Back
Home » ಇತ್ತೀಚಿನ
ಟ್ರೂ ಕಾಲರ್‌ ಆಪ್‌ನಲ್ಲಿ ಲಭ್ಯವಾಗಲಿದೆ 'ಉಚಿತ ವಾಯಿಸ್‌ ಕರೆ' ಸೇವೆ!
Gizbot | 13th Jun, 2019 04:45 PM
 • ಇಂಟರ್ನೆಟ್ ಆಧಾರಿತ ಕರೆಗಳು

  ಸದ್ಯ ಇಂಟರ್ನೆಟ್ ಬಳಸಿ ಕರೆಗಳನ್ನು ಮಾಡುವ ಸೇವೆಗಳು ಹೆಚ್ಚು ಬಳಕೆಯಲ್ಲಿದ್ದು, ಟ್ರೂ ಕಾಲರ್‌ ಆಪ್‌ ಸಹ ಹೊಸದಾಗಿ ವಾಯಿಸ್‌ ಕರೆ ಸೇವೆಯನ್ನು ಸೇರಿಸಿಕೊಳ್ಳಲು ಸಿದ್ಧವಾಗುತ್ತಿದೆ. ಬಳಕೆದಾರರು ಮೊಬೈಲ್‌ ಇಂಟರ್ನೆಟ್‌ ಮೂಲಕ ಉಚಿತವಾಗಿ ವಾಯಿಸ್‌ ಕರೆಗಳನ್ನು ಮಾಡಬಹುದಾಗಿದೆ. ವಾಯಿಸ್‌ ಗುಣಮಟ್ಟವು ಸಹ ಉತ್ತಮವಾಗಿ ಇರಲಿದೆ ಎನ್ನಲಾಗುತ್ತಿದೆ.


 • ವಾಟ್ಸಪ್‌ ಮತ್ತು ಡ್ಯುಯೊಗೆ ಟಾಂಗ್

  ಪ್ರಸ್ತುತ ಇಂಟರ್ನೆಟ್ ವಾಯಿಸ್‌ ಕರೆಗಳ ಸೇವೆ ಹೆಚ್ಚು ಜನಪ್ರಿಯವಾಗುತ್ತಿದ್ದು, ಈಗಾಗಲೇ ವಾಟ್ಸಪ್ ಮತ್ತು ಗೂಗಲ್ ಡ್ಯುಯೊ ಆಪ್‌ಗಳು ವಾಯಿಸ್‌ ಕರೆ ಸೌಲಭ್ಯವನ್ನು ಪರಿಚಯಿಸಿವೆ. ಈ ನಿಟ್ಟಿನಲ್ಲಿ ಟ್ರೂ ಕಾಲರ್ ಸಹ ಈಗ ವಾಯಿಸ್‌ ಕರೆಯ ಸೌಲಭ್ಯವನ್ನು ಮಾಡಿಕೊಡಲು ಮುಂದಾಗುತ್ತಿದೆ. ಈ ಮೂಲಕ ವಾಟ್ಸಪ್ ಮತ್ತು ಗೂಗಲ್ ಡ್ಯೂಯೊಗಳಿಗೆ ಪೈಪೋಟಿ ನೀಡಲಿದೆ.

  ಓದಿರಿ : ಅಗ್ಗದ ಬೆಲೆಯಲ್ಲಿ ಸೋನಿಯಿಂದ ಪಾರ್ಟಿ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ!


 • ಪ್ರೀಮಿಯಂ ಚಂದಾದಾರರಿಗೆ ಮಾತ್ರ

  ಟ್ರೂ ಕಾಲರ್ ಆಪ್‌ನಲ್ಲಿ ಪ್ರೀಮಿಯಂ ಸದಸ್ಯತ್ವದ ಆಯ್ಕೆ ಇದ್ದು, ಪ್ರೀಮಿಯಂ ಸದಸ್ಯತ್ವ ಪಡೆದ ಗ್ರಾಹಕರಿಗೆ ವಿಶೇಷ ಫೀಚರ್ಸ್‌ಗಳು ಲಭ್ಯವಾಗುತ್ತಿವೆ. ಈಗ ಹೊಸದಾಗಿ ಟ್ರೂ ಕಾಲರ್‌ನ ವಾಯಿಸ್‌ ಕರೆ ಸೌಲಭ್ಯವು ಲಭ್ಯವಾಗಲಿದೆ ಎನ್ನಲಾಗುತ್ತಿದ್ದು, ಟ್ರೂ ಕಾಲರ್‌ನ ಆಪ್‌ನ ಪ್ರೀಮಿಯಂ ಸದಸ್ಯತ್ವ ಪಡೆಯಲು ಗ್ರಾಹಕರು ನಿಗದಿತ ಶುಲ್ಕ ಪಾವತಿಸಬೇಕಿದೆ.


 • ಆಪ್‌ ಸೇರಲಿವೆ ಮತ್ತಷ್ಟು ಸೌಲಭ್ಯಗಳು

  ಟ್ರೂ ಕಾಲರ್ ಆಪ್‌ ಕೇವಲ ಕಾಲರ್‌ ಐಡಿ ಸೇವೆಯನ್ನು ಮಾತ್ರ ಹೊಂದಿಲ್ಲ. ಇತ್ತೀಚಿಗೆ ಯುಪಿಐ ಆಧಾರಿತ ಹಣ ವರ್ಗಾವಣೆಯ ಸೇವೆಯನ್ನು ಆರಂಭಿಸಿತ್ತು. ಇದೀಗ ವಾಯಿಸ್‌ ಕರೆ ಮಾಡುವ ಸೌಲಭ್ಯವನ್ನು ನೀಡಲು ಮುಂದಾಗುತ್ತಿದೆ. ಹಾಗೆಯೇ ಮತ್ತಷ್ಟು ಹೊಸ ಫೀಚರ್ಸ್‌ಗಳು ಟ್ರೂ ಕಾಲರ್‌ ಆಪ್‌ ಸೇರಲಿವೆ.


 • ಸದ್ಯ ಲಭ್ಯವಿರುವ ಸೇವೆಗಳು

  ಟ್ರೂ ಕಾಲರ್‌ನಲ್ಲಿ ಸದ್ಯ ಕಾಲರ್‌ ಐಡಿ ರೀಕಗ್ನೈಸ್, ವಾಯಿಸ್‌ ರೆಕಾರ್ಡಿಂಗ್, ಇನ್‌ ಕಾಗ್ನಿಟೊ ಮೋಡ್, ಪ್ರೊಫೈಲ್ ಯಾರು ವೀಕ್ಷಿಸಿದರು, ಪ್ರೀಮಿಯಂ ಬ್ಯಾಡ್ಜ್, ಕಾಂಟ್ಯಾಕ್ಟ್‌ ರಿಕ್ವೇಸ್ಟ್ ಸೇರಿದಂತೆ ಅತ್ಯುತ್ತಮ ಫೀಚರ್ಸ್‌ಗಳು ಪ್ರೀಮಿಯಂ ಸದಸ್ಯ ಬಳಕೆದಾರಿರಗೆ ಲಭ್ಯ ಇವೆ. ಮತ್ತು ಈ ಸೇವೆಗಳು ಜಾಹಿರಾತು ಮುಕ್ತವಾಗಿವೆ.

  ಓದಿರಿ : ಥಾಮ್ಸನ್‌ ಸಂಸ್ಥೆಯ ಹೊಸ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ!
ಯಾವುದಾರು ಹೊಸ ನಂಬರ್‌ನಿಂದ ಕರೆ ಬಂದರೇ ಅದು ಯಾರ ನಂಬರ್ ಎಂದು ತಿಳಿಯಲು ಮೊದಲು ನೆನಪಿಗೆ ಬರುವುದೇ 'ಟ್ರೂ ಕಾಲರ್ ಆಪ್‌'. ಸಾಮನ್ಯವಾಗಿ ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಆಪ್ ಅನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಟ್ರೂ ಕಾಲರ್‌ ಈಗ ಬಳಕೆದಾರರಿಗೆ ಒಂದು ಸರ್‌ಪ್ರೈಸ್‌ ನೀಡಲು ಸಜ್ಜಾಗುತ್ತಿದ್ದು, ಇನ್ಮುಂದೆ ವಾಯಿಸ್‌ ಕಾಲ್ ಸೇವೆಯನ್ನು ಆರಂಭಿಸಲಿದೆ.

ಹೌದು, ಟ್ರೂ ಕಾಲರ್ ಆಪ್‌ ಇದೀಗ ಇಂಟರ್ನೆಟ್ ಆಧಾರಿತ 'ಟ್ರೂ ಕಾಲರ್ ವಾಯಿಸ್‌'(Truecaller Voice) ಸೇವೆಯನ್ನು ಶುರುಮಾಡಲು ಅಣಿ ಆಗುತ್ತಿದ್ದು, ಈ ಸೇವೆ (VoIP) ಸದ್ಯ ಟೆಸ್ಟಿಂಗ್‌ ಹಂತದಲ್ಲಿದೆ. ವಾಟ್ಸಪ್‌ ಮತ್ತು ಗೂಗಲ್ ಡ್ಯುಯೊ ಆಪ್‌ಗಳಲ್ಲಿರುವ ಇಂಟರ್ನೆಟ್‌ ಆಧಾರಿತ ವಾಯಿಸ್‌ ಕರೆಗಳಂತೆ ಟ್ರೂ ಕಾಲರ್ ಆಪ್‌ ಸಹ ವಾಯಿಸ್‌ ಕರೆ ಸೌಲಭ್ಯವನ್ನು ಹೊಸದಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ.

ಟ್ರೂ ಕಾಲರ್‌ನಲ್ಲಿ ಸೇರಲಿರುವ ವಾಯಿಸ್‌ ಕರೆ ಸೌಲಭ್ಯವು ಪ್ರೀಮಿಯಂ ಸದಸ್ಯ ಪಡೆದ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ ಎನ್ನಲಾಗಿದ್ದು, ಆಪ್‌ನಲ್ಲಿ ವಾಯಿಸ್‌ ಎಂಬ ಆಯ್ಕೆ ಕಾಣಿಸಿಕೊಳ್ಳಲಿದೆ. ಆ ಮೂಲಕ ವಾಯಿಸ್‌ ಕಾಲ್‌ ಮಾಡಬಹುದಾಗಿದೆ. ಹಾಗಾದರೇ ಟ್ರೂ ಕಾಲರ್‌ನ ನೂತನ ವಾಯಿಸ್‌ ಕಾಲಿಂಗ್ ಸೇವೆಯು ಇತರೆ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಗ್ರಾಹಕ ಸ್ನೇಹಿ ಬೆಲೆಯಲ್ಲಿ ಗಮನ ಸೆಳೆದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

   
 
ಹೆಲ್ತ್