Back
Home » ಸುದ್ದಿ
ಇಂಗ್ಲೆಂಡ್‌ನ ಪ್ರಖ್ಯಾತ ಬ್ಯಾಂಕ್‌ಗೆ ರಘುರಾಮ್ ರಾಜನ್ ಬಾಸ್?
Oneindia | 12th Jun, 2019 10:53 PM

ಲಂಡನ್, ಜೂನ್ 12: ತನ್ನ ಆರ್ಥಿಕ ನೀತಿಗಳಿಂದ ಭಾರತದಲ್ಲಿ ಖ್ಯಾತಿ ಗಳಿಸಿದ್ದ ಮಾಜಿ ಆರ್‌ಬಿಐ ಗೌರ್ನರ್ ರಘುರಾಮ್‌ ರಾಜನ್ ಅವರು ಬ್ರಿಟನ್‌ನ ಪ್ರಖ್ಯಾತ ಬ್ಯಾಂಕ್‌ನ ಪ್ರಮುಖ ಹುದ್ದೆಗೇರುವ ಸಾಧ್ಯತೆಗಳಿವೆ.

325 ವರ್ಷ ಹಳೆಯ ಪ್ರಖ್ಯಾತ 'ಬ್ಯಾಂಕ್ ಆಫ್ ಇಂಗ್ಲೆಡ್‌' ಗೆ ಗೌರ್ನರ್‌ ಹುದ್ದೆಗೆ ರಘುರಾಮ್ ರಾಜನ್ ಅವರು ಆಯ್ಕೆ ಆಗುವ ಸಂಭವ ಇದ್ದು, ಗೌರ್ನರ್ ಹುದ್ದೆಗೆ ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರು ಮೊದಲಿಗರಾಗಿದ್ದಾರೆ. ಆದರೆ ಆಯ್ಕೆ ಇನ್ನೂ ಅಂತಿಮವಾಗಿಲ್ಲ.

ನಾನು ರಾಜಕೀಯಕ್ಕೆ ಬಂದರೆ ಪತ್ನಿ ಜತೆ ಇರಲಾರಳು: ರಘುರಾಂ ರಾಜನ್

ಬ್ರಿಕ್ಸೆಟ್ ನಂತರ ದಿವಾಳಿಯ ಹಾದಿ ಹಿಡಿಯುತ್ತಿರುವ ಇಂಗ್ಲೆಂಡ್ ಆರ್ಥಿಕತೆಗೆ ಜೀವ ತುಂಬುವ ಪರಿಣಿತ ಆರ್ಥಿಕ ತಜ್ಞನಿಗಾಗಿ ಹುಡುಕಾಟ ನಡೆಯುತ್ತಿದ್ದು, ಭಾರತದಲ್ಲಿ ಸಾಕಷ್ಟು ಬದಲಾವಣೆ ಮಾಡಿದ ರಘುರಾಮ್ ರಾಜನ್ ಬಗ್ಗೆ ಹೆಚ್ಚಿನ ಒಲವು ಇದೆ ಎನ್ನಲಾಗಿದೆ.

ಪ್ರಸ್ತುತ ಮಾರ್ಕ್‌ ಕಾರ್ನಿ ಅವರು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗೌರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, 2020 ರ ವೇಳೆಗೆ ಅವರ ಅವಧಿ ಮುಗಿಯಲಿದೆ. ಹೊಸ ಗೌರ್ನರ್‌ ಅನ್ನು ಇದೇ ಅಕ್ಟೋಬರ್‌ ವೇಳೆಗೆ ಆಯ್ಕೆ ಮಾಡಲಾಗುತ್ತದೆ.

ಭಾರತದ GDP ದರ 7 ಪರ್ಸೆಂಟ್ ಅನ್ನೋದು ಅನುಮಾನ: ರಘುರಾಮ್ ರಾಜನ್

ರಘುರಾಮ್ ರಾಜನ್ ಹೊರತಾಗಿ ಭಾರತೀಯರಾದ ಸೃಷ್ಟಿ ವದೇರಾ ಅವರೂ ಸಹ ರೇಸ್‌ ನಲ್ಲಿದ್ದಾರೆ. ಹಣಕಾಸಿನ ನಿರ್ವಹಣೆ ಪ್ರಾಧಿಕಾರದ ಕಾರ್ಯನಿರ್ವಾಹಕ ಆಂಡ್ರಯು ಬೈಲಿ ಅವರು ರಘುರಾಮ್ ರಾಜನ್‌ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಆಗಿದ್ದಾರೆ ಎನ್ನಲಾಗಿದೆ. ಆದರೆ ಹೆಚ್ಚಿನ ಒಲವು ರಘುರಾಮ್ ರಾಜನ್ ಅವರ ಮೇಲೆಯೇ ಇದೆ.

   
 
ಹೆಲ್ತ್