Back
Home » ಸಮ್ಮಿಲನ
ಆಶ್ಚರ್ಯ ಹಾಗೂ ಅದ್ಭುತವನ್ನು ನೀಡುವ ಚೀನಾದ ಗ್ಲಾಸಿನ ಸೇತುವೆ
Boldsky | 12th Jun, 2019 05:27 PM

ಹೊಸತನವನ್ನು ನೋಡಬೇಕು, ಸಾಹಸ ಕ್ರೀಡೆ ಹಾಗೂ ಪ್ರವಾಸದಲ್ಲಿ ಹೆಚ್ಚಿನ ಆನಂದವನ್ನು ಪಡೆಯಬೇಕು ಎಂದರೆ ಮೊದಲು ಚೀನಾಕ್ಕೆ ಹೋಗಬೇಕು. ಅಲ್ಲಿಯ ಅದ್ಭುತವಾದ ಪರಿಸರ ಹಾಗೂ ಕಟ್ಟಡಗಳು ವಿಶೇಷ ಅನುಭವವನ್ನು ನೀಡುತ್ತದೆ. ಜೊತೆಗೆ ಹೊಸತನದಿಂದ ಕೂಡಿರುವುದರಿಂದ ಅದು ಪ್ರತಿಯೊಬ್ಬರಲ್ಲೂ ವಿಶೇಷ ಅನುಭವ ಹಾಗೂ ನೆನಪಿನ ಆಳದಲ್ಲಿ ಸದಾ ಹಸಿರಾಗಿರುತ್ತದೆ. ಇತ್ತೀಚೆಗೆ ಅಂತಹ ಅದ್ಭುತಗಳಲ್ಲಿ ಗಾಜಿನ ಸೇತುವೆಯು ಸೇರಿಕೊಂಡಿದೆ.

ನಿಜ, ಮಕ್ಕಳ ಆಟಿಕೆ, ಅದ್ಭುತ ಸಂಗತಿಗಳು, ಆಕರ್ಷಕ ಪ್ರವಾಸ ತಾಣಗಳಿಗೆ ಚೀನಾ ಹೆಸರುವಾಸಿಯಾಗಿದೆ. ಚೀನಾ ದೇಶದ ಜನತೆ ಹೆಚ್ಚು ಶ್ರಮ ಜೀವಿಗಳು. ಇವರು ಸಾಧನೆ ಹಾಗೂ ಯಶಸ್ಸಿನ ಸಾಧನೆಗಳನ್ನು ಮಾಡುವುದರಲ್ಲಿ ಹೆಸರು ವಾಸಿ ಎಂದು ಹೇಳಲಾಗುವುದು. ಇಂತಹ ಅನೇಕ ಸಂಗತಿಗಳಲ್ಲಿ ಗಾಜಿನ ಸೇತುವೆಯು ಒಂದಾಗಿದೆ. ಚೀನಾದಲ್ಲಿ ನಿರ್ಮಿಸಲಾದ ಗಾಜಿನ ಸೇತುವೆಯು ಜನಪ್ರಿಯ ಪ್ರವಾಸಿ ತಾಣ ಎನ್ನುವ ಕೀರ್ತಿಯನ್ನು ಪಡೆದುಕೊಂಡಿದೆ.

ವಿಶ್ವದಲ್ಲಿಯೇ ಅತ್ಯಂತ ಉದ್ದವಾದ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದೆ. ಚೀನಾದ ಪೂರ್ವ ಭಾಗದಲ್ಲಿರುವ ಜಿಯಾಂಗ್ಸು ಪ್ರಾಂತ್ಯದಲ್ಲಿ ಇರುವ ಹುವಾಕ್ಸಿ ಎನ್ನುವ ಸೇತುವೆಯನ್ನು ಇಲ್ಲಿಯ ಸ್ಥಳೀಯರು ಉದ್ಘಾಟನೆ ಮಾಡಿದ್ದಾರೆ. ಇದು ಅತ್ಯಂತ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಸಾಹಸ ಕ್ರೀಡೆಗಳನ್ನು ಒಳಗೊಂಡಿರುವ ಈ ಉದ್ಯಾನವನವು ಪ್ರವಾಸಿಗರಿಗೊಂದು ಅತ್ಯಂತ ಆಕರ್ಷಣೀಯ ಹಾಗೂ ಹೊಸ ಅನುಭವವನ್ನು ನೀಡಲಿದೆ ಎಂದು ಹೇಳಲಾಗುವುದು.

ಚೀನಾ ಪತ್ರಿಕೆಯೊಂದರಲ್ಲಿ ಬಂದಿರುವ ಹೇಳಿಕೆಯ ಪ್ರಕಾರ, ಈ ಸೇತುವೆಯ ಉದ್ಘಾಟನೆಯ ಹಿಂದಿನ ದಿನದ ರಾತ್ರಿಯಿಂದಲೇ ಜನರು ಸರದಿಯಲ್ಲಿ ನಿಂತು ಕಾಯುತ್ತಿದ್ದರು. ಸೊಂಪಾದ ಹಸಿರು ಕಣಿವೆಗಳಿಂದ ಕೂಡಿದೆ. ಗಾಜಿನಿಂದ ಸೇತುವೆ ಇರುವುದರಿಂದ ಅಸಾಧಾರಣ ಹಾಗೂ ಊಹಿಸಲು ಅಸಾಧ್ಯವಾದಂತಹ ಸುಂದರ ನೋಟವನ್ನು ನೀಡುತ್ತದೆ. ಸೇತುವೆಯಲ್ಲಿ ನಿಂತು ನೋಡುವುದು ಹಾಗೂ ಅಲ್ಲಿ ನಡೆದು ಸಾಗುವುದು ಪ್ರವಾಸಿಗರಿಗೊಂದು ಸಾಹಸದ ಕೆಲಸ ಎನ್ನುವಂತಹ ಅನುಭವವನ್ನು ಸಹ ನೀಡುತ್ತದೆ ಎಂದು ಹೇಳಲಾಗಿದೆ.

ಸೇತುವೆಯ ಉದ್ದ ಅಗಲ

ವಿಶ್ವದಲ್ಲಿಯೇ ಅತ್ಯಂತ ಉದ್ದವಾದ ಅಳತೆಯನ್ನು ಹೊಂದಿರುವ ಈ ಸೇತುವೆಯು ನೆಲದ ಮಟ್ಟಕ್ಕಿಂತ 100 ಮೀ. ಗಿಂತಲೂ ಹೆಚ್ಚು ಎತ್ತರದಲ್ಲಿ ತೂಗು ಹಾಕಲಾಗಿದೆ. ಸೇತುವೆಯ ಉದ್ದವು 518 ಮೀ. ಮತ್ತು ಗಾಜಿನ ದಪ್ಪವು 3.5 ಸೆ.ಮೀ. ದಪ್ಪವನ್ನು ಪಡೆದುಕೊಂಡಿದೆ.

ಸೇತುವೆಯ ಗಾಜಿನ ಫಲಕಗಳು

ಸೇತುವೆಯ ನಿರ್ಮಾಣದಲ್ಲಿ ಬಳಸಾದ ಗಾಜಿನ ಫಲಕಗಳು 4.7 ಟನ್ಗಳಷ್ಟು ಗರಿಷ್ಠ ತೂಕವನ್ನು ಪಡೆದುಕೊಂಡಿದೆ. ಇದು ವಿಶ್ವದಲ್ಲಿಯೇ ಅತಿ ಎತ್ತರದ ಗಾಜಿನ ಸೇತುವೆ ಎನ್ನುವ ಹೆಮ್ಮೆಯನ್ನು ಪಡೆದುಕೊಂಡಿದೆ. ಈ ಅದ್ಭುತ ಸೇತುವೆಯ ನಿರ್ಮಾಣಕ್ಕೆ ಸುಮಾರು 3.4 ಮಿಲಿಯನ್ ರೂಪಾಯಿಗಳ ವೆಚ್ಚವಾಗಿದೆ.

Most Read: ಯಾರೇ ಕೂಗಾಡಲಿ, ಚೀನಾದ ಜನರು ಇರುವುದೇ ಹೀಗೆ!

ಸೇತುವೆಯ ವಿನ್ಯಾಸ

ಈ ವಿಶಿಷ್ಟವಾದ ಗಾಜಿನ ರಚನೆಯು ಜೇಮ್ಸ್ ಕ್ಯಾಮೆರಾನ್ರ ಚಿತ್ರ 'ಅವತಾರ್' ನಿಂದ ಪ್ರೇರೇಪಿಸಲ್ಪಟ್ಟಿದೆ. ಇದನ್ನು ಇಸ್ರೇಲಿ ವಾಸ್ತುಶಿಲ್ಪಿ ಹೈಮ್ ಡೊಟಾನ್ ವಿನ್ಯಾಸಗೊಳಿಸಿದರು. ಈ ಉದ್ದದ ಸೇತುವೆಯ ಬಗ್ಗೆ ಅತ್ಯಂತ ಅದ್ಭುತವಾದ ಸತ್ಯವೆಂದರೆ ಅದು ಒಂದು ಸಮಯದಲ್ಲಿ 2,600 ಜನರನ್ನು ನಿಬಾಯಿಸಬಲ್ಲ ಅಥವಾ ಹೊರಬಲ್ಲ ಸಾಮಥ್ರ್ಯವನ್ನು ಪಡೆದುಕೊಂಡಿದೆ.

ಸೇತುವೆಯ ಅದ್ಭುತ ಅಂಶ

ಈ ಸೇತುವೆಯ ಕುರಿತಾದ ಇನ್ನೊಂದು ಅದ್ಭುತ ಅಂಶವೆಂದರೆ ಅವರು ಅದರ ಮೇಲೆ ಏರಲು ಅತ್ಯಂತ ಕುತೂಹಲ ಹಾಗೂ ಕಾತುರವನ್ನು ಒಳಗೊಂಡಿರುತ್ತಾರೆ. ಸೇತುವೆಯ ಮೇಲೆ ಗಾಜಿನ ಚದರುವಿಕೆಯ ಧ್ವನಿ ಮತ್ತು ದೃಶ್ಯವು ಖಂಡಿತವಾಗಿಯು ಪ್ರವಾಸಿಗನ ಹೃದಯದ ಬಡಿತವನ್ನು ಹೆಚ್ಚಿಸುವುದು. ಸೇತುವೆಯ ಮೇಲೆ ನಡೆದು ಸಾಗುವಾಗ ಅತಿಯಾದ ಗಾಳಿಯು ವಿಶೇಷ ಅನುಭವ ಹಾಗೂ ಸಂತೋಷವನ್ನು ನೀಡುತ್ತದೆ. ಅದ್ಭುತ ಅನುಭವ ಹಾಗೂ ಮತ್ತೆ ಮತ್ತೆ ಸೇತುವೆಯ ಮೇಲೆ ನಡೆದು ಸಾಗಬೇಕು ಎನ್ನುವಂತಹ ಆಸೆಯನ್ನು ಹೆಚ್ಚಿಸುವುದು.

ಅತ್ಯಂತ ಆಕರ್ಷಕ ತಾಣ

ಈ ಅತ್ಯಂತ ಆಕರ್ಷಕ ತಾಣವು ಅದ್ಭುತ ನೋಟ ಹಾಗೂ ಅನುಭವವನ್ನು ನೀಡುವುದರಿಂದ ಜನರು ಈ ಸ್ಥಳಕ್ಕೆ ಬರಲು ಹೆಚ್ಚು ಒಲವನ್ನು ತೋರುವರು. ಜನರು ವಲಸೆ ಬಂದಿರುವ ರೀತಿಯಲ್ಲಿ ಸೇತುವೆಯ ವೀಕ್ಷಣೆ ಹಾಗೂ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸೇತುವೆಯು ಭಯ ಮತ್ತು ಭಾವಪರವಶತೆಯ ಮಿಶ್ರ ಭಾವನೆಯನ್ನು ಹೊಂದಿರುವ ಹಲವಾರು ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಒಳಗೊಂಡಿದೆ. ಕೆಲವರು ಈ ಸೇತುವೆಯ ಮೇಲೆ ನಡೆದು ಸಾಗಲು ಅಧಿಕ ಉತ್ಸಾಹವನ್ನು ತೋರಿದರೆ ಇನ್ನೂ ಕೆಲವರು ಅದರ ಮೇಲೆ ನಡೆಯಲು ಭಯವನ್ನು ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಸೇತುವೆಯ ವಿಚಾರ ಅದ್ಭುತ ಆಕರ್ಷಣೆಯ ಸಂಗತಿಯನ್ನು ನೀಡಿದರೆ, ಅಲ್ಲಿಗೆ ಹೋಗಿ ನೋಡುವ ಅನುಭವವು ಭಯ ಹಾಗೂ ಕುತೂಹಲದಿಂದ ಕೂಡಿರುತ್ತದೆ ಎನ್ನಲಾಗುವುದು. ನಿಮಗೂ ಇಂತಹ ಒಂದು ಅದ್ಭುತ ಅನುಭವ ಪಡೆಯುವ ಆಸೆ ಇದ್ದರೆ ತಪ್ಪದೆ ಚೀನಾದಲ್ಲಿ ಇರುವ ಈ ಸೇತುವೆಯ ಮೇಲೆ ನಡೆದು ಸಾಗಬೇಕು.

   
 
ಹೆಲ್ತ್