Back
Home » ಆರೋಗ್ಯ
ಲೈಂಗಿಕ ಜೀವನ ಸಲಹೆ: ಹೊಟ್ಟೆಯುಬ್ಬರಿಕೆ ಮತ್ತು ಅಪಾನವಾಯುವಿನ ತೊಂದರೆ ಇದ್ದಾಗಲೂ ಲೈಂಗಿಕ ಕ್ರೀಡೆ ಬಯಸುತ್ತೀರಾ?
Boldsky | 12th Jun, 2019 03:29 PM
 • ತಕ್ಷಣವೇ ಅಂಟಾಸಿಡ್ ಔಷಧಿ ಸೇವಿಸಿ

  ಈ ಕ್ಷಣದಲ್ಲಿ ಎದುರಾದ ತುರ್ತು ಪರಿಸ್ಥಿತಿಯನ್ನು ಎದುರಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿಮ್ಮ ಹೊಟ್ಟೆ ಉಬ್ಬಿದಂತೆ ಹಾಗೂ ಗುಡುಗುಡು ಎದುರಾಗಿದ್ದರೆ, ಇದು ನಿಮ್ಮ ಹೊಟ್ಟೆಯಲ್ಲಿ ಅಪಾನವಾಯು ಉತ್ಪತ್ತಿಯಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ತಕ್ಷಣವೇ ಅಂಟಾಸಿಡ್ ದ್ರಾವಣವನ್ನು ಸೇವಿಸುವ ಮೂಲಕ ಕೆಲವೇ ನಿಮಿಷಗಳಲ್ಲಿ ಈ ತೊಂದರೆ ಇಲ್ಲವಾಗುತ್ತದೆ.


 • ಅಪಾನವಾಯುವನ್ನು ಬಿಡುಗಡೆಗೊಳಿಸಿ

  ಹೇಳಲಿಕ್ಕೂ ಮುಜುಗರವಾದ ಈ ಕ್ರಮ ವಾಸ್ತವವಾಗಿ ಈ ಸಮಯದಲ್ಲಿ ಅತ್ಯಂತ ಸೂಕ್ತವಾದ ಕ್ರಮವೇ ಆಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸಮಯದಲ್ಲಿ ಮನೆಯಲ್ಲಿ ಅಂಟಾಸಿಡ್ ಔಷಧಿ ಇರದೇ ಹೋಗಬಹುದು. ಹಾಗಿದ್ದಾಗ ತಕ್ಷಣವೇ ಶೌಚಾಲಯಕ್ಕೆ ಧಾವಿಸಿ ಅಪಾನವಾಯುವನ್ನಷ್ಟೂ ಬಿಡುಗಡೆಗೊಳಿಸಿ. ಒಂದು ವೇಳೆ ಕೊಂಚ ಹೊತ್ತಿನ ನಂತರವೂ ಅಪಾಯವಾಯು ಎದುರಾದರೆ ಮತ್ತೆ ಶೌಚಾಲಯಕ್ಕೆ ತೆರಳು ಹಿಂಜರಿಯದಿರಿ. ಏಕೆಂದರೆ ಈ ಕ್ರಿಯೆಯ ಬಳಿಕ ನಿಮಗೆ ಎದುರಾಗುವ ನಿರಾಳತೆ ಲೈಂಗಿಕ ಕ್ರಿಯೆ ಮುಂದುವರೆಸಲು ಪ್ರೇರಣೇ ನೀಡುತ್ತದೆ.


 • ಅಪಾಯವಾಯು ತೊಂದರೆ ನಿವಾರಣೆಗೆ ಯೋಗಾಸನ

  ಒಂದು ವೇಳೆ ಕೊಂಚ ಹೊತ್ತಿನವರೆಗಾದರೂ ಯಾರೂ ಇಲ್ಲದ ಕೋಣೆಯಲ್ಲಿ ಈ ಯೋಗಾಸನವನ್ನು ಅನುಸರಿಸುವ ಮೂಲಕ ಅಪಾನವಾಯು ತಕ್ಷಣವೇ ಬಿಡುಗಡೆಗೊಳಲು ಸಾಧ್ಯವಾಗುತ್ತದೆ. ಈ ಗುಣದಿಂದಾಗಿಯೇ ಈ ಆಸನಕ್ಕೆ 'ಪಾವನ ಮುಕ್ತಾಸನ' ಎಂಬ ಹೆಸರನ್ನಿಡಲಾಗಿದೆ.
  ಮೊದಲು ಬೆನ್ನಿನ ಮೇಲೆ ಅಂಗಾತನೆ ಮಲಗಿ (ತಲೆದಿಂಬು ಬೇಡ) ಈಗ ಎರಡೂ ಮೊಣಕಾಲುಗಳನ್ನು ಎದೆಗೆ ತಾಕುವಂತೆ, ಆದರೆ ತಲೆ ಎತ್ತದೇ, ಕಾಲುಗಳನ್ನು ಮಡಚಿ.
  ನಿಮ್ಮ ಎರಡೂ ಕೈಗಳನ್ನು ಎರಡೂ ಮೊಣಕಾಲುಗಳನ್ನು ಆವರಿಸಿ ಎದೆಗೆ ಒತ್ತಿ ಹಿಡಿಯುವಂತೆ ಮಾಡಿ
  ಎರಡೂ ಮೊಣಕಾಲುಗಳು ಹಾಗೂ ಪಾದಗಳ ಮಣಿಕಟ್ಟುಗಳು ಪರಸ್ಪರ ತಾಕಿರಬೇಕು
  ಈಗ ಗದ್ದವನ್ನು ಮುಂದಕ್ಕೆ ಬರುವಂತೆ ಮಾಡಿ ಎದೆಗೆ ತಾಕಿಸಿ.
  ಈ ಹಂತದಲಿ ಇಪ್ಪತ್ತು ಸೆಕೆಂಡುಗಳಾದರೂ ಹಾಗೇ ಇರಿ
  ಒಂದು ವೇಳೆ ಎರಡೂ ಕಾಲುಗಳನ್ನು ಮಡಚಲು ಕಷ್ಟ ಎನಿಸಿದರೆ ಒಂದು ಬಾರಿಗೆ ಒಂದೇ ಕಾಲನ್ನು ಮಡಚಿ, ಇನ್ನೊಂದು ಕಾಲನ್ನು ನೀಳವಾಗಿರಿಸುವಂತೆ ಪ್ರಯತ್ನಿಸಿ.


 • ಹೊಟ್ಟೆಯ ಮಸಾಜ್ ಮಾಡಿ

  ಒಂದು ವೇಳೆ ಯಾವುದೇ ಯೋಗಾಸನ ಮಾಡುವಷ್ಟು ಸಮಯ-ವ್ಯವಧಾನ ಇಲ್ಲದಿದ್ದಲ್ಲಿ, ಬೆನ್ನಿನ ಮೇಲೆ ಮಲಗಿದ್ದಂತೆ ನಿಮ್ಮ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡವಿಲ್ಲದ ಮಸಾಜ್ ಮಾಡಿ.


 • ಹೊಟ್ಟೆಯಲ್ಲಿ ಗುಡುಗುಡು ಮುಂದುವರೆದಿದ್ದರೆ

  ಒಂದು ವೇಳೆ ನಿಮ್ಮ ಹೊಟ್ಟೆಯಲ್ಲಿ ಗುಡುಗುಡು ಮುಂದುವರೆದಿದ್ದರೆ ಈ ಬಗ್ಗೆ ನಿಮ್ಮ ಸಂಗಾತಿಯಲ್ಲಿ ಮುಂಚಿತವಾಗಿ ಪರಾಮರ್ಶಿಸಿ ಈ ಭಂಗಿಯನ್ನು ನಿರ್ವಹಿಸದೇ ಇರಲು ಕ್ರಮ ಕೈಗೊಳ್ಳಿ.


 • ಗುದರತಿಯೂ ಬೇಡ

  ಈ ತೊಂದರೆಯ ಕಾರಣ ಬೇರಾವ ಬಗೆಯ ಲೈಂಗಿಕತೆಯನ್ನೂ ಬಯಸದಿರಿ. ಹಾಗಾಗಿ ಈ ಸಮಯದಲ್ಲಿ ಮುಖ್ಯ ಕ್ರೀಡೆಗಳನ್ನು ಮಾತ್ರವೇ ನಿರ್ವಹಿಸುವುದು ಕ್ಷೇಮ. ಡಾಗಿ ಮತ್ತು ಕೌಗರ್ಲ್ ಆಸನಗಳೂ ಈ ಸಂದರ್ಭದಲ್ಲಿ ಬೇಡ. ಕೇವಲ ಮೂಲ ಭಂಗಿಗಳೇ ಸಾಕು. ಅಂದರೆ ಹೊಟ್ಟೆಯ ಭಾಗದ ಮೇಲೆ ಒತ್ತಡ ಹೇರುವ ಯಾವುದೇ ಬಗೆಯ ಭಂಗಿಗಳು ಬೇಡ. ಈ ಎಲ್ಲವನ್ನೂ ಆರೋಗ್ಯ ಸರಿಯಾದ ಬಳಿಕದ ಸಮಯಕ್ಕೆ ಮುಂದೂಡಿ.


 • ಮುಂದಿನ ಬಾರಿ ಹೆಚ್ಚು ಎಚ್ಚರ ವಹಿಸಿ

  ಯಾವುದೇ ಬಗೆಯ ತೊಂದರೆ ಎದುರಾಗದೇ ಇರಲು ಈ ಸಮಯಕ್ಕೂ ಮುನ್ನ ಸೇವಿಸುವ ಅಹಾರದ ಬಗ್ಗೆ ಗಮನವಿರಲಿ. ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಲು ಕಾರಣವಾಗುವ ಯಾವುದೇ ಆಹಾರಗಳನ್ನು ಸೇವಿಸದಿರಿ. ಮದ್ಯಪಾನ ಬೇಡವೇ ಬೇಡ. ವ್ಯಸನಿಯಾಗಿದ್ದಲ್ಲಿ ಅತ್ಯಲ್ಪ ಪ್ರಮಾಣಕ್ಕೆ ಮಿತಗೊಳಿಸಿ.

  ಸಲಹೆ: ಇಂದಿನ ಭಂಗಿಗಳಲ್ಲಿ ಗಂಡು ಮೇಲಿರುವ ಭಂಗಿಗಳೇ ಇರಲಿ, ಏಕೆಂದರೆ ವಿರುದ್ದ ಭಂಗಿಯ ಮೂಲಕ ಹೊಟ್ಟೆಯ ಮೇಲೆ ಬೀಳುವ ಒತ್ತಡ ಅಪಾನವಾಯು ಬಿಡುಗಡೆಯಾಗಲು ಕಾರಣವಾಗಬಹುದು.
ಪ್ರೀತಿ, ಪ್ರೇಮದ ಬಳಿಕ ನಡೆಯುವಂತಹ ಕ್ರಿಯೆಯು ಲೈಂಗಿಕ ಕ್ರಿಯೆ. ಇದು ಸಂಗಾತಿಗಳಿಬ್ಬರ ದೇಹ ಹಾಗೂ ಮನಸ್ಸಿಗೆ ಮುದ ನೀಡುವಂತಹ ವಿಚಾರ. ಇದನ್ನು ಪರಸ್ಪರರು ಒಪ್ಪಿಗೆಯಿಂದ ತುಂಬಾ ಅನ್ಯೋನ್ಯವಾಗಿ, ಪ್ರೀತಿಸಿ, ಮುದ್ದಾಡಿಕೊಂಡು ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗುವರು. ಇಂತಹ ಸಂದರ್ಭ ಸಾಮಾನ್ಯವಾಗಿ ಪ್ರತಿ ದಂಪತಿಗಳಿಗೂ ಕೆಲವೊಂದು ಸಮಸ್ಯೆ ಎದುರಾಗುತ್ತದೆ. ಪರಸ್ಪರರಲ್ಲಿ ಲೀನವಾಗುವ ಆ ಕ್ಷಣವನ್ನು ಅನುಭವಿಸುವ ಹೊತ್ತಿಯಲ್ಲಿಯೇ ನಿಮ್ಮ ಹೊಟ್ಟೆ ನಿಮ್ಮ ನಿಯಂತ್ರಣವನ್ನು ಮೀರಿ ತನ್ನ ಪ್ರಾಬಲ್ಯವನ್ನು ಸದ್ದು ಮತ್ತು ಘ್ರಾಣವನ್ನು ಹೊರಹೊಮ್ಮಿಸುವ ಮೂಲಕ ರಸಭಾಸ ನೀಡುತ್ತದೆ. ಇದು ಅತೀವ ಮುಜುಗರಕ್ಕೀಡಾಗುವ ಸಂದರ್ಭ ಮಾತ್ರವಲ್ಲ. ಲೈಂಗಿಕ ಜೀವನವನ್ನು ಕದಡುವ ತೊಂದರೆಯೂ ಆಗಿದೆ. ಹಾಗಾದರೆ ಈಗ ಏನು ಮಾಡಬೇಕು? ಒಂದು ವೇಳೆ ಈ ಕ್ಷಣವನ್ನು ಕಳೆದುಕೊಳ್ಳಲು ಇಷ್ಟವಿಲ್ಲದಿದ್ದರೆ, ಈ ತೊಂದರೆಯನ್ನು ತಕ್ಷಣವೇ ನಿವಾರಿಸಿ ಈ ರಸರಾತ್ರಿಯನ್ನು ಮತ್ತೊಮ್ಮೆ ರಸಮಯವಾಗಿ ಮುಂದುವರೆಯುಅಲು ಕೆಲವು ಸಲಹೆಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:

   
 
ಹೆಲ್ತ್