Back
Home » Car News
ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್
DriveSpark | 12th Jun, 2019 10:43 AM
 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಹಲವಾರು ದಿನಗಳಿಂದಲೂ ಎಂಪಿವಿ ಕಾರು ಪ್ರಿಯರಲ್ಲಿ ಕುತುಹಲವನ್ನು ಹುಟ್ಟುಹಾಕಿದ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್ ಕಾರಿನ ಚಿತ್ರಗಳು ಇದೀಗ ಸೋರಿಕೆಯಾಗಿದ್ದು, ಮಾಹಿತಿಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಮುಂಬರುವ ದೀಪಾವಳಿ ಹೊತ್ತಿಗೆ ಫ್ಯೂಚರ್ ಎಸ್ ಕಾನ್ಸೆಪ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ತದನಂತರವಷ್ಟೇ ವಿಟಾರಾ ಬ್ರೆಝಾ ಪೆಟ್ರೋಲ್ ವರ್ಷನ್ ಮತ್ತು ಎರ್ಟಿಗಾ ಸ್ಪೋರ್ಟ್ ವರ್ಷನ್‌ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಈಗಾಗಲೇ ಸುಜುಕಿ ಸಂಸ್ಥೆಯು ಎರ್ಟಿಗಾ ಸ್ಪೋರ್ಟ್ ಆವೃತ್ತಿಯನ್ನು ಭಾರತದಲ್ಲಿ ಹೊರತುಪಡಿಸಿ ರಾಷ್ಟ್ರಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕಳೆದ ಆಗಸ್ಟ್ 2018ರಲ್ಲಿ ಇಂಡೋನೇಷ್ಯಾದಲ್ಲಿ ಮೊದಲ ಬಾರಿಗೆ ಹೊಸ ಸ್ಪೋರ್ಟ್ ಆವೃತ್ತಿಯನ್ನು ಅನಾವರಣ ಮಾಡಲಾಗಿತ್ತು. ಸದ್ಯ ಪರ್ಫಾಮೆನ್ಸ್ ಪ್ರಿಯರ ಆಕರ್ಷಣೆ ಕಾರಣವಾಗಿರುವ ಹೊಸ ಕಾರು ಮಾರಾಟದಲ್ಲಿ ಹೊಸ ದಾಖಲೆ ಮಾಡುತ್ತಿದ್ದು, ಭಾರತದಲ್ಲೂ ಸ್ಪೋರ್ಟ್ ಕಾರ್ ಪ್ರಿಯರನ್ನು ರಂಜಿಸುವ ನೀರಿಕ್ಷೆಯಲ್ಲಿದೆ.


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಇದಕ್ಕೆ ಪೂರಕ ಎನ್ನುವಂತೆ ಭಾರತದಲ್ಲಿ ಈಗಾಗಲೇ ಸ್ಪೋರ್ಟಿ ವರ್ಷನ್ ಎರ್ಟಿಗಾ ಕಾರುಗಳನ್ನು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಸ್ಮೋಕ್ಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, 17-ಇಂಚಿನ ಅಲಾಯ್ ವೀಲ್ಹ್, ಬ್ಯಾಕ್ ನೆಕ್ಡ್ ಗ್ರಿಲ್‌ನೊಂದಿಗೆ ಸಾಮಾನ್ಯ ಕಾರಿಗಿಂತ ವಿಭಿನ್ನವಾಗಿರುವುದು ಸ್ಪಾಟ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಮತ್ತೊಂದು ಗಮನಿಸಬೇಕಾದ ಮುಖ್ಯವಾದ ವಿಚಾರ ಅಂದ್ರೆ, ಹೊರ ವಿನ್ಯಾಸಗಳಲ್ಲಿ ಮಾತ್ರವೇ ಸ್ಪೋರ್ಟಿ ಲುಕ್ ಪಡೆದಿರುವ ಎರ್ಟಿಗಾ ಸ್ಪೋರ್ಟ್ ಕಾರುಗಳು ತಾಂತ್ರಿಕವಾಗಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎನ್ನಲಾಗಿದ್ದು, ಸದ್ಯ ಲಭ್ಯವಿರುವ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಹೊರ ಭಾಗದಲ್ಲಿ ಐಷಾರಾಮಿ ಕಾರುಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಜೋಡಿಸಲಾಗಿದೆಯೆಂತೆ.


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಕಳೆದ ಬಾರಿ ನಡೆದ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಲಾಗಿದ್ದ ಎರ್ಟಿಗಾ ಫೇಸ್‌ಲಿಫ್ಟ್‌ಗೂ ಮತ್ತು ಸ್ಪೋರ್ಟಿ ಎರ್ಟಿಗಾ ಕಾರಿಗಳ ನಡುವಿನ ವಿನ್ಯಾಸಗಳು ಬೇರೆ ಬೇರೆಯಾಗಿದ್ದರೂ ಎಂಜಿನ್ ವೈಶಿಷ್ಟ್ಯತೆ ಒಂದೇ ಆಗಿದ್ದು, ಫೇಸ್‌ಲಿಫ್ಟ್ ವರ್ಷನ್‌ಗಳು ಪ್ರಿಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

  MOST READ: ಹೆಲ್ಮೆಟ್ ವಿಚಾರವಾಗಿ ಅಲ್ಲಿನ ಜನತೆಗೆ ಹೊಸ ಆದೇಶವನ್ನು ನೀಡಿದ ತಮಿಳುನಾಡು ಹೈಕೋರ್ಟ್


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಜೊತೆಗೆ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

  MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

  MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಸದ್ಯ ಮಾರಾಟವಾಗುತ್ತಿರುವ ಹೊಸ ಮಾರುತಿ ಎರ್ಟಿಗಾ ಎಮ್‍‍ಪಿವಿ ಫೇಸ್‌ಲಿಫ್ಟ್ ಕಾರುಗಳು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 105-ಬಿಹೆಚ್‍‍ಪಿ ಮತ್ತು 98-ಬಿಎಚ್‌ಪಿ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 24ಕಿ.ಮಿ ನಿಂದ 26 ಕಿ.ಮಿ ಮೈಲೇಜ್ ನೀಡುತ್ತದೆ.


 • ಹೇಗಿರಲಿದೆ ನೋಡಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಸ್ಪೋರ್ಟ್

  ಇದೀಗ ಮಾರುಕಟ್ಟೆಯಲ್ಲಿ ಅಧಿಕವಾಗುತ್ತಿರುವ ಎಂಪಿವಿ ಕಾರುಗಳ ಬೇಡಿಕೆಯಿಂದಾಗಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಎರ್ಟಿಗಾ ಕಾರಿನ ಸ್ಪೋರ್ಟ್ ಮಾದರಿಯನ್ನು ಬಿಡುಗಡೆ ಮಾಡುವ ತವಕದಲಿದ್ದು, ಎರ್ಟಿಗಾ ಮತ್ತು ಎರ್ಟಿಗಾ ಫೇಸ್‍ಲಿಫ್ಟ್ ಕಾರುಗಳಂತೆಯೇ ಹೆಚ್ಚಿನ ಜನಪ್ರಿಯತೆಯನ್ನು ಪಡೆಯಲಿದೆಯೇ ಎಂದು ಕಾಯ್ದು ನೋಡಬೇಕಿದೆ.

  Image Courtesy: GaadiWaadi
ಮಾರುತಿ ಸುಜುಕಿ ನಿರ್ಮಾಣದ ಎರ್ಟಿಗಾ ಫೇಸ್‌ಲಿಫ್ಟ್ ಆವೃತ್ತಿಯುಈಗಾಗಲೇ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಮಹೀಂದ್ರಾ ಮರಾಜೊ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಎಂಪಿವಿ ಕಾರಿನ ಸ್ಪೋರ್ಟ್ ಆವೃತ್ತಿಯನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದ್ದು, ಹೊಸ ಕಾರಿನ ಬಿಡುಗಡೆ ಮಾಹಿತಿಯನ್ನು ಹೊರಹಾಕಿತ್ತು.

   
 
ಹೆಲ್ತ್