Back
Home » ಪ್ರವಾಸ
ಗೇರುಸೊಪ್ಪದಲ್ಲಿನ ಬಂಗಾರ ಕುಸುಮ ಜಲಪಾತವನ್ನು ನೋಡಿದ್ದೀರಾ?
Native Planet | 5th Jul, 2019 12:41 PM
 • ಎಲ್ಲಿದೆ ಈ ಜಲಪಾತ

  PC: instagram
  ಬಂಗಾರ ಕುಸುಮ ಜಲಪಾತ ಹೊನ್ನಾವರ ತಾಲ್ಲೂಕಿನ ಮೂಲಕ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಾಗಿದರೆ ಸುಮಾರು 41ಕೀ.ಮಿ ದೂರದಲ್ಲಿ ಇದೆ. ಗೇರು ಸೊಪ್ಪದಲ್ಲಿ ಬೆಟ್ಟ ಗುಡ್ಡಗಳ ನಡುವೆ ಹಾದುಹೋಗುವ ಈ ಜಲಪಾತವು ಒಂದು ಅದ್ಭುತ ದೃಶ್ಯವನ್ನು ನೀಡುತ್ತದೆ. ಮಳೆಗಾಲದಲ್ಲಂತೂ ಈ ಬಂಗಾರ ಜಲಪಾತವನ್ನು ವೀಕ್ಷಿಸುವ ಮಜಾನೇ ಬೇರೆ. ನೀರಿನಿಂದ ತುಂಬಿ ಉಕ್ಕಿ ಹರಿಯುವ ಈ ಜಲಪಾತ ನಿಜಕ್ಕೂ ನಿಮ್ಮ ಕಣ್ಣು ಕುಕ್ಕುವಂತಿರುತ್ತದೆ.


 • ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನ

  PC: youtube
  ಈ ಜಲಪಾತದಿಂದ ಸುಮಾರು 9 ಕಿ.ಮೀ ದೂರದಲ್ಲಿ ಒಂದು ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನವಿದೆ. ಕೆಲವು ವರ್ಷಗಳ ಹಿಂದೆ ಈ ಜಲಪಾತಕ್ಕೆ ಹೆಸರೇ ಇರಲಿಲ್ಲವಂತೆ. ಬಂಗಾರಮಕ್ಕಿ ವೀರಾಂಜನೇಯ ದೇವಾಲಯದ ಅರ್ಚಕರು ಈ ಜಲಪಾತಕ್ಕೆ ಬಂಗಾರ ಕುಸುಮ ಜಲಪಾತ ಎಂಬ ಹೆಸರನ್ನುಇಟ್ಟಿದ್ದು ಎನ್ನಲಾಗುತ್ತದೆ. ಈ ಜಲಪಾತಕ್ಕೆ ಹೋಗಲು ಯಾವುದೇ ಸರಿಯಾದ ರಸ್ತೆಗಳೂ ಇಲ್ಲ.


 • ಜೋಗ ಜಲಪಾತಕ್ಕೆ ಸಮೀಪದಲ್ಲಿದೆ

  PC: youtube
  ಜೋಗ ಜಲಪಾತದಿಂದ 32 ಕಿ.ಮೀ ಕ್ರಮಿಸಿದರೆ ಈ ಬಂಗಾರ ಕುಸುಮ ಜಲಪಾತ ಸಿಗುತ್ತದೆ. ಆದರೆ ಪ್ರವಾಸೋಧ್ಯಮ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿಗೆ ಪ್ರಯಾಣಿಸಲು ಸರಿಯಾದ ವ್ಯವಸ್ಥೆಇಲ್ಲ. ಗುಡ್ಡ, ಬೆಟ್ಟಗಳ ನಡುವಿನಲ್ಲಿ ಹರಿಯುತ್ತಿರುವ ಈ ಸುಂದರ ಜಲಪಾತವನ್ನು ನೋಡುವುದರ ಜೊತೆಗೆ ನಿಮಗೆ ಟ್ರಕ್ಕಿಂಗ್ ಕೂಡಾ ಮಾಡಿದಂತಾಗುತ್ತದೆ. ಗೇರುಸೊಪ್ಪದಲ್ಲಿ ಇನ್ನು ಹಲವಾರು ಆಕರ್ಷಣೆಗಳಿವೆ.


 • ಗೆರುಸೊಪ್ಪ ಅಣೆಕಟ್ಟು

  PC: youtbe
  ಹೊಸದಾಗಿ ನಿರ್ಮಿಸಲಾದ ಗೆರುಸೊಪ್ಪ ಅಣೆಕಟ್ಟು ಗೆರುಸೊಪ್ಪ ಕಣಿವೆಯಲ್ಲಿ ವಿಶಿಷ್ಟ ಜಲಾಶಯವನ್ನು ಸೃಷ್ಟಿಸಿದೆ. ಗೆರುಸೊಪ್ಪದಿಂದ ಜೋಗಫಾಲ್ಸ್ ಕಡೆಗೆ ಸುಮಾರು 10 ಕಿ.ಮೀ ದೂರದಲ್ಲಿರುವ ಫಾರೆಸ್ಟ್ ಡಿಪಾರ್ಟ್ಮೆಂಟ್ ನಿರ್ಮಿಸಿದ ವೀಕ್ಷಣಾ ಗೋಪುರದ ಮೇಲಿಂದ ಕಣಿವೆಯನ್ನು ನೋಡಬಹುದು. ಕಣಿವೆಯ ಮೂಲಕ ಜಲಾಶಯದಲ್ಲಿ ದೋಣಿ ವಿಹಾರವನ್ನೂ ಮಾಡಬಹುದು.


 • ಚತುರ್ಮಮುಖ ಬಸದಿ

  PC: Vinay Hegde
  ಇದು ಚತುರಸರ ಯೋಜನೆಯೊಂದಿಗೆ ವಿಜಯನಗರ ಶೈಲಿಯಲ್ಲಿ ನಿರ್ಮಿಸಲಾದ ಸುಂದರವಾದ ರಚನೆಯಾಗಿದೆ. ಇದು ನಾಲ್ಕು ದಿಕ್ಕುಗಳಿಂದ ನಾಲ್ಕು ಪ್ರವೇಶದ್ವಾರಗಳನ್ನು ಹೊಂದಿದೆ, ಇದು ಗರ್ಭಗೃಹಗಳಿಗೆ ಕಾರಣವಾಗುತ್ತದೆ. ತೀರ್ಥಂಕರರ ನಾಲ್ಕು ಚಿತ್ರಗಳಿವೆ, ವೃಷಭ, ಅಜಿತಾ, ಸಂಭವಾನ್ ಒನ್ ತಡವಾಗಿ ಹಾನಿಯಾಗಿದೆ. ದ್ವಾರಪಾಲಗಳು ಮತ್ತು ಇತರ ಮ್ಯೂರಲ್ ಡಿಸೈಗ್ಟ್‌ಗಳ ಈ ಬಸ್ತಿಯಲ್ಲಿನ ಕೆತ್ತನೆಗಳನ್ನು ಪರಿಷ್ಕರಣೆಯೊಂದಿಗೆ ಚೆನ್ನಾಗಿ ಕಾರ್ಯಗತಗೊಳಿಸಲಾಗುತ್ತದೆ.ನಾಲ್ವರು ತೀರ್ಥಂಕರರನ್ನು ಪಡೆದಿರುವ ಇಂಥ ಬಸದಿ ಅಪರೂಪ. ರಾಣಿ ಭೈರಾದೇವಿ ಈ ಬಸದಿಯನ್ನು ಕಟ್ಟಿಸಿದಳು.


 • ತಲುಪುವುದು ಹೇಗೆ?

  ಬಂಗಾರ ಕುಸುಮ ಜಲಪಾತ ವೀಕ್ಷಿಸಲು ರಾಷ್ಟ್ರೀಯ ಹೆದ್ದಾರಿ 206 ರ ಮೂಲಕ ಬಂದು, ಜಲಪಾತದ ವರೆಗೆ 1 ಕೀ.ಮೀ ನಡೆದುಕೊಂಡು ಹೋದರೆ ಜಲಪಾತ ವೀಕ್ಷಿಸಬಹುದು. ಇಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಕಾರಣ ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸುವುದು ಸೂಕ್ತ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟೆಲ್ಲಾ ಜಲಪಾತಗಳಿವೆ ಅನ್ನೋದು ನಿಮಗೆ ಗೊತ್ತೇ ಇದೆ. ಪ್ರತಿಯೊಂದು ಜಲಪಾತವು ಒಂದಕ್ಕಿಂತ ಒಂದನ್ನು ಮೀರಿಸುವಂತಿದೆ. ಉತ್ತರ ಕನ್ನಡದಲ್ಲಿರುವ ಜಲಪಾತಗಳ ಪಟ್ಟಿಯಲ್ಲಿ ಬಂಗಾರ ಕುಸುಮ ಜಲಪಾತ ಕೂಡಾ ಸೇರಿದೆ. ಈ ಜಿಲ್ಲೆಯಲ್ಲಿರುವವರು ಈ ಬಂಗಾರ ಕುಸುಮ ಜಲಪಾತದ ಬಗ್ಗೆ ಕೇಳಿರುವಿರಿ, ನೋಡಿರುವಿರಿ. ಇದೊಂದು ಸಣ್ಣ ಜಲಪಾತವಾಗಿದೆ. ಆದರೆ ಹೆಚ್ಚಿನವರಿಗೆ ಇಂತಹದ್ದೊಂದು ಜಲಪಾತ ಇದೇ ಅನ್ನೋದೇ ಗೊತ್ತಿಲ್ಲ.

   
 
ಹೆಲ್ತ್