Back
Home » ಆರೋಗ್ಯ
ಕೂದಲು ತ್ವಚೆ ಮತ್ತು ತೂಕ ಇಳಿಕೆಗೆ ಅಲೋವೆರಾದ ಪ್ರಯೋಜನಗಳು
Boldsky | 28th Jun, 2019 05:48 PM

ದಪ್ಪನೆಯ ಕೋಡುಗಳಿರುವ ಲೋಳೆಸರ ಅಥವಾ ಆಲೋವೆರಾ ಎಂಬ ಈ ಹಸಿರು ಸಸ್ಯ ಕೇವಲ ಅಲಂಕಾರಿಕ ಮಾತ್ರವಲ್ಲ, ಹಲವಾರು ಪೋಷಕಾಂಶಗಳನ್ನು ಹೊಂದಿರುವ ಹಾಗೂ ಕೂದಲು ಮತ್ತು ತ್ವಚೆಗೆ ಅದ್ಭುತ ಎನಿಸುವ ಪೋಷಣೆಯನ್ನು ಒದಗಿಸುವ ಸಸ್ಯವೂ ಆಗಿದೆ. ತ್ವಚೆಗೆ ಹೊಸತನ, ಕಾಂತಿ ಹಾಗೂ ಸಹಜಸೌಂದರ್ಯವನ್ನು ನೀಡುವ ಲೋಳೆಸರ ತೂಕ ಇಳಿಕೆಯಲ್ಲಿಯೂ ನೆರವಾಗುವ ಮೂಲಕ ಆರೋಗ್ಯ ಮತ್ತು ಸೌಂದರ್ಯವನ್ನು ವೃದ್ಧಿಸುತ್ತದೆ. ಲೋಳೆಸರದ ರಸ ಸ್ನಿಗ್ಧವಾಗಿದ್ದರೂ ಇದರಲ್ಲಿ ಶೇಖಡಾ ತೊಂಭತ್ತಾರರಷ್ಟು ನೀರೇ ಇದೆ. ಈ ಸ್ನಿಗ್ಧ ದ್ರವವನ್ನು ತ್ವಚೆಗೆ ಹಚ್ಚಿಕೊಂಡಾಗ ಈ ದ್ರವ ಅತ್ಯುತ್ತಮ ತೇವಕಾರಕ, ನೈಸರ್ಗಿಕ ಸ್ವಚ್ಛಕಾಕರ ಹಾಗೂ ಚೈತನ್ಯಕಾಕರ ದ್ರವವಾಗಿ ಪರಿಣಮಿಸುತ್ತದೆ.

ಸೌಂದರ್ಯಕ್ಕಾಗಿ ಲೋಳೆಸರ

ತ್ವಚೆ ಆರೋಗ್ಯಕರವಾಗಿರಬೇಕಾದರೆ ಕೆಲವಾರು ಪೋಷಕಾಂಶಗಳು ಸತತವಾಗಿ ಪೂರೈಕೆಯಾಗುತ್ತಲೇ ಇರಬೇಕಾಗುತ್ತದೆ. ಲೋಳೆಸರದಂತಹ ಸೂಕ್ತ ಪೋಷಣೆ ನೀಡುವ ಸಾಮಾಗ್ರಿಯ ಮೂಲಕ ಈ ಆರೈಕೆ ಅತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತದೆ. ಈ ಶಮನಕಾರಿ ಸ್ನಿಗ್ಧ ದ್ರವವನ್ನು ತ್ವಚೆಗೆ ಹಚ್ಚಿಕೊಂಡಾಗ ತ್ವಚೆಗೆ ತಣ್ಣನೆಯ ಅನುಭವ ದೊರಕುವ ಜೊತೆಗೇ ಚರ್ಮಕ್ಕೆ ನಿರಾಳತೆ ಹಾಗೂ ಆರಾಮದಾಯಕ ಅನುಭವ ದೊರಕುತ್ತದೆ. ಅಲ್ಲದೇ ಈ ನೈಸರ್ಗಿಕ ಸಾಮಾಗ್ರಿಗೆ 'ಅದ್ಭುತ ಮೂಲಿಕೆ'ಎಂಬ ಹಣೆಪಟ್ಟಿ ದೊರಕಲು ಈ ಕೆಳಗಿನ ಗುಣಗಳು ನೆರವಾಗುತ್ತವೆ:

*ಗಾಯಗಳನ್ನು ಮಾಗಿಸಲು ನೆರವಾಗುತ್ತದೆ

*ಚಿಕ್ಕ ಪುಟ್ಟ ತರಚುಗಾಯಗಳಿಗೂ ಸೂಕ್ತವಾಗಿದೆ

*ಒಣಚರ್ಮಕ್ಕೆ ಆರ್ದ್ರತೆ ಒದಗಿಸುತ್ತದೆ

*ಗಂಭೀರವಾದ ಸುಟ್ಟ ಗಾಯಗಳಿಗೂ ಹಚ್ಚಬಹುದಾಗಿದೆ

*ತ್ವಚೆಗೆ ಉತ್ತಮ ಪೋಷಣೆ ಒದಗಿಸಿ ವೃದ್ದಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ.

*ಎಲ್ಲಾ ಬಗೆಯ ತ್ವಚೆಗಳಿಗೆ ಸೂಕ್ತವಾಗಿದೆ.

*ವರ್ಷದ ಯಾವುದೇ ಸಮಯದಲ್ಲೂ ಬಳಕೆಗೆ ಸೂಕ್ತವಾಗಿದೆ

*ಈ ಮೂಲಿಕೆಯನ್ನು ಸ್ನಿಗ್ಧದ್ರವ, ಲೇಪ ಅಥವಾ ಮೂಲರೂಪದಲ್ಲಿಯೂ ಬಳಸಬಹುದು.

Most Read: ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ತೂಕ ಇಳಿಕೆಗೆ ಲೋಳೆಸರ

ಈ ಅದ್ಭುತ ಮೂಲಿಕೆ ಆಹಾರದ ರೂಪದಲ್ಲಿಯೂ ಸೇವಿಸಬಹುದಾಗಿದ್ದು ಅಮೈನೋ ಆಮ್ಲಗಳು, ಖನಿಜಗಳು ಮತ್ತು ವಿಟಮಿನ್ನುಗಳಿಂದ ಸಮೃದ್ದವಾಗಿದೆ. ಇವೆಲ್ಲವೂ ತೂಕ ಇಳಿಕೆಗೆ ಪೂರಕವಾಗಿವೆ. ವಾಸ್ತವವಾಗಿ ಇದು ಅತ್ಯಂತ ಕಹಿಯಾದ ರುಚಿಯನ್ನು ಹೊಂದಿದ್ದರೂ ಸೇವನೆಗೆ ಆರೋಗ್ಯಕರ ದ್ರವವಾಗಿದ್ದು ಆರೋಗ್ಯಪೇಯದ ರೂಪದಲ್ಲಿ ಸೇವಿಸಬಹುದು.

ಈ ಆರೋಗ್ಯಪೇಯವನ್ನು ನೀವೇ ಸ್ವತಃ ತಯಾರಿಸಿಕೊಳ್ಳಬಹುದು. ವಿಧಾನ ಇಲ್ಲಿದೆ:

*ಒಂದು ಲೋಳೆಸರದ ಕೋಡನ್ನು ಸೀಳಿ ಒಳಗಿನ ತಿರುಳನ್ನು ಸಂಗ್ರಹಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ.

*ನಿಮ್ಮ ನೆಚ್ಚಿನ ಹಣ್ಣಿನ ರಸಗಳೊಂದಿಗೆ ಬೆರೆಸಿ. ಲೋಳೆಸರದ ಎಲೆಗಳನ್ನೂ ಬೆರೆಸಬಹುದು.

*ಈ ಎಲ್ಲವನ್ನೂ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ಚೆನ್ನಾಗಿ ಕಡೆಯಿರಿ. ಬಳಿಕ ಸೋಸಿ ದ್ರವವನ್ನು ಸಂಗ್ರಹಿಸಿ.

*ಈ ದ್ರವ ಕಹಿಯಾಗಿರುವ ಕಾರಣ ಕೊಂಚ ಜೇನನ್ನು ಬೆರೆಸಬಹುದು.

Most Read: ಮನೆಯಲ್ಲಿಯೇ ಸರಳವಾಗಿ 'ಅಲೋವೆರಾ ಜ್ಯೂಸ್ ಮಾಡುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್

ಕೂದಲ ಆರೋಗ್ಯಕ್ಕಾಗಿ ಲೋಳೆಸರ

ಕೂದಲು ಮತ್ತು ಉಗುರುಗಳಿಗೆ ದೃಢತೆ ನೀಡುವ ಅಂಶವೆಂದರೆ ಕೆರಾಟಿನ್. ಈ ಅಂಗಾಂಶವೇ ಕೂದಲಿನ ಪ್ರೋಟೀನ್ ಸಹಾ ಆಗಿದೆ. ಲೋಳೆಸರದಲ್ಲಿಯೂ ಈ ಕೆರಾಟಿನ್ ಅನ್ನೇ ಹೋಲುವಂತಹ ಪೋಷಕಾಂಶವಿದೆ. ಈ ಪೋಷಕಾಂಶ ಕೂದಲಿಗೆ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತದೆ. ಕೂದಲು ಹೆಚ್ಚು ಸೆಳೆತದ ಗುಣ ಪಡೆಯುತ್ತದೆ ಹಾಗೂ ಸುಲಭವಾಗಿ ತುಂಡಾಗದೇ ಇರಲು ಸಾಧ್ಯವಾಗುತ್ತದೆ. ಅಲ್ಲದೇ ಚರ್ಮದ ಬೆವರುಗ್ರಂಥಿಗಳಿಗೆ ಸೋಂಕು ಉಂಟಾಗುವ seborrheic dermatitis ಎಂಬ ಕಾಯಿಲೆಗೆ ಲೋಳೆಸರ ಅತ್ಯುತ್ತಮ ಔಷಧಿಯೂ ಆಗಿದೆ. ಈ ತೊಂದರೆ ಸಾಮಾನ್ಯವಾಗಿ ಮಕ್ಕಳ ತ್ವಚೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೋಂಕು ಇರುವ ಲಕ್ಷಣಗಳು ಕಂಡು ಬಂದಾಗ ಈ ಭಾಗದ ಮೇಲೆ ಲೋಳೆಸರದ ದ್ರವವನ್ನು ನೇರವಾಗಿ ಹಚ್ಚಿಕೊಳ್ಳುವ ಮೂಲಕ ಉರಿ ಕಡಿಮೆಯಾಗುತ್ತದೆ ಮತ್ತು ಈ ಸೋಂಕಿನ ಮೂಲಕ ಎದುರಾಗಿದ್ದ ಉರಿ ಮತ್ತು ಕೆಂಪಕಾಗಿರುವ ಚರ್ಮವನ್ನು ಶಮನಗೊಳಿಸಿ ಈ ಕಾಯಿಲೆಯನ್ನು ಗುಣಪಡಿಸುತ್ತದೆ.

Most Read: ಕೂದಲುದುರುವ ಸಮಸ್ಯೆಗೆ 'ಅಲೋವೆರಾ ಹೇರ್' ಪ್ಯಾಕ್

ಕೂದಲಿಗೆ ಹಚ್ಚಿಕೊಳ್ಳಬಹುದಾದ ಲೇಪವನ್ನು ಸ್ವತಃ ಹೀಗೆ ತಯಾರಿಸಿ

ಸಮಪ್ರಮಾಣದಲ್ಲಿ ಈಗತಾನೇ ಪ್ರತ್ಯೇಕಿಸಿದ ಲೋಳೆಸರ ಮತ್ತು ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ ಗಾಜಿನ ಜಾಡಿಯಲ್ಲಿ ಸಂಗ್ರಹಿಸಿ. ಈ ಲೇಪವನ್ನು ದಪ್ಪನಾಗಿ ಕೂದಲಿಗೆ ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತೊಳೆದುಕೊಳ್ಳಿ.ಲೋಳೆಸರ ಹೆಚ್ಚಿನ ಆರೈಕೆ ಬೇಡದೇ ಸುಲಭವಾಗಿ ಮರಳುಮಿಶ್ರಿತ ಮಣ್ಣಿನಲ್ಲಿ ಬೆಳೆಯುವ ಸಸ್ಯವಾಗಿದ್ದು ಭಾರತದ ಎಲ್ಲಾ ಭಾಗಗಳಲ್ಲಿಯೂ ಬೆಳೆಯುತ್ತದೆ. ಬೇಸಿಗೆಯ ದಿನಗಳಲ್ಲಿ ಬಿಸಿಲಿನ ಝಳಕ್ಕೆ ತತ್ತರಿಸುವ ಚರ್ಮಕ್ಕೆ ಹಚ್ಚಿಕೊಳ್ಳಲು ಲೋಳೆಸರ ಮತ್ತು ಆಲಿವ್ ಎಣ್ಣೆಯ ಮಿಶ್ರಣವೂ ಉತ್ತಮವಾಗಿದ್ದು ಬಿಸಿಲಿನಿಂದ ತಂಪನ್ನು ಒದಗಿಸುತ್ತದೆ.

   
 
ಹೆಲ್ತ್