Back
Home » ಇತ್ತೀಚಿನ
ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ನಲ್ಲಿ ಪವರ್ ಬ್ಯಾಂಕ್ ಗಳಿಗೆ ಭರ್ಜರಿ ಡಿಸ್ಕೌಂಟ್
Gizbot | 12th Jun, 2019 07:15 PM
  • ಎಂಐ 10000mAh ಲಿ-ಪಾಲಿಮರ್ ಪವರ್ ಬ್ಯಾಂಕ್ 2ಐ: 25% ರಿಯಾಯಿತಿಯಲ್ಲಿ ಲಭ್ಯ

    ಈ ನಡೆಯುತ್ತಿರುವ ಸೇಲಿನ ಭಾಗವಾಗಿ ಎಂಐ ಪವರ್ ಬ್ಯಾಂಕ್ 2ಐ ನ್ನು 899 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ನೈಜ ಬೆಲೆ 1,199 ರುಪಾಯಿಗಳು ಮತ್ತು ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ- ಕಪ್ಪು, ಕೆಂಪು ಮತ್ತು ಬಿಳಿ.


  • ಇಂಟೆಕ್ಸ್ ಐಟಿ-ಪಿಬಿ11ಕೆ 11000mAH ಪವರ್ ಬ್ಯಾಂಕ್: 68% ರಿಯಾಯಿತಿಯಲ್ಲಿ ಲಭ್ಯ

    ಇಂಟೆಕ್ಸ್ ಐಟಿ-ಪಿಬಿ11ಕೆ ಪವರ್ ಬ್ಯಾಂಕ್ ಜೊತೆಗೆ 11000mAh ಬ್ಯಾಟರಿ ಕೆಪಾಸಿಟಿಯನ್ನು ಇದೀಗ 599 ರುಪಾಯಿಗೆ ಖರೀದಿಸಬಹುದು.ನೈಜ ಬೆಲೆಗಿಂತ 68%ರಿಯಾಯಿತಿ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿರುತ್ತದೆ.


  • ಸಿಸ್ಕಾ ಪವರ್ ಪೋರ್ಟ್100 10000mAh ಪವರ್ ಬ್ಯಾಂಕ್: 56% ರಿಯಾಯಿತಿಯಲ್ಲಿ ಲಭ್ಯ

    ಸಿಸ್ಕಾ ಪವರ್ ಬ್ಯಾಂಕ್ ಗಳನ್ನು ಈ ಸೇಲ್ ನಲ್ಲಿ 699 ರುಪಾಯಿ ಬೆಲೆಗೆ ಖರೀದಿಸಬಹುದು. ಇದರ ನೈಜ ಬೆಲೆ 1,599 ರುಪಾಯಿಗಳು.


  • ಲೆನೊವಾ 13000mAh ಪವರ್ ಬ್ಯಾಂಕ್ : 77% ರಿಯಾಯಿತಿಯಲ್ಲಿ ಲಭ್ಯ

    ಲೆನೊವಾ ಪವರ್ ಬ್ಯಾಂಕ್ 13000mAh ಬ್ಯಾಟರಿ ಕೆಪಾಸಿಟಿಯನ್ನು ಈ ಸೇಲ್ ನಲ್ಲಿ 799 ರುಪಾಯಿಗೆ ಖರೀದಿಸಬಹುದಾಗಿದ್ದು ಇದರ ನೈಜ ಬೆಲೆ 3,499 ರುಪಾಯಿಗಳಾಗಿದೆ.

    ಆಂಬ್ರೇನ್ ಪಿಪಿ-11 10000mAh ಪವರ್ ಬ್ಯಾಂಕ್: 72% ರಿಯಾಯಿತಿ

    ಆಂಬ್ರೇನ್ ಪಿಪಿ 11 ಪವರ್ ಬ್ಯಾಂಕ್ ಗಳಿಗೆ 72% ರಿಯಾಯಿತಿ ಲಭ್ಯವಿದೆ. ಅಂದರೆ 2,499 ರುಪಾಯಿಯ ಪವರ್ ಬ್ಯಾಂಕ್ ಗಳು ಕೇವಲ 699 ರುಪಾಯಿ ಬೆಲೆಗೆ ಸಿಗುತ್ತದೆ.

    ಮೈಕ್ರೋಮ್ಯಾಕ್ಸ್ 10400mAh ಪವರ್ ಬ್ಯಾಂಕ್: 71% ರಿಯಾಯಿತಿಯಲ್ಲಿ ಲಭ್ಯ

    ಅಮೇಜಾನ್ ನಲ್ಲಿ ಮೈಕ್ರೋಮ್ಯಾಕ್ಸ್ ಪವರ್ ಬ್ಯಾಂಕ್ ಗೆ ರಿಯಾಯಿತಿ ಬೆಲೆ ಲಭ್ಯವಾಗುತ್ತಿದ್ದು ಕೇವಲ 599 ರುಪಾಯಿಗೆ ಖರೀದಿಸಬಹುದು. ಇದರ ನೈಜ ಬೆಲೆ 2,099 ರುಪಾಯಿಗಳಾಗಿವೆ.




ಇ-ಕಾಮರ್ಸ್ ಪೋರ್ಟಲ್ ಅಮೇಜಾನ್ ಸ್ಮಾರ್ಟ್ ಫೋನ್ ಸೇಲ್ ನ್ನು ಆಯೋಜಿಸಿದ್ದು ಜೂನ್ 10 ರಿಂದ ಜೂನ್ 13 ರ ವರೆಗೆ ಈ ಸೇಲ್ ನಡೆಯಲಿದೆ. ಇದನ್ನು ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ಎಂದು ಕರೆಯಲಾಗಿದೆ. ಖರೀದಿದಾರರಿಗೆ ಒನ್ ಪ್ಲಸ್ 6ಟಿ, ಆಪಲ್ ಐಫೋನ್ ಎಕ್ಸ್ ಮತ್ತು ಐಫೋನ್ ಎಕ್ಸ್ಆರ್, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಇತರೆ ಮೊಬೈಲ್ ಗಳಿಗೆ ಭರ್ಜರಿ ರಿಯಾಯಿತಿ ಸಿಗಲಿದೆ.

ನಾಲ್ಕು ದಿನಗಳ ಕಾಲ ನಡೆಯುವ ಈ ಸೇಲ್ ನಲ್ಲಿ ಮೊಬೈಲ್ ಆಕ್ಸಸರೀಸ್ ಗಳು ಕೂಡ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಹೆಡ್ ಫೋನ್ ಗಳು, ಪವರ್ ಬ್ಯಾಂಕ್ ಗಳು, ಸ್ಕ್ರೀನ್ ಪ್ರೊಟೆಕ್ಟರ್ ಗಳು, ಕೇಬಲ್ಸ್ ಮತ್ತು ಚಾರ್ಜರ್ ಗಳು, ಇತ್ಯಾದಿ ಹಲವು ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತದೆ.

ಈ ಸೇಲ್ ನಲ್ಲಿ 10,000mAh ಕೆಪಾಸಿಟಿ ಇರುವ ಪವರ್ ಬ್ಯಾಂಕ್ ಗಳು ಕೇವಲ 499 ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಯಾವೆಲ್ಲ ಪವರ್ ಬ್ಯಾಂಕ್ ಗಳಿಗೆ ಈ ರೀತಿ ಭರ್ಜರಿ ರಿಯಾಯಿತಿ ಇದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

   
 
ಹೆಲ್ತ್