Back
Home » ಸಮ್ಮಿಲನ
ಒಂದು ವರ್ಷ ಕಾಲ ಎಕ್ಸ್‎ಪೈರಿ ಡೇಟ್ ಮುಗಿದ ಆಹಾರ ಸೇವಿಸಿದ ವ್ಯಕ್ತಿ!
Boldsky | 5th Jul, 2019 01:10 PM

ಮಾರುಕಟ್ಟೆಗೆ ಅಥವಾ ಶಾಪಿಂಗ್ ಮಾಲ್ ಗೆ ಹೋಗಿ ಏನಾದರೂ ಖರೀದಿ ಮಾಡುವ ಮೊದಲು ಆ ಉತ್ಪನ್ನದ ಬಗ್ಗೆ ಸರಿಯಾಗಿ ತಿಳಿಯಬೇಕು. ಅದು ಯಾವಾಗ ಎಕ್ಸ್ ಪಯರಿ ಆಗುವುದು ಎಂದು ನೋಡಿಕೊಂಡು ಖರೀದಿ ಮಾಡುತ್ತೇವೆ. ದಿನಾಂಕ ಮುಗಿದಿರುವಂತಹ ಯಾವುದೇ ಆಹಾರವಾದರೂ ಅದು ಹಾನಿ ಉಂಟು ಮಾಡುವುದು. ಎಕ್ಸ್‌ಪಯರಿ ದಿನಾಂಕ ಹತ್ತಿರ ಬರುವಂತಹ ಆಹಾರವನ್ನು ಕೂಡ ಕಡೆಗಣಿಸಬೇಕು. ಕಡಿಮೆ ಬಾಳಿಕೆ ಇರುವಂತಹ ಯಾವುದೇ ಆಹಾರವಾದರೂ ಅದನ್ನು ನಾವು ಶೇಖರಣೆ ಮಾಡಿಟ್ಟುಕೊಳ್ಳಬಾರದು.

ಆದರೆ ಈ ಲೇಖನ ಓದಿದ ಬಳಿಕ ನೀವು ಯಾವ ನಿರ್ಧಾರಕ್ಕೆ ಬರುತ್ತೀರಿ ಎಂದು ನಮಗೆ ಗೊತ್ತಿಲ್ಲ. ಯಾಕೆಂದರೆ ವ್ಯಕ್ತಿಯೊಬ್ಬ ಅಧ್ಯಯನ ಮಾಡಲು ಸುಮಾರು ಒಂದು ವರ್ಷ ಕಾಲ ಎಕ್ಸ್ ಪಯರಿ ಆಗಿರುವಂತಹ ಆಹಾರವನ್ನೇ ಸೇವಿಸುತ್ತಿದ್ದ! ಇದರ ಬಗ್ಗೆ ಮಾಹಿತಿ ತಿಳಿಯಿರಿ.

ದಿನಾಂಕ ಮುಗಿದಿರುವಂತಹ ಆಹಾರವನ್ನು ಕೇವಲ ಒಂದು, ಎರಡು ಅಥಾ ಮೂರು ಸಲವಲ್ಲ, ಒಂದು ವರ್ಷಗಳ ಕಾಲ ನಿರಂತರವಾಗಿ ತಿಂದಿದ್ದಾನೆ. ತುಂಬಾ ಆಸಕ್ತಿದಾಯಕ ವಿಚಾರವೆಂದರೆ ಆತನ ಕುಟುಂಬದವರು ಕೂಡ ಇದಕ್ಕೆ ಪ್ರೋತ್ಸಾಹ ನೀಡುತ್ತಲಿದ್ದರು. ಯಾಕೆಂದರೆ ಅವರು ಕೂಡ ದಿನಾಂಕ ಮುಕ್ತಾಯಗೊಂಡಿರುವಂತಹ ಆಹಾರವನ್ನೇ ಸೇವಿಸುತ್ತಿದ್ದರು.

ಮೆರಿಲ್ಯಾಂಡ್‌ನ ಈ ವ್ಯಕ್ತಿ ಉತ್ಪನ್ನಗಳಲ್ಲಿ ಇರುವಂತಹ ಎಕ್ಸ್ ಪಯರಿ ದಿನಾಂಕದ ಬಗ್ಗೆ ಇರುವಂತಹ ಸುಳ್ಳನ್ನು ಆತ ಹೊರಗೆ ಹಾಕಲು ಬಯಸಿದ್ದ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧಾರ ಮಾಡಿದ್ದ. ಎಕ್ಸ್ ಪಯರಿ ಆಗಿರುವ ಆಹಾರವು ಅನಾರೋಗ್ಯಕರ ಎನ್ನುವುದನ್ನು ಆತ ಸುಳ್ಳು ಎಂದು ಸಾಬೀತು ಮಾಡಲು ಬಯಸಿದ್ದ. ವರ್ಷಗಳ ಕಾಲ ಆತ ಇದನ್ನು ಸೇವಿಸಿದ ಮತ್ತು ಆರೋಗ್ಯವಾಗಿಯೂ ಇದ್ದ.

Most Read: ಬೆಲೆ ನೋಡುವ ಮೊದಲು ಎಕ್ಸ್‎ಪೈರಿ ಡೇಟ್ ಗಮನಿಸಿ...

ದಿನಾಂಕ ಮುಕ್ತಾಯಗೊಂಡಿರುವ ಆಹಾರ ಸೇವನೆ ಮಾಡುವ ಆಲೋಚನೆ ಮಾಡಿದ್ದು ಸ್ಕಾಟ್ ನ್ಯಾಶ್ ಎಂಬಾತ. ಆತ ದಿನಾಂಕ ಮುಕ್ತಾಯವಾಗಿದ್ದ ಮೊಸರು ಸೇವಿಸಿ ಇದನ್ನು ಆರಂಭ ಮಾಡಿದ್ದ. ಫ್ರಿಡ್ಜ್ ನಲ್ಲಿ ಇಟ್ಟಿದ್ದ ಮೊಸರು ಹಲವಾರು ಸಮಯದಿಂದ ಹಾಗೆ ಉಳಿದಿತ್ತು. ಮೊಸರಿನ ದಿನಾಂಕ ಮುಕ್ತಾಯಗೊಂಡು ಅದಾಗಲೇ ಆರು ತಿಂಗಳು ಉರುಳಿತ್ತು. ಇದನ್ನು ಆತ ಸ್ಮೂಥಿಗೆ ಮಿಶ್ರಣ ಮಾಡಿಕೊಂಡು ಸೇವಿಸಿದ. ಮೊಸರಿನ ರುಚಿಯಲ್ಲಿ ಯಾವುದೇ ರಿತಿಯ ಬದಲಾವಣೆಗಳು ಆಗಿರಲಿಲ್ಲ ಮತ್ತು ಇದನ್ನು ಸೇವಿಸಿದ ಬಳಿಕ ತನಗೆ ಆರೋಗ್ಯ ಸಮಸ್ಯೆಯು ಕಾಡಿಲ್ಲವೆಂದು ಸ್ಕಾಟ್ ಹೇಳುತ್ತಾರೆ. ಕಂಪೆನಿಗಳು ಎಕ್ಸ್ ಪಯರಿ ದಿನಾಂಕವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತದೆ ಎಂದು ಆತ ತಿಳಿಯಲು ಬಯಸಿದ.

ಕಟ್ಟಾ ಪರಿಸರವಾದಿಯಾಗಿರುವ ಸ್ಕಾಟ್ ಮೊಮ್ಸ್ ಆರ್ಗೆನಿಕ್ ಮಾರ್ಕೆಟ್ ನ ಮಾಲಕರು ಕೂಡ. ಎಕ್ಸ್ ಪಯರಿ ದಿನಾಂಕ ಮುಗಿದಿರುವ ಆಹಾರದ ಬಗ್ಗೆ ಅವರು ಅಧ್ಯಯನ ಮಾಡಲು ಬಯಸಿದರು. ಎಕ್ಸ್ ಪಯರಿ ಆಗಿರುವ ಆಹಾರ ಸೇವನೆ ಮಾಡಿದ ಅನುಭವದ ಬಗ್ಗೆ ಅವರು ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಆಹಾರ ಉತ್ಪನ್ನಗಳಿಗೆ ದಿನಾಂಕ ಹಾಕುವ ಬಗ್ಗೆ ಸರಿಯಾದ ಕ್ರಮವನ್ನು ಅಳವಡಿಸಿಕೊಳ್ಳಬೇಕು ಮತ್ತು ಇದನ್ನು ಪುನರಾವಲೋಕಿಸಬೇಕು. ಇದರಿಂದಾಗಿ ಆಹಾರ ಉತ್ಪನ್ನಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ.

ಒಂದು ವರ್ಷಗಳ ಕಾಲ ಸ್ಕಾಟ್ ಮತ್ತು ಆತನ ಕುಟುಂಬವು ಎಕ್ಸ್ ಪಯರಿ ದಿನಾಂಕ ಆಗಿರುವಂತಹ ಆಹಾರ ಸೇವನೆ ಮಾಡಿದೆ. ಆರು, ಎಂಟು ಅಥವಾ 9 ತಿಂಗಳು ಹಳೆಯ ಮೊಸರನ್ನು ಸೇವಿಸಿದ್ದೇವೆ ಮತ್ತು ಎಕ್ಸ್ ಪಯರಿ ಆದ ಒಂದು ವಾರದ ಬಳಿಕ ಮಾಂಸವನ್ನು ಸೇವಿಸಿದ್ದೇವೆ. ಕುಟುಂಬದ ಎಲ್ಲರೂ ಆರೋಗ್ಯವಾಗಿದ್ದೇವೆ ಎಂದು ಸ್ಕಾಟ್ ತಿಳಿಸಿದ್ದಾರೆ. ಫ್ರಿಡ್ಜ್ ನಲ್ಲಿ ತಿಂಗಳುಗಳ ಕಾಲ ಇಟ್ಟಿದ್ದ ಬೆಣ್ಣೆಯನ್ನು ಕೂಡ ಕುಟುಂಬದವರು ತಿಂದಿದ್ದಾರೆ. ಇದರಲ್ಲಿ ಶಿಲೀಂಧ್ರ ತುಂಬಿತ್ತು. ಇದನ್ನು ತೆಗೆದು ತಿಂದಿದ್ದೇವೆ ಎಂದವರು ಹೇಳಿದ್ದಾರೆ.

ಆಹಾರ ಉತ್ಪನ್ನ ಕಂಪೆನಿಗಳು ಎಕ್ಸ್ ಪಯರಿ ದಿನಾಂಕವನ್ನು ಹಾಕಿಕೊಂಡು ಹಳೆದಾಗಿರುವುದನ್ನು ಎಸೆಯುವಂತೆ ಮಾಡುತ್ತದೆ. ಇದರಿಂದ ಜನರು ಹೊಸತನ್ನು ಖರೀದಿ ಮಾಡುತ್ತಾರೆ ಎಂದು ಸ್ಕಾಟ್ ಬಹಿರಂಗಪಡಿಸಿದ್ದಾರೆ.

   
 
ಹೆಲ್ತ್