Back
Home » ಸೌಂದರ್ಯ
ತ್ವಚೆಯ ಸೌಂದರ್ಯಕ್ಕೆ ಎಳ್ಳೆಣ್ಣೆಯ ಪ್ರಯೋಜನಗಳು ಹಾಗೂ ಬಳಕೆಯ ವಿಧಾನಗಳು
Boldsky | 2nd Jul, 2019 11:36 AM

ತ್ವಚೆಯ ಆರೈಕೆಗೆ ಒಳ್ಳೆಣ್ಣೆ ಉತ್ತಮ ಆಯ್ಕೆಯಾಗಿದೆ ಹಾಗೂ ಹಲವೆ ಬಗೆಯ ಪೋಷಣೆಗಳನ್ನು ಒದಗಿಸುತ್ತದೆ. ಇದರ ಉತ್ತಮ ಗುಣಗಳಿಂದಾಗಿಯೇ ಹಲವಾರು ನಿತ್ಯ ಉಪಯೋಗಿಸುವ ಸೌಂದರ್ಯ ಪ್ರಸಾದನಗಳಲ್ಲಿ ಎಳ್ಳೆಣ್ಣೆಯನ್ನು ಬಳಸಲಾಗುತ್ತದೆ. ವಿಶೇಷವಾಗಿ ತ್ವಚೆಗೆ ಹಚ್ಚಿಕೊಳ್ಳುವ ತೇವಕಾರಕ, ತ್ವಚೆಯ ಕಂಡೀಶನರ್, ಸ್ನಾನದ ಎಣ್ಣೆ ಹಾಗೂ ಮೇಕಪ್ ಪ್ರಸಾದನಗಳಲ್ಲಿ ಎಳ್ಳೆಣ್ಣೆ ಬಳಸಲ್ಪಡುತ್ತದೆ. ಎಳ್ಳೆಣ್ಣೆ ಅತ್ಯುತ್ತಮ ತೇವಕಾರಕ ಹಾಗೂ ತ್ವಚೆಗೆ ಪೋಷಣೆ ಒದಗಿಸುವ ನೈಸರ್ಗಿಕ ಪ್ರಸಾದನವಾಗಿದೆ.

ಪ್ರತಿಯೊಬ್ಬರಿಗೂ ತ್ವಚೆಗೆ ಎದುರಾಗುವ ಒಂದಲ್ಲಾ ಒಂದು ತೊಂದರೆ ಇದ್ದೇ ಇರುತ್ತದೆ. ಮೊಡವೆ, ಬ್ಲಾಕ್ ಹೆಡ್ ಮೊದಲಾದ ಸರಳ ಸಮಸ್ಯೆಗಳಿಗೆ ಎಳ್ಳೆಣ್ಣೆ ಸುಲಭ ಪರಿಹಾರ ಒದಗಿಸುತ್ತದೆ. ಎಳ್ಳೆಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣ ತ್ವಚೆಯ ಮೇಲೆ ಆಗಾಧವಾದ ಪರಿಣಾಮವನ್ನುಂಟುಮಾಡುತ್ತದೆ ಹಾಗೂ ಹೊಸಕಳೆಯನ್ನು ಮೂಡಿಸುತ್ತದೆ. ಅಲ್ಲದೇ ಎಳ್ಳೆಣ್ಣೆಯಲ್ಲಿರುವ ವಿಟಮಿನ್ ಇ ತ್ವಚೆ ಅತ್ಯಂತ ಆರೋಗ್ಯಕರವಾಗಿರಲು ನೆರವಾಗುತ್ತದೆ.

ಹಾಗಾಗಿ, ತ್ವಚೆಯ ಸಾಮಾನ್ಯ ಆರೈಕೆಗಳಿಗೆ ಎಳ್ಳೆಣ್ಣೆಯನ್ನು ಬಳಸುವುದು ಜಾಣತನದ ಕ್ರಮವಾಗಿದ್ದು ಇಂದಿನ ಲೇಖನದಲ್ಲಿ ಎಣ್ಣೆಣ್ಣೆಯ ವಿಭಿನ್ನ ಉಪಯೋಗಗಳನ್ನು ವಿವರಿಸಲಾಗಿದೆ. ಬನ್ನಿ, ಎಳ್ಳೆಣ್ಣೆಯ ಬಳಕೆಯಿಂದ ತ್ವಚೆ ಪಡೆಯಬಹುದಾದ ಪ್ರಯೋಜನಗಳು ಹಾಗೂ ವಿವಿಧ ಚರ್ಮದ ತೊಂದರೆಗಳ ನಿವಾರಣೆಗಾಗಿ ಎಳ್ಳೆಣ್ಣೆ ಬಳಕೆಯ ವಿಧಾನವನ್ನು ಅರಿಯೋಣ.

ಎಳ್ಳೆಣ್ಣೆ ಯಿಂದ ತ್ವಚೆ ಪಡೆಯುವ ಪ್ರಯೋಜನಗಳು:

ಎಳ್ಳೆಣ್ಣೆಯ ಬಳಕೆಯಿಂದ ತ್ವಚೆ ಹಲವಾರು ಬಗೆಯ ಪ್ರಯೋಜನಗಳನ್ನು ಪ್ರಡೆಯುತ್ತದೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:

* ಮೊಡವೆಗಳ ವಿರುದ್ಧ ಹೋರಾಡುತ್ತದೆ.

* ಚರ್ಮ ಒಣಗುವುದನ್ನು ತಡೆಯುತ್ತದೆ

* ತ್ವಚೆಗೆ ಮೇಲೆ ಮೂಡುವ ಕಪ್ಪು ವರ್ತುಲಗಳನ್ನು ತಡೆಯುತ್ತದೆ

* ಸೂರ್ಯನ ಬೆಳಕಿಗೆ ಕಪ್ಪಗಾಗುವುದನ್ನು ತಡೆಯುತ್ತದೆ

* ತ್ವಚೆಗೆ ನವಚೈತನ್ಯ ನೀಡುತ್ತದೆ.

* ಬಿರುಕುಬಿಟ್ಟ ಹಿಮ್ಮಡಿಗಳನ್ನು ಸರಿಪಡಿಸುತ್ತದೆ.

* ನೈಸರ್ಗಿಕ ಮೇಕಪ್ ನಿವಾರಕ ಪ್ರಸಾದನವಾಗಿದೆ

* ವೃದ್ಧಾಪ್ಯದ ಚಿಹ್ನೆಗಳು ಆವರಿಸುವುದನ್ನು ತಡವಾಗಿಸುತ್ತದೆ.

ತ್ವಚೆಯ ಆರೈಕೆಗಾಗಿ ಎಳ್ಳೆಣ್ಣೆ ಬಳಸುವ ವಿಧಾನಗಳು:

ಮೊಡವೆಗಳಿಗಾಗಿ:

ಈ ವಿಧಾನವನ್ನು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಅನುಸರಿಸಿಕೊಂಡುಬರಲಾಗುತ್ತದೆ. ಎಳ್ಳೆಣ್ಣೆ ಮತ್ತು ಅರಿಶಿನ ಇವೆರಡೂ ಉತ್ತಮ ಪೋಷಣೆ ನೀಡುವ ಪ್ರಸಾದನಗಳಾಗಿದ್ದು ಮೊಡವೆ ಮೊದಲಾದ ಚರ್ಮದ ತೊಂದರೆಗಳನ್ನು ನಿವಾರಿಸಲು ಸಕ್ಷಮವಾಗಿವೆ.

ಅಗತ್ಯವಿರುವ ಸಾಮಾಗ್ರಿಗಳು:
  • 1 ದೊಡ್ಡ ಚಮಚ ಎಳ್ಳೆಣ್ಣೆ
  • 2 ಚಿಕ್ಕ ಚಮಚ ಅರಿಶಿನ ಪುಡಿ
ಬಳಕೆಯ ವಿಧಾನ
  • ಒಂದು ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಿ.
  • ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾದ ಲೇಪಕ್ಕೆ ಅಗತ್ಯವಿರುವಷ್ಟು ಉಗುರುಬೆಚ್ಚನೆಯ ನೀರು ಬೆರೆಸಿ
  • ಮುಖವನ್ನು ಮೊದಲು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ
  • ಈ ಲೇಪವನ್ನು ಮುಖಕ್ಕೆ ಹಚ್ಚಿಕೊಳ್ಳಿ
  • ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ
  • ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ತ್ವಚೆಯಿಂದ ಸತ್ತ ಜೀವಕೋಶಗಳನ್ನು ನಿವಾರಿಸಲು

ಎಳ್ಳೆಣ್ಣೆ ಚರ್ಮದ ಹೊರಭಾಗದಲ್ಲಿ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಕಂದು ಸಕ್ಕರೆ ವೃದ್ದಾಪ್ಯದ ಚಿಹ್ನೆಗಳನ್ನು ತಡವಾಗಿಸುವ ಜೊತೆಗೇ ಹಾನಿಕರವಾದ ಸೂರ್ಯನ ಅತಿನೇರಳೆ ಕಿರಣಗಳ ವಿರುದ್ದ ರಕ್ಷಣೆ ಒದಗಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು
  • ½ ಚಿಕ್ಕ ಚಮಚ ಎಳ್ಳೆಣ್ಣೆ
  • 1 ಚಿಕ್ಕ ಚಮಚ ಕಂದು ಸಕ್ಕರೆ
  • 1 ಚಿಕ್ಕ ಚಮಚ ಆಲಿವ್ ಎಣ್ಣೆ,.
ಬಳಕೆಯ ವಿಧಾನ:
  • ಒಂದು ಬೋಗುಣಿಯಲ್ಲಿ ಸಕ್ಕರೆ ಹಾಕಿ
  • ಇದಕ್ಕೆ ಉಳಿದೆರಡು ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಈ ಮಿಶ್ರಣವನ್ನು ಬಳಸಿ ಮುಖವನ್ನು ಚೆನ್ನಾಗಿ ಕೆಲವು ನಿಮಿಷಗಳ ಕಾಲ ಹೆಚ್ಚಿನ ಒತ್ತಡವಿಲ್ಲದೇ ಉಜ್ಜಿಕೊಳ್ಳಿ.
  • ಬಳಿಕ ಉಗುರುಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ.
ಒಣತ್ವಚೆಯ ಆರೈಕೆಗಾಗಿ

ಬಾದಾಮಿ ಎಣ್ಣೆಯಲ್ಲಿ ಚರ್ಮವನ್ನು ಮೃದುವಾಗಿಸುವ ಗುಣವಿದೆ ಹಾಗೂ ಎಳ್ಳೆಣ್ಣೆಯ ತೇವಕಾರಕ ಗುಣ ತ್ವಚೆಗೆ ಆಳದಿಂದ ಪೋಷಣೆ ಒದಗಿಸಿ ನವಚೈತನ್ಯ ನೀಡುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

*½ ಚಿಕ್ಕ ಚಮಚ ಎಳ್ಳೆಣ್ಣೆ

*1 ಚಿಕ್ಕ ಚಮಚ ಬಾದಾಮಿ ಎಣ್ಣೆ

ಬಳಕೆಯ ವಿಧಾನ

*ಒಂದು ಬೋಗುಣಿಯಲ್ಲಿ ಎರಡೂ ಸಾಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಿ

*ಈ ಮಿಶ್ರಣವನ್ನು ನೇರವಾಗಿ ಮುಖದ ತ್ವಚೆಗೆ ಹಚ್ಚಿಕೊಳ್ಳಿ

*ಸುಮಾರು ಹದಿನೈದು ನಿಮಿಷದವರೆಗೆ ಹಾಗೇ ಒಣಗಲು ಬಿಡಿ

*ಬಳಿಕ ಉಗುರುಬೆಚ್ಚನೆಯ ನೀರನ್ನು ಬಳಸಿ ಚೆನ್ನಾಗಿ ತೊಳೆದುಕೊಳ್ಳಿ.

ಬ್ಲಾಕ್ ಹೆಡ್ (ಕಪ್ಪುತಲೆ) ನಿವಾರಣೆಗೆ

ಎಳ್ಳೆಣ್ಣೆ ಮತ್ತು ರೋಸ್ಮರಿ ಎಣ್ಣೆಯ ಮಿಶ್ರಣ ತ್ವಚೆಯಲ್ಲಿ ಹುದುಗಿ ಕುಳಿತಿದ್ದ ಕೊಳೆ ಮತ್ತು ಹಾನಿ ಎಸಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ತ್ವಚೆಯ ಅಡಿಯಲ್ಲಿ ಕೀವು ಉತ್ಪಾದನೆಯನ್ನು ನಿಯಂತ್ರಿಸುತ್ತದೆ ಹಾಗೂ ಈ ಮೂಲಕ ಬ್ಲಾಕ್ ಹೆಡ್ ಅಥವಾ ಕಪ್ಪುತಲೆಗಳು ಉಂಟಾಗುವುದನ್ನು ತಡೆಯುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*½ ಚಿಕ್ಕ ಚಮಚ ಎಳ್ಳೆಣ್ಣೆ

*2-3 ತೊಟ್ಟು ರೋಸ್ಮರಿ ಅವಶ್ಯಕ ತೈಲ

ಬಳಕೆಯ ವಿಧಾನ
  • ಒಂದು ಬೋಗುಣಿಯಲ್ಲಿ ಇವೆರಡೂ ಸಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಿ.
  • ಈ ಮಿಶ್ರಣವನ್ನು ಕಪ್ಪುತಲೆ ಕಾಣಿಸಿಕೊಂಡಿರುವ ತ್ವಚೆಯ ಭಾಗಕ್ಕೆ ಹಚ್ಚಿ
  • ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ
  • ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
  • ಬಳಿಕ ತೇವಕಾರಕ ದ್ರಾವಣ ಹಚ್ಚಿಕೊಳ್ಳಿ.

ವೃದ್ಧಾಪ್ಯವನ್ನು ತಡವಾಗಿಸಲು

ಲೋಳೆಸರ ಅಥವಾ ಆಲೋವೆರಾ ಚರ್ಮದ ಕೊಲ್ಯಾಜೆನ್ ಎಂಬ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ತ್ವಚೆಯ ಸೆಳೆತವನ್ನು ಹೆಚ್ಚಿಸಿ ಕಾಂತಿ ಮತ್ತು ಸಹಜವರ್ಣ ಪಡೆಯಲು ನೆರವಾಗುತ್ತದೆ. ಈ ಮೂಲಕ ತ್ವಚೆಯಲ್ಲಿ ನೆರಿಗೆ ಮತ್ತು ಸೂಕ್ಷ್ಮಗೆರೆಗಳು ಮೂಡದೇ ವೃದ್ದಾಪ್ಯದ ಚಿಹ್ನೆಗಳು ಮೂಡುವುದು ತಡವಾಗುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು

*½ ಚಿಕ್ಕ ಚಮಚ ಎಳ್ಳೆಣ್ಣೆ

*1 ದೊಡ್ಡ ಚಮಚ ಲೋಳೆಸರದ ತಿರುಳು

ಬಳಕೆಯ ವಿಧಾನ:

*ಒಂದು ಬೋಗುಣಿಯಲ್ಲಿ ಇವೆರಡೂ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಲೇಪವನ್ನು ಮುಖ ಮತ್ತು ಕುತ್ತಿಗೆಯ ಭಾಗದ ತ್ವಚೆಗೆ ಹಚ್ಚಿಕೊಳ್ಳಿ

*ಹದಿನೈದು ನಿಮಿಷ ಹಾಗೇ ಒಣಗಲು ಬಿಡಿ

*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಸೌಮ್ಯವಾದ ತ್ವಚೆಗಾಗಿ

ವಿಟಮಿನ್ ಇ ತ್ವಚೆಗೆ ಅತಿ ಅಗತ್ಯವಿರುವ ಪೋಷಕಾಂಶವಾಗಿದ್ದು ಇದರ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣ ತ್ವಚೆಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ರಕ್ಷಣೆ ಒದಗಿಸುತ್ತದೆ ಹಾಗೂ ಸೌಮ್ಯ, ಕಲೆರಹಿತ ಹಾಗೂ ಚೈತನ್ಯದಿಂದ ಕೂಡಿರುವ ತ್ವಚೆ ಪಡೆಯಲು ನೆರವಾಗುತ್ತದೆ. ಅಲ್ಲದೇ ಸೂರ್ಯನ ಅತಿನೇರಳೆ ಕಿರಣಗಳಿಂದಲೂ ತ್ವಚೆಯನ್ನು ರಕ್ಷಿಸುತ್ತದೆ.

ಅಗತ್ಯವಿರುವ ಸಾಮಾಗ್ರಿಗಳು:

*ಐದಾರು ತೊಟ್ಟು ಎಳ್ಳೆಣ್ಣೆ

*1 ವಿಟಮಿನ್ ಇ ಮಾತ್ರೆ

ಬಳಕೆಯ ವಿಧಾನ
  • ಒಂದು ಬೋಗುಣಿಯಲ್ಲಿ ಎಳ್ಳೆಣ್ಣೆ ಸಂಗ್ರಹಿಸಿ
  • ವಿಟಮಿನ್ ಈ ಮಾತ್ರೆಯ ಹೊರಕವಚವನ್ನು ತೆರೆದು ಒಳಗಿನ ಪುಡಿಯನ್ನು ಎಣ್ಣೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಈ ಲೇಪವನ್ನು ಮುಖದ ತ್ವಚೆಗೆ ಹಚ್ಚೆಕೊಳ್ಳಿ
  • ಸುಮಾರು ಹತ್ತು ನಿಮಿಷ ಹಾಗೇ ಬಿಡಿ
  • ಬಳಿಕ ಸೌಮ್ಯ ಕಂಡೀಶನರ್ ಬಳಸಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ
ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯಲು

ಕ್ಯಾರೆಟ್ ಬೀಜದ ಎಣ್ಣೆಯಲ್ಲಿ ಪ್ರಬಲ ಉರಿಯೂತ ನಿವಾರಕ , ಆಂಟಿ ಆಕ್ಸಿಡೆಂಟ್ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಹಾಗೂ ಇದರ SPF ಕ್ರಮಾಂಕವೂ ಅಧಿಕವಾಗಿದ್ದು ತ್ವಚೆಯನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ಹಾಗಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕಾದ ಅವಶ್ಯಕತೆ ಇರುವವರಿಗೆ ಎಳ್ಳೆಣ್ಣೆ ಮತ್ತು ಕ್ಯಾರೆಟ್ ಬೀಜದ ಎಣ್ಣೆಯ ಮಿಶ್ರಣ ಅತ್ಯುತ್ತಮ ಆಯ್ಕೆಯಾಗಿದೆ.

ಅಗತ್ಯವಿರುವ ಸಾಮಾಗ್ರಿಗಳು

*1 ಚಿಕ್ಕ ಚಮಚ ಎಳ್ಳೆಣ್ಣೆ

ನಾಲ್ಕೈದು ತೊಟ್ಟು ಕ್ಯಾರೆಟ್ ಬೀಜದ ಎಣ್ಣೆ

ಬಳಕೆಯ ವಿಧಾನ:

*ಒಂದು ಬೋಗುಣಿಯಲ್ಲಿ ಎಳ್ಳೆಣ್ಣೆ ಸಂಗ್ರಹಿಸಿ

*ಇದಕ್ಕೆ ಕ್ಯಾರೆಟ್ ಬೀಜದ ಎಣ್ಣೆ ಹಾಕಿ ಮಿಶ್ರಣ ಮಾಡಿ

*ಈ ಎಣ್ಣೆಯನ್ನು ಬಿಸಿಲಿನ ಝಳಕ್ಕೆ ಕಪ್ಪಗಾಗಿರುವ ತ್ವಚೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ

*ಸುಮಾರು ಹದಿನೈದು ನಿಮಿಷ ಹಾಗೇ ಬಿಡಿ.

*ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

   
 
ಹೆಲ್ತ್