲಿಕವಾಗಿ ನೋವು ಕಡಿಮೆ ಆಗಿ ಆ ಜಾಗದಲ್ಲಿ ಊತ ಬರುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ . ಆದರೆ ಕೋಲ್ಡ್ ಪ್ಯಾಕ್ ಮತ್ತು ಹಾಟ್ ಪ್ಯಾಕ್ ಎರಡೂ ಒಂದಾದ ಮೇಲೊಂದು ಉಪಯೋಗಿಸಿದರೆ ನೋವಿನಿಂದ ಶಾಶ್ವತ ಮುಕ್ತಿ ಕಾಣಬಹುದು ಎಂಬುದು ತಜ್ಞರ ಸಲಹೆ . ಐಸ್ ಪ್ಯಾಕ್ ಮಾಡಿದ ಎರಡು ದಿನದ ನಂತರ ಬಿಸಿ ನೀರಿನ ಶಾಖ ಕೊಡುವುದರಿಂದ ನೋವು ಕಡಿಮೆ ಆಗುತ್ತದೆ.
  Most Read: ಮಂಜುಗಡ್ಡೆಯಲ್ಲಿರುವ ಈ 7 ಅಚ್ಚರಿಯ ಸೌಂದರ್ಯ ಪ್ರಯೋಜನಗಳು ನಿಮಗೆ ತಿಳಿದಿರಲಿಕ್ಕಿಲ್ಲ!


 • ಯೂಕಲಿಪ್ಟಸ್ ಆಯಿಲ್ ಅಂದರೆ ನೀಲಗಿರಿ ತೈಲ

  ಬೆನ್ನು ನೋವು ಅಥವಾ ಮೈ ಕೈ ನೋವು ಹೊಂದಿರುವವರು ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರಿಗೆ ನಾಲ್ಕೈದು ಹನಿಗಳಷ್ಟು ಯೂಕಲಿಪ್ಟಸ್ ಆಯಿಲ್ ಹಾಕಿ ಚೆನ್ನಾಗಿ ಬೆರಸಿ ಸ್ನಾನ ಮಾಡುವುದರಿಂದ ಬೆನ್ನು ನೋವು , ಸೊಂಟ ನೋವು ಮತ್ತು ಮೈ ಕೈ ನೋವು ಕಡಿಮೆ ಆಗಿ ದೇಹದ ನರನಾಡಿಗಳೆಲ್ಲಾ ಶಾಂತಗೊಳ್ಳುತ್ತವೆ .


 • ಕೆಲವು ತಿಳಿಯಬೇಕಾದ ಅಂಶಗಳು

  * ಬೆನ್ನು ನೋವು ಯಾವ ವಯಸ್ಸಿನವರಿಗೆ ಬೇಕಾದರೂ ಬರಬಹುದು.
  *ಬೆನ್ನು ನೋವಿಗೆ ಇಂತಿಷ್ಟೇ ಸಮಯದಲ್ಲಿ ಬರಬೇಕೆಂದೇನೂ ಇಲ್ಲ.ಯಾವಾಗ ಬೇಕಾದರೂ ಬಂದು ಕಾಡಬಹುದು .
  * ಬೆನ್ನು ನೋವಿಗೆ ಹಲವಾರು ಕಾರಣಗಳಿರಬಹುದು . ಕೆಲವರಿಗೆ ಜಾಸ್ತಿ ಹೊತ್ತು ಕುಳಿತುಕೊಂಡಿದ್ದರೆ , ಕೆಲವರಿಗೆ ಜಾಸ್ತಿ ಬಗ್ಗಿದರೆ , ಕೆಲವರಿಗೆ ಆಹಾರ ಕ್ರಮದಲ್ಲೂ ವ್ಯತ್ಯಾಸವಾಗಿ ಬೆನ್ನು ನೋವು ಬರಬಹುದು .
  *ತುಂಬಾ ಹೊತ್ತು ಕುಳಿತ ಜಾಗದಲ್ಲೇ ಕುಳಿತುಕೊಳ್ಳುವ ಅಭ್ಯಾಸವನ್ನು ಬಿಡಿ.ಜಾಸ್ತಿ ಹೊತ್ತು ನಿಂತುಕೊಳ್ಳುವುದನ್ನೂ ಕಡಿಮೆ ಮಾಡಬೇಕು. ಇದರಿಂದ ನಿಮ್ಮ ಪಾದಗಳಿಗೆ ಭಾರ ಜಾಸ್ತಿ ಆಗುತ್ತದೆ ಮತ್ತು ಇಲ್ಲದ ನೋವುಗಳಿಗೆ ಅನುವು ಮಾಡಿಕೊಟ್ಟಂತೆ ಆಗುತ್ತದೆ .
  *ನೋವು ಕಂಡ ತಕ್ಷಣ ಆದಷ್ಟು ಮೇಲಿನ ಪದ್ದತಿಗಳನ್ನು ಅನುಸರಿಸಿ . ಒಂದು ವೇಳೆ ನೋವು ತೀರಾ ಜಾಸ್ತಿ ಆಗಿ ಯಾವುದೇ ಪರಿಣಾಮ ಕಾಣದಿದ್ದರೆ ತಕ್ಷಣ ನುರಿತ ವೈದ್ಯರನ್ನು ಸಂಪರ್ಕ ಮಾಡುವುದು ಒಳ್ಳೆಯದು .
ಬೆನ್ನು ನೋವು , ಸೊಂಟ ನೋವು , ಮಂಡಿ ನೋವು ಇವೆಲ್ಲಾ ಇತ್ತೀಚಿನ ಜನರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಪರಿಸ್ಥಿತಿಗಳು. ಕೇವಲ ವಯೋವೃದ್ಧರಿಗೆ ಮೀಸಲಾದ ಖಾಯಿಲೆಗಳಿವು ಎಂದು ನೀವು ತಿಳಿದುಕೊಂಡಿದ್ದರೆ ಅದು ತಪ್ಪು. ಏಕೆಂದರೆ ಈಗಿನ ಕಾಲದಲ್ಲಿ ಈ ತರಹದ ಖಾಯಿಲೆಗಳಿಗೆ ವಯಸ್ಸಿನ ಮಿತಿಯಿಲ್ಲ. ಸಣ್ಣ ವಯಸ್ಸಿನವರು ದೊಡ್ಡ ವಯಸ್ಸಿನವರು ಎಂಬ ಭೇದವಿಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ ಉದಾರ ಗುಣಗಳು ಈ ಖಾಯಿಲೆಗಳಿಗಿವೆ. ಇದಕ್ಕೆಲ್ಲಾ ಕಾರಣ ಈಗಿನ ಜನತೆ ಪಾಲಿಸುತ್ತಿರುವ ಜೀವನ ಶೈಲಿ . ಆಹಾರ ಶೈಲಿಯೂ ಇದರಲ್ಲಿ ತನ್ನದೇ ಆದ ಪಾಲನ್ನು ಹೊಂದಿದೆ.

ವ್ಯಾಯಾಮ ಅಥವಾ ದೇಹ ದಂಡನೆ ಇಲ್ಲದ ಪ್ರತಿ ದಿನದ ಜೀವನ ಇಂತಹ ಕಾಯಿಲೆಗಳಿಗೆ ಆಹ್ವಾನ ಕೊಡುತ್ತಿದೆ.

ದುಡಿದ ದುಡ್ಡಲ್ಲಿ ನೋವಿಗೆ ಎಂದೇ ಮಾತ್ರೆ, ಮುಲಾಮುಗಳಿಗೆ ಒಂದಿಷ್ಟು ಹಣ ಪ್ರತಿ ತಿಂಗಳೂ ಎತ್ತಿಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ನೋವು ಒಮ್ಮೆ ಶುರುವಾದರೆ ಅದಕ್ಕೆ ಶಾಶ್ವತ ಮುಕ್ತಿ ಎನ್ನುವುದೇ ಇಲ್ಲ. ಮಾತ್ರೆ , ಮುಲಾಮುಗಳು ಕೇವಲ ಕ್ಷಣಿಕ . ಆ ಕ್ಷಣದಲ್ಲಿ ಮಾತ್ರ ನೋವು ಕಡಿಮೆ ಆಗುತ್ತದೆಯೇ ಹೊರತು ಸಂಪೂರ್ಣವಾಗಿ ಏನೂ ಕಡಿಮೆ ಆಗುವುದಾಗಲೀ ಅಥವಾ ಹೊರಟೆ ಹೋಗುವುದಾಗಲೀ ಆಗುವುದಿಲ್ಲ. ಕೆಲವರಿಗೆ ಜಾಸ್ತಿ ಹೊತ್ತು ಕುಳಿತುಕೊಂಡಿದ್ದರೆ ಇನ್ನೂ ಕೆಲವರಿಗೆ ಸ್ವಲ್ಪ ಬಗ್ಗಿದರೆ ಬೆನ್ನು ನೋವು ಮತ್ತು ಸೊಂಟ ಹೊಡೆತ ಶುರುವಾಗುತ್ತದೆ. ಭಾರ ಎತ್ತುವುದಾಗಲೀ ಅಥವಾ ಇನ್ನಾವುದೇ ಕೆಲಸ ಮಾಡುವುದಾಗಲೀ ಆ ಸಮಯದಲ್ಲಿ ಇಂತಹ ಪರಿಸ್ಥಿತಿಗೆ ಸಮಂಜಸವಲ್ಲ. ಬಿಸಿ ನೀರಿನ ಶಾಖ ಕೊಡುವುದಾಗಲೀ , ಅಥವಾ ಸ್ವಲ್ಪ ಮುಲಾಮು ಹಚ್ಚಿ ನಿಧಾನವಾಗಿ ವ್ಯಾಯಾಮ ಮಾಡುವುದಾಗಲೀ ಮಾಡಿದರೆ ಕ್ರಮೇಣ ನೋವು ನಿಧಾನವಾಗಿ ಕಡಿಮೆ ಆಗುತ್ತದೆ . ಒಟ್ಟಿನಲ್ಲಿ ಇದರಿಂದ ಪ್ರತಿ ದಿನದ ಕೆಲಸದಲ್ಲಿ ಕಿರಿಕಿರಿ ತಪ್ಪಿದ್ದಲ್ಲ.

 
ಹೆಲ್ತ್