Back
Home » ಸುದ್ದಿ
ವಾಯು ಚಂಡಮಾರುತ ಭೀತಿ: ಗುಜರಾತ್‌ನಲ್ಲಿ 3 ಲಕ್ಷ ಜನ ಸ್ಥಳಾಂತರ
Oneindia | 13th Jun, 2019 12:08 AM

ಗಾಂಧಿನಗರ, ಜೂನ್ 12: ಭೀಕರ ರೂಪ ತಳೆದಿರವ 'ವಾಯು' ಚಂಡಮಾರುತದ ಭೀತಿಗೆ ಗುಜರಾತ್‌ನಲ್ಲಿ 3 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ.

ನಾಳೆ ಗುಜರಾತ್‌ಗೆ ವಾಯು ಚಂಡಮಾರುತ ಪ್ರವೇಶಿಸಲಿದ್ದು, ಈಗಾಗಲೇ ಎಲ್ಲ ರೀತಿಯ ತಯಾರಿ ನಡೆದಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಹಳ್ಳಿಗಳನ್ನು ಖಾಲಿ ಮಾಡಿಲಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ವಾಯು ಚಂಡಮಾರುತವು ಪೋರ್‌ಬಂದರುವಿನಿಂದ ಸುಮಾರು 350 ಕಿ.ಮೀ ದೂರ ಇದೆ, ವೆರಾಲ್‌ನಿಂದ 280 ಕಿ.ಮೀ ದೂರದಲ್ಲಿದೆ.

ರಾಷ್ಟ್ರೀಯ ವಿಕೋಪ ನಿರ್ವಹಣಾ ಪಡೆಯ 36 ತಂಡಗಳನ್ನು ನಿಯೋಜಿಸಲಾಗಿದೆ. ಇನ್ನೂ 11 ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎಸ್‌ಡಿಆರ್‌ಎಫ್‌ನ 9, ಎಸ್‌ಆರ್‌ಪಿಯ 14 ತಂಡಗಳು ಹಾಗೂ ನೌಕಾಪಡೆಯ 300 ಕಮಾಂಡೋಗಳನ್ನು ನಿಯೋಜಿಸಲಾಗಿದೆ.

ಗುಜರಾತ್‌ನಲ್ಲಿ ಈಗಾಗಲೇ ರೆಡ್‌ ಅಲರ್ಟ್‌ ಘೋಸಿಲಾಗಿದ್ದು, ಗೃಹ ಮಂತ್ರಿ ಅಮಿತ್ ಶಾ ಅವರು ಚಂಡಮಾರುತದ ಬಗ್ಗೆ ಸಭೆಯನ್ನೂ ಮಾಡಿದ್ದಾರೆ. ಮೋರ್ಬಿ, ಭಾವನಗರ, ಜುನಾಗಢ, ಗಿರ್, ಸೋಮನಾಥ, ಜಾಮ್‌ನಗರ, ದೇವಭೂಮಿ ದ್ವಾರಕಾ, ಕಛ್, ಪೋರ್‌ಬಂದರ್, ರಾಜಕೋಟ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ 74,000 ಮಂದಿಯನ್ನು ಎನ್‌ಡಿಆರ್‌ಎಫ್‌ ತಂಡಗಳು ಇಂದು ಸ್ಥಳಾಂತರಿಸಿವೆ.

   
 
ಹೆಲ್ತ್