Back
Home » Car News
ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!
DriveSpark | 12th Jun, 2019 02:49 PM
 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಮಹೀಂದ್ರಾ ಸಂಸ್ಥೆಯು ಸದ್ಯ ಡೀಸೆಲ್ ಎಂಜಿನ್ ಜೊತೆ ಪೆಟ್ರೋಲ್ ಎಂಜಿನ್ ಮಾದರಿಗಳನ್ನು ಮಾರಾಟಮಾಡುತ್ತಿದ್ದರೂ ಸಹ ಪೆಟ್ರೋಲ್ ಎಂಜಿನ್ ಮೇಲೆ ಅಷ್ಟಾಗಿ ಒತ್ತು ನೀಡುತ್ತಿರಲಿಲ್ಲ. ಇದಕ್ಕೆ ಕಾರಣ, ವಾಣಿಜ್ಯ ಬಳಕೆಯಾಗುವ ಬಹುತೇಕ ಮಹೀಂದ್ರಾ ಕಾರುಗಳು ಡೀಸೆಲ್ ಎಂಜಿನ್ ಪ್ರೇರಣೆ ಹೊಂದಿದ್ದು, ಇದು ಮುಂಬರುವ ದಿನಗಳಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಲಿದೆ.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಹೌದು, ಮಹೀಂದ್ರಾ ಸಂಸ್ಥೆಯು ಡೀಸೆಲ್ ಕಾರುಗಳಂತೆ ಇದೀಗ ಪೆಟ್ರೋಲ್ ಕಾರುಗಳ ಅಭಿವೃದ್ದಿ ಮೇಲೂ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಸಾಮಾನ್ಯ ಮಾದರಿಯನ್ನು ಹೊರತುಪಡಿಸಿ ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಅನ್ನು ಸಹ ಸಿದ್ದಪಡಿಸಿದೆ.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳನ್ನು ಉನ್ನತಿಕರಿಸಿರುವ ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ 2.0-ಲೀಟರ್(2 ಸಾವಿರ ಸಿಸಿ) ಸಾಮರ್ಥ್ಯದ ಹೊಸ ಎಂಜಿನ್ ಮಾದರಿಯನ್ನು ಸಿದ್ದಪಡಿಸಿದೆ. ಕಳೆದ ತಿಂಗಳ ಹಿಂದಷ್ಟೇ ನವದೆಹಲಿಯಲ್ಲಿ ನಡೆದ ಬಿಎಸ್-6 ಪ್ರೇರಿತ ಹೊಸ ಎಂಜಿನ್ ಪ್ರದರ್ಶನ ವೇಳೆ 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಅನಾವರಣಗೊಳಿಸಲಾಗಿತ್ತು.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಇದೀಗ ಈ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಎಂಜಿನ್ ಅನ್ನು ತನ್ನ ಸಹಭಾಗಿತ್ವ ಸಂಸ್ಥೆಗಳಾದ ಸ್ಯಾಂಗ್‌ಯಾಂಗ್ ಮತ್ತು ಫೋರ್ಡ್ ಸಂಸ್ಥೆಗಳ ಹೊಸ ಎಸ್‌ಯುವಿ ಕಾರುಗಳಿಗಾಗಿ ಸಿದ್ದಪಡಿಸಿರುವುದಾಗಿ ಹೇಳಿಕೊಂಡಿದ್ದು, 185-ಬಿಎಚ್‌ಪಿ ಉತ್ಪಾದನಾ ಸಾಮಾರ್ಥ್ಯವನ್ನು ಹೊಂದಿರುವ ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಸಂಪೂರ್ಣವಾಗಿ ಅಲ್ಯುಮಿನಿಯಂ ಯುನಿಟ್ ಹೊಂದಿರಲಿದೆಯೆಂತೆ.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಮಹೀಂದ್ರಾ ಸಂಸ್ಥೆಯು ಸದ್ಯ ಮಾರಾಟ ಮಾಡುತ್ತಿರುವ 1.2-ಲೀಟರ್ ಮತ್ತು 1.5-ಲೀಟರ್ ಟಿಜಿಡಿಐ ಪೆಟ್ರೋಲ್ ಎಂಜಿನ್‌ಗಳಿಂತಲೂ ಸಾಕಷ್ಟು ಸುಧಾರಿತ ತಂತ್ರಜ್ಞಾನ ಮತ್ತು ಹೈ ಪರ್ಫಾಮೆನ್ಸ್ ಹೊಂದಿರುವ ಹೊಸ 2.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಹೈ ಪ್ರೆಷರ್ ಗ್ಯಾಸೋಲಿನ್ ಡೈರೆಕ್ಟ್-ಇಂಜೆಕ್ಷನ್ ಸಿಸ್ಟಂ ಪಡೆದುಕೊಳ್ಳಲಿದೆ.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಹೀಗಾಗಿ ಮುಂಬರುವ ದಿನಗಳಲ್ಲಿ ಮಹೀಂದ್ರಾ ಸಂಸ್ಥೆಯು ಡೀಸೆಲ್ ಕಾರುಗಳಲ್ಲಿ ಮಾತ್ರವಲ್ಲದೇ ಪೆಟ್ರೋಲ್ ಕಾರುಗಳ ಮಾರಾಟದಲ್ಲೂ ಸದ್ದು ಮಾಡುವ ಸುಳಿವು ನೀಡಿದ್ದು, ಹೊಸ 2.0-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯನ್ನ 2020ರ ಮೊದಲ ತ್ರೈಮಾಸಿಕ ಬಳಿಕವಷ್ಟೇ ಉತ್ಪಾದನೆಗೆ ಚಾಲನೆ ನೀಡಲಿದೆ.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಇನ್ನು ಮಹೀಂದ್ರಾ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆ ವಾಹನಗಳಿಗಾಗಿ 625ಸಿಸಿ, 909ಸಿಸಿ ಡೀಸೆಲ್ ಎಂಜಿನ್‌ಗಳನ್ನು ಬಳಕೆ ಮಾಡುತ್ತಿದ್ದರೆ, ಕಾರು ಮಾದರಿಗಳಿಗಾಗಿ 1,198ಸಿಸಿ, 1,497ಸಿಸಿ, 2,179ಸಿಸಿ ಮತ್ತು 2,523ಸಿಸಿ ಡೀಸೆಲ್ ಎಂಜಿನ್‌ಗಳನ್ನು ಬಳಕೆ ಮಾಡುತ್ತಿದೆ.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಇದರಲ್ಲಿ ಕೆಯುವಿ100 ಕಾರಿನಲ್ಲಿ ಬಳಕೆ ಮಾಡುತ್ತಿರುವ 1,198 ಡೀಸೆಲ್ ಎಂಜಿನ್ ಅನ್ನು ಸ್ಥಳಿತಗೊಳಿಸಲು ನಿರ್ಧರಿಸಿರುವ ಮಹೀಂದ್ರಾ ಸಂಸ್ಥೆಯ ಉಳಿದೆಲ್ಲಾ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಉನ್ನತಕರಿಸಿ ಮಾರಾಟಕ್ಕೆ ಸಿದ್ದಪಡಿಸುತ್ತಿದೆ.

  MOST READ: ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  2019ರ ಸೆಪ್ಟೆಂಬರ್ ಅಂತ್ಯಕ್ಕೆ ಬಿಎಸ್-6 ಡೀಸೆಲ್ ಎಂಜಿನ್ ಹೊಂದಿರುವ ಮಹೀಂದ್ರಾ ಮೊದಲ ಕಾರು ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಎಂಜಿನ್ ಹೊಂದಿರುವ ಮರಾಜೋ, ಎಕ್ಸ್‌ಯುವಿ300, ಎಕ್ಸ್‌ಯುವಿ500, ಬಲೆರೊ, ಥಾರ್, ಸ್ಕಾರ್ಪಿಯೋ, ಅಲ್ಟುರಾಸ್ ಜಿ4 ಕಾರುಗಳು 2020ರ ಮಾರ್ಚ್ ಅಂತ್ಯದೊಳಗೆ ರಸ್ತೆಗಿಳಿಯಲಿವೆ.

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಬಿಎಸ್-6 ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರುಗಳು ಶೇ.25 ರಷ್ಟು ವಿಷಕಾರಿ ಹೊಗೆ ಉಗುಳುವ ಪ್ರಮಾಣವು ಕಡಿಮೆಯಾದಲ್ಲಿ ಮೈಲೇಜ್ ಪ್ರಮಾಣವು ಶೇ.10ರಿಂದ ಶೇ.15 ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.

  MOST READ: ಲೋನ್ ಚಿಂತೆ ಬೇಡವೇ ಬೇಡ- ಇನ್ಮುಂದೆ ಲೀಸ್‌ಗೆ ಸಿಗಲಿವೆ ಹ್ಯುಂಡೈ ಕಾರುಗಳು..!

 • ಹೈ ಪರ್ಫಾಮೆನ್ಸ್ ಪ್ರೇರಿತ ಹೊಸ ಪೆಟ್ರೋಲ್ ಎಂಜಿನ್ ಸಿದ್ದಪಡಿಸಿದ ಮಹೀಂದ್ರಾ..!

  ಇದಲ್ಲದೇ ಹೊಸ ನಿಯಮದಿಂದಾಗಿ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಬೆಲೆಯಲ್ಲಿ ಈಗಿರುವ ಬೆಲೆಗಿಂತ ರೂ.80 ಸಾವಿರದಿಂದ ರೂ.1.50 ಲಕ್ಷದ ತನಕ ಏರಿಕೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರಿನಲ್ಲಿ ಪ್ರಮಾಣಿಕ ಸುರಕ್ಷತೆಗೆ ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳ ಜೊತೆಗೆ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಹೊಸ ನಿಯಮವು ಸಾಕಷ್ಟು ಸಹಕಾರಿಯಾಗಿದೆ.

  Source: autocarindia
ಇಷ್ಟು ದಿನಗಳ ಕಾಲ ಮಹೀಂದ್ರಾ ಸಂಸ್ಥೆಯು ತನ್ನ ಡೀಸೆಲ್ ಎಂಜಿನ್ ಮಾದರಿಗಳಿಂದಲೇ ಅತಿ ಹೆಚ್ಚು ಜನಪ್ರಿಯವಾಗಿತ್ತು. ಆದ್ರೆ ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಗ್ರಾಹಕರ ಬೇಡಿಕೆಯು ಡೀಸೆಲ್ ಕಾರುಗಳಿಂತಲೂ ಹೆಚ್ಚು ಪೆಟ್ರೋಲ್ ಕಾರುಗತ್ತ ಹರಿದುಬರುತ್ತಿದ್ದು, ಪ್ರಸ್ತತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಪೆಟ್ರೋಲ್ ಎಂಜಿನ್ ಮಾದರಿಯೊಂದನ್ನು ಸಿದ್ದಪಡಿಸಿದೆ.

ಹೆಲ್ತ್