Back
Home » ಸುದ್ದಿ
ಐಎಂಎ ಜ್ಯುವೆಲ್ಸ್‌ ವಂಚನೆ ಪ್ರಕರಣ: ಏಳು ಜನರ ಬಂಧನ
Oneindia | 12th Jun, 2019 11:50 PM

ಬೆಂಗಳೂರು, ಜೂನ್ 12: ಐಎಂಎ ಜ್ಯುವೆಲರ್ಸ್‌ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಸಂಸ್ಥೆಯ ಸಂಸ್ಥಾಪಕ ಮನ್ಸೂರ್ ಖಾನ್‌ಗಾಗಿ ಹುಡುಕಾಟ ನಡೆದಿದೆ.

ಏಳೂ ಜನರು ಐಎಂಎ ಸಂಸ್ಥೆಯ ನಿರ್ದೇಶಕರುಗಳಾಗಿದ್ದು ಅವರನ್ನು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಬಂಧಿಸಿ ರಾತ್ರಿ ಕೋರಮಂಗಲದ ಎನ್‌ಜಿವಿ ಯಲ್ಲಿರುವ ಜಡ್ಜ್‌ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

18 ಕಂಪನಿಗಳು ಜನರಿಗೆ ವಂಚನೆ ಮಾಡಿದ್ದು 5,685 ಕೋಟಿ ಹಣ!

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಸಂಸ್ಥೆಯ ವಹಿವಾಟಿನ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿರುವ ಕಾರಣ, ಏಳೂ ಜನರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಐಎಂಎ ನಿರ್ದೇಶಕರಾದ ನಿಜಾಮುದ್ದೀನ್, ನಾಸಿರ್ ಹುಸೇನ್, ಅನ್ಸರ್ ಪಾಷಾ, ನದೀಮ್, ವಾಸಿಂ, ದಾದಾಪೀರ್ ಮತ್ತು ನವೀದ್ ಪಾಷಾ ಪೊಲೀಸರು ಬಂಧಿಸಿದ್ದಾರೆ.

ಐಎಂಎ ಇಂದ 5 ಕೋಟಿ ಸಾಲ ಪಡೆದಿರುವ ಬಗ್ಗೆ ಜಮೀರ್ ಅಹ್ಮದ್ ಸ್ಪಷ್ಟನೆ

ಐಎಂಎ ಸಂಸ್ಥೆಯು ಹೂಡಿಕೆದಾರರಿಗೆ 2000 ಕೋಟಿ ರೂಪಾಯಿ ಹಣ ವಂಚಿಸಿದೆ ಎಂದು ಹೇಳಲಾಗಿದೆ. ಸಂಸ್ಥೆಯ ವಿರುದ್ಧ ಈ ವರೆಗೆ 11 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಸಂಸ್ಥೆಯ ಸಂಸ್ಥಾಪಕ ಮನ್ಸೂರ್ ಖಾನ್ ನಾಪತ್ತೆ ಆಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.

   
 
ಹೆಲ್ತ್