Back
Home » ಗಾಸಿಪ್
ಹಾಲಿವುಡ್ ಗೆ ಹಾರಿದ ಕಾಜಲ್ ಅಗರ್ ವಾಲ್.!
Oneindia | 5th Jul, 2019 02:21 PM

ಪ್ರಿಯಾಂಕಾ ಚೋಪ್ರಾ, ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಸೇರಿದಂತೆ ಈಗಾಗಲೇ ಹಲವು ಬಾಲಿವುಡ್ ನಟ, ನಟಿಯರು ಹಾಲಿವುಡ್ ಸಿನಿಮಾ ಮಾಡಿ ಬಂದಿದ್ದಾರೆ. ಈಗ ಮತ್ತೊಬ್ಬ ಭಾರತೀಯ ನಟಿ ಕಾಜಲ್ ಅಗರ್ ವಾಲ್ ಈ ಪಟ್ಟಿಗೆ ಸೇರುತ್ತಿದ್ದಾರೆ.

ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡಿರುವ ಕಾಜಲ್ ಈಗ ಹಾಲಿವುಡ್ ಇಂಡಸ್ಟ್ರಿಯಲ್ಲಿ ಅದೃಷ್ಟದ ಬಾಗಿಲು ತೆಗೆಯಲು ಮುಂದಾಗಿದ್ದಾರೆ. ಈ ಸಿನಿಮಾ ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆಯಂತೆ.

ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ಕಾಜಲ್ ಗೆ ನೆಟ್ಟಿಗರಿಂದ ಮೆಚ್ಚುಗೆ

ಹೌದು, ಕಾಜಲ್ ಅಗರ್ ವಾಲ್ ಮತ್ತು ಮಂಚು ವಿಷ್ಣು ಅಭಿನಯಿಸಲಿರುವ ಮುಂದಿನ ಚಿತ್ರವನ್ನ ತೆಲುಗು ಮತ್ತು ಇಂಗ್ಲಿಷ್ ಭಾಷೆಯಲ್ಲಿ ತಯಾರಾಗಲಿದೆ. ಇದು ದ್ವಿಭಾಷಾ ಚಿತ್ರವಾಗಿದ್ದು, ಏಕಕಾಲದಲ್ಲಿ ತೆಲುಗು ಮತ್ತು ಇಂಗ್ಲಿಷ್ ನಲ್ಲಿ ಬಿಡುಗಡೆಯಾಗಲಿದೆಯಂತೆ.

ಈಗಾಗಲೇ ಕಥೆ ಕೇಳಿ ಇಷ್ಟಪಟ್ಟಿರುವ ಇಬ್ಬರು ಸದ್ಯದಲ್ಲೇ ಹಾಲಿವುಡ್ ಸಿನಿಮಾ ತಂಡ ಸೇರಲಿದ್ದಾರಂತೆ. ನ್ಯೂಯಾರ್ಕ್ ನಲ್ಲಿ ಚಿತ್ರೀಕರಣ ನಡೆಯಲಿದ್ದು ಅದಕ್ಕಾಗಿ ತಯಾರಿ ನಡೆಯುತ್ತಿದೆಯಂತೆ.

ಭಾರತದ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ.!

ಇನ್ನುಳಿದಂತೆ ರಮೇಶ್ ಅರವಿಂದ್ ನಿರ್ದೇಶನದ 'ಪ್ಯಾರಿಸ್ ಪ್ಯಾರಿಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಕೋಮಲಿ' ಎಂಬ ಚಿತ್ರವೊಂದನ್ನ ಮಾಡುತ್ತಿದ್ದಾರೆ. ಅದರ ಜೊತೆಯಲ್ಲೇ 'ರಣರಂಗಂ' ಎಂಬ ಇನ್ನೊಂದು ಚಿತ್ರದಲ್ಲೂ ನಟಿಸಲಿದ್ದಾರೆ. ಈ ಕಡೆ ಕಮಲ್ ಹಾಸನ್ ಅಭಿನಯಿಸಲಿರುವ 'ಇಂಡಿಯನ್-2' ಚಿತ್ರದಲ್ಲೂ ಕಾಜಲ್ ನಟಿಸುವ ಸಾಧ್ಯತೆ ಇದೆಯಂತೆ.

   
 
ಹೆಲ್ತ್