Back
Home » ಸಿನಿ ಸಮಾಚಾರ
'ಗುಬ್ಬಿಮೇಲೆ ಬ್ರಹ್ಮಾಸ್ತ್ರ' ಬಿಟ್ಟ ನಟಿ ಶುಭ ಪೂಂಜಾ
Oneindia | 12th Jun, 2019 02:49 PM

ನಟಿ ಶುಭಾ ಪೂಂಜಾ ಈಗ ಏನ್ಮಾಡ್ತಿದ್ದಾರೆ ಎನ್ನುವುದು ಚಿತ್ರಾಭಿಮಾನಿಗಳ ಕುತೂಹಲ. ಯಾಕಂದ್ರೆ ಶುಭಾ ತೆರೆ ಮೇಲೆ ಬರದೆ ವರ್ಷವೆ ಆಗಿದೆ. ಆದ್ರೀಗ ಶುಭಾ 'ಗುಬ್ಬಿಮೇಲೆ ಬ್ರಹ್ಮಾಸ್ತ್ರ' ಬಿಡ್ತಿದ್ದಾರೆ. ಹಾಗಂತ ಅಚ್ಚರಿ ಪಡುವ ಅವಶ್ಯಕತೆ ಇಲ್ಲ. 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್ ಬಿ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ 'ಗುಬ್ಬಿಮೇಲೆ ಬ್ರಹ್ಮಾಸ್ತ್ರ' ಚಿತ್ರದಲ್ಲಿ ಶುಭಾ ಪೂಂಜಾ ಕಾಣಿಸಿಕೊಂಡಿದ್ದಾರೆ. ಹಾಗಂತ ಚಿತ್ರದ ನಾಯಕಿ ಪಾತ್ರದಲ್ಲಿ ಶುಭಾ ಬಣ್ಣ ಹಚ್ಚುತ್ತಿದ್ದಾರಾ ಎಂದು ತಿಳ್ಕೋಬೇಡಿ. ಚಿತ್ರದ ಒಂದು ಹಾಡಿನಲ್ಲಿ ಮಾತ್ರ ಹೆಜ್ಜೆ ಹಾಕಿದ್ದಾರೆ.

ಈ ತಾತನ ಹೋಟೆಲ್ ರುಚಿಯನ್ನು ಮಂಗಳೂರಿಗರು ಮಿಸ್ ಮಾಡ್ಕೋಬೇಡಿ

ಚಿತ್ರದ ಈ ಪ್ರಮುಕ ಹಾಡಿನಲ್ಲಿ ಹೆಜ್ಜೆ ಹಾಕಿದ ಶುಭಾ ಪೂಂಜಾ ಲುಕ್ ರಿವೀಲ್ ಆಗಿದೆ. ಈ ಗೆಟಪ್ ಪೌರಾಣಿಕ ಪಾತ್ರದ ಗೆಟಪ್ ಇದ್ದ ಹಾಗೆ ಇದೆ. ಇನ್ನು ವಿಶೇಷ ಅಂದ್ರೆ ಈ ಹಾಡಿನಲ್ಲಿ ಶುಭಾ ಜೊತೆಗೆ ಇನ್ನು ಇಬ್ಬರು ನಾಯಕಿಯರು ಹೆಜ್ಜೆ ಹಾಕಿದ್ದಾರೆ. ನಟಿ ಕಾರುಣ್ಯ ರಾಮ್ ಮತ್ತು ರಚನಾ ಡ್ಯಾನ್ಸ್ ಮಾಡಿದ್ದಾರೆ.

ಈ ಹಾಡು ಚಿತ್ರದ ನಾಯಕ ರಾಜ್ ಬಿ ಶೆಟ್ಟಿ ಚಿತ್ರದ ನಾಯಕಿ ಪರ್ಪಲ್ ಪ್ರಿಯಾ ಯಾವ ರೀತಿ ಇರ ಬಹುದು ಎಂದು ಕನಸು ಕಾಣುವ ಹಾಡಾಗಿದೆಯಂತೆ. ಯಾರ ಥರ ಇರಬಹುದು ಎಂದು ಕಥಾನಾಯಕ ಕಲ್ಪನೆ ಮಾಡಿಕೊಳ್ಳುವಾಗ ಶುಭಾ ಪೂಂಜಾ, ರಚನಾ, ಕಾರುಣ್ಯಾ ರಾಮ್ ಕಾಣಿಸಿಕೊಳ್ಳುತ್ತಾರಂತೆ.

ಅಂದ್ಹಾಗೆ ಚಿತ್ರದಲ್ಲಿ ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಕವಿತಾ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಸುಜಯ್ ಶಾಸ್ತ್ರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಟೈಟಲ್ ಮೂಲಕವೇ ಕುತೂಹಲ ಮೂಡಿಸಿರುವ 'ಗುಬ್ಬಿಮೇಲೆ ಬ್ರಹ್ಮಾಸ್ತ್ರ' ಸಧ್ಯದಲ್ಲೇ ತೆರೆಗೆ ಬರಲಿದೆ.

   
 
ಹೆಲ್ತ್