Back
Home » ಗಾಸಿಪ್
ಮಾರಿ ಕಣ್ಣು ಹೋರಿ ಮ್ಯಾಗೆ... ದರ್ಶನ್ ಕಣ್ಣು ಯಾರ ಮ್ಯಾಗೆ..?
Oneindia | 2nd Jul, 2019 11:17 AM
 • ನಿಖಿಲ್ ಗೆ ದರ್ಶನ್ ಚಾಲೆಂಜ್ ?

  ನಟ ನಿಖಿಲ್ ಕುಮಾರ್ ಗೆ ನಟ ದರ್ಶನ್ ಚಾಲೆಂಜ್ ಹಾಕಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಕಾರಣ 'ಕುರುಕ್ಷೇತ್ರ' ಸಿನಿಮಾದ ವಿಚಾರವಾಗಿ ದರ್ಶನ್ ಹಾಗೂ ನಿಖಿಲ್ ಮಧ್ಯೆ ಮನಸ್ತಾಪ ಬಹುದಿನಗಳಿಂದ ಇತ್ತು. ಅಷ್ಟೇ ಅಲ್ಲದೆ, ಮಂಡ್ಯ ಚುನಾವಣೆಯಲ್ಲಿ ಅದು ಜಾಸ್ತಿಯಾಯ್ತು. ಹೀಗಿರುವಾಗ, ಸಿನಿಮಾದ ಬಿಡುಗಡೆ ಸಮಯದಲ್ಲಿ ಮತ್ತೆ ಇಬ್ಬರ ನಡುವಿನ ಮನಸ್ತಾಪ ಚಾಲೆಂಜ್ ಹಾಕಲು ಕಾರಣ ಆಗಿರಬಹುದು.


 • ಮುನಿರತ್ನಗೆ ದರ್ಶನ್ ಸವಾಲು ?

  'ಕುರುಕ್ಷೇತ್ರ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದ ಪಾಸ್ ನಲ್ಲಿ ದರ್ಶನ್ ಫೋಟೋ ಹಾಕಿಲ್ಲ. ಈ ವಿಚಾರವಾಗಿ ನಿನ್ನೆ (ಸೋಮವಾರ) ದರ್ಶನ್ ಅಭಿಮಾನಿಗಳು ಬೇಸರ ಆಗಿದ್ದರು. ದರ್ಶನ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಸಮಾಧಾನ ಮಾಡಿದ್ದರು. ಮತ್ತೊಂದು ಕಡೆ ಚಿತ್ರತಂಡ ದರ್ಶನ್ ಅವರನೇ ನಿರ್ಲಕ್ಷಾ ಮಾಡುತ್ತಿದೆ ಎನ್ನುವ ಗಾಸಿಪ್ ಇದೆ. ಹಾಗಾಗಿ, ದರ್ಶನ್ ಟ್ವೀಟ್ ಮುನಿರತ್ನ ಮೇಲೆ ಕೋಪವೂ ಆಗಿರಬಹುದು.


 • ಇತರ ನಟರ ಮೇಲೆ ಬೇಸರನಾ?

  ದರ್ಶನ್ ತಮ್ಮ ಟ್ವೀಟ್ ನಲ್ಲಿ ಸ್ಪಷ್ಟವಾಗಿ ''ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್'' ಎಂದು ಹೇಳಿದ್ದಾರೆ. ಹೀಗಿರುವಾಗ, ಸ್ಟಾರ್ ನಟ ದರ್ಶನ್ ಚಾಲೆಂಜ್ ಹಾಕುತ್ತಿರುವುದು ಕನ್ನಡದ ಬೇರೆ ಯಾವ ನಟ ಕೂಡ ಆಗಿರಬಹುದು. ಹಾಗಾದರೆ, ಆ ನಟ ಯಾರು.?


 • ಪ್ರೀತಿಯ ಚಾಲೆಂಜ್ ಆಗಿರುತ್ತಾ ?

  ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಫಿಟ್ನೆಸ್ ಚಾಲೆಂಜ್ ಸೇರಿದಂತೆ ಬೇರೆ ಬೇರೆ ರೀತಿಯ ಪ್ರೀತಿಯ ಚಾಲೆಂಜ್ ಗಳನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. 'ರಾಬರ್ಟ್' ಚಿತ್ರದ ವರ್ಕೌಟ್ ನಲ್ಲಿ ನಿರತವಾಗಿರುವ ಡಿ ಬಾಸ್ ಇನ್ನೊಬ್ಬ ಸೆಲೆಬ್ರಿಟಿ ಗೆ ಪ್ರೀತಿಯ ಚಾಲೆಂಜ್ ಹಾಕುತ್ತಾರೆಯೇ..? ತಿಳಿದಿಲ್ಲ.


 • ಮಧ್ಯಾಹ್ನ ಎಲ್ಲದಕ್ಕೂ ಉತ್ತರ ಸಿಗುತ್ತೆ

  ನಟ ದರ್ಶನ್ ಟ್ವೀಟ್ ನೋಡಿದ ಮೇಲೆ ಇದು ಯಾರ ಬಗ್ಗೆ ಎನ್ನುವ ದೊಡ್ಡ ಪ್ರಶ್ನೆ ಇದೆ. ಅದಕ್ಕೆ ನಾವು ಈ ರೀತಿ ಕೆಲವರ ಹೆಸರುಗಳನ್ನು ನೀಡಬಹುದು. ಆದರೆ, ದರ್ಶನ್ ಯಾರಿಗೆ ಸವಾಲು ಹಾಕುತ್ತಿದ್ದಾರೆ ಅಂತ ಅವರೇ ತಿಳಿಸಬೇಕು. ಜಾಸ್ತಿ ಕಾಯಿಸದೆ ಇಂದು ಮಧ್ಯಾಹ್ನವೇ ತಮ್ಮ ಓಪನ್ ಚಾಲೆಂಜ್ ಎನ್ನುವುದನ್ನು ದರ್ಶನ್ ತಿಳಿಸುತ್ತಿದ್ದಾರೆ.
ಇಂದು (ಮಂಗಳವಾರ) ಬೆಳ್ಳಗೆ ಎದ್ದು ಫೇಸ್ ಬುಕ್, ಟ್ವಿಟ್ಟರ್ ಓಪನ್ ಮಾಡಿ ನೋಡಿದವರಿಗೆ ಒಂದು ಅಚ್ಚರಿ ಕಾದಿತ್ತು. ನಟ ದರ್ಶನ್ ಮಾಡಿದ ಟ್ವೀಟ್ ಅಭಿಮಾನಿಗಳ ತಲೆಗೆ ಹುಳ ಬಿಡುವಂತೆ ಮಾಡಿತು.

''ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್, ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ.'' ಎಂದು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.

ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ : ದರ್ಶನ್

ದರ್ಶನ್ ಸುಖ ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ಬರೆದುಕೊಳ್ಳುವುದಿಲ್ಲ. ತೀರ ಅಗತ್ಯ ಇದ್ದಾಗ ಮಾತ್ರ ಅವರ ಅದನ್ನು ಬಳಸುತ್ತಾರೆ. ಹೀಗಿರುವಾಗ, ದರ್ಶನ್ ಟ್ವೀಟ್ ಮಾಡಲು ಒಂದು ಪ್ರಮುಖ ಕಾರಣ ಇದ್ದೇ ಇರುತ್ತದೆ.

ದರ್ಶನ್ ನೀಡಿರುವ ಈ ಹೇಳಿಕೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಾಲೆಂಜಿಂಗ್ ಸ್ಟಾರ್ ಯಾರ ಮೇಲೆ ಚಾಲೆಂಜ್ ಮಾಡಿದರು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

'ಕುರುಕ್ಷೇತ್ರ' ಪಾಸ್ ನಲ್ಲಿ ದರ್ಶನ್ ಫೋಟೋನೇ ಇಲ್ಲ : ಅಭಿಮಾನಿಗಳ ಆಕ್ರೋಶ

ಸದ್ಯ, 'ಕುರುಕ್ಷೇತ್ರ' ಸಿನಿಮಾದ ವಿವಾದ ನಡೆಯುತ್ತಿದ್ದು ಇದೇ ವಿಚಾರವಾಗಿ ದರ್ಶನ್ ಚಾಲೆಂಜ್ ಮಾಡಿದ್ದಾರೆ ಎನ್ನುವ ಕುತೂಹಲ ಇದೆ.

ಅಂದಹಾಗೆ, ದರ್ಶನ್ ಚಾಲೆಂಜ್ ಹಾಕಿರುವುದು ಇವರ ಮೇಲೆನಾ? ಎಂದು ಕೆಲವರ ಮೇಲೆ ಅನುಮಾನ ಮೂಡಿದೆ...

   
 
ಹೆಲ್ತ್