Back
Home » ಬಾಲಿವುಡ್
ಭಾರತದ ಮೊದಲ ಫೀಲ್ಡ್ ಮಾರ್ಷಲ್ ಪಾತ್ರದಲ್ಲಿ 'ಉರಿ' ನಟ ವಿಕ್ಕಿ ಕೌಶಲ್
Oneindia | 27th Jun, 2019 01:11 PM
 • ಭಾರತದ ಮೊದಲ ಫೀಲ್ಡ್ ಮಾರ್ಷಲ್

  ಭಾರತದ ಮೊದಲ ಫೀಲ್ಡ್ ಮಾರ್ಷಲ್ ಆಗಿದ್ದ ಸ್ಯಾಮ್ ಮಾಣಿಕ್ ಶಾ ಅವರ ಜೀವನ ಆಧಾರಿತ ಕಥೆಯನ್ನ ಸಿನಿಮಾ ಮಾಡ್ತಿದ್ದು, ಸ್ಯಾಮ್ ಅವರ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸ್ಯಾಮ್ ಎಂದೇ ಹೆಸರಿಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.


 • ನಿರ್ಭೀತ ದೇಶಭಕ್ತನ ಪಾತ್ರ ನನಗೆ ಹೆಮ್ಮೆ ಇದೆ

  ನಿರ್ಭೀತ ದೇಶಭಕ್ತ, ಭಾರತದ ಮೊದಲ ಫಿಲ್ಡ್ ಮಾರ್ಷಲ್ ಅಧಿಕಾರಿ ಸ್ಯಾಮ್ ಮಾಣಿಕ್ ಶಾ ಅವರ ಪಾತ್ರದಲ್ಲಿ ನಟಿಸುತ್ತಿರುವ ಬಗ್ಗೆ ಬಹಳ ಗೌರವ ಮತ್ತು ಹೆಮ್ಮೆ ತಂದಿದೆ. ಈ ಅವಕಾಶ ನನಗೆ ಸಿಕ್ಕಿದ್ದಕ್ಕಾಗಿ ಭಾವುಕನಾಗಿದ್ದೇನೆ'' ಎಂದು ವಿಕ್ಕಿ ಕೌಶಲ್ ಸಂತಸ ಹಂಚಿಕೊಂಡಿದ್ದಾರೆ. ಇಂದು ಸ್ಯಾಮ್ ಮಾಣಿಕ್ ಶಾ ಅವರ ಪುಣ್ಯ ಸ್ಮರಣೆ. ಹಾಗಾಗಿ, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ನೆನಪಿಸಿಕೊಂಡಿದ್ದಾರೆ.

  ಉರಿ ಖ್ಯಾತಿಯ ನಟ ನವ್ತೇಜ್ ಹಂಡಲ್ ನಿಧನ


 • ಮಾಣಿಕ್ ಶಾ ಬಗ್ಗೆ ಸಣ್ಣ ವಿವರ

  ಭಾರತ ಸೇನೆಯ ಮಹಾನ್ ದಂಡನಾಯಕರಾಗಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ 1914ರ ಏಪ್ರಿಲ್ 3ರಂದು ಅಮೃತಸರದಲ್ಲಿ ಜನಿಸಿದರು. ಭಾರತದ ಪ್ರಥಮ ಫೀಲ್ಡ್ ಮಾರ್ಷಲ್. 1971ರಲ್ಲಿ ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಭಾರತ - ಪಾಕ್ ನಡುವಿನ ಯುದ್ಧದಲ್ಲಿ ಭಾರತದ ವಿಜಯದ ರೂವಾರಿ. ಎರಡನೇ ವಿಶ್ವಮಹಾಯುದ್ಧದಲ್ಲಿ ಹೋರಾಡಿ ಶೌರ್ಯ ಪಶಸ್ತಿಗೆ ಭಾಜನರಾಗಿದ್ದವರು. ಭಾರತ ಸೇನೆಯ ಅತ್ಯುನ್ನತ ಹುದ್ದೆ ಫೀಲ್ಡ್ ಮಾರ್ಷಲ್ ಗೌರವ ಪಡೆದ ಪ್ರಥಮರಿವರು.


 • ಮೂರು ಸಿನಿಮಾ ಟೆಕ್ ಆನ್ ಆಗಿದೆ

  ಉರಿ ಸಿನಿಮಾದ ಬಳಿಕ ವಿಕ್ಕಿ ಕೌಶಲ್ ಅಭಿನಯದ ಯಾವ ಚಿತ್ರವೂ ರಿಲೀಸ್ ಆಗಿಲ್ಲ. ಸ್ಯಾಮ್ ಸಿನಿಮಾ ಈಗ ಘೋಷಣೆಯಾಗಿದೆ. ಅದಕ್ಕೂ ಮುಂಚೆ ನಿರ್ಮಾಪಕ ಕರಣ್ ಜೋಹರ್ ನಿರ್ಮಾಣದ 'ತಖ್ತ್' ಚಿತ್ರದಲ್ಲಿ ನಟಿಸಿದ್ದಾರೆ. ಆಲಿಯಾ ಭಟ್, ಅನಿಲ್ ಕಪೂರ್, ಜಾಹ್ನವಿ ಕಪೂರ್, ಕರೀನಾ ಕಪೂರ್, ರಣ್ವೀರ್ ಸಿಂಗ್, ಭೂಮಿ ಪಡ್ನೆಕರ್ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆ ಸೂರ್ಜಿತ್ ಸರ್ಕಾರ್ ಅವರ ಸರ್ದಾರ್ ಉದಮ್ ಸಿಂಗ್ ಸಿನಿಮಾನೂ ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸೂಪರ್ ಹಿಟ್ 'ಉರಿ' ಚಿತ್ರದ ಬಳಿಕ ನಟ ವಿಕ್ಕಿ ಕೌಶಲ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ತನ್ನದೇ ವಿಶಿಷ್ಟವಾದ ಬೌಂಡರಿ ನಿರ್ಮಿಸಿಕೊಂಡಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ವಿಕ್ಕಿ ಚಿತ್ರಕ್ಕೆ ಡಿಮ್ಯಾಂಡ್ ಇದೆ ಎಂದು ತೋರಿಸಿಕೊಟ್ಟಿದ್ದಾರೆ.

ಮಸಾನ್, ಸಂಜು, ರಾಝಿ ಅಂತಹ ಚಿತ್ರಗಳಲ್ಲಿ ನಟಿಸಿದ್ದ ವಿಕ್ಕಿ ಕೌಶಲ್ ಉರಿ ಸಿನಿಮಾ ಮೂಲಕ ದೇಶದ ಎಲ್ಲ ಭಾಷೆಯ ಜನರಿಗೂ ಪರಿಚಯ ಆದರು. 'ಉರಿ' ಸಿನಿಮಾ ನಂತರ ಯಾವ ಚಿತ್ರ ಮಾಡ್ತಿದ್ದಾರೆ ಎಂಬ ಕುತೂಹಲ ಕಾಡ್ತಿತ್ತು.

Uri Movie Review: ದೇಶಭಕ್ತಿ ಮತ್ತು ಸೇಡಿನ ಜ್ವಾಲೆ

ಇದೀಗ, ರಾಝಿ ನಿರ್ದೇಶಕಿ ಮೇಘನಾ ಗುಲ್ಜಾರ್ ಜೊತೆ ಹೊಸ ಸಿನಿಮಾ ಮಾಡ್ತಿದ್ದು, ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಉರಿ ಯಶಸ್ಸಿನ ನಂತರ ಮತ್ತೊಮ್ಮೆ ಆರ್ಮಿ ಆಫೀಸರ್ ಆಗಿ ಸೇನೆ ಸೇರಿದ್ದಾರೆ ವಿಕ್ಕಿ ಕೌಶಲ್. ಅಷ್ಟಕ್ಕೂ ಯಾವುದು ಆ ಚಿತ್ರ? ಮುಂದೆ ಓದಿ.....

   
 
ಹೆಲ್ತ್