Back
Home » ಬಾಲಿವುಡ್
ಚಿತ್ರರಂಗಕ್ಕೆ ಗುಡ್ ಬೈ ಹೇಳಿದ 'ದಂಗಲ್' ನಟಿ ಝೈರಾ
Oneindia | 30th Jun, 2019 04:51 PM

ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿನಯದ ಸೂಪರ್ ಹಿಟ್ 'ದಂಗಲ್' ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟ ನಟಿ ಝೈರಾ ವಾಸಿಂ ಚಿಕ್ಕ ವಯಸ್ಸಿನಲ್ಲೆ ಖ್ಯಾತಿಗಳಿಸಿದವರು. 'ದಂಗಲ್' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ನಟಿ ಝೈರಾ ಈಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ.

ಸುಮಾರು ಐದು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಕಾಶ್ಮಿರಿ ಮೂಲದ ಝೈರಾ ಚಿತ್ರರಂಕ್ಕೆ ಗುಡ್ ಬೈ ಹೇಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಚಿತ್ರ ಜಗತ್ತು ನನಗೆ ಸಂತಸ ತಂದಿಲ್ಲ. ನಂಬಿಕೆ ಹಾಗೂ ಧರ್ಮದ ಮೇಲೆ ಹಸ್ತಕ್ಷೇಪ ಮಾಡುತ್ತದೆ. ಈ ಕಾರಣದಿಂದ ನಾನು ಚಿತ್ರರಂಗ ತೊರಿಯುವ ನಿರ್ಧಾರ ಮಾಡಿದ್ದೀನಿ" ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನ ಈ ಖ್ಯಾತ ನಟ ಯಾರು ಗೊತ್ತಾ?

"ನಾನು ಇಲ್ಲಿಗೆ ಪರಿಪೂರ್ಣವಾಗಿ ಹೊಂದಿಕೆಯಾಗುತ್ತರು, ಇಲ್ಲಿ ನಾನು ಉಳಿಯಲಾರೆ. ಐದು ವರ್ಷದ ಹಿಂದೆ ನಾನು ಕೈ ಗೊಂಡ ನಿರ್ಧಾರ ನನ್ನ ಇಡೀ ಬದುಕನ್ನೆ ಬದಲಾಯಿತು. ನಾನು ಬಾಲಿವುಡ್ ನಲ್ಲಿ ಹೆಜ್ಜೆ ಇಟ್ಟಾಗ ಅಪಾರ ಜನಪ್ರಿಯತೆ ಸಿಕ್ಕಿತು. ಸಾರ್ವಜನಿಕರನ್ನು ಗಮನ ಸೆಳೆಯುವ ಪ್ರಧಾನ ಆಕರ್ಷಣೆ ಆಗಿದ್ದೆ. ಇದರಿಂದ ಯುವಜನತೆಗೆ ಮಾದರಿಯಾಗಿ ಗುರುತಿಸಲಾಯಿತು" ಎಂದು ದೀರ್ಘವಾದ ಬರವಣಿಗೆಯ ಮೂಲಕ ಚಿತ್ರರಂಗ ಬಿಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ದಂಗಲ್ ಚಿತ್ರದಲ್ಲಿ ಗೀತಾ ಪೋಗತ್ ಪಾತ್ರದಲ್ಲಿ ಮಿಂಚಿದ್ದರು ಝೈರಾ. ಆನಂತರ 'ಸೀಕ್ರೆಟ್ ಸೂಪರ್ ಸ್ಟಾರ್' ಮತ್ತು 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೀಗ ದಿಢೀರನೆ ಚಿತ್ರರಂಗ ತೊರೆಯುವ ನಿರ್ಧಾರ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.

   
 
ಹೆಲ್ತ್