Back
Home » ಗಾಸಿಪ್
ಐ ಲವ್ ಯೂ ಕಲೆಕ್ಷನ್ ಬಗ್ಗೆ ಹರಿದಾಡ್ತಿರುವ ಈ ಸುದ್ದಿ ನಿಜಾನ?
Oneindia | 26th Jun, 2019 07:19 PM

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ವಿವಾದದಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಹಾಡೊಂದರಲ್ಲಿ ರಚಿತಾ ತುಂಬಾ ಹಾಟ್ ಆಗಿ ನಟಿಸಿರುವ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ರಚ್ಚು ಕೂಡ ಬೇಸರ ಹೊರಹಾಕಿದ್ದರು.

ಇದೇ ವಿಷ್ಯವಾಗಿ ಐ ಲವ್ ಯೂ ಸಿನಿಮಾ ಸದ್ದು ಮಾಡ್ತಿದೆ. ಹೀಗಿರುವಾಗ, ಸಿನಿಮಾದ ಕಲೆಕ್ಷನ್ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ, ಉಪ್ಪಿ ಚಿತ್ರದ ಗಳಿಕೆ ಬಗ್ಗೆ ಸರ್ಪ್ರೈಸ್ ಸುದ್ದಿ ಚರ್ಚೆಯಾಗ್ತಿದೆ.

ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ದೊಡ್ಡ ಸುದ್ದಿಗಳಿವು.!

ಜೂನ್ 14 ರಂದು ತೆರೆಕಂಡಿದ್ದ ಐ ಲವ್ ಯೂ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿತ್ತು ಎನ್ನಲಾಗಿದೆ. ಸದ್ಯ ಎರಡು ವಾರಗಳನ್ನ ಮುಗಿಸಿ ಮುನ್ನುಗ್ಗುತ್ತಿರುವ ಐ ಲವ್ ಯೂ ಸಿನಿಮಾ 21 ಕೋಟಿ ಬಾಚಿಕೊಂಡಿದೆ ಎಂಬ ಟಾಕ್ ಗಾಂಧಿನಗರದಲ್ಲಿ ಕೇಳಿ ಬಂದಿದೆ.

ಕರ್ನಾಟಕ ಹಾಗೂ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಐ ಲವ್ ಯೂ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ವಿದೇಶದಲ್ಲೂ ಮಿಂಚಲು ಸಜ್ಜಾಗಿದೆ. ಹೀಗಾಗಿ, ನಿರ್ಮಾಪಕ ಕಮ್ ನಿರ್ದೇಶಕ ಆರ್ ಚಂದ್ರು ಫುಲ್ ಖುಷ್ ಆಗಿದ್ದಾರಂತೆ.

ಐ ಲವ್ ಯೂ ಚಿತ್ರ ನೋಡಿ ರಚಿತಾ ರಾಮ್ ತಾಯಿ ಹೇಳಿದ್ದೇನು?

ಈ ಮಧ್ಯೆ ತಮಿಳಿನಲ್ಲೂ ಐ ಲ್ ಯೂ ಸಿನಿಮಾದ ರೀಮೇಕ್ ಗೆ ಬೇಡಿಕೆ ಹೆಚ್ಚಿದ್ದು, ಈ ವಾರಾಂತ್ಯಕ್ಕೆ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಲಿದೆ ಎಂಬ ಅಂದಾಜು ಹಾಕಲಾಗಿದೆ.

   
 
ಹೆಲ್ತ್