Back
Home » Bike News
ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್
DriveSpark | 12th Jun, 2019 04:56 PM
 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  ಹೊಸ ಹೈಪರ್‍‍ಮೋಟಾರ್ಡ್ ಬೈಕಿನಲ್ಲಿ ಹೊಸ ಎಂಜಿನ್, ಚಾಸೀಸ್, ಸಸ್ಪೆಂಷನ್ ಹಾಗೂ ಫ್ಲೈ ಬೈ ವೈರ್ ಟೆಕ್ನಾಲಜಿಗಳಿವೆ. ಈ ಬೈಕ್ ಅನ್ನು ಮೊದಲ ಬಾರಿಗೆ 2018ರ ಇ‍ಐ‍‍ಸಿ‍ಎಂ‍ಎ ಆಟೋ ಶೋದಲ್ಲಿ ಅನಾವರಣಗೊಳಿಸಲಾಗಿತ್ತು. ಈ ಬೈಕ್ ಹೈಪರ್‍‍ಮೋಟಾರ್ಡ್ 950 ಹಾಗೂ ಹೈಪರ್‍‍ಮೋಟಾರ್ಡ್ 950 ಎಸ್‍‍ಪಿ ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದೆ. ಡುಕಾಟಿ ಕಂಪನಿಯು ಹೈಪರ್‍‍ಮೋಟಾರ್ಡ್ 950 ಬೈಕಿನ ಬಿಡುಗಡೆಯೊಂದಿಗೆ, ಈ ಸರಣಿಯ ಮೊದಲ ಬೈಕ್ ಆದ ಹೈಪರ್‍‍ಮೋಟಾರ್ಡ್ 1100 ಬೈಕಿನ ಪರಂಪರೆಯನ್ನು ಮುಂದುವರೆಸಿದೆ.


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  ಈ ಬೈಕ್ ಕಡಿಮೆ ವಿನ್ಯಾಸವನ್ನು ಹೊಂದಿದ್ದರೂ, ಅಗ್ರೇಸಿವ್ ಆಗಿದ್ದು, ಚಾಲಕರಿಗೆ ಉತ್ಸಾಹವನ್ನು ನೀಡಲಿದೆ. ಈ ಬೈಕಿನಲ್ಲಿರುವ ವಿನ್ಯಾಸವು ಮೋಟಾರ್ಡ್ ಸ್ಟೈಲ್‍‍ನಿಂದ ಪ್ರೇರಿತವಾಗಿದೆ. ಈ ಬೈಕ್ ಸ್ಪೋರ್ಟಿ ಸಹ ಆಗಿರಲಿದೆ. ಅಗಲವಾದ ಹ್ಯಾಂಡಲ್ ಬಾರ್, ಸೈಡ್‍‍ಗಳನ್ನು ಹೊಂದಿದ್ದು, ತೂಕವು ಕಡಿಮೆಯಾಗಿರುವುದರಿಂದ ಮೊದಲಿಗಿಂತ ಚುರುಕಾಗಿರಲಿದೆ.


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  ಎರಡೂ ಮಾದರಿಯ ಬೈಕುಗಳಲ್ಲಿ ಒಂದೇ ರೀತಿಯ 937 ಸಿಸಿ ಫ್ಯೂಯಲ್ ಇಂಜೆಕ್ಟೆಡ್ ಇಂಜಿನ್ ಅಳವಡಿಸಲಾಗಿದ್ದು, 114 ಹೆಚ್‍‍ಪಿಯನ್ನು 9,000 ಆರ್‍‍ಪಿ‍ಎಂನಲ್ಲಿ ಹಾಗೂ 96 ಎನ್‍ಎಂ ಟಾರ್ಕ್ ಅನ್ನು 7,250 ಆರ್‍‍ಪಿ‍ಎಂ ನಲ್ಲಿ ಉತ್ಪಾದಿಸುತ್ತವೆ.


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  6 ಸ್ಪೀಡಿನ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಚಾಸೀಸ್ ರಚನೆಯು ಎರಡೂ ಮಾದರಿಗಳಲ್ಲಿ ವಿಭಿನ್ನವಾಗಿದೆ. ಪ್ರಿಮೀಯಂ ಹೈಪರ್ ಮೋಟಾರ್ಡ್ 950 ಎಸ್‍‍ಪಿ ಬೈಕಿನ ಮುಂಭಾಗದಲ್ಲಿ ಒಹ್ಲಿನ್‍‍ನ ಅಡ್ಜಸ್ಟಬಲ್ ಯು‍ಎಸ್‍‍ಡಿ ಫೋರ್ಕ್‍‍ಗಳಿವೆ. ಸ್ಟಾಂಡರ್ಡ್ ಮಾದರಿಯಲ್ಲಿ ಮಾರ್ಜೊಕಿ ಅಲ್ಯುಮಿನಿಯಂ ಅಡ್ಜಸ್ಟಬಲ್ ಯು‍ಎಸ್‍‍ಡಿ ಫೋರ್ಕ್‍‍ಗಳಿವೆ. ಅದೇ ರೀತಿ 950 ಸ್ಟಾಂಡರ್ಡ್ ಮಾದರಿಯ ಹಿಂಭಾಗದಲ್ಲಿ ಸಾಚ್ಸ್ ಮೊನೊಶಾಕ್ ಯೂನಿಟ್‍‍ಗಳಿದ್ದರೆ, 950 ಎಸ್‍‍ಪಿ ಮಾದರಿಯಲ್ಲಿ ಒಹ್ಲಿನ್ ಮೊನೊಶಾಕ್‍‍ಗಳಿವೆ. ಎರಡೂ ಮಾದರಿಗಳಲ್ಲಿ ಬೇರೆ ಬೇರೆ ರೀತಿಯ ಟಯರ್ಸ್ ಹಾಗೂ ವ್ಹೀಲ್‍‍ಗಳಿವೆ.


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  890 ಎಂಎಂ ಹೊಂದಿರುವ ಎಸ್‍‍ಪಿ ಮಾದರಿಯು ಸ್ಟಾಂಡರ್ಡ್ ಮಾದರಿಗಿಂತ 20 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ. 176 ಕೆ.ಜಿ ತೂಕವನ್ನು ಹೊಂದಿರುವ ಎಸ್‍‍ಪಿ ಮಾದರಿಯು ಸ್ಟಾಂಡರ್ಡ್ ಮಾದರಿಗಿಂತ 2 ಕೆ.ಜಿ ಕಡಿಮೆ ತೂಕವನ್ನು ಹೊಂದಿದೆ.


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  ಬ್ರೇಕಿಂಗ್ ಅನ್ನು ಬಾಷ್‍‍ನ ಕಾರ್ನರಿಂಗ್ ಎ‍‍ಬಿ‍ಎಸ್ ಜೊತೆಯಿರುವ ಮೊನೊಬ್ಲಾಕ್ ಬ್ರೆಂಬೊ ಕ್ಯಾಲಿಪರ್‍‍ಗಳು ನಿಯಂತ್ರಿಸುತ್ತವೆ. ಇನ್ನುಳಿದಂತೆ ಎರಡೂ ಮಾದರಿಗಳಲ್ಲಿ ಫುಲ್ ಟಿ‍ಎಫ್‍‍ಟಿ ಕಲರ್ ಡಿಸ್‍‍ಪ್ಲೇ, ಟ್ಯಾಪರ್ಡ್ ಅಲ್ಯುಮಿನಿಯಂ ಹ್ಯಾಂಡಲ್‍‍ಬಾರ್, ಯೂ‍ಎಸ್‍‍ಬಿ ಪವರ್ ಸಾಕೆಟ್, ಡೇ ಟೈಮ್ ರನ್ನಿಂಗ್ ಲೈಟ್ಸ್ (ಡಿ‍ಆರ್‍ಎಲ್), ಪವರ್ ಮೋಡ್ ಹಾಗೂ ಹೊರತೆಗೆಯಬಹುದಾದ ಫುಟ್‍‍ಪೆಗ್‍‍ಗಳನ್ನು ಹೊಂದಿವೆ.

  MOST READ: 22 ಮೋಟಾರ್ಸ್ ಜೊತೆಗೂಡಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೇಮ್ಕೊ


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  ಎಸ್‍‍ಪಿ ಮಾದರಿಯ ಬೈಕಿನಲ್ಲಿ ಡುಕಾಟಿ ಕ್ವಿಕ್ ಶಿಫ್ಟ್ ನಂತಹ ಹೆಚ್ಚುವರಿ ಫೀಚರ್‍‍ಗಳಿರಲಿವೆ. ಮುಂದಿನ ಮಡ್‍‍ಗಾರ್ಡ್ ಕಾರ್ಬನ್ ಫೈಬರ್‍‍ನಿಂದ ತಯಾರಾಗಿದ್ದು, ಟೈಮಿಂಗ್ ಬೆಲ್ಟ್ ಕವರ್‍‍ಗಳನ್ನು ಹೊಂದಿದೆ. ಎರಡೂ ಬೈಕಿನಲ್ಲೂ ಡುಕಾಟಿ ಟ್ರಾಕ್ಷನ್ ಕಂಟ್ರೋಲ್ (ಡಿ‍‍ಟಿ‍‍ಸಿ) ಇ‍‍ವಿ‍ಒ ಹಾಗೂ ಡುಕಾಟಿ ವ್ಹೀಲಿ ಕಂಟ್ರೋಲ್ (ಡಿ‍‍ಡಬ್ಲ್ಯುಸಿ) ಇ‍‍ವಿ‍ಒಗಳಿವೆ.

  MOST READ: ಭಾರತಕ್ಕೆ ಎನ್ ಪರ್ಫಾಮೆನ್ಸ್ ಬ್ರಾಂಡ್ ತರಲಿರುವ ಹ್ಯುಂಡೈ


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  ಡುಕಾಟಿ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ರವರಾದ ಸರ್ಗಿ ಕಾನೊವಾಸ್‍‍ರವರು ಮಾತನಾಡಿ, ಹೈಪರ್ ಮೋಟಾರ್ಡ್ ಸರಣಿಯ ಬೈಕುಗಳನ್ನು ಮೆಚ್ಚುವ, ಪ್ರೀತಿಸುವ ಚಾಲಕರು ಬಹು ಸಂಖ್ಯೆಯಲ್ಲಿದ್ದಾರೆ. ಬೈಕ್ ಚಾಲನೆಯಲ್ಲಿ ಖುಷಿಯನ್ನು ಬಯಸುವವರಿಗಾಗಿ ಹೈಪರ್‍‍ಮೋಟಾರ್ಡ್ 950 ಬೈಕ್ ಅದ್ಭುತವೆನಿಸುವಂತಹ ಚಾಲನಾ ಅನುಭವವನ್ನು ನೀಡಲಿದೆ.

  MOST READ: ಹೊಸ ಮಹೀಂದ್ರಾ ಥಾರ್‍ ಡ್ಯಾಶ್‍‍ಬೋರ್ಡ್ ಹೀಗಿರಲಿದೆಯಂತೆ..!


 • ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

  ಇದು ಕೇವಲ ಸೂಪರ್‍‍ಮೋಟೊ ಮಾತ್ರವಾಗಿರದೇ ಡರ್ಟ್ ಬೈಕಿನಂತಹ ಪರ್ಫಾಮೆನ್ಸ್ ಹಾಗೂ ಸ್ಪೋರ್ಟ್ ಬೈಕಿನಂತಹ ಲುಕ್ ಹೊಂದಿದೆ. ಆಧುನಿಕ ಬೈಕುಗಳನ್ನು ಹೊಂದಲು ಬಯಸುವವರಿಗೆ ಹೇಳಿ ಮಾಡಿಸಿದಂತಿದೆ ಎಂದು ತಿಳಿಸಿದರು.
ಸಾಹಸಿ ಬೈಕ್ ಪ್ರಿಯರು ಎದುರು ನೋಡುತ್ತಿದ್ದ ಘಳಿಗೆಯು ಕೊನೆಗೂ ಬಂದಿದೆ. ಡುಕಾಟಿ ಹೈಪರ್‍‍ಮೋಟಾರ್ಡ್ 950 ಬೈಕ್ ಅನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬೈಕ್ ಅನ್ನು ಮಾರುಕಟ್ಟೆಯಲ್ಲಿರುವ ಹೈಪರ್‍‍ಮೋಟಾರ್ಡ್ 939 ಬೈಕಿನ ಬದಲಿಗೆ ಬಿಡುಗಡೆಗೊಳಿಸಲಾಗಿದೆ.

   
 
ಹೆಲ್ತ್