Back
Home » ಚಿತ್ರವಿಮರ್ಶೆ
Devaki Review : 'ರೆಡ್ ಲೈಟ್'ನಲ್ಲಿ ಅರಳಿದ ತಾಯಿ ಮಗಳ ಅನುಬಂಧ
Oneindia | 4th Jul, 2019 01:37 PM
 • ಒನ್ ಲೈನ್ ಸ್ಟೋರಿ

  ''ಸರ್ ಅವಳ ಹೆಸರು ಆರಾಧ್ಯ. ನಿನ್ನೆ ಸಂಜೆಯಿಂದ ಎಲ್ಲಿಯೂ ಕಾಣಿಸುತ್ತಿಲ್ಲ....'' ಹೀಗೆ ದೇವಕಿ ಪೊಲೀಸ್ ಅಧಿಕಾರಿಯಾದ ಕಿಶೋರ್ ಗೆ ದೂರು ನೀಡುತ್ತಾಳೆ. ಎಫ್ ಎಂ ಸ್ಟೇಷನ್ ಆಡಿಷನ್ ಗೆ ಹೋಗಿ ಕಾಣೆಯಾಗುವ ಮಗಳು ಮತ್ತೆ ಆಕೆಗೆ ಸಿಗುತ್ತಾಳೋ ಇಲ್ವೋ..?'' ಎನ್ನುವುದೇ 'ದೇವಕಿ' ಸಿನಿಮಾದ ಒಂದು ಲೈನ್ ಸ್ಟೋರಿ.


 • ಹುಡುಕಾಟದ ಪಯಣದಲ್ಲಿ ಬೇರೆ ಬೇರೆ ಆಯಾಮ

  ತಾಯಿಯಿಂದ ಕಾಣೆಯಾದ ಮಗಳು ಎನ್ನುವುದರಿಂದ ಶುರುವಾಗುವ ಕಥೆ ಮುಂದೆ ಬೇರೆ ಬೇರೆ ಆಯಾಮ ಪಡೆಯುತ್ತದೆ. ಆರಾಧ್ಯದ ಹುಡುಕಾಟದ ಪಯಣ ರೋಚಕವಾಗಿದೆ. ಇನ್ನೇನೂ ಸಿಕ್ಕಳು ಎನ್ನುವ ಹೊತ್ತಿಗೆ ಮತ್ತೊಂದು ಟ್ವಿಸ್ಟ್ ಸಿಗುತ್ತದೆ. ಇಡೀ ಸಿನಿಮಾ ಕೊಲ್ಕತ್ತಾದಲ್ಲಿ ನಡೆಯುತ್ತದೆ. ಅಲ್ಲಿನ ರೆಡ್ ಲೈಟ್ ಏರಿಯಾ, ವೇಶ್ಯಾವಾಟಿಕೆ, ಹೆಣ್ಣು ಮಕ್ಕಳ ಅಪಹರಣ ಹೀಗೆ ಸಾಕಷ್ಟು ವಿಷಯಗಳ ಮೇಲೆ ಸಿನಿಮಾ ನಿಂತಿದೆ.


 • ಇಂಟರ್ ವೆಲ್ ನಲ್ಲಿ ಇದೆ ದೊಡ್ಡ ತಿರುವು

  ಚಿತ್ರದ ಇಂಟರ್ ವೆಲ್ ಅದ್ಭುತವಾಗಿದೆ. ಸಿನಿಮಾ ನೋಡುವವರು ತಮಗೆ ಎಲ್ಲ ಕಥೆ ಗೊತ್ತಾಯ್ತು... ಎನ್ನುವ ಹೊತ್ತಿಗೆ ದೊಡ್ಡ ತಿರುವು ನೀಡುತ್ತಾರೆ ನಿರ್ದೇಶಕರು. ಮಧ್ಯಂತರದ ಬಳಿಕ ಮುಂದೆ ಏನಾಗುತ್ತದೆ ಎನ್ನುವ ಕುತೂಹಲದಿಂದ ಸೀಟ್ ಬಿಟ್ಟು ಏಳಲು ಮನಸಾಗುವುದಿಲ್ಲ.


 • ಪ್ರಿಯಾಂಕ, ಕಿಶೋರ್, ಐಶ್ವರ್ಯ ನಟನೆ

  'ದೇವಕಿ'ಯಾಗಿ ಪ್ರಿಯಾಂಕ ಉಪೇಂದ್ರ ನೈಜವಾಗಿ ನಟಿಸಿದ್ದಾರೆ. ಮಿಡಲ್ ಕ್ಲಾಸ್ ಮನೆಯ ತಾಯಿಯಾಗಿ ಅವರ ಪಾತ್ರ ಚೆನ್ನಾಗಿದೆ. ಪ್ರಿಯಾಂಕ ಹಾಗೂ ಐಶ್ವರ್ಯ ತಾಯಿ ಮಗಳ ಸಂಬಂಧ ತೆರೆ ಮೇಲೆಯೂ ಅಷ್ಟೇ ಚೆನ್ನಾಗಿ ಕಾಣುತ್ತದೆ. ಪೊಲೀಸ್ ಅಧಿಕಾರಿಯಾದ ಕಿಶೋರ್ ಅಬ್ಬರ ನೋಡುವುದೇ ಮಜಾ.


 • ಟೆಕ್ನಿಕಲಿ ಒಂದು ಹಂತ ಮುಂದಕ್ಕೆ

  ವೇಣು ಕ್ಯಾಮರಾ ವರ್ಕ್ ಹಾಗೂ ನೋಬಿಲ್ ಪೌಲ್ ಹಿನ್ನಲೆ ಸಂಗೀತ ಸಿನಿಮಾದ ಘನತೆಯನ್ನು ಹೆಚ್ಚು ಮಾಡಿದೆ. ಇವರಿಬ್ಬರ ಕೆಲಸ ಈ ಸಿನಿಮಾವನ್ನು ಮಾತ್ರವಲ್ಲ, ಕನ್ನಡ ಚಿತ್ರರಂಗದ ತಾಂತ್ರಿಕ ಶಕ್ತಿಯನ್ನು ತೋರುತ್ತಿದೆ. ಸೌಂಡ್ ಹಾಗೂ ಮೇಕಿಂಗ್ ನೋಡುಗರಿಗೆ ಹೊಸ ಅನುಭವ ನೀಡುತ್ತದೆ. ಮದನ್ ಬೆಳ್ಳಿಸಾಲು ಬರೆದ ಹಾಡಿನ ಅರ್ಥ ತುಂಬ ಚೆನ್ನಾಗಿದೆ.


 • ಲೋಹಿತ್ ಸ್ಟೈಲ್ ಆಫ್ ಮೇಕಿಂಗ್

  ಮಳೆ ಬರುತ್ತದೆ... ಮಳೆಯಲ್ಲಿ ಒಂದು ಇರುವೆ ಕೊಚ್ಚಿ ಹೋದ ಹಾಗೆ ಕ್ಯಾಮರಾ ಮೇಲೆ ಏಳುತ್ತದೆ.... ಈ ರೀತಿ ತಮ್ಮ ಸಿನಿಮಾವನ್ನು ಓಪನ್ ಮಾಡುವ ನಿರ್ದೇಶಕ ಲೋಹಿತ್ ಪ್ರತಿ ದೃಶ್ಯದಲ್ಲಿಯೂ ತಮ್ಮ ತನ ಮೆರೆದಿದ್ದಾರೆ. ಒಂದು ದೃಶ್ಯವನ್ನು ಅವರು ತೋರಿಸುವ ರೀತಿ ಸೂಪರ್. ಸಿನಿಮಾದ ಎಷ್ಟೋ ದೃಶ್ಯಗಳು ವಾವ್ ಅನಿಸುತ್ತದೆ. ಅದರಲ್ಲಿಯೂ ಹೌರಬ್ರಿಡ್ಜ್ ನಿಂದ ಪ್ರಿಯಾಂಕ ಅವರನ್ನು ತೋರಿಸುವ ದೃಶ್ಯ ಅದ್ಬುತ.


 • ಎರಡು ದೃಶ್ಯಗಳು ತುಂಬ ಭಾವನಾತ್ಮಕವಾಗಿವೆ

  ಸಿನಿಮಾದಲ್ಲಿ ಎರಡು ದೃಶ್ಯಗಳು ಕಣ್ಣಾಲಿ ನೀರು ಬರುವಂತೆ ಮಾಡುತ್ತದೆ. ಪೊಲೀಸ್ ಅಧಿಕಾರಿ ಕಿಶೋರ್ ವೇಶ್ಯಾವಾಟಿಕೆ ಅಡ್ಡಕ್ಕೆ ಹೋದಾಗ ಅಲ್ಲಿ ಒಬ್ಬ ಸಣ್ಣ ಹುಡುಗಿ ಆಡಿದ ಮಾತು ಭಾವುಕ ಆಗುವಂತೆ ಮಾಡುತ್ತದೆ. ಚಿತ್ರದ ಕೊನೆಯಲ್ಲಿ ತಾಯಿಯ ಬಗ್ಗೆ ಆರಾಧ್ಯ ಹೇಳುವ ಮಾತು ಅದ್ಬುತ. ಈ ಎರಡು ದೃಶ್ಯಗಳು ಚಿತ್ರಕ್ಕೆ ಜೀವ ತುಂಬಿವೆ.


 • ಟ್ವಿಸ್ಟ್ ಮೇಲೆ ಟ್ವಿಸ್ಟ್ ಇವೆ

  ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಟ್ವಿಸ್ಟ್ ಗಳು. ಒಂದು ಸಸ್ಪೆನ್ಸ್ ಸಿನಿಮಾಗೆ ಏನೂ ಬೇಕೋ ಆ ಅಂಶಗಳು ಚಿತ್ರದಲ್ಲಿದೆ. ಸಣ್ಣ ಪುಟ್ಟ ತಪ್ಪುಗಳು ಇದ್ದರೂ, ನೋಡುಗರಿಗೆ ಅದರಿಂದ ತೊಂದರೆ ಅನಿಸುವುದಿಲ್ಲ. ಆರಾಧ್ಯಗಳನ್ನು ಅಪಹರಣ ಮಾಡಿದ್ದು ಯಾರು..? ಎನ್ನುವ ಹುಡುಕಾಟವನ್ನು ಸಿನಿಮಾ ನೋಡುತ್ತ ನೋಡುತ್ತ ಪ್ರೇಕ್ಷಕರೂ ಮಾಡುತ್ತಾರೆ.


 • ಎಮೋಷನಲ್ ಸಸ್ಪೆನ್ಸ್ ಸಿನಿಮಾ

  ಬೇಡದ ಡೈಲಾಗ್ ಗಳು, ಬೇಕಾಬಿಟ್ಟಿ ಹಾಡುಗಳು, ಬೋರ್ ಆಗುವ ದೃಶ್ಯಗಳು ಎಲ್ಲವನ್ನೂ ಬಿಟ್ಟು ತಮ್ಮ ಕಥೆಗೆ ಏನು ಬೇಕೋ ಅಷ್ಟನ್ನು ನಿರ್ದೇಶಕ ಲೋಹಿತ್ ಮಾಡಿದ್ದಾರೆ. ತಾಯಿ ಮಗಳ ಸಂಬಂಧದ ಜೊತೆಗೆ ಬೇರೆಯದ್ದೆ ಶೈಲಿಯಲ್ಲಿ ಇರುವ ಪಕ್ಕಾ ರಿಯಲಿಸ್ಟಿಕ್ ಸಿನಿಮಾವೇ ದೇವಕಿ.
ಇದು ಅಮ್ಮ ಮಗಳ ಕಥೆ. ಹಾಗೆಂದ ಮಾತ್ರಕ್ಕೆ ಸೆಂಟಿಮೆಂಟ್ ಸಿನಿಮಾ ಅಲ್ಲ... ಇಲ್ಲಿ ರೌಡಿಗಳ ಕೌರ್ಯ ಇದೆ ಹಾಗೆಂದು ಇದು ರೌಡಿಂಸಂ ಸಿನಿಮಾ ಅಲ್ಲ... ಮಾಫಿಯಾ ಜಗತ್ತಿನ ಅನಾವರಣ ಇಲ್ಲಿ ಮಾಡಲಾಗಿದೆ. ಆದ್ರೆ, ಇದು ಅಂಡರ್ ವರ್ಲ್ಡ್ ಸಿನಿಮಾ ಅಲ್ಲವೇ ಅಲ್ಲ.... ಆದರೆ, ಇಷ್ಟೂ ಅಂಶಗಳು ಬೇರೆಯದ್ದೆ ಶೈಲಿಯಲ್ಲಿ ಇರುವ ಪಕ್ಕಾ ರಿಯಲಿಸ್ಟಿಕ್ ಸಿನಿಮಾವೇ 'ದೇವಕಿ'.

   
 
ಹೆಲ್ತ್