Back
Home » ಇತ್ತೀಚಿನ
ದೇಶಿಯ ಮಾರುಕಟ್ಟೆಗೆ 'ಗಾರ್ಮಿನ್' ಸಂಸ್ಥೆಯ 'GPS-ಸ್ಮಾರ್ಟ್‌ವಾಚ್'‌ ಬಿಡುಗಡೆ!
Gizbot | 11th Jun, 2019 05:39 PM
 • ಕೋಚ್‌ ಆಪ್‌

  ಈ ಸ್ಮಾರ್ಟ್‌ವಾಚ್‌ಗಳು ಗಾರ್ಮಿಂಗ್ 'ಕೋಚ್ ಆಪ್‌' ಅನ್ನು ಹೊಂದಿದ್ದು, ಈ ಆಪ್‌ನಲ್ಲಿ ಬಳಕೆದಾರರಿಗೆ 10ಕಿ.ಮೀ ವರೆಗೂ ಅಥವಾ ಹಾಫ್ ಮ್ಯಾರಾಥಾನ್‌ಗೆ, ಜೆಫ್ ಗ್ಯಾಲೋವೇ, ಗ್ರೆಗ್ ಮೆಕ್ಮಿಲನ್ ಮತ್ತು ಆಮಿ ಪಾರ್ಕರ್ಸನ್-ಮಿಚೆಲ್ ಎಂಬ ಮೂರು ಕೋಚ್‌ಗಳಿಂದ ಸಲಹೆ ಪಡೆಯಲು ಅವಕಾಶ ನೀಡಲಿದೆ ಎನ್ನಲಾಗಿದೆ.


 • ಹೈಲೈಟ್‌ ಫೀಚರ್ಸ್‌

  ಈ ಸ್ಮಾರ್ಟ್‌ವಾಚ್‌ಗಳು ಸೇಫ್ಟಿ ಮತ್ತು ಟ್ರಾಕಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಜೊತೆಗೆ VO2 ಮ್ಯಾಕ್ಸ್, ಇನ್ಸಿಡೆಂಟ್ ಡೆಟೆಕ್ಟರ್, ರೇಸ್‌ ಪ್ರಿಡಿಕ್ಟರ್, ಸನ್‌ಲೈಟ್‌ ರೀಡೆಬಲ್‌ ಡಿಸ್‌ಪ್ಲೇ, ಸ್ಮಾರ್ಟ್‌ ನೋಟಿಫಿಕೇಶನ್ ಫೀಚರ್ಸ್‌ಗಳನ್ನು ಹೊಂದಿವೆ. ಇವು ಈ ಸ್ಮಾರ್ಟ್‌ವಾಚ್‌ಗಳ ಪ್ರಮುಖ ಹೈಲೈಟ್ಸ್‌ಗಳು ಎನಿಸಿವೆ.

  ಓದಿರಿ : ಜಿಯೋ ಗಿಗಾಫೈಬರ್‌ಗೆ ಅಡ್ಡಗಾಲು!..ಟಾಟಾ ಸ್ಕೈನಿಂದ ಉಚಿತ ಬ್ರಾಡ್‌ಬ್ಯಾಂಡ್‌ ಸೇವೆ!


 • ಬ್ಯಾಟರಿ ಲೈಫ್

  ಗಾರ್ಮಿನ್ ಕಂಪನಿಗಳ ಸ್ಮಾರ್ಟ್‌ವಾಚ್‌ಗಳು ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದ್ದು, ಸುಮಾರು ಏಳು ದಿನಗಳ ವರೆಗೆ ಬ್ಯಾಟರಿ ಬಾಳಿಕೆ ಬರಲಿದೆ. ಸ್ಮಾರ್ಟ್‌ವಾಚ್‌ ಮೋಡ್‌ನಲ್ಲಿ 24ಗಂಟೆಗಳ ಬಾಳಿಕೆ ಹಾಗೂ ಜಿಪಿಎಸ್‌ ಮೋಡ್‌ ಮತ್ತು ಮ್ಯೂಸಿಕ್‌ ನೊಂದಿಗೆ 6 ಗಂಟೆಗಳ ಬ್ಯಾಟರಿ ಲೈಫ್‌ ದೊರೆಯಲಿದೆ.


 • ಬೆಲೆ ಎಷ್ಟು

  ಗಾರ್ಮಿನ್‌ ಫೊರೆರನ್ನರ್ 245 (Forerunner 245) ಸ್ಮಾರ್ಟ್‌ವಾಚ್ ಯೆಲ್ಲೋ ಮತ್ತು ಸ್ಲ್ಯಾಟ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ಇದರ ಬೆಲೆಯು 29,990ರೂ.ಗಳು ಆಗಿದೆ. ಹಾಗೆಯೇ ಫೊರೆರನ್ನರ್ 245 ಮ್ಯೂಸಿಕ್ (Forerunner 245 ಮ್ಯೂಸಿಕ್) ಸ್ಮಾರ್ಟ್‌ವಾಚ್ ಅಕ್ವಾ, ಬ್ಲ್ಯಾಕ್ ಮತ್ತು ಲಾವಾ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದ್ದು, ಇದರ ಬೆಲೆಯು 34,990ರೂ.ಗಳು ಆಗಿದೆ.


 • ಎಲ್ಲಿ ಲಭ್ಯ

  ಆನ್‌ಲೈನ್‌ ಮತ್ತು ಆಫ್‌ಲೈನ್‌ಗಳಲ್ಲಿ ದೊರೆಯಲಿದ್ದು, ಇ ಕಾಮರ್ಸ್‌ ತಾಣಗಳಾದ ಫ್ಲಿಪ್‌ಕಾರ್ಟ್‌, ಅಮೆಜಾನ್, ಮಂತ್ರಾ, ಪೇಟಿಎಮ್ ಮಾಲ್ ಆನ್‌ಲೈನ್‌ ತಾಣಗಳಲ್ಲಿ ಲಭ್ಯವಿರಲಿದೆ. ಹಾಗೆಯೇ ಆಫ್‌ಲೈನ್‌ ಮಾರುಕಟ್ಟೆಯಲ್ಲಿಯೂ ಗ್ರಾಹಕರಿಗೆ ದೊರಕಲಿದೆ.

  ಓದಿರಿ : ಶುರುವಾಯ್ತು 'ಶಿಯೋಮಿ ಸೂಪರ್‌ ಸೇಲ್'!..ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!
ಸ್ಮಾರ್ಟ್‌ಫೋನ್‌ಗಳ ಎಷ್ಟು ಅಗತ್ಯ ಎನಿಸಿವೆಯೋ ಹಾಗೆಯೇ ಸ್ಮಾರ್ಟ್‌ವಾಚ್‌ಗಳು ಸಹ ಅಗತ್ಯ ಸ್ಥಾನ ಪಡೆದುಕೊಳ್ಳುತ್ತಿವೆ. ‌ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ವಾಚ್‌ಗಳಿಗೂ ಅತ್ಯುತ್ತಮ ಬೇಡಿಕೆ ನಿರ್ಮಾಣವಾಗಿದ್ದು, ಬಹುತೇಕ ಕಂಪನಿಗಳು ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಅವುಗಳಲ್ಲಿ ವಿದೇಶಿ ಕಂಪನಿಗಳು ಸಹ ಲಕ್ಸುರಿ ಸ್ಮಾರ್ಟ್‌ವಾಚ್‌ಗಳನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

ಹೌದು, ಭಾರತೀಯ ಮಾರುಕಟ್ಟೆಗೆ ವಿದೇಶಿ ಕಂಪನಿಗಳ ಸ್ಮಾರ್ಟ್‌ವಾಚ್‌ಗಳು ಲಗ್ಗೆ ಇಡುತ್ತಿದ್ದು, ಇದೀಗ ಅಮೆರಿಕಾದ 'ಗಾರ್ಮಿನ್' ಸಂಸ್ಥೆಯು ದೇಶಿಯ ಮಾರುಕಟ್ಟೆಗೆ 'ಫೊರೆರನ್ನರ್ 245' ಮತ್ತು 'ಫೊರೆರನ್ನರ್ 245 ಮ್ಯೂಸಿಕ್' ಹೆಸರಿನ ಎರಡು ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳು ಜಿಪಿಎಸ್‌ ಆಧಾರಿತವಾಗಿದ್ದು, ಆಕ್ಟಿವಿಟಿ ಟ್ರಾಕಿಂಗ್ ಮಾಡುವ ಸೌಲಭ್ಯಗಳನ್ನು ಒಳಗೊಂಡಿದೆ.

ಓದಿರಿ : ಟ್ಯಾಕ್ಸಿ ಬಾಡಿಗೆ ಉಳಿಕೆಗೆ ನೆರವಾಗಲಿದೆ 'ಗೂಗಲ್‌ ಮ್ಯಾಪ್‌'ನ ಈ ಹೊಸ ಫೀಚರ್!

ಜಿಪಿಎಸ್‌ ಸೌಲಭ್ಯ, ಸ್ಪೋರ್ಟ್ಸ್‌ನ ಐದು ಬಟನ್ ಆಯ್ಕೆ, ಸನ್‌ಲೈಟ್‌ ರೀಡೆಬಲ್‌ ಡಿಸ್‌ಪ್ಲೇ, ಸ್ಮಾರ್ಟ್‌ ನೋಟಿಫಿಕೇಶನ್ ಫೀಚರ್ಸ್‌ ಸೇರಿದಂತೆ ದೈನಂದಿನ ಆಕ್ಟಿವಿಟಿಗಳನ್ನು ಟ್ರಾಕ್‌ ಮಾಡುವ ಸೌಲಭ್ಯಗಳನ್ನು ಪಡೆದುಕೊಂಡಿದೆ. ಹಾಗಾದರೇ ಗಾರ್ಮಿನ್ ಕಂಪನಿಯ ಎರಡು ಸ್ಮಾರ್ಟ್‌ವಾಚ್‌ಗಳು ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಮತ್ತು ಬೆಲೆ ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ ಹುಟ್ಟುಹಾಕಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

 
ಹೆಲ್ತ್