Back
Home » ಬಾಲಿವುಡ್
ಅಕೌಂಟ್ ಹ್ಯಾಕ್ ಆಗಿಲ್ಲ : ಝೈರಾ ಪೋಸ್ಟ್ ಬಗ್ಗೆ ಮ್ಯಾನೇಜರ್ ಸ್ಪಷ್ಟನೆ
Oneindia | 1st Jul, 2019 07:46 PM

ಬಾಲಿವುಡ್ ನ ಸೂಪರ್ ಹಿಟ್ 'ದಂಗಲ್' ಚಿತ್ರದ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಝೈರಾ ವಾಸಿಂ ಹೇಳಿಕೆ ಈಗ ಭಾರಿ ಚರ್ಚೆಯಾಗುತ್ತದೆ. ಧರ್ಮದ ಜೊತೆಗಿನ ಸಂಬಂಧಕ್ಕೆ ಚಿತ್ರರಂಗ ಅಡ್ಡಿ ಬರುತ್ತಿದೆ ಎಂದು ಚಿತ್ರರಗದಿಂದನೆ ದೂರ ಸರಿಯುವ ನಿರ್ಧಾರ ಮಾಡಿ ಝೈರಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಒಂದನ್ನು ಹಾಕಿದ್ದಾರೆ.

ಝೈರಾ ಹೇಳಿಕೆಯಿಂದ ಶಾಕ್ ಆಗಿರುವ ಬಾಲಿವುಡ್, ಝೈರಾ ಬಳಸುತ್ತಿದ್ದ ಸಾಮಾಜಿಕ ಜಾಲತಾಣಗಳ ಅಕೌಂಟ್ ಹ್ಯಾಕ್ ಆಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗುತ್ತಿತ್ತು. ಆದ್ರೀಗ ಈ ಬಗ್ಗೆ ಝೈರಾ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಝೈರಾ ಮ್ಯಾನೇಜರ್ ತುಹಿನ್ ಮಿಶ್ರ "ಝೈರಾ ಅಕೌಂಟ್ ಹ್ಯಾಕ್ ಆಗಿಲ್ಲ, ಈ ಪೋಸ್ಟನ್ನು ಮಾಡಿದ್ದು ಝೈರಾ ಅವರೆ" ಎಂದು ಸ್ಪಷ್ಟಪಡಿಸಿದ್ದಾರೆ.

ಚಿತ್ರರಂಗ ಬಿಡುವ ನಿರ್ಧಾರದ ಬಗ್ಗೆ ಝೈರಾ ವಾಸಿಂ ಭಾನುವಾರ( ಜೂನ್ 30) ಹೇಳಿಕೊಂಡಿದ್ದಾರೆ. ಅವರ ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾ ಗ್ರಾಮ್ ನಲ್ಲಿ ಸುದೀರ್ಘವಾದ ಪೋಸ್ಟ್ ಅನ್ನು ಬರೆದು ಅಪ್ ಲೋಡ್ ಮಾಡಿದ್ದಾರೆ.

ಐದು ವರ್ಷಗಳಿಂದ ಬಾಲಿವುಡ್ ನಲ್ಲಿ ಸಕ್ರೀಯವಾಗಿರುವ ಝೈರಾ ಬೆರೆದುಕೊಂಡಿರುವ ಫೋಸ್ಟ್ ನಲ್ಲಿ "ನಾನು ನಿಧಾನವಾಗಿ ನನಗೆ ಗೊತ್ತಿಲ್ಲದಂತೆ ಇಮಾನ್ ನಿಂದ ಹೊರ ಬಂದಿದ್ದೀನಿ. ನಾನು ಕೆಲಸ ಮಾಡುವ ವಾತಾವರಣ ನನ್ನ ನಂಬಿಕೆಗೆ ಅಡ್ಡಿ ಬರುತ್ತಿದೆ. ಇದು ನನಗೆ ಧರ್ಮದ ಜೊತೆ ಮತ್ತು ಅಲ್ಲಾಹ್ ಜೊತೆ ಇರುವ ಸಂಬಂಧ ಹಾಳು ಮಾಡುತ್ತಿದೆ. ಖುರಾನ್ ನಲ್ಲಿ ಶಾಂತಿ ಕಂಡುಕೊಂಡಿದ್ದೀನಿ" ಅಂತ ಝೈರಾ ಬರೆದುಕೊಂಡಿದ್ದಾರೆ.

ಆದ್ರೀಗ ಇದು ಝೈರಾನೇ ಮಾಡಿರುವ ಪೋಸ್ಟ್ ಅಂತ ಪಕ್ಕ ಆದ ಮೇಲೆ ಝೈರಾ ವಾಸಿಂ ಹೀಗೆ ಬರೆದುಕೊಳ್ಳಲು ಬೇರೆ ಏನಾದರು ಕಾರಣವಿದೆಯ, ಅಥವಾ ನಿಜಕ್ಕು ಧರ್ಮ ಅಡ್ಡಿಯಾಗುತ್ತಿದೆಯೇ ಎನ್ನುವ ಬಗ್ಗೆ ಝೈರಾನೆ ಸ್ಪಷ್ಟಪಡಿಸಬೇಕು. ಝೈರಾ ಹೇಳಿಕೆಗೆ ಅನೇಕರು ವಿರೋದ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಝೈರಾ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.

   
 
ಹೆಲ್ತ್