Back
Home » ಬಾಲಿವುಡ್
ಕಬೀರ್ ಸಿಂಗ್ ಚಿತ್ರಕ್ಕೆ ಎದುರಾಯ್ತು ಕಂಟಕ: ದೂರು ದಾಖಲು
Oneindia | 26th Jun, 2019 05:02 PM
 • ವೈದ್ಯಕೀಯ ಕ್ಷೇತ್ರಕ್ಕೆ ಅಗೌರವ

  ಕಬೀರ್ ಸಿಂಗ್ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಮುಂಬೈ ಮೂಲದ ವೈದ್ಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದು, ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಚಿತ್ರದಲ್ಲಿ ವೈದ್ಯ ವೃತ್ತಿಯನ್ನ ಅವಮಾನಿಸುವ ರೀತಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ನಟ ಶಾಹೀದ್ ಕಪೂರ್ ಮತ್ತು ಕಿಯಾರ ಅಡ್ವಾನಿ ಪ್ರತಿಸ್ಪರ್ಧಿಗಳಾಗಿ ಬಿಂಬಿಸಲಾಗಿದೆ.

  Kabir singh review : ಉತ್ತಮ ನಟ ಎನ್ನುವುದನ್ನ ಮತ್ತೊಮ್ಮೆ ಸಾಬೀತು ಮಾಡಿದ ಶಾಹಿದ್


 • ಸೆನ್ಸಾರ್ ಪ್ರಮಾಣ ಪತ್ರ ರದ್ದು ಮಾಡಿ

  ಸಿನಿಮಾ ಶಾಹೀದ್ ಕಪೂರ್ ಸರ್ಜನ್ ಪಾತ್ರ ನಿಭಾಯಿಸಿದ್ದಾರೆ. ಯಾವಾಗಲೂ ಕುಡಿದ ಮತ್ತಿನಲ್ಲೇ ಇರುವ ವೈದ್ಯನ ಪಾತ್ರ ಇದಾಗಿದ್ದು, ಡ್ರಗ್ಸ್ ಚಟಕ್ಕೂ ಬಲಿಯಾಗಿರುತ್ತಾರೆ. ಇದು ವೈದ್ಯರ ಬಗ್ಗೆ ಅಗೌರವ ತೋರುವಂತಿದೆ. ವೈದ್ಯ ವೃತ್ತಿ ಬಗ್ಗೆ ಅವಹೇಳನ ಮಾಡುವಂತಿದೆ. ಹಾಗಾಗಿ, ಈ ಚಿತ್ರದ ಸೆನ್ಸಾರ್ ಪ್ರಮಾಣ ಪತ್ರವನ್ನ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದಾರೆ.


 • ಡಾಕ್ಟರ್ ಇಮೇಜ್ ಡ್ಯಾಮೇಜ್

  ಈ ಸಿನಿಮಾದಿಂದ ಡಾಕ್ಟರ್ ಗಳ ಇಮೇಜ್ ಗೆ ಧಕ್ಕೆಯಾಗುತ್ತಿದೆ. ವೈದ್ಯ ವೃತ್ತಿ ಎಂಬುದು ಪವಿತ್ರವಾದ ಕೆಲಸ. ಅಂತಹ ವೃತ್ತಿಯ ಬಗ್ಗೆ ಜನರಿಗೆ ತಪ್ಪು ತಿಳುವಳಿಕೆ ಸಿಗುತ್ತಿದೆ ಎಂದು ದೂರಿದ್ದಾರೆ. ಇತ್ತೀಚಿಗಷ್ಟೆ ದೇಶದಲ್ಲಿ ವೈದ್ಯರು ಮುಷ್ಕರ ನಡೆದಿತ್ತು. ಇಂತಹ ಸಂದರ್ಭದಲ್ಲಿ ಇಂತಹ ದೂರು ದಾಖಲಾಗಿರುವುದು ಚಿತ್ರಕ್ಕೆ ಸಂಕಷ್ಟ ಎದುರಾಗಬಹುದು.

  'ಕಬೀರ್ ಸಿಂಗ್' ನಂತರ ಮತ್ತೊಂದು ಸೌತ್ ಚಿತ್ರದ ರೀಮೇಕ್ನಲ್ಲಿ ಶಾಹೀದ್ ಕಪೂರ್.?


 • ರೀಮೇಕ್ ಚಿತ್ರ.!

  ಕಬೀರ್ ಸಿಂಗ್ ಚಿತ್ರ ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾದ ರೀಮೇಕ್. ಅರ್ಜುನ್ ರೆಡ್ಡಿ ಚಿತ್ರದ ದೊಡ್ಡ ಸಕ್ಸಸ್ ಕಂಡಿತ್ತು. ಆಗ ಯಾವ ರೀತಿ ವಿರೋಧ ವ್ಯಕ್ತವಾಗದ ಈ ಚಿತ್ರಕ್ಕೆ ಈಗ ಹಿಂದಿ ಭಾಷೆಯಲ್ಲಿ ಸಂಕಷ್ಟ ಎದುರಾಗಿದೆ. ಸದ್ಯಕ್ಕೆ ದೂರು ಮಾತ್ರ ದಾಖಲಾಗಿದೆ. ವಿಚಾರಣೆ ಕೈಗೆತ್ತಿಕೊಂಡರೇ ಏನಾಗುತ್ತೆ ಎಂಬುದು ಕಾದು ನೋಡಬೇಕಿದೆ. ಇದ್ಯಾವುದರ ಬಗ್ಗೆ ಆತಂಕವಿಲ್ಲದೇ ಜನರು ಮಾತ್ರ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ.
ತೆಲುಗು ಸೂಪರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿಯ ಹಿಂದಿ ರೀಮೇಕ್ ಕಬೀರ್ ಸಿಂಗ್ ಕಳೆದ ಶುಕ್ರವಾರವಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡ್ತಿದೆ ಶಾಹೀದ್ ಚಿತ್ರ.

ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿರುವ ಕಬೀರ್ ಸಿಂಗ್ ಐದು ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದೆ. ಈ ಮೂಲಕ ವರ್ಷದ ದೊಡ್ಡ ಹಿಟ್ ಚಿತ್ರಗಳ ಟಾಪ್ 5 ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ನೂರು ಕೋಟಿ ಕ್ಲಬ್ ಸೇರಿದ ಶಾಹಿದ್ ಕಪೂರ್ 'ಕಬೀರ್ ಸಿಂಗ್'

ಮೊದಲ ವಾರಾಂತ್ಯವನ್ನ ಯಶಸ್ವಿಯಾಗಿ ಮುಗಿಸಿದ ಕಬೀರ್ ಸಿಂಗ್ ಈಗ ಎರಡನೇ ವಾರ ಉತ್ತಮವಾಗಿ ಪ್ರದರ್ಶನವಾಗುತ್ತಿರುವಾಗ, ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ. ಅಷ್ಟಕ್ಕೂ, ಕಬೀರ್ ಸಿಂಗ್ ಚಿತ್ರಕ್ಕೆ ಎದುರಾದ ಹೊಸ ವಿವಾದ ಏನು? ಮುಂದೆ ಓದಿ....

   
 
ಹೆಲ್ತ್