Back
Home » Business
ಮಾರುತಿ ಸುಜುಕಿ ಉತ್ಪಾದನೆ ಮೇ ತಿಂಗಳಲ್ಲಿ ಶೇ. 18 ಕಡಿತ, 13 ದಿನ ಉತ್ಪಾದನೆ ತಾತ್ಕಾಲಿಕ ಸ್ಥಗಿತ
Good Returns | 11th Jun, 2019 04:40 PM

ಭಾರತದ ಅತಿದೊಡ್ಡ ಕಾರು ತಯಾರಕ ಕಂಪೆನಿಯು ತನ್ನ ಉತ್ಪಾದನೆಯನ್ನು ಶೇ. 18.1ರಷ್ಟು ವಾರ್ಷಿಕ ಆಧಾರದಲ್ಲಿ ಕಡಿಮೆ ಮಾಡಿದೆ. ಮಾರುತಿ ಸುಜುಕಿ ಮೇ ತಿಂಗಳಲ್ಲಿ 1,51,188 ಯುನಿಟ್ ಗಳನ್ನು ತಯಾರಿಸಿದೆ. ಇದರಲ್ಲಿ ಸೂಪರ್ ಕ್ಯಾರಿ ಎಲ್ಸಿವಿ ಕೂಡ ಸೇರಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಮಾರುತಿ ಸುಜುಕಿ 1,84,612 ವಾಹನಗಳನ್ನು ತಯಾರಿಸಿತ್ತು.

ಸೂಪರ್ ಕ್ಯಾರಿ LCV ಅನ್ನು ಹೊರತುಪಡಿಸಿ, ಮಾರುತಿ ಸುಜುಕಿ ಎಲ್ಲ ವಿಭಾಗಗಳಲ್ಲೂ ಉತ್ಪಾದನೆಯನ್ನು ಕಡಿಮೆಗೊಳಿಸಿದ್ದು, ಇದರಲ್ಲಿ ಜನಪ್ರಿಯ ಕಾಂಪ್ಯಾಕ್ಟ್ ಮತ್ತು ಮಿನಿ ಪ್ಯಾಸೆಂಜರ್ ವಾಹನಗಳು ಸೇರಿವೆ. 2019 ರ ಮೇ ತಿಂಗಳಲ್ಲಿ ಕಂಪನಿಯು ಆಲ್ಟೊ, ಸ್ವಿಫ್ಟ್ ಮತ್ತು ಡಿಜೈರ್ ಸೇರಿದಂತೆ ಶೇ. 18.88ರಷ್ಟು 1,48,095 ವಾಹನ ಮತ್ತು 2018 ರ ಮೇ ತಿಂಗಳಲ್ಲಿ 1,82,571 ವಾಹನಗಳನ್ನು ಉತ್ಪಾದಿಸಿದೆ.

ಮಾರುಕಟ್ಟೆಯಲ್ಲಿ ಕಾರುಗಳ ಬೇಡಿಕೆ ಭಾರೀ ಪ್ರಮಾಣದಲ್ಲಿ ತಗ್ಗಿದ್ದು ಅಲ್ಲೋಲಕಲ್ಲೋಲ ಸೃಷ್ಟಿಯಾಗಿ ಕಾರುಗಳ ಮಾರಾಟದಲ್ಲಿ ಗಣನೀಯ ಕುಸಿತ ಉಂಟಾಗಿದೆ.

ಇದರ ಪರಿಣಾಮವಾಗಿ ಮಹೀಂದ್ರಾ ಕಂಪನಿ 13 ದಿನಗಳವರೆಗೆ ತಾತ್ಕಾಲಿಕವಾಗಿ ಕಾರುಗಳ ಉತ್ಪಾದನೆ ನಿಲ್ಲಿಸಲು ಮುಂದಾಗಿದೆ.

ಕಳೆದ ಎಂಟು ವರ್ಷಗಳಿಂದ ಕಾರುಗಳ ಬೇಡಿಕೆ ತಗ್ಗುತ್ತಿದ್ದು, ಮಾರಾಟದಲ್ಲಿ ಶೇ. 17.7ರಷ್ಟು ಕುಸಿತ ಕಂಡಿದೆ. ಮೇ ತಿಂಗಳಿನಲ್ಲಿ ಮಹೀಂದ್ರಾ ಕಾರು ಮಾರಾಟ ಶೇ. 3 ಕುಸಿದಿತ್ತು.

   
 
ಹೆಲ್ತ್