Back
Home » ಇತ್ತೀಚಿನ
ಥ್ಯಾಂಕ್ಸ್ ಜಿಯೋ!..ವಿಶ್ವ ಇಂಟರ್‌ನೆಟ್ ಬಳಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ!!
Gizbot | 13th Jun, 2019 02:52 PM

ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಜಿಯೋ ಎಂಟ್ರಿ ನೀಡಿದ ನಂತರ ದೇಶದಲ್ಲಿ ಇಂಟರ್‌ನೆಟ್ ಬಳಕೆ ಹೆಚ್ಚಾಗಿದೆ. ಜಾಗತಿಕ ಇಂಟರ್ನೆಟ್ ಬಳಕೆದಾರರಲ್ಲಿ ಭಾರತವು ಶೇ. 12 ರಷ್ಟು ಪಾಲನ್ನು ಹೊಂದುವ ಮೂಲಕ, ಜಗತ್ತಿನ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಭಾರತವು ಎರಡನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ ಎಂದು ಇತ್ತೀಚಿನ ರಿಪೋರ್ಟ್ ಒಂದು ಹೇಳಿದೆ.

ಹೌದು, 2019 ರಲ್ಲಿ ಇಂಟರ್ನೆಟ್ ಟ್ರೆಂಡ್ಗಳ ಕುರಿತು ಮೇರಿ ಮೇಕರ್ ವರದಿ ಮಾಡಿದ್ದು, ಜಗತ್ತಿನಲ್ಲೇ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಶೇ.12ರ ಪಾಲು ಹೊಂದಿರುವ ಭಾರತವು ಎರಡನೇ ಅತಿದೊಡ್ಡ ದೇಶವಾಗಿದೆ. ಈ ಪ್ರಗತಿಗೆ ರಿಲಯನ್ಸ್ ಜಿಯೋ ಇಂಟರ್ನೆಟ್ ವ್ಯವಸ್ಥೆಯ ಬೆಂಬಲ ಕಾರಣ ಎಂದು ಇಂಟರ್ನೆಟ್ ಟ್ರೆಂಡ್ಸ್ ಕುರಿತು ಮೇರಿ ಮೀಕರ್ ಅಭಿಪ್ರಾಯಪಟ್ಟಿದೆ.

ವಿಶ್ವದಲ್ಲಿ 3.8 ಶತಕೋಟಿಯಷ್ಟು ಮಂದಿ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ. ಇದು ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಾಗಿದೆ. ಚೀನಾವು ಜಾಗತಿಕ ಮಟ್ಟದಲ್ಲಿ ಇಂಟರ್ನೆಟ್ ಬಳಕೆದಾರರಲ್ಲಿ ಶೇ. 21 ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಇಂಟರ್ನೆಟ್ ಬಳಕೆದಾರರ ಪಾಲು ಶೇ.8ರಷ್ಟಿದ್ದು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನು ಅಮೆರಿಕದ ಹೊರಗಿರುವ ಅತ್ಯಂತ ನಾವೀನ್ಯತೆಯುಳ್ಳ ಇಂಟರ್ನೆಟ್ ಕಂಪನಿಗಳಲ್ಲಿ ಜಿಯೋ ಕೂಡ ಒಂದು ಎಂದು ಮೀಕರ್ ಅಭಿಪ್ರಾಯಪಟ್ಟಿದೆ. 30.7 ಕೋಟಿ ಮೊಬೈಲ್ ಫೋನ್ ಚಂದಾದಾರರನ್ನು ಹೊಂದಿರುವ ಜಿಯೋ, ಭಾರತದಲ್ಲಿ ಇಂಟರ್ನೆಟ್ ಬಳಕೆ ಪ್ರಮಾಣವನ್ನು ದುಪ್ಪಟ್ಟು ಮಾಡುವಲ್ಲಿ ಮುಖ ಪಾತ್ರವಹಿಸಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಇಂಟರ್ನೆಟ್ ಬಳಕೆದಾರರ ಸಂಖ್ಯೆ ವೃದ್ಧಿಯಾಗುತ್ತಿದೆ, ಆದರೆ ನಿಧಾನವಾಗುತ್ತಿದೆ ಎಂದು ವರದಿ ಹೇಳಿದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಾದ ನಂತರ ಇಂಟರ್ನೆಟ್ ಬಳಕೆದಾರರ ಬೆಳವಣಿಗೆಯು ನಿಧಾನವಾಗುತ್ತಿದೆ. 2018ರಲ್ಲಿ ಶೇ.6ರಷ್ಟು ಪ್ರಗತಿ ದಾಖಲಿಸಿದ್ದು, ಇದು ಹಿಂದಿನ ವರ್ಷದ ಪ್ರಗತಿಗಿಂತ ಶೇ.7ರಷ್ಟು ಕಡಿಮೆ.

ಓದಿರಿ: ಭಾರತದಲ್ಲಿ ಕೇವಲ 14,990 ರೂ.ಗೆ 'ಹಾನರ್ 20ಐ' ರಿಲೀಸ್!..ಮಾರುಕಟ್ಟೆಯಲ್ಲಿ ಸಂಚಲನ!!

 
ಹೆಲ್ತ್