Back
Home » ಬಾಲಿವುಡ್
ಬಿಗ್ ಬಾಸ್-13 ಶೋನಿಂದ ಸಲ್ಮಾನ್ ಗೆ ಸಿಗುವ ಸಂಭಾವನೆ 400 ಕೋಟಿ.!
Oneindia | 25th Jun, 2019 05:59 PM

ಬಿಗ್ ಬಾಸ್ 13ನೇ ಆವೃತ್ತಿಗೆ ಕೌಂಡೌನ್ ಆರಂಭವಾಗಿದೆ. ಈ ಸಲ ಬಿಗ್ ಮನೆಗೆ ಯಾರೆಲ್ಲಾ ಹೋಗ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆ ಭಾರಿ ಚರ್ಚೆಯಾಗ್ತಿದೆ.

ಈಗಾಗಲೇ ಗೊತ್ತಿರುವಂತೆ ಸಲ್ಮಾನ್ ಖಾನ್ ಬಿಗ್ ಬಾಸ್ ಶೋನಲ್ಲಿ ಇಡೀ ಶೋಗೆ ಸಂಭಾವನೆ ಪಡೆಯಲ್ಲ. ವಾರಕ್ಕೆ ಇಷ್ಟು ಅಂತ ಸಂಭಾವನೆ ತೆಗೆದುಕೊಳ್ಳುತ್ತಾರೆ. ಆದರೆ ಒಂದು ವಾರಕ್ಕೆ ಎಷ್ಟು ಚಾರ್ಜ್ ಮಾಡ್ತಾರೆ ಎಂಬುದು ನಿಖರವಾಗಿ ಗೊತ್ತಿಲ್ಲ.

ತಮಿಳು ಬಿಗ್ ಬಾಸ್ ಮನೆ ಪ್ರವೇಶಿಸಿದ ದರ್ಶನ್ ನಾಯಕಿ

ಇದೀಗ, ಬಿಗ್ ಬಾಸ್ 13ನೇ ಆವೃತ್ತಿ ನಿರೂಪಣೆ ಮಾಡಲು ಸಲ್ಮಾನ್ ಎಷ್ಟು ಪಡೆಯುತ್ತಾರೆ ಎನ್ನುವುದು ಬಹಿರಂಗವಾಗಿದೆ. ಸದ್ಯದ ವರದಿಗಳ ಪ್ರಕಾರ ಒಂದು ವಾರಕ್ಕೆ 31 ಕೋಟಿ ಸಂಭಾವನೆ ಸಲ್ಲುಗೆ ಸಿಗುತ್ತಂತೆ.

ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಇವರೆಲ್ಲ ಇದ್ದರೆ ಚೆಂದವಂತೆ.!

ಅಂದ್ಹಾಗೆ, ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಒಟ್ಟು 26 ಸಂಚಿಕೆಗಳು ಪ್ರಸಾರವಾಗಲಿದೆ. ಅಂದ್ರೆ ಒಂದು ವಾರದಲ್ಲಿ ಎರಡು ಸಂಚಿಕೆ. 26 ಸಂಚಿಕೆ ಅಂದ್ರೆ 13 ವಾರ ಸಲ್ಲು ನಿರೂಪಣೆ ಮಾಡಲಿದ್ದಾರೆ. ಹಾಗಾಗಿ, ಒಂದು ವಾರಕ್ಕೆ 31 ಕೋಟಿ 13 ವಾರಕ್ಕೆ 403 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ.

ಬಿಗ್ ಬಾಸ್ ಮನೆಗೆ ತೆಲುಗು ಸೂಪರ್ ಸ್ಟಾರ್ ನಟನ ಪತ್ನಿ.!

ಸದ್ಯದ ವರದಿ ಪ್ರಕಾರ ಕರಣ್ ಪಟೇಲ್, ಜರೀನ್ ಖಾನ್, ವರೀನಾ ಹುಸೇನ್, ರಾಜ ಪಾಲ್ ಯಾದವ್, ಸೇರಿದಂತೆ ಹಲವರ ಹೆಸರು ಈ ಬಾರಿಯ ಬಿಗ್ ಬಾಸ್ ನಲ್ಲಿ ಕೇಳಿಬರುತ್ತಿದೆ. ಸೆಪ್ಟೆಂಬರ್ 29ಕ್ಕೆ ಬಿಗ್ ಬಾಸ್ ಹದಿಮೂರನೇ ಆವೃತ್ತಿ ಆರಂಭವಾಗಲಿದೆ.

   
 
ಹೆಲ್ತ್