Back
Home » ಇತ್ತೀಚಿನ
'ಗೂಗಲ್ ನ್ಯೂಸ್‌'ನಿಂದ ಗೂಗಲ್ ಗಳಿಸುತ್ತಿರುವ ಲಾಭವು ಹೌಹಾರುವಂತಿದೆ!
Gizbot | 12th Jun, 2019 05:35 PM

ಇಂಟರ್‌ನೆಟ್ ಮತ್ತು ಮೊಬೈಲ್‌ಗಳಿಂದಾಗಿ ವಿಶ್ವಾದ್ಯಂತ ಮಧ್ಯಮ ಹಾಗೂ ಸಣ್ಣ ಪತ್ರಿಕೆಗಳು ಸಾಲು ಸಾಲಾಗಿ ಮುಚ್ಚುತ್ತಿದ್ದರೆ, ಇತ್ತ ಗೂಗಲ್ ಮಾತ್ರ ಸುದ್ದಿಗಳಿಂದಲೇ ಸಾವಿರಾರು ಕೋಟಿಗಳನ್ನು ಬಾಚಿಕೊಳ್ಳುತ್ತಿದೆ ಎಂಬ ವಿಶ್ಲೇಷಣಾತ್ಮಕ ಲೇಖನವೊಂದು ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ನ್ಯೂಸ್ ಕಂಟೆಂಟ್ ಅನ್ನೇ ಹುಟ್ಟಿಹಾಕದ ಗೂಗಲ್ ಲಾಭವು ಹೌಹಾರುವಂತಿದೆ.

ಹೌದು, 2018 ನೇ ಸಾಲಿನಲ್ಲಿ ಸಾಲಿನಲ್ಲಿ ವೆಬ್ ಮೀಡಿಯಾದ ದೈತ್ಯ ಗೂಗಲ್ ನ್ಯೂಸ್ ಭರ್ಜರಿ ಲಾಭ ಗಳಿಸಿದೆ. ಕಳೆದ ವರ್ಷ ಗೂಗಲ್ ಸರ್ಚ್ ನಿಂದ ಗೂಗಲ್ ನ್ಯೂಸ್ ಗೆ ಬರೊಬ್ಬರಿ 4.7 ಬಿಲಿಯನ್ ಡಾಲರ್ ಹಣ ಹರಿದುಬಂದಿದ್ದು, ಈ ಮೊತ್ತ ಅಮೆರಿಕದ ಮಾಧ್ಯಮಗಳು ಒಟ್ಟಾರೆ ಗಳಿಸಿದ ಲಾಭದ ಮೊತ್ತದ ಹತ್ತಿರದ ಲಾಭವನ್ನು ಗೂಗಲ್ ನ್ಯೂಸ್ ಏಕಾಂಗಿಯಾಗಿ ಗಳಿಸಿದೆ.

ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವಿಶ್ಲೇಷಣಾತ್ಮಕ ಲೇಖನ ಪ್ರಕಟಿಸಿದ್ದು, ಅಮೆರಿಕಾದಾದ್ಯಂತ 2,000 ಸುದ್ದಿ ಮಾಧ್ಯಮಗಳನ್ನು ಪ್ರತಿನಿಧಿಸುವ ನ್ಯೂಸ್ ಮೀಡಿಯಾ ಅಲಯನ್ಸ್ ನಿಂದ ಅಂಕಿ-ಅಂಶಗಳನ್ನು ಉಲ್ಲೇಖಿಸಿದೆ. ಅಮೆರಿಕದ ನ್ಯೂಸ್ ಇಂಡಸ್ಟ್ರಿ ಡಿಜಿಟಲ್ ಜಾಹಿರಾತುಗಳಿಂದ ಒಟ್ಟಾರೆ 5.1 ಬಿಲಿಯನ್ ಲಾಭ ಗಳಿಸಿದ್ದರೆ, ಗೂಗಲ್ 4.7 ಬಿಲಿಯನ್ ಡಾಲರ್ ಹಣ ಗಳಿಸಿದೆ.

ನ್ಯೂಸ್ ಮೀಡಿಯಾ ಅಲೈಯನ್ಸ್ ಪ್ರಕಾರ, ಗೂಗಲ್ ಹುಡುಕಾಟ ಫಲಿತಾಂಶಗಳಲ್ಲಿ 16% ಮತ್ತು 40% ನಡುವೆ ಸುದ್ದಿ ವಿಷಯವಾಗಿದೆ. ಇದರಿಂದ ಗೂಗಲ್‌ಗೆ ಭಾರೀ ಪ್ರಮಾಣದ ಆದಾಯ ಹರಿದುಬರುತ್ತಿದೆ ಎಂದು ಹೇಳಲಾಗಿದೆ. ಆದರೆ, ಗೂಗಲ್ ಈ ಅಧ್ಯಯನವನ್ನು ಟೀಕಿಸಿದೆ. ಅಧ್ಯಯನ ಒದಗಿಸುವ ಮೌಲ್ಯ ಲೆಕ್ಕಾಚಾರಗಳನ್ನು ಕರಾರುವಾಕ್ಕಾಗಿಲ್ಲ ಎಂದು ವಿವರಿಸುತ್ತಿದೆ.

ವಿಶ್ವಾದಾದ್ಯಂತ ಸುದ್ದಿ ಪ್ರಕಾಶಕರಿಗೆ ತಂತ್ರಜ್ಞಾನ ಮತ್ತು ಜಾಹೀರಾತು ಪಾಲುದಾರರಾಗಲು ನಾವು ತುಂಬಾ ಕಠಿಣ ಕೆಲಸ ಮಾಡಿದ್ದೇವೆ ಎಂದು ಗೂಗಲ್ ವಕ್ತಾರರು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಅಂದರೆ, ನ್ಯೂಸ್ ಕಂಟೆಂಟ್ ಅನ್ನೇ ಹುಟ್ಟಿಹಾಕದ ಗೂಗಲ್ ಭಾರೀ ಲಾಭವನ್ನು ಗಳಿಸುತ್ತಿರುವುದು ನಿಜ. ಆದರೆ, ಎಷ್ಟು ಎಂಬುದು ಮಾತ್ರ ಪಕ್ಕಾ ಆಗಿಲ್ಲ.

ಓದಿರಿ: ಬೆಂಗಳೂರಿನ ಯುವಕನಿಗೆ 1,07,500 ರೂ.ಪಾವತಿಸಬೇಕು ಆಪಲ್!..ಏಕೆ ಗೊತ್ತಾ?

 
ಹೆಲ್ತ್