Back
Home » ಬಾಲಿವುಡ್
ಪ್ರಭಾಸ್ 'ಸಾಹೊ' ಚಿತ್ರದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್
Oneindia | 4th Jul, 2019 10:55 AM

ಟಾಲಿವುಡ್ ನ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಸಾಹೊ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೆ ಟೀಸರ್, ಟ್ರೈಲರ್ ಮತ್ತು ಪೋಸ್ಟರ್ ಗಳ ಮೂಲಕ ಚಿತ್ರಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ ಸಾಹೊ ಮುಂದಿನ ತಿಂಗಳು ತೆರೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಸೂಪರ್ ಹಿಟ್ 'ಬಾಹುಬಲಿ' ಚಿತ್ರದ ನಂತರ ಪ್ರಭಾಸ್ ಅಭಿನಯಿಸುತ್ತಿರುವ ಚಿತ್ರವಾದ್ದರಿಂದ ಅಭಿಮಾನಿಗಳ ನಿರೀಕ್ಷೆ ಮಾಮೂಲಿಗಿಂತ ಹೆಚ್ಚೆ ಇದೆ. ಇನ್ನು ಅಭಿಮಾನಿಗಳ ನಿರೀಕ್ಷೆಯಂತೆ ಚಿತ್ರದ ಟ್ರೇಲರ್ ಕೂಡ ಮೂಡಿ ಬಂದಿರುವುದರಿಂದ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.

ಹಾಲಿವುಡ್ ರೇಂಜ್ ನಲ್ಲಿದೆ 'ಸಾಹೋ' ಚಿತ್ರದ ಟೀಸರ್

ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ ಸಾಹೊ ಚಿತ್ರಕ್ಕೀಗ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿಯ ಎಂಟ್ರಿಯಾಗಿದ್ದಾರೆ. ಹೌದು, ಈಗಾಗಲೆ ಪ್ರಭಾಸ್ ನಾಯಕಿಯಾಗಿ ಶ್ರದ್ಧಾ ಕಪೂರ್ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾಕ್ವೆಲಿನ್ ಈ ಚಿತ್ರದಲ್ಲಿ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ಈಗಾಗಲೆ ಈ ಹಾಡಿನ ಚಿತ್ರೀಕರಣ ಆಸ್ಟ್ರೀಯದಲ್ಲಿ ನಡೆಯುತ್ತಿದೆ. ಆಸ್ಟ್ರೀಯಾದಲ್ಲಿ ನಡೆಯುತ್ತಿರುವ ಚಿತ್ರೀಕರಣ ಒಂದಿಷ್ಟು ಫೋಟೋಗಳು ಈಗಾಗಲೆ ರಿವೀಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದ್ರೆ ಜಾಕ್ವೆಲಿನ್ ಇರುವ ಫೋಟೋ ಮಾತ್ರ ಇನ್ನು ಔಟ್ ಆಗಿಲ್ಲ.

ಕುತೂಹಲವನ್ನು ಹೆಚ್ಚಿಸುತ್ತಲೆ ಇರುವ ಸಾಹೋ ಮುಂದಿನ ತಿಂಗಳು ಆಗಸ್ಟ್ 15ಕ್ಕೆ ತೆರೆಗೆ ಬರುತ್ತಿದೆ. ಚಿತ್ರಕ್ಕೆ ಸೂಜಿತ್ ಆಕ್ಷನ್ ಕಟ್ ಹೇಳಿದ್ದು, ಸುಮಾರು 300 ಕೋಟಿಗೂ ಅಧಿಕ ವೆಚ್ಚದಲ್ಲಿ ಚಿತ್ರ ತಯಾರಾಗಿದೆ. ತೆಲುಗು ಜೊತೆಗೆ ಬೇರೆ ಬೇರೆ ಭಾಷೆಯಲ್ಲು ಸಿನಿಮಾ ರಿಲೀಸ್ ಆಗುತ್ತಿದೆ.

   
 
ಹೆಲ್ತ್