Back
Home » ಗಾಸಿಪ್
'ಅರುಂಧತಿ 2' ಸಿನಿಮಾದಲ್ಲಿ 'ಆರ್ ಎಕ್ಸ್ 100' ನಟಿ
Oneindia | 25th Jun, 2019 05:18 PM

'ಆರುಂಧತಿ' ಟಾಲಿವುಡ್ ನಲ್ಲಿ ದೊಡ್ಡ ಹಿಟ್ ಆದ ಸಿನಿಮಾ. ನಟಿ ಅನುಷ್ಕಾ ಶೆಟ್ಟಿ ಕೆರಿಯರ್ ನಲ್ಲಿ ಈ ಸಿನಿಮಾ ತುಂಬ ದೊಡ್ಡ ಹೆಸರು ತಂದುಕೊಟ್ಟಿದೆ. ಈಗ 'ಆರುಂಧತಿ 2' ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ.

'ಆರುಂಧತಿ' ಎಂದ ತಕ್ಷಣ ಅನುಷ್ಕಾ ನೆನಪಿಗೆ ಬರುತ್ತಾರೆ. ಹಾಗಾಗಿ ಈ ಸಿನಿಮಾ ಕೂಡ ಅವರೇ ಮಾಡುತ್ತಾರೆಯೇ ಎನ್ನುವ ಕುತೂಹಲ ಮೂಡುತ್ತದೆ. ಆದರೆ, ಈ ಸಿನಿಮಾಗೆ ಮತ್ತೊಬ್ಬ ನಾಯಕಿಯ ಆಗಮನ ಆಗಿದೆ. ಇಲ್ಲಿ ನಟಿ ಪಾಯಲ್ ರಜಪೂತ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ.

ದೀಪಿಕಾ ಪಡುಕೋಣೆ ಧರಿಸಿದ್ದ ಸಿಲ್ವರ್ ಬಣ್ಣದ ಪ್ಯಾಂಟ್ ಬೆಲೆ ಇಷ್ಟೊಂದಾ.!

ಪಾಯಲ್ ರಜಪೂತ್ 'ಆರ್ ಎಕ್ಸ್ 100' ಸಿನಿಮಾದ ಮೂಲಕ ಟಾಲಿವುಡ್ ಗೆ ಕಾಲಿಟ್ಟಿರು. ಮೊದಲ ಸಿನಿಮಾದಲ್ಲಿಯೇ ಹಸಿಬಿಸಿ ದೃಶ್ಯದ ಮೂಲಕ ಸದ್ದು ಮಾಡಿದ್ದರು. ಈ ನಾಯಕಿ ಈಗ 'ಆರುಂಧತಿ 2' ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಗಾಸಿಪ್ ಹರಡಿದೆ.

ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಾಡುವ ಪ್ಲಾನ್ ನಿರ್ಮಾಪಕರಾಗಿದ್ದೆಯಂತೆ. ಐತಿಹಾಸಿಕ ಸಿನಿಮಾ ಆಗಿರುವ ಕಾರಣ ದೊಡ್ಡ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆಯಂತೆ. ಹಾಲಿವುಡ್ ತಂತ್ರಜ್ಞರು ಚಿತ್ರದ ಗ್ರಾಫಿಕ್ ಕೆಲಸ ಮಾಡಲಿದ್ದಾರೆ.

ಪಾಯಲ್ ಗೆ ದೊಡ್ಡ ಅವಕಾಶ ಸಿಕ್ಕಿದ್ದು, ಈ ಪಾತ್ರವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎನ್ನುವ ಕುತೂಹಲ ಇದೆ. ಆ 'ಆರುಂಧತಿ' ಸಿನಿಮಾಗೂ ಈ ಸಿನಿಮಾಗೂ ಏನಾದರೂ ಸಂಬಂಧ ಇದ್ಯಾ ಎನ್ನುವುದು ಸದ್ಯಕ್ಕೆ ತಿಳಿಯದ ವಿಷಯ.

   
 
ಹೆಲ್ತ್