Back
Home » ಬಾಲಿವುಡ್
ಈ ಸ್ಟಾರ್ ನಟ ಯಾರು ಅಂತ ಗುರುತಿಸಬಲ್ಲಿರಾ?
Oneindia | 6th Jul, 2019 12:15 PM

ಗಂಭೀರ ನೋಟ, ಕೈಯಲ್ಲಿ ಬಾಲು, ಬಿಳಿ ಶರ್ಟ್ ಈ ಫೋಟೋ ನೋಡ್ತಿದ್ರೆ ಒಬ್ಬ ಕ್ರಿಕೆಟರ್ ಅಂತ ಪಕ್ಕ ಗೊತ್ತಾಗುತ್ತೆ. ಅದರಲ್ಲೂ ಈ ಲುಕ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, 1983ರಲ್ಲಿ ಮೊದಲ ಭಾರಿಗೆ ಕ್ರಿಕೆಟ್ ವಿಶ್ವಕಪ್ ಗೆದ್ದ ನಾಯಕ ಕಪಿಲ್ ನೆನಪುತರುತ್ತೆ. ನೋಡಲು ಥೇಟ್ ಕಪಿಲ್ ದೇವ್ ಹಾಗೆ ಕಾಣ್ತಿದ್ದಾರೆ. ಆದ್ರೆ ಕಪಿಲ್ ದೇವ್ ಅಲ್ಲ.

ಕಪಿಲ್ ದೇವ್ ಹಾಗೆ ಪೋಸ್ ಕೊಟ್ಟಿರುವ ಈ ವ್ಯಕ್ತಿ ಬಾಲಿವುಡ್ ನ ಖ್ಯಾತ ನಟ ರಣ್ವೀರ್ ಸಿಂಗ್. ಹೌದು, ಇದು ರಣ್ವೀರ್ ಸಿಂಗ್ ಅವರೆ. ರಣ್ವೀರಿ ಸದ್ಯ '83' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 1983ರಲ್ಲಿ ಭಾರತೀಯ ಕ್ರಿಕೆಟ್ ಟೀಂ ವಿಶ್ವಕಪ್ ಗೆದ್ದು ಬೀಗಿದ್ದ ಐತಿಹಾಸಿಕ ಕ್ಷಣ ತೆರೆಮೇಲೆ ಬರುತ್ತಿದೆ. ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

2020 ಏಪ್ರಿಲ್ 10ಕ್ಕೆ ಮತ್ತೆ ಶುರುವಾಗಲಿದೆ ವಿಶ್ವಕಪ್

ಇಂದು ರಣ್ವೀರ್ ಸಿಂಗ್ ಹುಟ್ಟಹಬ್ಬದ ಪ್ರಯುಕ್ತ 83 ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ಈ ಲುಕ್ ನೋಡಿದ ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ದಾರೆ. ಪಾತ್ರಕ್ಕಾಗಿ ರಣ್ವೀರ್ ಸಿಂಗ್ ಬದಲಾವಣೆ ನೋಡಿ ವಾವ್ ಎನ್ನುತ್ತಿದ್ದಾರೆ. ಪ್ರತಿ ಪಾತ್ರಕ್ಕೂ ಬದಲಾಗುವ ರಣ್ವೀರ್ ಲುಕ್ ನಿಜಕ್ಕು ಅಚ್ಚರಿ ಮೂಡಿಸುತ್ತಿದೆ.

ಅಂದ್ಹಾಗೆ 83 ಸಿನಿಮಾ ಮುಂದಿನ ವರ್ಷ ತೆರೆಮೇಲೆ ಬರುತ್ತಿದೆ. ಈ ವರ್ಷ ವಿಶ್ವ ಕಪ್ ನೋಡಿ ಎಂಜಾಯ್ ಮಾಡುತ್ತಿರುವ ಸಿನಿ ಮತ್ತು ಕ್ರಿಕೆಟ್ ಪ್ರಿಯರು, ಮುಂದಿನ ವರ್ಷವು ವಿಶ್ವ ಕಪ್ ನೋಡಲು ತಯಾರಾಗಿದ್ದಾರೆ. 2020 ಏಪ್ರಿಲ್ 1ಕ್ಕೆ 83 ಸಿನಿಮಾ ತೆರೆಗ ಬರುತ್ತಿದೆ. ಮತ್ತೊಮ್ಮೆ 1983ರ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಬೇಕು ಅಂದ್ರೆ ಒಂದು ವರ್ಷ ಕಾಯಲೆ ಬೇಕು.

   
 
ಹೆಲ್ತ್