Back
Home » ಸಮ್ಮಿಲನ
ವಿಶ್ವಕಪ್ 2019: 87 ವರ್ಷದ ಕ್ರಿಕೆಟ್ ಪ್ರೇಮಿ ಅಜ್ಜಿ ಈಗ ದಿನೇ ದಿನೇ ಜನಪ್ರಿಯ!
Boldsky | 6th Jul, 2019 01:30 PM

ಭಾರತದಲ್ಲಿ ಕ್ರಿಕೆಟ್ ಎನ್ನುವುದು ಒಂದು ಧರ್ಮವಿದ್ದಂತೆ. ಅದರಲ್ಲೂ ವಿಶ್ವಕಪ್ ಎಂದರೆ ಆಗ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಊಟ ನಿದ್ದೆ ಬಿಟ್ಟು ಪ್ರತಿಯೊಂದು ಪಂದ್ಯವನ್ನು ವೀಕ್ಷಿಸುತ್ತಾನೆ. ಕ್ರಿಕೆಟಿಗೆ ಯಾವುದೇ ವಯಸ್ಸಿನ ಅಂತರವಿಲ್ಲ. ಕಪಿಲ್ ದೇವ್ ವಿಶ್ವಕಪ್ ಗೆದ್ದಾಗ ಯುವಕರಾಗಿದ್ದಂತಹ ಜನರು ಇಂದು ತಮ್ಮ ಇಳಿ ವಯಸ್ಸಿನಲ್ಲಿದ್ದಾರೆ. ಇಂತಹ ಅಭಿಮಾನಿಗಳು ಇಂದಿಗೂ ಕ್ರಿಕೆಟನ್ನು ಅತಿಯಾಗಿ ಪ್ರೀತಿಸುತ್ತಾರೆ. ಯುವಜನರಿಗೆ ಹೊಡೆಬಡಿಯ ಕ್ರಿಕೆಟ್ ಇಷ್ಟವಾದರೆ, ಇಳಿವಯಸ್ಸಿನವರಿಗೆ ಟೆಸ್ಟ್ ಹಾಗೂ ಏಕದಿನ ಎರಡೂ ಬಗೆಯ ಕ್ರಿಕೆಟ್ ಇಷ್ಟವಾಗುವುದು. ಇಷ್ಟೆಲ್ಲಾ ಪೀಠಿಕೆ ಹಾಕಿರುವುದು ಇತ್ತೀಚೆಗೆ ವಿಶ್ವಕಪ್ ನಲ್ಲಿ ಇಳಿ ವಯಸ್ಸಿನ ಮಹಿಳಾ ಅಭಿಮಾನಿಯೊಬ್ಬರು ದಿನ ಬೆಳಗಾಗುದರೊಳಗಡೆ ವಿಶ್ವ ಮಟ್ಟದಲ್ಲಿ ಜನಪ್ರಿಯರಾದರು.

ವಿಶ್ವಕಪ್ ನಲ್ಲಿ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಾಸ್ಟನ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೀಂ ಇಂಡಿಯಾದ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಸೂಪರ್ ದಾದಿ ಅವರು ಈಗ ಇಂಟರ್ನೆಟ್ ನಲ್ಲಿ ಎಲ್ಲರ ಮನಗೆದ್ದಿದ್ದಾರೆ. 28 ರನ್ ಗಳಿಂದ ಪಂದ್ಯವನ್ನು ಗೆದ್ದಿರುವುದು ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸವನ್ನು ಉಂಟು ಮಾಡಿದೆ. ಅದೇ ರೀತಿಯಾಗಿ ಪಂದ್ಯದ ವೇಲೆ ಪದೇ ಪದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡು, ಟೀಂ ಇಂಡಿಯಾವನ್ನು ಬೆಂಬಲಿಸುತ್ತಾ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದರು.

Most Read: ಒಂದು ವರ್ಷ ಕಾಲ ಎಕ್ಸ್‎ಪೈರಿ ಡೇಟ್ ಮುಗಿದ ಆಹಾರ ಸೇವಿಸಿದ ವ್ಯಕ್ತಿ!

ತಾಂಜೇನಿಯಾದಲ್ಲಿ ಹುಟ್ಟಿ ಇಂಗ್ಲೆಂಡಿನಲ್ಲಿ ನೆಲೆಸಿರುಂತಹ 87ರ ಹರೆಯದ ಚಾರುಲತಾ ಪಟೇಲ್ ಅವರು ತನ್ನ 45ನೇ ವಯಸ್ಸಿನಲ್ಲಿ ಮೊದಲ ವಿಶ್ವಕಪ್ ನ್ನು ವೀಕ್ಷಿಸಿದ್ದರು. ಇದರ ಬಳಿಕ ಅವರು ಹೆಚ್ಚಿನ ಪಂದ್ಯಗಳನ್ನು ನೋಡುತ್ತಲೇ ಇದ್ದರು. ಈ ವಿಶ್ವಕಪ್ ನಲ್ಲಿ ವೀಲ್ಹ್ ಚೇರ್ ನಲ್ಲಿ ಕುಳಿತುಕೊಂಡಿದ್ದರೂ ಅವರು ವಿಸಿಲ್ ಹಾಕಿಕೊಂಡು ತನ್ನ ಕ್ರಿಕೆಟ್ ಅಭಿಮಾನವನ್ನು ಪ್ರದರ್ಶಿಸುತ್ತಿದ್ದರು.

ಎಸ್ ಬಿಎಸ್ ಗೆ ನೀಡಿರುವಂತಹ ಸಂದರ್ಶನದಲ್ಲಿ ಅವರ ಕುಟುಂಬ ಸದಸ್ಯರು ಹೇಳುವ ಪ್ರಕಾರ ಅವರು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯದ ಬಳಿಕ ಎಂಎಸ್ ಧೋನಿ ಅವರನ್ನು ಭೇಟಿ ಮಾಡಿದ್ದರು. ಈ ಘಟನೆ ಬಳಿಕ ಅವರು ಸ್ಟೇಡಿಯಂಗೆ ಹೋಗಿ ಪಂದ್ಯ ವೀಕ್ಷಿಸಲು ನಿರ್ಧರಿಸಿದ್ದರು. ಆಕೆಗೆ ಸರಿಯಾಗಿ ನಡೆಯಲು ಸಾಧ್ಯವಾಗದೆ ಇರುವ ಕಾರಣದಿಂದಾಗಿ ಅವರನ್ನು ವೀಲ್ಹ್ ಚೇರ್ ನಲ್ಲಿ ಕರೆದುಕೊಂಡು ಬರಲಾಗಿದೆ. ಅವರಿಂದಾಗಿ ಮತ್ತಷ್ಟು ಅಭಿಮಾನಿಗಳು ಪ್ರೇರಣೆ ಪಡೆದುಕೊಂಡಿದ್ದಾರೆ.

ನಿವೃತ್ತಿ ಜೀವನ ನಡೆಸುತ್ತಿರುವ ಚಾರುಲತಾ ಅವರು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನನಾಯಕ ರೋಹಿತ್ ಶರ್ಮಾ ಅವರನ್ನು ಸ್ಟೇಡಿಯಂನಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಅವರಿಬ್ಬರು ಅವರ ಆಶೀರ್ವಾದ ಕೂಡ ಪಡೆದುಕೊಂಡಿದ್ದಾರೆ. ಇದು ತುಂಬಾ ಮನಕರಗುವ ಕ್ಷಣವಾಗಿತ್ತು ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಸೌರವ್ ಗಂಗೂಲಿ, ಮೈಕಲ್ ವಾವನ್ ಮತ್ತು ವೀರೇಂದ್ರ ಸೇವಾಗ್ ಅವರಿಂದ ಹೊಗಲಿಸಿಕೊಂಡಿರುವಂತಹ ಪಟೇಲ್ ಅವರ ಕ್ರಿಕೆಟ್ ಅಭಿಮಾನವು ತುಂಬಾ ಪ್ರಾಮಾಣಿಕ ವಾಗಿರುವುದು ಎಂದು ಹೇಳಲಾಗಿದೆ.

Most Read:ಬಿಯರ್‌ನಿಂದಾಗಿ ಸಂಧಿವಾತ ತಂದುಕೊಂಡ ಯುವಕ

ಈ ಕಥೆಯು ಇಲ್ಲಿಗೆ ಅಂತ್ಯವಾಗುವುದಿಲ್ಲ.

ಸಂವೇದನಾಶೀಲ ಸುದ್ದಿ ಮತ್ತು ಕಥೆಗಳ ಬಗ್ಗೆ ತುಂಬಾ ಆಕರ್ಷಕ ಕಾರ್ಟೂನ್ ಗಳನ್ನು ತಯಾರಿಸುವ ಅಮೂಲ್ ಇಂಡಿಯಾವು ಈ ಇಳಿವಯಸ್ಸಿನ ಅಭಿಮಾನಿಗೆ ತಮ್ಮ ಅಭಿನಂದನೆ ಸಲ್ಲಿಸಿದೆ. ಇದಕ್ಕೆ ಭಾರತದ ಅಜ್ಜಿ ಎಂದು ಶಿರೋನಾಮೆಯನ್ನು ನೀಡಿದೆ. ಇಲ್ಲಿ ಅಜ್ಜಿಯ ಸುತ್ತಲು ಅಮೂಲ್ ನ ಹುಡುಗಿ ಮತ್ತು ಇತರ ಕೆಲವು ಬಾಲಕಿಯರು ಟೀಂ ಇಂಡಿಯಾವನ್ನು ಪ್ರೋತ್ಸಾಹಿಸುವುದನ್ನು ನೋಡಬಹುದು.

ಉದ್ಯಮಿ ಆನಂದ್ ಮಹೀಂದ್ರಾ ಅವರು ಚಾರುಲತಾ ಪಟೇಲ್ ಅವರಿಂದ ಪ್ರೇರಣೆ ಪಡೆದುಕೊಂಡಿದ್ದಾರೆ ಮತ್ತು ಚಾರುಲತಾ ಅವರು ಟೀಂ ಇಂಡಿಯಾಗೆ ತುಂಬಾ ಅದೃಷ್ಟ ಎಂದು ಹೇಳಿದ್ದಾರೆ. 64ರ ಹರೆಯದ ಮಹೀಂದ್ರಾದ ಮಾಲಕರು ಚಾರುಲತಾ ಪಟೇಲ್ ಅವರು ಟಿಕೆಟ್ ಖರ್ಚನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಪ್ರತಿದಿನವೂ ಈ ಸೂಪರ್ ಅಜ್ಜಿಯ ಜನಪ್ರಿಯತೆಯು ಹೆಚ್ಚುತ್ತಲೇ ಇದೆ ಮತ್ತು ಪೆಪ್ಸಿ ಕೂಡ ತನ್ನ ಮುಂದಿನ ಜಾಹೀರಾತಿನಲ್ಲಿ ಈ ಅಜ್ಜಿಯನ್ನು ಹಾಕಿಕೊಂಡು ಜಾಹೀರಾತು ಮಾಡುವ ಬಗ್ಗೆ ಆಲೋಚನೆ ಮಾಡುತ್ತಿರಬಹುದು! ಹೀಗೆ ಆದರೆ ಅದು ತುಂಬಾ ಆಕರ್ಷಣೀಯವಾಗಿರಲಿದೆ. ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎನ್ನುವುದು ಇವರನ್ನು ನೋಡಿ ದೃಢವಾಗಿ ಹೇಳಬಹುದು.

   
 
ಹೆಲ್ತ್