Back
Home » ಆರೋಗ್ಯ
ಸೀಬೆ ಹಣ್ಣಿನ ಜ್ಯೂಸ್‌ನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು
Boldsky | 13th Jun, 2019 03:24 PM

ನೋಡುತ್ತಿದ್ದರೆ ಸೀಬೆಕಾಯಿಯನ್ನು ಅರ್ಧಕ್ಕೆ ಕೊಯ್ದು ಉಪ್ಪು ಖಾರ ಎರಡನ್ನೂ ಬೆರೆಸಿ ಸೀಬೆ ಕಾಯಿಗೆ ಸವರಿ ಬಾಯಲ್ಲಿ ಜಿಗಿಯುತ್ತಿದ್ದರೆ ಆಹಾ !!! ಎಂದು ಬಾಯಿ ಚಪ್ಪರಿಸುವಷ್ಟು ರುಚಿ ಹತ್ತುತ್ತದೆ ನಾಲಿಗೆಗೆ . ಸೀಸನ್ ಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ಸಿಗುವ ಹಣ್ಣು ಸೀಬೆ ಹಣ್ಣು . ಸೀಬೆ ಹಣ್ಣಿನ ರುಚಿಗೆ ಸೀಬೆ ಹಣ್ಣೇ ಸಾಟಿ . ಸೀಬೆ ಹಣ್ಣಿನ ಹಲವಾರು ಖಾದ್ಯಗಳು ಇಂದಿಗೂ ಬಾಯಲ್ಲಿ ನೀರು ತರಿಸುತ್ತವೆ . ಸೀಬೆ ಮರದ ಎಲೆಗಳು ಮನುಷ್ಯನ ದೇಹಕ್ಕೆ ಆರೋಗ್ಯದ ವಿಚಾರದಲ್ಲಿ ಬಹಳ ಉಪಕಾರಿ . ಹಬ್ಬ ಹರಿದಿನಗಳಲ್ಲಿ ಮನೆಗಳಲ್ಲಿ ನಡೆಯುವ ಪೂಜೆಯಲ್ಲಿ ಸೀಬೆ ಹಣ್ಣು ಇತರ ಹಣ್ಣುಗಳೊಡನೆ ದೇವರ ನೈವೇದ್ಯದಲ್ಲಿ ಉಲ್ಲಾಸದಿಂದ ಪಾಲ್ಗೊಳ್ಳುತ್ತದೆ .

ಬಿಸಿಲಿನ ಝಳಕ್ಕೆ ದೇಹಕ್ಕೆ ತಂಪೆರೆಯಲು ಸೀಬೆ ಹಣ್ಣು ಸದಾ ಸಿದ್ದ . ಇನ್ನು ಸೀಬೆ ಹಣ್ಣಿನ ಜ್ಯೂಸು ಬೇಸಿಗೆ ಬಿಸಿಲಿಗೆ ಮನುಷ್ಯನ ದೇಹದ ನೀರು ಹಾವಿಯಾಗಿ ಹೋಗದಂತೆ ಸದಾ ನೀರಿನ ಅಂಶವನ್ನು ಕಾಪಾಡುತ್ತದೆ . ಸೀಬೆ ಹಣ್ಣಿನಲ್ಲಿ ವಿಟಮಿನ್ ' ಸಿ ' ಅಂಶ ಹೇರಳವಾಗಿದ್ದು ದೇಹದ ಜೀರ್ಣ ಶಕ್ತಿಗೆ ಪುಷ್ಟಿ ಕೊಡುತ್ತದೆ . ಕಿತ್ತಳೆ ಹಣ್ಣಿಗೆ ಹೋಲಿಸಿದರೆ ಸೀಬೆ ಹಣ್ಣಿನಲ್ಲಿ ಸುಮಾರು 4 ಪಟ್ಟು ಹೆಚ್ಚು ವಿಟಮಿನ್ ' ಸಿ ' ಅಂಶವಿದೆ . ಫೈಬರ್ ನ ಅಂಶವೂ ಹೆಚ್ಚಿಗೆ ಇರುವುದರಿಂದ ಮಾರುಕಟ್ಟೆಯಲ್ಲಿ ಸಿಗುವ ಅನೇಕ ರೀತಿಯ ಫ್ಲೇವರ್ ಮತ್ತು ಆರ್ಟಿಫಿಷಿಯಲ್ ಸ್ವೀಟೆನೇರ್ ಹಾಕಿ ತಯಾರಿಸಿದ ಮತ್ತು ಧೀರ್ಘ ಕಾಲದಿಂದ ಶೇಖರಿಸಿದ ಹಣ್ಣಿನ ರಸ ಕುಡಿಯುವುದಕ್ಕಿಂತ ಮನೆಯಲ್ಲೇ ಫ್ರೆಶ್ ಆದ ಸೀಬೆ ಹಣ್ಣುಗಳಿಂದ ಮಾಡಿದ ಜ್ಯೂಸು ಆರೋಗ್ಯದ ರೀತಿಯಲ್ಲಿ ಗಮನಿಸಿದರೆ ಬಹಳ ಒಳ್ಳೆಯದು .

ಸೀಬೆ ಹಣ್ಣಿನಲ್ಲಿ ನಿಸರ್ಗದತ್ತವಾಗಿರುವ ಪೋಷಕಾಂಶಗಳು :

ಎನರ್ಜಿ ( ಕಿಲೋ ಕ್ಯಾಲೋರಿ ) : 136

ವಿಟಮಿನ್ ' ಸಿ ' ( ಮಿಲ್ಲಿ ಗ್ರಾಂ ) : 754

ಪೊಟ್ಯಾಸಿಯಂ ( ಮಿಲ್ಲಿ ಗ್ರಾಂ ಗಳಲ್ಲಿ ) : 800

ಕಾರ್ಬೋಹೈಡ್ರೇಟ್ ( ಗ್ರಾಂ ಗಳಲ್ಲಿ ) : 28 . 64

ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಸೀಬೆ ಹಣ್ಣಿನ ಜ್ಯೂಸ್

ಸೀಬೆ ಹಣ್ಣಿನ ಜ್ಯೂಸ್ ತಯಾರು ಮಾಡಲು ಬೇಕಾಗಿರುವ ವಸ್ತುಗಳು :

ಫ್ರೆಶ್ ಆಗಿರುವ ಹೆಚ್ಚಿದ ಸೀಬೆ ಹಣ್ಣು : 1 ಕಪ್ ( 165 ಗ್ರಾಂ ನಷ್ಟು ) .

ಸಕ್ಕರೆ : 1 ಟೀ ಸ್ಪೂನ್ .

ಕೋಲ್ಡ್ ವಾಟರ್ : 1 / 2 ಕಪ್ ( ಸುಮಾರು 120 ಮಿಲಿ ) .

ಐಸ್ ಕ್ಯೂಬ್ ಗಳು .

ಪುದಿನ ಎಲೆಗಳು : 2 ರಿಂದ 3 .

Most Read: ಸೀಬೆ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

ತಯಾರು ಮಾಡುವ ಬಗೆ :

1 . ಮೊದಲಿಗೆ ಸೀಬೆ ಹಣ್ಣುಗಳನ್ನು ತೆಗೆದುಕೊಂಡು ಶುದ್ಧವಾದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ . ನಂತರ ಅವುಗಳನ್ನು ಸಣ್ಣದಾಗಿ ಹೆಚ್ಚಿ 1 ಕಪ್ ನಲ್ಲಿ ಹಾಕಿಡಿ .

2 . ಒಂದು ಮಿಕ್ಸಿ ಜಾರ್ ಗೆ 1 ಕಪ್ ಸೀಬೆ ಹಣ್ಣು , ಸಕ್ಕರೆ ಮತ್ತು ಕೋಲ್ಡ್ ವಾಟರ್ ಹಾಕಿ ಪೇಸ್ಟ್ ನ ಹದ ಬರುವವರೆಗೂ ರುಬ್ಬಿಕೊಳ್ಳಿ . ಇಲ್ಲಿ ಒಂದು ಅಂಶ ನೆನಪಿಡಬೇಕು . ಬಹಳ ನುಣ್ಣಗೆ ರುಬ್ಬಿಕೊಂಡರೆ ಸೀಬೆ ಹಣ್ಣಿನ ಬೀಜಗಳನ್ನು ಸೋಸುವುದು ಕಷ್ಟವಾಗಬಹುದು .

3 . ರುಬ್ಬಿದ ನಂತರ ಒಂದು ಸ್ಟೈನೆರ್ ತೆಗೆದುಕೊಂಡು ಅದರಲ್ಲಿ ಪೇಸ್ಟ್ ನಿಂದ ಬೀಜಗಳನ್ನು ಸೋಸಿಕೊಂಡು ಬೇರ್ಪಡಿಸಿ .

4 . ಬೀಜ ರಹಿತ ಫ್ರೆಶ್ ಆದ ಸೀಬೆ ಹಣ್ಣಿನ ಜ್ಯೂಸು ಗೆ ಕೆಲವು ಐಸ್ ಕ್ಯೂಬ್ ಗಳನ್ನು ಮತ್ತು ಪುದಿನ ಎಲೆಗಳನ್ನು ಹಾಕಿ ಚೆನ್ನಾಗಿ ಟೀಪಾಯಿಸಿ . ಸುಡು ಬಿಸಿಲಿನ ಬೇಸಿಗೆಗೆ ನಿಮ್ಮ ಸೀಬೆ ಹಣ್ಣಿನ ಜ್ಯೂಸು ಸವಿಯಲು ಸಿದ್ದ .

ಸೀಬೆ ಹಣ್ಣಿನಲ್ಲಿದೆ ಅಗಾಧವಾದ ವಿಟಮಿನ್ ' ಸಿ '

ಸೀಬೆ ಹಣ್ಣಿನಲ್ಲಿ ಇರುವ ಹೇರಳವಾದ ವಿಟಮಿನ್ ' ಸಿ ' ಅಧಿಕ ರಕ್ತದ ಒತ್ತಡ ಹೊಂದಿರುವ ರೋಗಿಗೆ ಬಹಳ ಸಹಕಾರಿ . ಧೀರ್ಘ ಕಾಲದಿಂದ ಬಳಲುತ್ತಿರುವ ಇಂತಹ ರೋಗಿಗೆ ರಕ್ತದ ಒತ್ತಡ ಕಡಿಮೆ ಮಾಡಿ ತನ್ನಲ್ಲಿರುವ ಆಂಟಿ ಒಕ್ಸಿಡಾಂಟ್ ನ ಸಹಾಯದಿಂದ ಹೃದಯ ರೋಗವನ್ನು ತಡೆಗಟ್ಟುತ್ತದೆ .

ದೇಹದ ತೂಕ ಇಳಿಸುತ್ತದೆ ಸೀಬೆ ಹಣ್ಣು

ಸೀಬೆ ಹಣ್ಣು ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣಾಗಿದೆ . ಇದರಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಅಧಿಕವಾಗಿದ್ದು ಡಯಟ್ ಮಾಡುವವರಿಗಂತೂ ಇದು ಹೇಳಿ ಮಾಡಿಸಿದ ಒಂದು ಫಲಾಹಾರವಾಗಿದೆ . ನೀವು ಯಾವುದೇ ಕ್ಯಾಲೋರಿ ಅನ್ನು ಜಾಸ್ತಿ ಮಾಡಿಕೊಳ್ಳದೆ ಸೀಬೆ ಹಣ್ಣನ್ನು ನಿಮ್ಮ ಬೆಳಗಿನ ತಿಂಡಿಯ ಸಮಯದಲ್ಲಿ ಅಥವಾ ಮಧ್ಯಾಹ್ನದ ಊಟದ ಸಮಯದಲ್ಲಿ ಇಲ್ಲವೇ ರಾತ್ರಿ ಊಟವಾದ ಬಳಿಕ ಸೇವಿಸಿದರೆ ಖಂಡಿತ ನಿಮ್ಮ ದೇಹದ ತೂಕ ಬಹಳ ಪರಿಣಾಮಕಾರಿಯಾಗಿ ಇಳಿಸಿಕೊಳ್ಳಬಹುದು

Most Read: ಸೀಬೆ ಎಲೆಯಲ್ಲಿದೆ ಸೀಮಾತೀತ ಆರೋಗ್ಯ ಗುಣಗಳು

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಇದ್ದಕ್ಕಿದ್ದಂತೆ ಹೆಚ್ಚು ಮಾಡುತ್ತದೆ

ಮನುಷ್ಯನ ದೇಹದ ಮೇಲೆ ದಾಳಿ ಮಾಡಿ ಖಾಯಿಲೆಗಳನ್ನು ಉಂಟುಮಾಡುವ ಕೀಟಾಣುಗಳ ವಿರುದ್ಧ ಹೋರಾಡಬೇಕಾದರೆ ದೇಹದ ರೋಗ ನಿರೋಧಕ ಶಕ್ತಿ ಅಷ್ಟೇ ಪರಿಣಾಮಕಾರಿಯಾಗಿರಬೇಕು . ಇದನ್ನು ಬಲಪಡಿಸಲು ದೇಹಕ್ಕೆ ವಿಟಮಿನ್ ' ಸಿ ' ಯ ಅಗತ್ಯ ತುಂಬಾ ಇದೆ ಮತ್ತು ಪ್ರತಿ ದಿನ ನಾವು ವಿಟಮಿನ್ ' ಸಿ ' ತೆಗೆದುಕೊಳ್ಳಲೇಬೇಕು . ಇದನ್ನು ಹುಡುಕಿಕೊಂಡು ಬೇರೆಲ್ಲೂ ಅಲೆಯಬೇಕಾಗಿಲ್ಲ . ಸೀಬೆ ಹಣ್ಣನ್ನು ದಿನಕ್ಕೊಂದರಂತೆ ಸೇವಿಸಿದರೆ ಸಾಕು . ಧೀರ್ಘ ಕಾಲದಿಂದ ಬಳಲುತ್ತಿದ್ದ ಶೀತ , ನೆಗಡಿ ಮತ್ತು ಕೆಮ್ಮನ್ನು ಬಹಳ ಬೇಗನೆ ದೂರ ಮಾಡುತ್ತದೆ .

ದೇಹದ ಚರ್ಮವನ್ನು ಆರೋಗ್ಯವಾಗಿ ಮತ್ತು ಕಾಂತಿಯುಕ್ತವಾಗಿ ಇರುವಂತೆ ಮಾಡುತ್ತದೆ :

ಸೀಬೆ ಹಣ್ಣಿನ ರಸ ಮನುಷ್ಯನ ದೇಹದ ಚರ್ಮಕ್ಕೆ ಬಹಳ ಉಪಯುಕ್ತ . ಇದರಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಹೆಚ್ಚಿಗೆ ಇರುವುದರಿಂದ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಕೂಡ ಸೇರಿವೆ . ಇದರಿಂದ ಮುಖದ ಮೇಲೆ ಶುರುವಾಗಿರುವ ಮೊಡವೆ ಮತ್ತು ಗುಳ್ಳೆಗಳನ್ನು ಇಲ್ಲವಾಗಿಸುತ್ತದೆ . ಅಷ್ಟೇ ಅಲ್ಲದೆ ವಯಸ್ಸಾದವರಂತೆ ಚರ್ಮ ಸುಕ್ಕು ಗಟ್ಟುವುದನ್ನು ಕೂಡ ಇದು ತಡೆಯುತ್ತದೆ . ಚರ್ಮದ ಕಾಂತಿ ಹೆಚ್ಚಿಸುತ್ತದೆ .

ಅತಿಸಾರ ಮತ್ತು ಭೇದಿ ಗೆ ರಾಮ ಬಾಣ ಸೀಬೆ ಹಣ್ಣಿನ ರಸ

ಮನುಷ್ಯನಿಗೆ ವಾಂತಿ ಅಥವಾ ಭೇದಿಯ ಸಮಸ್ಯೆ ಶುರುವಾಗುವುದು ಆತನ ಹೊಟ್ಟೆ ಕೆಟ್ಟಾಗ . ಅಂದರೆ ದೇಹದ ಒಳಗೆ ಜೀರ್ಣಾಂಗದ ಸಮಸ್ಯೆ ಎದುರಾದಾಗ . ಸೀಬೆ ಹಣ್ಣಿನ ರಸದಲ್ಲಿ ಫೈಬರ್ ನ ಅಂಶ ಹೆಚ್ಚಾಗಿದ್ದು ಆಂಟಿ ಮೈಕ್ರೋ ಬಿಯಲ್ ಗುಣ ಲಕ್ಷಣಗಳಿವೆ . ಇವು ಆಮಶಂಕೆ , ಅತಿಸಾರ ಮತ್ತು ಭೇದಿಗಳಂತಹ ಸಮಸ್ಯೆಗಳಿಗೆ ರಕ್ಷಾ ಕವಚವಾಗಿ ಕೆಲಸ ಮಾಡುತ್ತವೆ . ಇದರಲ್ಲಿರುವ ಪೊಟ್ಯಾಸಿಯಂ ಮತ್ತು ವಿಟಮಿನ್ ' ಸಿ ' ಜೀರ್ಣಾಂಗಕ್ಕೆ ಯಾವುದೇ ತೊಂದರೆ ಆಗದಂತೆ ಸದಾ ಬಹಳ ಆರೋಗ್ಯವಾಗಿ ಇರುವಂತೆ ಕಾಪಾಡುತ್ತದೆ .

ಸೀಬೆ ಹಣ್ಣು ತಿನ್ನುವುದರಿಂದ ಕಣ್ಣಿನ ದೃಷ್ಟಿಯ ದೋಷ ಪರಿಹಾರವಾಗುತ್ತದೆ

ಸೀಬೆ ಹಣ್ಣಿನಲ್ಲಿ ವಿಟಮಿನ್ ' ಸಿ ' ಹೆಚ್ಚಾಗಿರುವಂತೆ ವಿಟಮಿನ್ ' ಎ ' ಕೂಡ ಹೆಚ್ಚಾಗಿದೆ . ಇದು ಕಣ್ಣಿನ ದೃಷ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಮತ್ತು ಕಣ್ಣಿನ ಪೊರೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ . ನೀವು ಕೊನೆಯವರೆಗೂ ಒಳ್ಳೆಯ ದೃಷ್ಟಿಯನ್ನು ಹೊಂದಬೇಕಾದರೆ ತಡ ಮಾಡದೆ ಪ್ರತಿ ದಿನ ಒಂದೊಂದು ಸೀಬೆ ಹಣ್ಣನ್ನು ತಿನ್ನುವುದನ್ನು ರೂಢಿ ಮಾಡಿಕೊಳ್ಳಿ.

Most Read: 'ಸೀಬೆ ಎಲೆ' ಕೂದಲಿನ ಸರ್ವ ರೋಗಕ್ಕೂ ಪರ್ಫೆಕ್ಟ್ ಮನೆಮದ್ದು

ಸೀಬೆ ಹಣ್ಣು ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿ

ಸೀಬೆ ಹಣ್ಣಿನಲ್ಲಿ ಮೆಗ್ನೀಷಿಯಂ ಅಂಶವಿದೆ . ಮೆಗ್ನೀಷಿಯಂ ಅಂಶ ಸಾಧಾರಣವಾಗಿ ಮನುಷ್ಯನ ದೇಹದ ಮಾಂಸಖಂಡಗಳನ್ನು ಸಡಿಲಿಸಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಮಾಡಲು ಸಹಕಾರಿಯಾಗಿದೆ. ಇದರಿಂದ ತಾನಾಗಿಯೇ ದೇಹದ ಮತ್ತು ಮನಸ್ಸಿನ ಒತ್ತಡ ಮತ್ತು ದುಗುಡ ದೂರಾಗುತ್ತದೆ . ಆದ್ದರಿಂದ ಒಂದು ಕಪ್ ಸೀಬೆ ಹಣ್ಣಿನ ಜ್ಯೂಸು ಕುಡಿದು ಸಂತೋಷದಿಂದ ಸಂಭ್ರಮಿಸಿ . ನೋಡಿದಿರಲ್ಲ . ಸೀಬೆ ಹಣ್ಣು ಮನೆಯಲ್ಲಿದ್ದರೆ ನಿಮಗೆ ಎಷ್ಟೆಲ್ಲಾ ಉಪಯೋಗವಿದೆ ಎಂದು. ಆದ್ದರಿಂದ ಈಗಲೇ ಮಾರುಕಟ್ಟೆಗೆ ಹೋಗಿ ಸೀಬೆ ಹಣ್ಣು ತನ್ನಿ ಮತ್ತು ಅದರ ಖಾದ್ಯಗಳಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಿ.

   
 
ಹೆಲ್ತ್