Back
Home » ಆರೋಗ್ಯ
ಅಪೆಂಡಿಕ್ಟಿಸ್ ನೋವು ನಿವಾರಣೆಗೆ ಕೆಲವು ನೈಸರ್ಗಿಕ ಮನೆಮದ್ದುಗಳು
Boldsky | 3rd Jul, 2019 03:18 PM

ಅಪೆಂಡಿಕ್ಟಿಸ್ ನಲ್ಲಿ ಇರುವ ನಿಧಾನ ಹಾಗೂ ಮಂದ ನೋವಿನ ಬಗ್ಗೆ ತಿಳಿದಿರಬಹುದು. ಇದು ಹೊಟ್ಟೆಯ ಭಾಗದಲ್ಲಿ ಆರಂಭವಾಗುವುದು ಮತ್ತು ದಿನ ಕಳೆದಂತೆ ಇದು ಸಂಪೂರ್ಣ ದೇಹಕ್ಕೆ ಆವರಿಸಿಕೊಳ್ಳುವುದು. ಈ ವೇಳೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸುವರು ಮತ್ತು ಅಪೆಂಡಿಕ್ಸ್ ತೆಗೆಯಬೇಕು ಎಂದು ಹೇಳುವರು. ಆದರೆ ಪ್ರತಿಯೊಬ್ಬರಿಗೂ ಶಸ್ತ್ರಚಿಕಿತ್ಸೆಯು ಒಳ್ಳೆಯ ರೀತಿ ಕೆಲಸ ಮಾಡುತ್ತದೆ ಎಂದು ಹೇಳಲಾಗದು.

ಅದಾಗ್ಯೂ, ಒಂದು ಸಲ ಇದು ಪತ್ತೆಯಾದರೆ ಅಪೆಂಡಿಕ್ಸ್ ಗ್ರಂಥಿಯ ಉರಿಯೂತವನ್ನು ಕೆಲವೊಂದು ನೈಸರ್ಗಿಕ ಮನೆಮದ್ದುಗಳಿಂದ ನಿವಾರಣೆ ಮಾಡಬಹುದು. ಆದರೆ ಇದು ತೀವ್ರ ಪರಿಸ್ಥಿತಿಗೆ ತಲುಪಿರಬಾರದು. ಅಪೆಂಡಿಕ್ಸ್ ನಿವಾರಣೆ ಮಾಡಲು ಇರುವ ಕೆಲವು ನೈಸರ್ಗಿಕ ಸಾಮಗ್ರಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಶುಂಠಿ

ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಶುಂಠಿಯನ್ನು ಸಾಂಪ್ರದಾಯಿಕವಾಗಿ ಹೊಟ್ಟೆಯ ಉರಿಯೂತದ ಸಮಸ್ಯೆಗೆ ಬಳಸಲಾಗುತ್ತದೆ. ಶುಂಠಿಯ ಗಿಡದ ಬೇರಿನಲ್ಲಿ 6-ಜಿಂಜೆರೊಲ್ ಎನ್ನುವಂತಹ ಅಂಶವಿದೆ. ಸಂಶೋಧನೆ ಮಾಡಿದ ವೇಳೆ ಈ ಅಂಶವು ಗಡ್ಡೆಯ ಕೋಶಗಳ ಉರಿಯೂತ ನಿವಾರಣೆ ಮಾಡುತ್ತದೆ ಎಂದು ಕಂಡುಬಂದಿದೆ. ಅಪೆಂಡಿಕ್ಟಿಸ್ ನೋವಿನ ವೇಳೆ ರೋಗಿಗಳಲ್ಲಿ ಕಂಡುಬರುವಂತಹ ವಾಂತಿ ಅಥವಾ ವಾಕರಿಕೆ ನಿವಾರಣೆಗೆ ಶುಂಠಿಯು ತುಂಬಾ ಪರಿಣಾಮಕಾರಿ. ಶುಂಠಿ ತುಂಡುಗಳು ಅಥವಾ ಇದರ ರಸ ಕುಡಿದರೆ ಆಗ ದೇಹದಲ್ಲಿನ ಉರಿಯೂತ ಕಡಿಮೆ ಆಗಿ ನೋವು ಶಮನವಾಗುವುದು.

ಹೆಸರುಬೇಳೆ

ಹೆಸರುಬೇಳೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಇದರಿಂದಾಗಿ ಇದು ಹೊಟ್ಟೆಗೆ ಶಮನ ನೀಡುವುದು. ಪ್ರತಿನಿತ್ಯ ಒಂದು ಚಮಚ ಹೆಸರುಬೇಳೆಯನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿಟ್ಟು ಹಾಗೆ ಅಥವಾ ಬೇಯಿಸಿ ಸೇವಿಸಬೇಕು ಎಂದು ವೈದ್ಯರು ಮತ್ತು ಆಹಾರ ತಜ್ಞರು ಸಲಹೆ ನೀಡುವರು. ದಿನದಲ್ಲಿ ಮೂರು ಸಲ ನೀವು ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದು.

ಮಜ್ಜಿಗೆ

ಅಪೆಂಡಿಕ್ಟಿಸ್ ನೋವಿಗೆ ತುಂಬಾ ಸುಲಭ ಹಾಗೂ ಸಾಮಾನ್ಯವಾಗಿ ಸಿಗುವ ಔಷಧಿ ಇದಾಗಿದೆ. ಕೊತ್ತಂಬರಿ, ಪುದೀನಾ ಎಲೆಗಳು, ತುರಿದ ಸೌತೆಕಾಯಿ, ತುರಿದ ಶುಂಠಿ ಹಾಕಿಕೊಂಡು ತಯಾರಿಸಿದ ಮಜ್ಜಿಗೆಯು ಪರ ಜೈವಿಕ ಪರಿಣಾಮ ಬೀರುವುದು. ತಾಜಾತನ ಉಂಟು ಮಾಡುವ ಪಾನೀಯವಾಗಿದೆ. ದಿನಕ್ಕೆ ಒಂದು ಲೋಟ ಮಜ್ಜಿಗೆ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ತುಂಬಾ ಸಹಕಾರಿ ಆಗಿರಲಿದೆ.

ಜೇನುತುಪ್ಪ ಮತ್ತು ಲಿಂಬೆ

ಮಲಬದ್ಧತೆಯು ಅಪೆಂಡಿಕ್ಟಿಸ್ ಗೆ ಬಹು ದೊಡ್ಡ ಕಾರಣ ಎಂದು ಹೇಳಲಾಗುತ್ತದೆ. ಜೇನುತುಪ್ಪ ಮತ್ತು ಲಿಂಬೆ ರಸವು ಮಲಬದ್ಧತೆ ಸುಧಾರಣೆ ಮಾಡುವುದು ಮತ್ತು ಕರುಳಿನ ಕ್ರಿಯೆ ಸರಾಗಗೊಳಿಸುವುದು. ಇದರಿಂದಾಗಿ ಅಪೆಂಡಿಕ್ಟಿಸ್ ನ ನೋವಿಗೆ ಇದರಿಂದ ಶಮನ ಸಿಗುವುದು. ಒಂದು ಲೋಟ ಬಿಸಿ ನೀರಿಗೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿ ಕುಡಿಯಿರಿ. ಇದು ಕರುಳಿನ ಅನಿಯಮಿತ ಚಲನೆ ಸಮಸ್ಯೆಯನ್ನು ನಿವಾರಣೆ ಮಾಡುವುದು.

ತರಕಾರಿ ಜ್ಯೂಸ್

ಅಪೆಂಡಿಕ್ಟಿಸ್ ನಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ನಾರಿನಾಂಶವು ಅಧಿಕವಾಗಿರುವ ಆಹಾರ ಸೇವನೆ ಮಾಡಿ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಕ್ಯಾರೆಟ್, ಸೌತೆಕಾಯಿ, ಬೀಟ್ ರೂಟ್, ಕ್ರಾನ್ಬೇರಿ, ಮೂಲಂಗಿ, ಬಸಳೆಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ. ಇದು ನೋವು ನಿವಾರಣೆ ಮಾಡುವುದು, ರಕ್ತವನ್ನು ನಿರ್ವಿಷಗೊಳಿಸುವುದ, ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಜೀರ್ಣಕ್ರಿಯೆನ್ನು ಸರಾಗವಾಗಿಸುವುದು. ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ತರಕಾರಿ ಜ್ಯೂಸ್ ಸೇರಿಸಿಕೊಂಡು ಅಪೆಂಡಿಕ್ಟಿಸ್ ನೋವಿನಿಂದ ಮುಕ್ತಿ ಪಡೆಯಿರಿ.

ಜಿನ್ಸೆಂಗ್ ಟೀ

ಚೀನಾದಲ್ಲಿ ಸಿಗುವಂತಹ ಈ ಗಿಡಮೂಲಿಕೆಯಲ್ಲಿ ಸಾಪೊನಿನ್ಸ್ ಎನ್ನುವ ಅಂಶವಿದೆ. ಇದರಿಂದ ಇದು ಅದ್ಭುತವಾಗಿ ಅಪೆಂಡಿಕ್ಟಿಸ್ ನಿಂದ ಉಂಟಾಗುವ ನೋವು ಮತ್ತು ಉರಿಯೂತ ನಿವಾರಣೆ ಮಾಡುವುದು. ಕುದಿಯುವ ನೀರಿಗೆ 1-2 ಚಮಚ ಜಿನ್ಸೆಂಗ್ ಹಾಕಿರಿ ಮತ್ತು ಇದು ತಣ್ಣಗಾದ ಬಳಿಕ ಕುಡಿಯಿರಿ. ನೋವು ನಿವಾರಣೆ ಮಾಡಲು ದಿನದಲ್ಲಿ ಎರಡು ಸಲ ನೀವು ಇದನ್ನು ಕುಡಿಯಿರಿ.

ಮೆಂತೆ ಕಾಳುಗಳು

ಅಪೆಂಡಿಕ್ಟಿಸ್ ನ ನೋವನ್ನು ನೈಸರ್ಗಿಕವಾಗಿ ನಿವಾರಣೆ ಮಾಡಲು ಮೆಂತ್ಯೆ ಕಾಳು ತುಂಬಾ ಪರಿಣಾಮಕಾರಿಯಾಗಿರುವುದು. ಇದರಲ್ಲಿ ಕೆಲವು ಆ್ಯಂಟಿಆಕ್ಸಿಡೆಂಟ್ ಗಳಾಗಿರುವಂತಹ ಫ್ಲಾವನಾಯ್ಡ್, ಅಲ್ಕಾಲಾಯ್ಡ್ ಮತ್ತು ಸಾಪೊನಿನ್ಸ್ ಗಳು ಇವೆ. ಇದರಲ್ಲಿ ಉನ್ನತ ಮಟ್ಟದ ನಾರಿನಾಂಶ ಮತ್ತು ಆಹಾರದ ವಿಷವನ್ನು ಬಂಧಿಸುವ ಮೂಲಕವಾಗಿ ಅದು ಕರುಳಿನ ಹೊರಪದರವನ್ನು ರಕ್ಷಣೆ ಮಾಡುವುದು. ಇದರಿಂದಾಗಿ ಇದು ಅಪೆಂಡಿಕ್ಟಿಸ್ ನ ಕೀವು ನಿರ್ಮಾಣವನ್ನು ತಡೆಯುವುದು ಮತ್ತು ನೋವು ನಿವಾರಿಸುವುದು. 30 ನಿಮಿಷ ಕಾಲ ನೀರಿನಲ್ಲಿ ಮೆಂತ್ಯೆ ಕಾಳನ್ನು ಕುದಿಸಿ ಮತ್ತು ಈ ನೀರನ್ನು ಸೋಸಿಕೊಂಡು ತಣ್ಣಗಾದ ಬಳಿಕ ಕುಡಿಯಿರಿ.

ಇಡೀ ಧಾನ್ಯ

ಸಂಸ್ಕರಿಸದೆ ಇರುವಂತಹ ಗೋಧಿಯಲ್ಲಿ ಇರುವಂತಹ ನಾರಿನಾಂಶವು ಅಪೆಂಡಿಕ್ಟಿಸ್ ವೇಳೆ ಉಂಟಾಗುವ ಮಲಬದ್ಧತೆ ನಿವಾರಣೆ ಮಾಡುವುದು. ಗೋಧಿ ಹೊಟ್ಟನ್ನು ನಿಯಮಿತವಾಗಿ ಬಳಸುವ ಹಿಟ್ಟಿನೊಂದಿಗೆ ಬೆರೆಸಿಕೊಂಡು ಸೇವಿಸಿದರೆ ಆಗ ದೀರ್ಘಕಾಲದ ತನಕ ಅದರ ಲಾಭ ಸಿಗುವುದು. ಬ್ರೌನ್ ಬ್ರೆಡ್ ನಲ್ಲಿ ಇಡೀ ಗೋಧಿಯ ಲಾಭಗಳು ಸಿಗಲಿದೆ. ಇದರಿಂದ ಬಿಳಿ ಬ್ರೆಡ್ ಬದಲು ಬ್ರೌನ್ ಬ್ರೆಡ್ ಬಳಸಿ.

ತುಳಸಿ

ತುಳಸಿಯಲ್ಲಿ ಹಲವಾರು ಔಷಧೀಯ ಗುಣಗಳು ಇವೆ. ಇದು ಜೀರ್ಣಕ್ರಿಯೆ ಸುಧಾರಿಸುವುದು ಮತ್ತು ಮಲಬದ್ಧತೆಯನ್ನು ಇದೇ ವೇಳೆ ನಿವಾರಣೆ ಮಾಡುವುದು. ಗ್ರೀನ್ ಟೀಗೆ ಹಾಕಿ ಕುಡಿಯಬಹುದು ಅಥವಾ ಮೊಸರಿನೊಂದಿಗೆ ಹಾಕಿಕೊಂಡು ನೀವು ಇದನ್ನು ಸೇವಿಸಬಹುದು.

ಪುದೀನಾ ಎಲೆಗಳು

ಪುದೀನಾ ಎಲೆಗಳಲ್ಲಿ ಇರುವ ತಂಪು ಗುಣಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ಅದಾಗ್ಯೂ, ಇದು ಗ್ಯಾಸ್ ನಿವಾರಣೆ ಮಾಡುವುದು ಮತ್ತು ಜೀರ್ಣಕ್ರಿಯೆಯನ್ನು ನೈಸರ್ಗಿವಾಗಿ ಆಗುವಂತೆ ಮಾಡುವುದು. ಅಪೆಂಡಿಕ್ಟಿಸ್ ನ ನೋವು ನಿವಾರಣೆ ಮಾಡಲು ಬಿಸಿನೀರಿನಲ್ಲಿ 4-5 ಪುದೀನಾ ಎಲೆಗಳನ್ನು ಹಾಕಿ ಮತ್ತು ಇದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ.

ಗ್ರೀನ್ ಟೀ

ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇರುವಂತಹ ಗ್ರೀನ್ ಟೀ ಅಪೆಂಡಿಕ್ಟಿಸ್ ನಿಂದ ಬರುವ ನೋವಿಗೆ ನೈಸರ್ಗಿಕವಾಗಿ ನೋವು ನಿವಾರಕವಾಗಿ ಕೆಲಸ ಮಾಡುವುದು. ಉಗುರುಬೆಚ್ಚಗಿನ ನೀರಿಗೆ ಚಾ ಎಲೆಗಳನ್ನು ಹಾಕಿ ಮತ್ತು ಇದನ್ನು ಕುದಿಸಬೇಡಿ. ಕುದಿಸಿದರೆ ಇದರ ಲಾಭಗಳು ಸಿಗದು.

ಬೆಳ್ಳುಳ್ಳಿ

ಅಪೆಂಡಿಕ್ಟಿಸ್ ಗೆ ಬೆಳ್ಳುಳ್ಳಿಯು ಒಳ್ಳೆಯ ಮನೆಮದ್ದು ಆಗಿದೆ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ನೋವು ನಿವಾರಣೆ ಮಾಡುವುದು. ಬಿಸಿ ನೀರಿಗೆ ಜಜ್ಜಿರುವ ಬೆಳ್ಳುಳ್ಳಿ ಎಸಲುಗಳನ್ನು ಹಾಕಿ ಮತ್ತು ಪ್ರತಿನಿತ್ಯ ಬೆಳಗ್ಗೆ ಕುಡಿಯಿರಿ.

ಗೋಟು ಕೋಲಾ

ಚೀನಾದ ಔಷಧೀಯ ಗಿಡಮೂಲಿಕೆ ಆಗಿರುವ ಸೆಂಟೆಲ್ಲಾ ಏಷಿಯಾಟಿಕಾ ನಲ್ಲಿ ಒಳ್ಳೆಯ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಕೋಶಗಳನ್ನು ನೈಸರ್ಗಿಕವಾಗಿ ಗುಣಪಡಿಸುವ ಕ್ರಿಯೆಯನ್ನು ಉತ್ತೇಜಿಸುವುದು. ಅಪೆಂಡಿಕ್ಟಿಸ್ ನೋವಿನಿಂದ ಬೇಗನೆ ಪರಿಹಾರ ಬೇಕಿದ್ದರೆ ದಿನದಲ್ಲಿ ಎರಡು ಸಲ ನೀವು ಈ ಗಿಡಮೂಲಿಕೆ ಚಾ ಕುಡಿಯಿರಿ. ಗೋಟು ಕೋಲಾ ಬಳಸಿದರೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದಲೂ ನಿವಾರಣೆ ಪಡೆಯಬಹುದು.

ಅರಿಶಿನ

ನೈಸರ್ಗಿಕವಾಗಿ ಉರಿಯೂತ ಶಮನಕಾರಿ ಗುಣ ಹೊಂದಿರುವ ಅರಶಿನವು ಅಪೆಂಡಿಕ್ಟಿಸ್ ನ ಉರಿಯೂತವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಉತ್ತಮ ಫಲಿತಾಂಶಕ್ಕಾಗಿ ಅರಶಿನ ಹುಡಿಯನ್ನು ಶುಂಠಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ.

   
 
ಹೆಲ್ತ್