Back
Home » ಸುದ್ದಿ
ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪದಾಧಿಕಾರಿಗಳ ನೇಮಕ
Oneindia | 12th Jun, 2019 09:04 PM

ಬೆಂಗಳೂರು, ಜೂನ್ 12 : ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪದಾಧಿಕಾರಿಗಳ ನೇಮಕವಾಗಿದೆ. ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ರಾಷ್ಟ್ರೀಯ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರು ಮಂಗಳವಾರ ನೂತನ ಪದಾಧಿಕಾರಿಗಳ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆ. ಶಾಸಕರು, ಸಂಸದರು, ಮಾಜಿ ಐಪಿಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.

ಲಿಂಗಾಯತರಿಗೆ ಮಹಾರಾಷ್ಟ್ರ ಸರ್ಕಾರದಿಂದಲೂ ಶಾಕ್‌

2019ರ ಮಾರ್ಚ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದರು.

ಚರ್ಚೆ: ವೀರಶೈವ ಒಂದು ವ್ರತ-ಲಿಂಗಾಯತ ಸ್ವತಂತ್ರ ಧರ್ಮ

ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಕಚೇರಿ ಇದೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರು ಎನ್.ತಿಪ್ಪಣ್ಣ.

ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗ : ಕೇಂದ್ರದ ಅಫಿಡವಿಟ್

ನೂತನ ಪದಾಧಿಕಾರಿಗಳ ಪಟ್ಟಿ

* ಹಿರಿಯ ಉಪಾಧ್ಯಕ್ಷ : ಎನ್.ತಿಪ್ಪಣ್ಣ

* ಉಪಾಧ್ಯಕ್ಷರು : ಡಾ.ಪ್ರಭಾಕರ ಕೋರೆ, ವೀರಣ್ಣ ಚರಂತಿಮಠ, ಎ.ಎಸ್.ವೀರಣ್ಣ, ಗುರಮ್ಮ ಸಿದ್ದರೆಡ್ಡಿ, ಶಂಕರ ಬಿದರಿ, ಶಾಸಕ ವೆಂಕಟರೆಡ್ಡಿ ಮುದ್ನಾಳ, ಬಿ.ಎಸ್.ಸಚ್ಚಿದಾನಂದ ಮೂರ್ತಿ, ಅಣಬೇರು ರಾಜಣ್ಣ, ಶಿವಾನಂದ ಅಂಬಡಗಟ್ಟಿ, ಎಸ್‌.ಎಸ್.ಗಣೇಶ್, ಮಧುರಾ ಅಶೋಕ್ ಕುಮಾರ್, ಬಾನುರಾವ್ ತುಂಬಾ,

* ಪ್ರಧಾನ ಕಾರ್ಯದರ್ಶಿ : ಈಶ್ವರ ಖಂಡ್ರೆ

* ಕಾರ್ಯದರ್ಶಿ : ಜಿ.ಗುರುಬಸಪ್ಪ, ಕಲ್ಯಾಣರಾವ್ ಜಿ.ಮುಚಳಂಬೆ, ಎಚ್.ಎಂ.ರೇಣುಕಾ ಪ್ರಸನ್ನ

* ಖಜಾಂಚಿ : ಕೆ.ಎನ್.ಜಯಲಿಂಗಪ್ಪ

   
 
ಹೆಲ್ತ್