Back
Home » ಇತ್ತೀಚಿನ
ಮನೆಯಲ್ಲಿ ವೈಫೈ ನಿಧಾನವಿದೆಯೇ? ಹಾಗಾದ್ರೆ ಅದರ ವೇಗ ಹೆಚ್ಚಿಸುವುದು ಹೇಗೆ ಗೊತ್ತಾ?
Gizbot | 11th Jun, 2019 03:00 PM
 • ವೈಫೈ ರೂಟರ್

  ನಿಮ್ಮ ವೈಫೈ ರೂಟರ್ ನ್ನು ಕಡೆಗಣಿಸಬೇಡಿ. ಯಾವಾಗಲೂ ನಿಮ್ಮ ವೈಫೈ ರೂಟರ್ ನ್ನು ಅಪ್ ಡೇಟ್ ಮಾಡುತ್ತಿರಿ ಅಂದರೆ ನೂತನ ಫರ್ಮ್ ವೇರ್ ಗೆ ಅಪ್ ಡೇಟ್ ಮಾಡಿ.

  ಡುಯಲ್ ಬ್ಯಾಂಡ್ ರೂಟರ್ ನಲ್ಲಿ 2,4GHz ರೂಟರ್ ನ ಬದಲಾಗಿ 5GHz ಫ್ರೀಕ್ವೆನ್ಸಿ ಇರುವ ರೂಟರ್ ನ್ನು ಅಳವಡಿಸಿ. ಇದು ಮಧ್ಯಂತರ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ವೇಗದ ಹೆಚ್ಚಳಕ್ಕೆ ನೆರವು ನೀಡುತ್ತದೆ.


 • ರೂಟರ್ ಫಿಕ್ಸ್

  ಗರಿಷ್ಟ ಕವರೇಜ್ ಮತ್ತು ವೇಗಕ್ಕಾಗಿ ಮೆಷ್ ವೈಫೈ ನೆಟ್ ವರ್ಕ್ ಗೆ ಅಪ್ ಗ್ರೇಡ್ ಆಗಿ.

  ಗೋಡೆಗಳ ಬಳಿ ವೈಫೈ ರೂಟರ್ ನ್ನು ಇಡಬೇಡಿ. ಮನೆಯ ಯಾವ ಜಾಗದಲ್ಲಿ ರೂಟರ್ ಫಿಕ್ಸ್ ಮಾಡಿರುತ್ತೀರಿ ಎಂಬುದು ಕೂಡ ವೇಗದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

  ಮನೆಯ ಮಧ್ಯಭಾಗದಲ್ಲಿ, ಗೋಡೆಗಳಿಂದ ಸ್ವಲ್ಪ ದೂರದಲ್ಲಿ ವೈಫೈ ರೂಟರ್ ನ್ನು ಅಳಡಿಸುವುದು ಬಹಳ ಸೂಕ್ತವಾದದ್ದು. ಸಾಧ್ಯವಾದಲ್ಲಿ ವೈಫೈ ರೂಟರ್ ನ್ನು ಗೋಡೆಗೆ ನೇತುಹಾಕಬೇಡಿ ಮತ್ತು ಸಾಧ್ಯವಾದಷ್ಟು ತೆರೆದ ಜಾಗದಲ್ಲಿ ಅಳವಡಿಸಿ. ಇದು ವೇಗಕ್ಕೆ ಸಹಾಯ ಮಾಡುತ್ತದೆ.


 • ಕ್ವಾಲಿಟಿ ಆಫ್ ಸರ್ವೀಸ್ ಸೆಟ್ಟಿಂಗ್ಸ್

  ಕೆಲವು ನಿರ್ಧಿಷ್ಟ ಆಪ್ಸ್ ಗಳಲ್ಲಿ ಬ್ಯಾಂಡ್ ವಿಡ್ತ್ ಬಳಕೆಯನ್ನು ಕಂಟ್ರೋಲ್ ಮಾಡುವಿಕೆ ಮತ್ತು ನೆಟ್ ವರ್ಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಕೆಲವು ಕ್ವಾಲಿಟಿ ಆಫ್ ಸರ್ವೀಸ್ ಸೆಟ್ಟಿಂಗ್ಸ್(QoS) ಮಾಡುವುದರಿಂದಾಗಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು.

  ಹೊಸ ವೈಫೈ ರೂಟರ್ ಜೊತೆಗೆ ಬೂಸ್ಟರ್ ಗೆ ಅಪ್ ಗ್ರೇಡ್ ಆಗಿ. ಆ ಮೂಲಕ ಅತ್ಯುತ್ತಮ ಇಂಟರ್ನೆಟ್ ಪ್ಲಾನ್ ಪಡೆಯಿರಿ.

  ದೊಡ್ಡ ಮನೆ ಅಥವಾ ಜಾಗವಾಗಿದ್ದಲ್ಲಿ ಎಕ್ಸ್ಟರ್ನಲ್ ವೈಫೈ ಆಂಟೆನಾಗಳನ್ನು ಆಯ್ಕೆ ಮಾಡಿಕೊಂಡರೆ ಇಂಟರ್ನೆಟ್ ಸ್ಪೀಡ್ ಮತ್ತು ಕವರೇಜ್ ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ.
ಮನೆಗೆ ಹೈ ಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಂಡಿದ್ದರೂ ಕೂಡ ಇಂಟರ್ನೆಟ್ ನ ಸ್ಪೀಡ್ ನಿಂದ ನೀವು ಅಷ್ಟೇನು ತೃಪ್ತರಾಗಿಲ್ಲದೇ ಇರಬಹುದು. ಈ ರೀತಿ ಇಂಟರ್ನೆಟ್ ಸ್ಪೀಡ್ ಕಡಿಮೆ ಇರುವುದಕ್ಕೆ ಕೆಲವು ಪ್ರಮುಖ ಕಾರಣಗಳಿರಬಹುದು. ಅದಕ್ಕೆ ಕಾರಣ ಕೇವಲ ನಿಮ್ಮ ಸರ್ವೀಸ್ ಪ್ರೊವೈಡರ್ ಮಾತ್ರವೇ ಆಗಿರಬೇಕು ಎಂದೇನಿಲ್ಲ.

ನಮ್ಮ ಮನೆಯ ಇಂಟರ್ನೆಟ್ ಸ್ಪೀಡ್ ಬಗ್ಗೆ ನಮ್ಮಲ್ಲಿ ಕೆಲವರು ಮಾತ್ರವೇ ಸ್ವಯಂ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನವರು ಸರ್ವೀಸ್ ಪ್ರೊವೈಡರ್ ನ್ನು ಬೈಯುವುದೇ ಆಗಿರುತ್ತದೆ. ಹಾರ್ಡ್ ವೇರ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನೀವು ನಿಮ್ಮ ಮನೆಯ ವೈಫೈ ಕನೆಕ್ಷನ್ನಿನ ಸ್ಪೀಡ್ ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ. ಅಂತರ ಕೆಲವು ಟ್ರಿಕ್ಸ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

 
ಹೆಲ್ತ್