Back
Home » Car News
ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!
DriveSpark | 12th Jun, 2019 11:03 AM
 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಈಗ ಉತ್ಪಾದನಾ ಹಂತದಲ್ಲಿರುವ ಕಾರಿನ ಇಂಟಿರಿಯರ್ ಚಿತ್ರಗಳು ಸೋರಿಕೆಯಾಗಿವೆ. ನಿರೀಕ್ಷೆಯಂತೆ ಹೊಸ ಕಾರಿನ ಡ್ಯಾಶ್‍‍ಬೋರ್ಡಿನಲ್ಲಿ ಈಗಿರುವ ಮಾದರಿಗಿಂತ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಮೊದಲನೆಯದಾಗಿ, ಈ ಆಫ್ ರೋಡರ್ ಕಾರಿನಲ್ಲಿರುವ ಡ್ಯಾಶ್‍‍ಬೋರ್ಡ್‍ ಸುತ್ತ ಕಪ್ಪು ಬಣ್ಣವನ್ನು ಬಳಿಯಲಾಗಿದೆ. ಮಲ್ಟಿ ಫಂಕ್ಷನ್‍ ಸ್ಟೀಯರಿಂಗ್ ವ್ಹೀಲ್‍‍ಗೆ ಟಿ‍‍ಯು‍‍ವಿ 300 ಕಾರಿನಲ್ಲಿರುವಂತೆ ಸಿಲ್ವರ್ ಬಣ್ಣವನ್ನು ಬಳಿಯಲಾಗಿದೆ.


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಹೊಸ ಮಹೀಂದ್ರಾ ಥಾರ್‍‍ನಲ್ಲಿ ಮೊದಲಿದ್ದ ಬೈ ಪಾಡ್ ಯೂನಿಟ್‍‍ನ ಬದಲಿಗೆ, ಹೊಸತನದಿಂದ ಕೂಡಿರುವ ಟ್ರೈ ಪಾಡ್ ಯೂನಿಟ್ ಅನ್ನು ಅಳವಡಿಸಲಾಗಿದೆ. ಮಧ್ಯದಲ್ಲಿ ಮಲ್ಟಿ ಇನ್ಫೋ ಡಿಸ್‍‍ಪ್ಲೇ‍‍ಯನ್ನು ಅಳವಡಿಸಲಾಗಿದೆ.


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಮಧ್ಯದಲ್ಲಿರುವ ಕಂಸೋಲ್ ಲೇ‍ಔಟ್ ಅನ್ನು ಮುಂದಕ್ಕೆ ಸರಿಸಲಾಗಿದ್ದರೂ ಹೊಸ ಎಸಿ ಕಂಟ್ರೋಲ್‍‍ಗಳನ್ನು ಪಡೆಯಲಿದೆ. ಏರ್‍‍ಬ್ಯಾಗ್‍‍ನ ಅನುಕೂಲಕ್ಕಾಗಿ ಮಹೀಂದ್ರಾ ಕಂಪನಿಯು ಮುಂದಿರುವ ಪ್ಯಾಸೇಂಜರ್ ಗ್ರಾಬ್ ಹ್ಯಾಂಡಲ್‍ಅನ್ನು ಸ್ವಲ್ಪ ಮುಂದಕ್ಕೆ ಸರಿಸಿದೆ.


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಈ ಎಸ್‍‍‍ಯು‍‍ವಿಯಲ್ಲಿ ಫ್ರಂಟ್ ಪವರ್ ವಿಂಡೊಗಳನ್ನು ಅಳವಡಿಸಲಾಗಿದೆ. ಸೋರಿಕೆಯಾಗಿರುವ ಚಿತ್ರದಲ್ಲಿರುವಂತೆ ಹೊಸ ಥಾರ್ ಎಸ್‍‍ಯು‍‍ವಿಯಲ್ಲಿ, ಹಳೆಯ ಕಾರಿನಲ್ಲಿರುವಂತಹ 5 ಸ್ಪೀಡ್ ಯೂನಿಟ್‍‍ನ ಬದಲಿಗೆ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಜೊತೆಯಲ್ಲಿ ಡೇಡಿಕೇಟೆಡ್ ಲೀವರ್ ಹೊಂದಿರುವ ಲೋ ಟ್ರಾನ್ಸ್ ಫರ್ ಕೇಸ್ ನೀಡಲಾಗುವುದು. ಈ ಕಾರಿನ ಒಳಗೆ ಆಡಿಯೋ ಸಿಸ್ಟಂ ಅನ್ನು ಅಳವಡಿಸುವ ಅವಕಾಶವನ್ನು ಒದಗಿಸಲಾಗಿದೆ. ಹೊಸ ಥಾರ್ ಸ್ಟಾಂಡರ್ಡ್ ಫಿಟ್‍‍ಮೆಂಟ್‍‍ನ ರೀತಿಯಲ್ಲಿ ಇಲ್ಲ.

  MOST READ: ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿರುವ ಐದು ಸ್ಕೂಟರ್‍‍ಗಳಿವು


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಟಚ್ ಸ್ಕ್ರೀನ್ ಇನ್ಫೊಟೇನ್‍‍ಮೆಂಟ್ ಸಿಸ್ಟಂ ಹೊಂದಿರುವ ಫುಲಿ ಲೋಡೆಡ್ ಮಾದರಿಯನ್ನು ಬಿಡುಗಡೆಗೊಳಿಸಲಾಗುವುದು. ಡ್ಯೂಯಲ್ ಏರ್‍‍ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಪ್ಯಾಸೆಂಜರ್ ಸೀಟ್ ಬೆಲ್ಟ್ ವಾರ್ನಿಂಗ್, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗೂ ಎ‍‍‍ಬಿ‍ಎಸ್ ಗಳನ್ನು ಈ ಸರಣಿಯ ಹೊಸ ಕಾರುಗಳಲ್ಲಿ ನೀಡಲಾಗುವುದು.


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಕಾರಿನ ಒಳಗೆ ಹೊಸ ಹಾಗೂ ಉತ್ತಮ ದರ್ಜೆಯ ಉಬ್ಬುಗಳಿರುವ ಸೀಟುಗಳನ್ನು, ಪಕ್ಕಕ್ಕೆ ಅರ್ಮ್‍‍ರೆಸ್ಟ್ ಗಳನ್ನು ನೀಡಲಾಗಿದೆ. ಸೀಟುಗಳ ಬ್ಲಾಕ್ ಫ್ಯಾಬ್ರಿಕ್‍‍ಗಳಿಗೆ ಬಿಳಿ ಬಣ್ಣದ ಸ್ಟಿಚಿಂಗ್ ಮಾಡಲಾಗಿದೆ. ಒಟ್ಟಾರೆಯಾಗಿ ಮಹೀಂದ್ರಾ ಥಾರ್ ಕ್ಯಾಬಿನ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

  MOST READ: ಭಾರತಕ್ಕೆ ಕಾಲಿಟ್ಟ 21 ಲಕ್ಷ ರೂ. ಬೆಲೆಯ ಎಂ‍‍ವಿ ಅಗಸ್ಟಾ ಎಫ್3-800 ಬೈಕ್


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಇದರಲ್ಲಿರುವ ಟೆಕ್ನಿಕಲ್ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯದೆ ಇದ್ದರೂ ಈಗಿರುವ 105 ಬಿ‍ಹೆಚ್‍‍ಪಿ ಉತ್ಪಾದಿಸುವ 2.5 ಲೀಟರಿನ ಸಿ‍ಆರ್‍‍ಡಿ‍ಇ ಡೀಸೆಲ್ ಎಂಜಿನ್ ಅನ್ನು ಬಿ‍ಎಸ್ 6 ನಿಯಮಗಳಿಗೆ ಹೊಂದಿಕೊಳ್ಳುವಂತೆ ಮಾರ್ಪಾಡಿಸಿ ಹೊಸ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ. ಹಳೆಯ ತಲೆಮಾರಿನ 61 ಬಿ‍‍ಹೆ‍ಚ್‍‍ಪಿ ಉತ್ಪಾದಿಸುವ 2.5 ಲೀಟರಿನ ಡಿ‍ಐ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗುವುದು. 2.0 ಲೀಟರಿನ್ ಎಂಜಿನ್ ಅಳವಡಿಸುವ ಬಗೆಯೂ ಹಲವಾರು ವದಂತಿಗಳಿವೆ.


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಥಾರ್ ವಾಹನವು ಮೊದಲಿನಂತೆಯೇ ಆಫ್ ರೋಡ್ ಆಗಿರಲಿದ್ದು, ಟಾಪ್ ಎಂಡ್ ಮಾದರಿಯಲ್ಲಿ ರೇರ್ ಲಾಕಿಂಗ್ ಡಿಫರೆಂಶಿಯಲ್ ಹಾಗೂ ಡಿಪಾರ್ಚರ್ ಯಾಂಗಲ್‍‍ಗಳಿರಲಿವೆ. ಈ ಸೋರಿಕೆಯಾದ ಚಿತ್ರಗಳಲ್ಲಿ ತೋರಿಸಲಾದಂತೆ ತಯಾರಿಕಾ ಹಂತದಲ್ಲಿರುವ ವಾಹನದ ಗಾತ್ರವು ಮೊದಲಿಗಿಂತ ಜಾಸ್ತಿಯಾಗಿದೆ.

  MOST READ: ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್


 • ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!

  ಈಗಿರುವ ಮಹೀಂದ್ರಾ ಥಾರ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.9.49 ಲಕ್ಷಗಳಾಗಲಿದೆ. ಹೊಸ ಮಹೀಂದ್ರಾ ಕಾರಿನ ಬೆಲೆಯು ಈ ಕಾರಿನ ಬೆಲೆಗಿಂತ ಹೆಚ್ಚಾಗಿರಲಿದೆ.

  Source: ZigWheels
ಹೊಸ ತಲೆಮಾರಿನ ಮಹೀಂದ್ರಾ ಥಾರ್ ಎಸ್‍‍ಯು‍‍ವಿ ಕಾರ್ ಅನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಬೇಕಾಗಿರುವ ಕಾರಣ, ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದುವರೆಗೂ ಈ ಕಾರಿನ ಹೊರಗಿನ ಚಿತ್ರಗಳು ಮಾತ್ರ ಬಹಿರಂಗವಾಗಿದ್ದವು.

   
 
ಹೆಲ್ತ್