Back
Home » ಇತ್ತೀಚಿನ
ಥಾಮ್ಸನ್‌ ಸಂಸ್ಥೆಯ ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆಗೆ!
Gizbot | 13th Jun, 2019 11:19 AM

ಥಾಮ್ಸನ್‌ ಕಂಪನಿಯು ಈಗಾಗಲೇ ಸ್ಮಾರ್ಟ್‌ಟಿವಿಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದ್ದು, ಗ್ರಾಹಕ ಸ್ನೇಹಿ ಬೆಲೆಯಲ್ಲಿ ಹಲವು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಆಂಡ್ರಾಯ್ಡ್‌ ಆಧಾರಿತ ಕಂಪನಿಯ ಸ್ಮಾರ್ಟ್‌ಟಿವಿಗಳು ಇ ಕಾಮರ್ಸ್‌ ಜಾಲತಾಣಗಳಲ್ಲಿ ಅತ್ಯುತ್ತಮ ರೇಟಿಂಗ್ ಸಹ ಪಡೆದುಕೊಂಡಿವೆ. ಇದೀಗ ಕಂಪನಿಯು ಮತ್ತೆ ನೂತನ ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿ ಸದ್ದು ಮಾಡಿದೆ.

ಹೌದು, ಥಾಮ್ಸನ್ ಕಂಪನಿಯು ಆಂಡ್ರಾಯ್ಡ್‌ ಮಾದರಿಯ ಹೊಸ ಸ್ಮಾರ್ಟ್‌ಟಿವಿ ಸರಣಿಯನ್ನು ಘೋಷಿಸಿದ್ದು, ಈ ಸ್ಮಾರ್ಟ್‌ಟಿವಿ ಸರಣಿಯು ನಾಲ್ಕು ವೇರಿಯಂಟ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 65ಇಂಚು, 55ಇಂಚು, 49ಇಂಚು ಮತ್ತು 43ಇಂಚಿನ ಸಾಮರ್ಥ್ಯದಲ್ಲಿವೆ. ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್‌ 8.1 ಓರಿಯೊ ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ರಿಮೋಟ್ ನೀಡಲಾಗಿದೆ.

ಈ ಸ್ಮಾರ್ಟ್‌ಟಿವಿಯು ಆಫೀಶಿಯನ್ ಆಂಡ್ರಾಯ್ಡ್‌ ಟಿವಿ ಆಗಿದ್ದು, ಗೂಗಲ್‌ನಿಂದ ಮಾನ್ಯತೆ ಪಡೆದಿದೆ. ಇನ್‌ಬಿಲ್ಟ್‌ ಕ್ರೋಮ್‌ ಕಾಸ್ಟ್‌ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಇದರೊಂದಿಗೆ ಗೂಗಲ್‌ ಅಸಿಸ್ಟಂಟ್ ವಾಯಿಸ್‌ ಕಮಾಂಡ್ ಸೌಲಭ್ಯವು ಸಹ ಬೆಂಬಲಿಸಲಿದೆ ಎನ್ನಲಾಗಿದೆ. ಹಾಗಾದರೇ ಥಾಮ್ಸನ್ ಕಂಪನಿಯ ಹೊಸ ಸ್ಮಾರ್ಟ್‌ಟಿವಿ ಸರಣಿಯು ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ವಾಟ್ಸಪ್‌ನಲ್ಲಿ ದೋಷ ಪತ್ತೆಹಚ್ಚಿದ ಭಾರತೀಯ ಇಂಜನಿಯರ್‌!

   
 
ಹೆಲ್ತ್