Back
Home » ಆರೋಗ್ಯ
ಒಂದು ಹಿಡಿ ಕರಿಬೇವಿಗೆ ನಿಮ್ಮ ದೇಹದ ಕೊಬ್ಬಿನಂಶ ಕರಗಿಸುವ ಶಕ್ತಿಯಿದೆ ಎಂದರೆ ನಂಬಲೇಬೇಕು !!!
Boldsky | 12th Jun, 2019 11:54 AM
 • ಕರಿಬೇವಿನಲ್ಲಿ ಮನುಷ್ಯನ ದೇಹದ ಸಂಪೂರ್ಣ ಆರೋಗ್ಯಕ್ಕೆ ಬೇಕಾದ ಎಲ್ಲಾ ರೀತಿಯ ಅಂಶಗಳೂ ಇವೆ

  ಕರಿಬೇವಿನ ಎಲೆಗಳು ಅಡುಗೆಗೆ ಇಷ್ಟು ಸಹಕಾರಿಯಾದರೆ , ಆರೋಗ್ಯಕ್ಕೂ ಬಹಳ ಉಪಕಾರಿ . ಇದನ್ನು ಮೀರಿಸುವ ಇನ್ನೊಂದು ಬಗೆಯ ಸಸಿಯಿಲ್ಲ . ತಿನ್ನಲು ಸ್ವಲ್ಪ ಒಗರಾದರೂ ಇದರ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ . ಹೃದಯದ ಆರೋಗ್ಯದಿಂದ ಹಿಡಿದು ಚರ್ಮದ ಕಾಂತಿ ಕಾಪಾಡುವವರೆಗೂ ಕರಿಬೇವು ಬಹಳ ಉಪಯೋಗಕ್ಕೆ ಬರುತ್ತದೆ . ಏಕೆಂದರೆ ಇದರಲ್ಲಿ ದೇಹದ ಆರೋಗ್ಯ ರಕ್ಷಣೆಗೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳೂ ಇದರಲ್ಲಿವೆ . ಕಾರ್ಬೋಹೈಡ್ರೇಟ್ಗಳು, ಫೈಬರ್, ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣದ ಅಂಶ ಮತ್ತು ವಿಟಮಿನ್ 'ಎ' , ವಿಟಮಿನ್ 'ಬಿ' , ವಿಟಮಿನ್ 'ಸಿ' , ವಿಟಮಿನ್ 'ಇ'ಗಳು ಕರಿಬೇವಿನಲ್ಲಿ ಸೇರಿದ್ದು ದೇಹದ ಯಾವುದಾದರೂ ಭಾಗಕ್ಕೆ ತಾಗುವ ಇನ್ಫೆಕ್ಷನ್ ವಿರುದ್ಧ ಹೋರಾಡುತ್ತದೆ .


 • ಕರಿಬೇವು ದಪ್ಪನೆಯ ದೇಹದವರನ್ನು ಸಣ್ಣಗೆ ಮಾಡುತ್ತದಂತೆ !!!

  ಕರಿಬೇವಿನ ಗುಣ ಗಾನ ಇಷ್ಟಕ್ಕೆ ಮುಗಿಯುವುದಿಲ್ಲ. ದಪ್ಪನೆಯ ದೇಹ ಹೊಂದಿರುವವರಿಗೆ ಕರಿಬೇವು ದೇಹದ ತೂಕ ಇಳಿಸುವಲ್ಲಿ ಒಬ್ಬ ಸ್ನೇಹಿತನಂತೆ ಕೆಲಸ ಮಾಡುತ್ತದೆ . ದೇಹದ ತೂಕ ಇಳಿಸಿಕೊಳ್ಳಬೇಕು ಎಂದಿರುವವರು ತಾವು ಮಾಡುವ ದೇಹ ದಂಡನೆಯ ಕಸರತ್ತಿನ ಜೊತೆಗೆ ತಾವು ತಿನ್ನುವ ದೇಹದ ಕ್ಯಾಲೋರಿ ಗಳನ್ನು ಕಡಿಮೆ ಗೊಳಿಸುವ ಆಹಾರದ ಜೊತೆಗೆ ಕರಿಬೇವನ್ನೂ ಸೇರಿಸಿ ಕೊಂಡರೆ ಬಹಳ ಬೇಗನೆ ಉತ್ತಮ ಫಲಿತಾಂಶ ಕಾಣಬಹುದು . ಮನುಷ್ಯನ ದೇಹದಲ್ಲಿ ಅಡಗಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವಲ್ಲಿ ಕರಿಬೇವು ತನ್ನ ಹಿರಿಮೆಯನ್ನು ಇಂದಿಗೂ ಉಳಿಸಿಕೊಂಡಿದೆ .


 • ಕರಿಬೇವಿನ ಸೊಪ್ಪಿನಲ್ಲಿ ತುಂಬಿದೆ ಯಾರೂ ಊಹಿಸಲಾರದಷ್ಟು ಆರೋಗ್ಯ ಪ್ರಯೋಜನಗಳು

  ಔಷಧೀಯ ವಿಷಯಕ್ಕೆ ಬಂದರೆ ಕರಿಬೇವು ಬಹಳ ಹಿಂದಿನಿಂದಲೂ ಜನರ ಉಪಯೋಗಕ್ಕೆ ಮತ್ತು ಆಯುರ್ವೇದ ಪಂಡಿತರ ಸಲಹೆಗೆ ಒಳ್ಳೆಯ ಮನ್ನಣೆ ಕೊಟ್ಟಿದೆ . ಏಕೆಂದರೆ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಹಿಡಿ ಕರಿಬೇವನ್ನು ಸೇವಿಸುತ್ತಾ ಬಂದರೆ ವೈದ್ಯರಿಂದ ದೂರವೇ ಉಳಿಯಬಹುದು . ಇದರಲ್ಲಿರುವ ಅಗಾಧವಾದ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಅಂಶಗಳು ಮಧುಮೇಹ, ತೂಕ ಹೆಚ್ಚಾಗುವುದು, ಸ್ಥೂಲಕಾಯತೆ ಮತ್ತು ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ .


 • ದೇಹದ ತೂಕ ಕಡಿಮೆ ಮಾಡುವಲ್ಲಿ ಕರಿಬೇವು ಈ ರೀತಿಯಲ್ಲಿ ಸಹಾಯ ಮಾಡುತ್ತದೆ

  ಸಾಮಾನ್ಯವಾಗಿ ತೂಕ ಹೆಚ್ಚಾಗಿರುವವರು ಕರಿಬೇವು ತಿನ್ನಿ ಎಂದು ನಾವು ಒತ್ತಾಯ ದಿಂದ ಹೇಳಬೇಕೆಂದರೆ ಅದಕ್ಕೆ ಕಾರಣ ಇರಬೇಕಲ್ಲವೇ ? ಹೌದು . ಕರಿಬೇವು ದೇಹ ಸೇರಿದ ಮೇಲೆ ಮೊದಲು ಮಾಡುವ ಕೆಲಸ ಎಂದರೆ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚುವಂತೆ ಮಾಡುವುದು . ತದ ನಂತರ ಜೀರ್ಣವಾದ ಆಹಾರ ಕರುಳಿನ ಮುಖಾಂತರ ಸಾಗಬೇಕಾದರೆ ಕರುಳಿನ ಒಳ ಪದರಗಳಿಗೆ ಅನೇಕ ರೀತಿಯ ಸೋಂಕುಗಳು ತಗುಲುವ ಸಾಧ್ಯತೆ ಇದ್ದು , ಕರಿಬೇವು ಅದನ್ನು ತಡೆದು ದೇಹದ ಮೆಟಬೋಲಿಸಂ ಅನ್ನು ಹೆಚ್ಚುವಂತೆ ಮಾಡಿ ದೇಹದ ತೂಕ ಕಡಿಮೆ ಮಾಡುತ್ತದೆ . ಕರಿಬೇವಿನಲ್ಲಿ ಆಂಟಿ ಒಕ್ಸಿಡಾಂಟ್ ಗಳ ಮಹಾ ಪೂರವೇ ಇದ್ದು , ದೇಹದಲ್ಲಿ ಅಡಕವಾಗಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವಂತೆ ಮಾಡುತ್ತವೆ . ನಿಮಗೇನಾದರೂ ಪದೇ ಪದೇ ವಾಕರಿಕೆ ಬಂದು ವಾಂತಿಯಾಗುವ ಲಕ್ಷಣಗಳು ಕಂಡುಬಂದರೆ 10 ರಿಂದ 12 ಕರಿಬೇವಿನ ಎಲೆಗಳನ್ನು ತಿಂದರೆ ಸಾಕು ವಾಕರಿಕೆಯಾಗುವ ಸಂಭವ ಕಡಿಮೆ ಆಗುತ್ತದೆ.

  Most Read: ಕೂದಲಿನ ಹಲವು ರೋಗಗಳಿಗೆ ರಾಮಬಾಣ 'ಕರಿಬೇವು'


 • ಕರಿಬೇವಿನಲ್ಲಿ ಮೆಚ್ಚುವಂತಹ ಒಂದು ಗುಣವಿದೆ ಅಂದರೆ ಅದು ದಪ್ಪಗಿರುವವರನ್ನು

  ಸಣ್ಣಗಾಗಿಸುವುದು . ಅದಕ್ಕೆ ಕಾರಣ ಕರಿಬೇವಿನ ಎಲೆಗಳಲ್ಲಿ ನಿಸರ್ಗದತ್ತವಾಗಿ ಸೇರಿರುವ ಒಂದು ವಿಶೇಷವಾದ ಅಂಶ . ಈ ಅಂಶ ದೇಹ ಸೇರಿದ ಕೂಡಲೇ ದೇಹದ ಒಳಗಿನ ಕೆಟ್ಟ ಅಂದರೆ ಬ್ಯಾಡ್ ಕೊಲೆಸ್ಟರಾಲ್ ಅನ್ನು ಇನ್ನಿಲ್ಲದಂತೆ ಮಾಡುತ್ತದೆ . ದೇಹದ ಕೊಬ್ಬಿನಂಶಕ್ಕೂ ಲಗ್ಗೆಯಿಟ್ಟು ದೇಹದ ಸ್ಥೂಲಕಾಯತೆ ಕಡಿಮೆ ಆಗುವಂತೆ ಮಾಡುತ್ತದೆ . ಮಹನಿಂಬಿನ್ ಎಂಬ ಅಂಶ ಕರಿಬೇವಿನಲ್ಲಿದ್ದು ದೇಹದ ಕೊಬ್ಬಿನಂಶ ಇಳಿಸುವಲ್ಲಿ ಇದು ಅತ್ಯಂತ ಮತ್ತು ಧೀರ್ಘಕಾಲದಲ್ಲಿ ಸಹಕಾರಿ . ದೇಹದ ತೂಕ ಹೆಚ್ಚುವಂತೆ ಮಾಡುವ ಲಿಪಿಡ್ ಗಳು ಮತ್ತು ಟ್ರೈ ಗ್ಲಿಸರೈಡ್ಸ್ ಅನ್ನು ಮನುಷ್ಯನ ರಕ್ತ ಕಣಗಳಲ್ಲಿ ಸೇರದಂತೆ ಕಡಿಮೆ ಮಾಡುತ್ತದೆ . ಮನುಷ್ಯನ ಬ್ಲಡ್ ಶುಗರ್ ಲೆವೆಲ್ ಏರುಪೇರಾದರೆ ದೇಹದ ತೂಕ ಹೆಚ್ಚು ಗೊಳ್ಳುತ್ತದೆ ಎಂಬ ನಂಬಿಕೆ ಇದೆ . ಆದರೆ ಕರಿಬೇವು ಮೊದಲೇ ಹೇಳಿದಂತೆ ಮಧುಮೇಹಕ್ಕೆ ರಾಮಬಾಣವಾಗಿ ಕೆಲಸ ಮಾಡುವುದರಿಂದ ಮತ್ತೆ ದೇಹದ ತೂಕ ಹೆಚ್ಚಾಗುವ ಮಾತೇ ಇಲ್ಲ.

  Most Read: ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ


 • ಕರಿಬೇವಿನ ಎಲೆಗಳನ್ನು ಹೇಗೆ ತಿನ್ನಬೇಕು ?

  ಕರಿಬೇವಿನ ಎಲೆ ಸೇವಿಸುವುದಕ್ಕೆ ಇಂತಹದೇ ರೀತಿ ಎಂಬ ನಿಯಮವೇನೂ ಇಲ್ಲ . ಯಾವ ರೀತಿ ಸೇವಿಸಿದರೂ ಆರೋಗ್ಯಕ್ಕೆ ಸಹಕಾರಿಯೇ . ದೇಹದ ತೂಕ ಕಡಿಮೆ ಮಾಡಿಕೊಳ್ಳಲೇಬೇಕು ಎಂದು ಪಣ ತೊಟ್ಟಿರುವವರು ಕರಿಬೇವನ್ನು ಯಾವ ಕಾರಣಕ್ಕೂ ಮಿಸ್ ಮಾಡದೇ ತಮ್ಮ ಆಹಾರದಲ್ಲಿ ಬಳಕೆ ಮಾಡಿದ್ದೆ ಆದರೆ ಒಳ್ಳೆಯ ಫಲಿತಾಂಶ ಕಾಣಬಹುದು . ಅದರಲ್ಲೂ ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಕರಿಬೇವು ಸೇವನೆ ಆರೋಗ್ಯಕ್ಕೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ.

  Most Read: ಹೌದು!! ಕರಿಬೇವಿನ ಎಲೆಗಳ ಉಪಯೋಗ ತಿಳಿದರೆ ಅಚ್ಚರಿಗೊಳ್ಳುವಿರಿ!


 • ಈ ರೀತಿ ಕರಿಬೇವಿನ ಜ್ಯೂಸು ಮಾಡಿ ಒಮ್ಮೆ ಕುಡಿದು ನೋಡಿ :

  ಸಾಮಾನ್ಯವಾಗಿ ದ್ರವಾಹಾರವನ್ನು ಹೆಚ್ಚು ಇಷ್ಟ ಪಡುವವರು ಕರಿಬೇವಿನ ಜ್ಯೂಸು ಅನ್ನು ಒಮ್ಮೆ ಟ್ರೈ ಮಾಡಬಹುದು .
  * ನೀರನ್ನು ಒಲೆಯ ಮೇಲೆ ಕುದಿಯಲು ಇಡಿ .
  * ಚೆನ್ನಾಗಿ ಕುದಿಯುತ್ತಿರುವ ನೀರಿಗೆ 10 ರಿಂದ 15 ಎಸಳು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ .
  * ನಂತರ ಆರಲು ಬಿಟ್ಟು ಆ ನೀರನ್ನು ಒಂದು ಬಟ್ಟೆಯಲ್ಲಿ ಶೋಧಿಸಿ ಕುಡಿಯಿರಿ .
  * ನಿಮ್ಮ ರುಚಿಗೆ ಬೇಕಾದರೆ ಸ್ವಲ್ಪ ನಿಂಬೆ ರಸ ಅಥವಾ ಜೇನು ತುಪ್ಪವನ್ನು ಬೇಕಾದರೂ ಸೇರಿಸಿ ಕುಡಿಯಬಹುದು .
  * ನಿಮಗೆ ಕರಿಬೇವಿನ ಎಲೆಗಳ ಜ್ಯೂಸು ನಿಂದ ಉತ್ತಮ ರೀತಿಯಲ್ಲಿ ಫಲಿತಾಂಶ ದೊರಕಬೇಕೆಂದರೆ ಪ್ರತಿ ದಿನ ತಪ್ಪಿಸದಂತೆ 20 ರಿಂದ 30 ದಿನಗಳವರೆಗೂ ಕುಡಿಯುತ್ತಾ ಬನ್ನಿ . ಒಳ್ಳೆಯ ತೆಳ್ಳಗಿನ ಆರೋಗ್ಯ ಕರ ದೇಹ ನಿಮ್ಮದಾಗುತ್ತದೆ .
ಕರಿಬೇವು , ಭಾರತೀಯ ಹಿಂದೂ ಸಾಂಪ್ರದಾಯಿಕ ಅಡುಗೆ ಸಾಮ್ರಾಜ್ಯದಲ್ಲಿ ತನ್ನದೇ ಆದ ಒಂದು ವಿಶಿಷ್ಟ ಛಾಪು ಮೂಡಿಸಿದ ಒಂದು ವಿಶೇಷ ಸಸ್ಯ . ಯಾವುದೇ ಖಾರದ ಅಡುಗೆಗಳಿಗೆ ಕರಿಬೇವು ಇಲ್ಲದೆ ಯಾರೂ ಮುಂದುವರೆಯುವುದೇ ಇಲ್ಲ. ಶುಭ ಕಾರ್ಯ ಮಾಡುವ ಮುಂಚೆ ವಿಜ್ಞೇಶ್ವರನಿಗೆ ಪೂಜೆ ಸಲ್ಲಿಸಿದಂತೆ ಅಡುಗೆ ಮುಂಚೆ ಮಾಡುವ ಒಗ್ಗರಣೆಗೆ ಕರಿಬೇವು ಅತಿ ಅವಶ್ಯ. ಕರಿಬೇವಿನ ಮಹತ್ವ ಇರುವುದೇ ಹಾಗೆ . ಅಡುಗೆ ಭಟ್ಟರಿಂದ ಹಿಡಿದು ಮನೆಯೊಡತಿಯವರೆಗೂ ಎಲ್ಲರೂ ಕರಿಬೇವನ್ನುತುಂಬಾ ಹಚ್ಚಿಕೊಂಡಿದ್ದಾರೆ.

 
ಹೆಲ್ತ್