Back
Home » ಇತ್ತೀಚಿನ
ಆನ್‌ಲೈನ್ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಅಮೆಜಾನ್‌ಗೆ ಭಯ ಹುಟ್ಟಿಸಿದ ಶಿಯೋಮಿ!!
Gizbot | 11th Jun, 2019 02:06 PM
 • ಹೇಗಿದೆ ವರ್ಷದ ಆನ್‌ಲೈನ್ ಮೊಬೈಲ್ ವಹಿವಾಟು!

  2019ರ ಮೊದಲ ತ್ರೈಮಾಸಿಕದಲ್ಲಿ ಶೇ. 43 ಪ್ರತಿಶತದಷ್ಟು ಮೊಬೈಲ್ ಪಾಲನ್ನು ಆನ್ಲೈನ್ ಮಾರಾಟವು ಪಡೆದುಕೊಂಡಿದೆ. ವರ್ಷಾರಂಭದಲ್ಲಿ ಇದು ಇತ್ತೀಚಿನ ದಾಖಲೆಯಾಗಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಫ್ಲಿಪ್‌ಕಾರ್ಟ್ ಶೇ. 53 ಪ್ರತಿಶತ, ಅಮೆಜಾನ್ ಶೇ 36 ಪ್ರತಿಶತ ಮತ್ತು ಶಿಯೋಮಿ ಮಿ ತಾಣ ಶೇ 11 ಪ್ರತಿಶತ ತತಾಣಗಳು ಮೊದಲ ಮೂರು ಸ್ಥಾನಗಳಲ್ಲಿವೆ.


 • ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾದ ಫೋನ್‌ಗಳು!

  2019ರ ಮೊದಲ ತ್ರೈಮಾಸಿಕದಲ್ಲಿ ಶಿಯೋಮಿ ರೆಡ್‌ಮಿ ನೋಟ್ 6 ಮತ್ತು ನೋಟ್ 7 ಸರಣಿ ಫೋನ್‌ಗಳು, ಸ್ಯಾಮ್ಸಂಗ್‌ನ ಆನ್ಲೈನ್ ​​ಎಕ್ಸ್ಕ್ಲೂಸಿವ್ M ಸರಣಿ, ರಿಯಲ್‌ಮಿ 3, ಹಾನರ್ 10 ಲೈಟ್ ಮತ್ತು ಜೆನ್ಫೋನ್ ಮ್ಯಾಕ್ಸ್ ಪ್ರೊ ಸರಣಿ ಫೋನ್‌ಗಳು ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳಾಗಿವೆ. ಇವುಗಳಲ್ಲಿ ರೆಡ್ಮಿ 6ಎ ತ್ರೈಮಾಸಿಕದ ಹೆಚ್ಚು ಮಾರಾಟದ ಸಾಧನವಾಗಿದೆ.


 • ಫ್ಲಿಪ್‌ಕಾರ್ಟ್ ಕೈಹಿಡಿದಿರುವ ಬ್ರ್ಯಾಂಡ್‌ಗಳು

  ಆನ್‌ಲೈನ್ ಮೊಬೈಲ್ ಮಾರುಕಟ್ಟೆಯಲ್ಲಿ ದಿಗ್ಗಜನಾಗಿರುವ ಫ್ಲಿಪ್‌ಕಾರ್ಟ್ ಬೆಳವಣಿಗೆಗೆ ಶಿಯೋಮಿ, ರಿಯಲ್‌ಮಿ, ಆಸುಸ್ ಮತ್ತು ಹುವಾವೇ ಕಂಪೆನಿಗಳು ಕಾರಣವಾಗಿವೆ. ಇವು ಒಟ್ಟು ಸ್ಮಾರ್ಟ್ಫೋನ್ ಸರಕುಗಳ ಪೈಕಿ ಹೆಚ್ಚು ಪಾಲನ್ನು ಹೊಂದಿವೆ. ಇನ್ನು ಫ್ಲಿಪ್ಕಾರ್ಟ್ ಮೊಬೈಲ್ ಬೊನಾನ್ಜಾ ಮಾರಾಟದಂತಹ ಸೇಲ್‌ಗಳು ಸ್ಮಾರ್ಟ್‌ಫೋನ್ ಮಾರಾಟವನ್ನು ಹೆಚ್ಚು ಮಾಡಿವೆ.


 • ಅಮೆಜಾನ್ ಕೈಹಿಡಿದಿರುವ ಬ್ರ್ಯಾಂಡ್‌ಗಳು

  ಪ್ರೀಮಿಯಂ ವಿಭಾಗದ ಸ್ಮಾರ್ಟ್‌ಫೋನ್ ಮಾರಾಟದಲ್ಲಿ (ರೂ 30,000 ಮತ್ತು ಅದಕ್ಕಿಂತ ಹೆಚ್ಚಿನ) ಮೇಲುಗೈ ಸಾಧಿಸಿರುವ ಅಮೆಜಾನ್ ಶೇ 81 ಪ್ರತಿಶತದಷ್ಟು ಮಾರಾಟವನ್ನು ಹೊಂದಿದೆ. ಒನ್‌ಪ್ಲಸ್, ಸ್ಯಾಮ್ಸಂಗ್ ಮತ್ತು ಆಪಲ್‌ ಕಂಪೆನಿಗಳು ಅಮೆಜಾನಿನಲ್ಲಿ ಮಾರಾಟವಾಗಿದೆ. ಮತ್ತೊಂದೆಡೆ ಪ್ರೀಮಿಯಂ ವರ್ಗದಲ್ಲಿ ಫ್ಲಿಪ್ಕಾರ್ಟ್ ಶೇ. 17 ಪ್ರತಿಶತ ಪಾಲನ್ನು ಮಾತ್ರ ಹೊಂದಿದೆ.


 • ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿ ಶಿಯೋಮಿ!

  ಆನ್‌ಲೈನಿನಲ್ಲಿ ಹೆಚ್ಚು ಮೊಬೈಲ್ ಮಾರಾಟ ಮಾಡುವ ಮೂಲಕ ಶಿಯೋಮಿ ಆನ್‌ಲೈನಿನಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ಆನ್‌ಲೈನಿನಲ್ಲಿ ಹೆಚ್ಚು ಮೊಬೈಲ್ ಮಾರಾಟ ಮಾಡಿರುವ ಕಂಪೆನಿಗಳಲ್ಲಿ ಶಿಯೋಮಿ ಶೇ. 43% ನಷ್ಟು ಪಾಲನ್ನು ಹೊಂದಿದೆ. ಟಾಪ್ 10 ಮಾದರಿಗಳಲ್ಲಿ ಶಿಯೋಮಿ ಕಂಪೆನಿಯ ಆರು ಮೊಬೈಲ್‌ಗಳು ಲೀಸ್ಟ್‌ನಲ್ಲಿವೆ.
ಭಾರತದಲ್ಲಿ ಆನ್‌ಲೈನ್ ಮೊಬೈಲ್ ಮಾರಾಟ ದಿಗ್ಗಜನಾಗಿ ಪ್ರಖ್ಯಾತ ಇ-ಕಾಮರ್ಸ್ ದಿಗ್ಗಜ ಕಂಪೆನಿ ಫ್ಲಿಪ್‌ಕಾರ್ಟ್ ಹೊರಹೊಮ್ಮಿದರೆ, ವಿಶ್ವದ ದೈತ್ಯ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಎರಡನೇ ಸ್ಥಾನವನ್ನು ಪಡೆದುಕೊಂಡು ತೃಪ್ತಿಪಟ್ಟಿದೆ. ಇನ್ನು ಶಿಯೋಮಿ ಕಂಪೆನಿಯೊಂದೇ ದೇಶದ ಶೇ.11 ರಷ್ಟು ಆನ್‌ಲೈನ್ ಮಾರುಕಟ್ಟೆಯನ್ನು ಹೊಂದುವ ಮೂಲಕ, ದೇಶದ ಆನ್ಲೈನ್ ​​ವಾಹಿನಿಯ ಮೊಬೈಲ್ ಮಾರಾಟದಲ್ಲಿ ದಾಖಲೆ ನಿರ್ಮಿಸಿರುವುದನ್ನು ಇತ್ತೀಚಿನ ಕೌಂಟರ್ಪಾಯಿಂಟ್ ರಿಸರ್ಚ್ ಅಧ್ಯಯನವು ತಿಳಿಸಿದೆ.

ಹೌದು, 2019ರ ಮೊದಲ ತ್ರೈಮಾಸಿಕದಲ್ಲಿ ಶೇ. 43 ಪ್ರತಿಶತದಷ್ಟು ಮೊಬೈಲ್ ಮಾರಾಟ ಆನ್‌ಲೈನ್ ಪಾಲಾಗಿದೆ. ಇದರಲ್ಲಿ ಫ್ಲಿಪ್‌ಕಾರ್ಟ್ ಒಟ್ಟಾರೆ ಶೇ. 53 ಪ್ರತಿಶತ ಮಾರುಕಟ್ಟೆಯ ಪಾಲನ್ನು ಹೊಂದಿದ್ದರೆ, ಅಮೆಜಾನ್ ಶೇ 36 ಪ್ರತಿಶತ ಪಾಲನ್ನು ಪಡೆದುಕೊಂಡಿದೆ. ಉಳಿದ ಶೇ 11 ರಷ್ಟು ಪಾಲು ಶಿಯೋಮಿ ಮಿ ತಾಣಕ್ಕೆ ಒಲಿದಿದೆ. ಈ ಮೂರು ಜಾಲತಾಣಗಳಲ್ಲಿ ಫ್ಲಿಪ್‌ಕಾರ್ಟ್ ಮತ್ತು ಶಿಯೋಮಿ ಬಜೆಟ್ ಫೋನ್‌ಗಳ ಮಾರಾಟದಲ್ಲಿ ಮುಂದಿದ್ದರೆ, ಅಮೆಜಾನ್ ಮಾತ್ರ ಪ್ರೀಮಿಯಂ ಮಾರುಕಟ್ಟೆಯನ್ನು ವಶಪಡಿಸಿಕೊಂಡಿದೆ.

ಆನ್‌ಲೈನಿನಲ್ಲಿ ಪ್ರೀಮಿಯಂ ಫೋನ್‌ಗಳ ಮಾರಾಟ ವಿಭಾಗದಲ್ಲಿ (ರೂ 30,000 ಮತ್ತು ಅದಕ್ಕಿಂತ ಹೆಚ್ಚಿನ) ಮೇಲುಗೈ ಸಾಧಿಸಿರುವ ಅಮೆಜಾನ್ ಶೇ. 81 ಪ್ರತಿಶತದಷ್ಟು ಮಾರಾಟವನ್ನು ಹೊಂದಿದ್ದರೆ, ಶಿಯೋಮಿಯ ಫೋನ್‌ಗಳ ಮಾರಾಟಕ್ಕೆ ಯಾವ ಮೊಬೈಲ್ ಕಂಪೆನಿಗಳು ಕೂಡ ಸಾಟಿಯಾಗಿಲ್ಲ. ಹಾಗಾದರೆ, ಕೌಂಟರ್ಪಾಯಿಂಟ್ ರಿಸರ್ಚ್ ಅಧ್ಯಯನವು ತಿಳಿಸಿರುವಂತೆ, ದೇಶದಲ್ಲಿ ಆನ್‌ಲೈನ್ ಮಾರುಕಟ್ಟೆಯಲ್ಲಿ ಮೊಬೈಲ್ ಮಾರಾಟ ಹೇಗಿದೆ ಎಂಬ ಹಲವು ಕುತೋಹಲ ವಿಷಯಗಳನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್