Back
Home » ಆರೋಗ್ಯ
ಅಧ್ಯಯನದ ಪ್ರಕಾರ: ಗ್ರೀನ್ ಟೀಯಿಂದ ಬಾಯಿಯ ಕ್ಯಾನ್ಸರ್ ನಿವಾರಣೆ!
Boldsky | 5th Jul, 2019 03:45 PM

ಇಂದಿನ ದಿನಗಳಲ್ಲಿ ಗ್ರೀನ್ ಟೀ ಅತೀ ಹೆಚ್ಚು ಜನಪ್ರಿಯವಾಗಿರುವಂತಹ ಪಾನೀಯವಾಗಿದೆ. ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ಅದೇ ರೀತಿಯಾಗಿ ಹಲವಾರು ಕಾಯಿಲೆಗಳು ಬರದಂತೆ ತಡೆಯುತ್ತದೆ. ಇದರಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಇರುವ ಕಾರಣದಿಂದಾಗಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈಗ ಗ್ರೀನ್ ಟೀ ಬಗ್ಗೆ ಮತ್ತೊಂದು ಅಂಶವು ಬಹಿರಂಗವಾಗಿದೆ. ಅದೇನೆಂದರೆ ಗ್ರೀನ ಟೀಯು ಆರೋಗ್ಯವಂತ ಅಂಗಾಂಶಗಳಿಗೆ ಯಾವುದೇ ರಿತಿಯ ಹಾನಿ ಉಂಟು ಮಾಡದೆ ಬಾಯಿಯ ಕ್ಯಾನ್ಸರ್‌ನ್ನು ಕೊಲ್ಲಲು ನೆರವಾಗವುದು.

ಇತ್ತೀಚೆಗೆ ನಡೆಸಿರುವ ಅಧ್ಯಯನವೊಂದರ ಪ್ರಕಾರ ಗ್ರೀನ್ ಟೀಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಬಾಯಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಜತೆಗೆ ಇದು ಆರೋಗ್ಯವಂತ ಅಂಗಾಂಶಗಳು ಹಾಗೆ ಉಳಿಯಲು ನೆರವಾಗುವುದು. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಹೇಳುವ ಪ್ರಕಾರ ಈ ಅಧ್ಯಯನದಿಂದ ಬಾಯಿಯ ಕ್ಯಾನ್ಸರ್ ಮತ್ತು ಇತರ ಕೆಲವೊಂದು ವಿಧದ ಕ್ಯಾನ್ಸರ್ ನ ಚಿಕಿತ್ಸೆಗೆ ಇದು ನೆರವಾಗಲಿದೆ ಎಂದು ಹೇಳಲಾಗಿದೆ.

Most Read: ಗ್ರೀನ್ ಟೀ- ಯಾವ ಸಮಯದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?

ಗ್ರೀನ್ ಟೀಯಲ್ಲಿ ಕಂಡುಬರುವಂತಹ ಎಪಿಗಲ್ಲೊಕಾಟೆಚಿನ್ -3-ಗ್ಯಾಲೇಟ್ ಎನ್ನುವ ಶವು ಬಾಯಿಯಲ್ಲಿನ ಕ್ಯಾನ್ಸರ್ ಅಂಗಾಂಶಗಳನ್ನು ಕೊಲ್ಲುವುದು ಮತ್ತು ಇದು ಆರೋಗ್ಯವಂತ ಅಂಗಾಂಶಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಜಿಸಿಜಿಯು ಮೆಟೊಕಾಂಡ್ರಿಯಾದಲ್ಲಿ ಉಂಟು ಮಾಡುವಂತಹ ಒಂದು ಪ್ರಕ್ರಿಯೆಯಿಂದ ಕೆಲವೊಂದು ಅಂಗಾಂಶಗಳು ಸಾಯಬಹುದು ಎಂದು ಹೇಳಲಾಗಿದೆ.

ಕ್ಯಾನ್ಸರ್ ಕೋಶಗಳನ್ನು ಅದು ದಾಳಿ ಮಾಡುವುದು ಯಾಕೆ ಎನ್ನುವುದಕ್ಕೆ ಕಾರಣ ಮಾತ್ರ ಅಧ್ಯಯನದಿಂದಲೂ ತಿಳಿದುಬಂದಿಲ್ಲ ದು ಪೆನ್ನ ಸ್ಟೇಟ್ ಸೆಂಟರ್ ಫಾರ್ ಫ್ಲಾಂಟ್ ಆಂಡ್ ಮಶ್ರೂಮ್ ಫುಡ್ ನ ಸಹ ನಿರ್ದೇಶಕರಾಗಿರುವಂತಹ ಜೊಶ್ವಾ ಲಾಂಬೆರ್ಟ್ ಹೇಳಿದ್ದಾರೆ.

ಇಜಿಸಿಜಿಯು ಮೆಟೊಕಾಂಡ್ರಿಯಾವನ್ನು ಹಾನಿ ಮಾಡಲು ಏನಾದರೂ ಮಾಡುತ್ತದೆ ಮತ್ತು ಮೆಟೊಕಾಂಡ್ರಿಯಾದಿಂದ ಆಗುವ ಹಾಇಯು ಇನ್ನು ಹೆಚ್ಚಿನ ಹಾನಿ ಉಂಟು ಮಾಡುವುದು ಮತ್ತು ಅಂಗಾಂಶಗಳು ಒಂದು ಕ್ರಮಬದ್ಧವಾದ ಸಾವಿಗೀಡಾಗುತ್ತದೆ ಎಂದು ಲಾಂಬೆರ್ಟ್ ಅವರು ವಿವರಿಸಿದ್ದಾರೆ.

ಇಜಿಸಿಯು ಕ್ಯಾನ್ಸರ್ ಅಂಗಾಂಶಗಳಲ್ಲಿ ಆಕ್ಸಿಜನ್ ಪ್ರತಿಕ್ರಿಯಾತ್ಮಕತೆ ಉಂಟು ಮಾಡುತ್ತದೆ ಮತ್ತು ಇದರಿಂದಾಗಿ ಮೆಟೊಕಾಂಡ್ರಿಯಾಗೆ ಹಾನಿ ಆಗುತ್ತದೆ. ಮೆಟೊಕಾಂಡ್ರಿಯಾವು ಮತ್ತಷ್ಟು ಆಮ್ಲಜನಕ ಪ್ರತಿಕ್ರಿಯಾತ್ಮಕತೆಯಿಂದ ಪ್ರತಿಕ್ರಿಯಿಸುವುದು ಎಂದು ಅವರು ಹೇಳಿದ್ದಾರೆ.

Most Read: ಆರೋಗ್ಯ ಟಿಪ್ಸ್: ನೋಡಿ ಇದೇ ಕಾರಣಕ್ಕೆ 'ಗ್ರೀನ್ ಟೀ' ಕುಡಿಯಬೇಕು ಅನಿಸುವುದು!

ಮೆಟೊಕಾಂಡ್ರಿಯಾದ ಅವನತಿಯು ಆಗುತ್ತಿರುವಂತೆ ಕ್ಯಾನ್ಸರ್ ಕೋಶಗಳು ಕೂಡ ಕಡಿಮೆ ಆಗುತ್ತದೆ. ಆಂಟಿಆಕ್ಸಿಡೆಂಟ್ ಜಿನ್ ಗಳು ಇನ್ನಷ್ಟು ಇದನ್ನು ಕುಗ್ಗಿಸುವುದು. ಇದೇ ವೇಳೆ ಇಜಿಸಿಜಿಯು ಆಕ್ಸಿಡೇಟಿವ್ ಒತ್ತಡವನ್ನು ಹಾಕುತ್ತಿರುವಾಗ ಅದು ತಮ್ಮ ಕ್ರಮದಿಂದ ರಕ್ಷಣೆಗೆ ಮುಂದಾಗುವುದು ಎಂದು ಲಾಂಬೆರ್ಟ್ ತಿಳಿಸಿದ್ದಾರೆ. ಇಜಿಸಿಜಿಯು ಈ ಪರಿಣಾಮವನ್ನು ಸಾಮಾನ್ಯ ಅಂಗಾಂಶಗಳ ಮೇಲೆ ಉಂಟು ಮಾಡುವುದಿಲ್ಲ. ಅಧ್ಯಯನಗಳು ಹೇಳಿರುವ ಪ್ರಕಾರ ಇದು ಕೋಶಗಳ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವುದು. ಈ ಅಧ್ಯಯನ ವರದಿಯನ್ನು ಜರ್ನಲ್ ಮೊಲೆಕ್ಯುಲರ್ ನ್ಯೂಟ್ರಿಷನ್ ಆಂಡ್ ಫುಡ್ ರಿಸರ್ಚ್ ನಲ್ಲಿ ಪ್ರಕಟಿಸಲಾಗಿದೆ.

   
 
ಹೆಲ್ತ್