Back
Home » ಆರೋಗ್ಯ
ಮಹಿಳೆಯರಲ್ಲಿ ಅಸ್ಥಿರಂಧ್ರತೆ: ಕಾರಣಗಳು, ಅಪಾಯಗಳು ಹಾಗೂ ಚಿಕಿತ್ಸೆಯ ವಿಧಾನಗಳು
Boldsky | 8th Jul, 2019 11:23 AM

ವಿಶ್ವದಾದ್ಯಂತ ಸುಮಾರು 200 ಮಿಲಿಯನ್ ಮಹಿಳೆಯರಿಗೆ ಅಸ್ಥಿರಂಧ್ರತೆ ಸಮಸ್ಯೆಯು ಕಾಡುವುದು ಎಂದು ಅಂತಾರಾಷ್ಟ್ರೀಯ ಅಸ್ಥಿರಂಧ್ರತೆ ಫೌಂಡೇಶನ್ ಗಣತಿ ಮಾಡಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಈ ಸಮಸ್ಯೆಗೀಡಾಗುವುದು ಹೆಚ್ಚು ಎಂದು ಹೇಳಲಾಗುತ್ತಿದೆ. ಮಹಿಳೆಯರಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿರುವುದು. ಯಾಕೆಂದರೆ ವಯಸ್ಸಾಗುತ್ತಾ ಹೋದಂತೆ ಮಹಿಳೆಯರಲ್ಲಿ ಮೂಳೆ ಸಾಂದ್ರತೆಯು ಕಡಿಮೆಯಾಗುವುದು.

20ರಿಂದ 80ರ ಹರೆಯದ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ತಮ್ಮ ಸೊಂಟ ಮೂಳೆಯ ಸಾಂದ್ರತೆ ಕಳೆದುಕೊಳ್ಳುವರು. ಋತುಬಂಧದ ಬಳಿಕ ಈ ಸಮಸ್ಯೆಯು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಯಾಕೆಂದರೆ ಈ ವೇಳೆ ಮೂಳೆಯು ಸಾಂದ್ರತೆ ಕಳೆದುಕೊಂಡು ದುರ್ಬಲವಾಗುವುದು. ಬಿಳಿ ಮತ್ತು ಏಶ್ಯಾದ ಮಹಿಳೆಯರು ಇಂತಹ ಅಪಾಯಕ್ಕೆ ಸಿಲುಕುವುದು ಹೆಚ್ಚು ಎಂದು ಅಧ್ಯಯನಗಳು ಹೇಳಿವೆ.

ಮೂಳೆ ಮರುಹೀರುವಿಕೆ ಎನ್ನುವದು ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದು ಮೂಳೆಯ ಅಂಗಾಂಶಗಳಲ್ಲಿನ ಕ್ಯಾಲ್ಸಿಯಂನ್ನು ರಕ್ತನಾಳಗಳಿಗೆ ತಲುಪಿಸುವುದು ಮತ್ತು ಇದರಿಂದಾಗಿ ಮೂಳೆಗಳಿಗೆ ಬೆಳೆಯಲು ಇದು ಒಂದು ಸಮಸ್ಯೆಯಾಗುವುದು(ಉದಾಹರಣೆಗೆ: ವ್ಯಕ್ತಿಯ ಚಟುವಟಿಕೆಗಳಲ್ಲಿ ಬದಲಾವಣೆ) ಮತ್ತು ಹಾನಿಯನ್ನು ಸರಿಪಡಿಸುವುದು. ಅದಾಗ್ಯೂ, ಅತಿಯಾಗಿ ಮತ್ತು ಸಮತೋಲಿತ ಮಟ್ಟದಲ್ಲಿ ಮೂಳೆಗಳು ನಿರ್ಮಾಣವಾಗದಿದ್ದರೆ ಆಗ ಅದು ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರುವುದು.

ಒಂದು ಅಧ್ಯಯನದ ಪ್ರಕಾರ ದಕ್ಷಿಣ ಏಶ್ಯಾದ ಮಹಿಳೆಯರಲ್ಲಿ ಋತುಬಂಧಕ್ಕೆ ಮೊದಲು ಉನ್ನತ ಮಟ್ಟದ ಮೂತ್ರ ಎನ್ ಟರ್ಮಿನಲ್ ಟೆಲೋಪೆಪ್ಟೈಡ್ ಇರುವುದು. ಇದು ಮೂಳೆ ಮರುಹೀರುವಿಕೆಯಿಂದ ಮೂತ್ರದಲ್ಲಿ ಕಂಡುಬರುವಂತಹ ಅಂಶವಾಗಿದೆ. ಇದು ಅವರ ವಯಸ್ಸಿಗಿಂತಲೂ ಹೆಚ್ಚಿನ ಮೂಳೆ ಮರುಹೀರುವಿಕೆಯನ್ನು ತೋರಿಸುತ್ತದೆ.

ಮಹಿಳೆಯರಲ್ಲಿ ಅಸ್ಥಿರಂಧ್ರತೆಯ ಲಕ್ಷಣಗಳು

ಆರಂಭಿಕ ಹಂತದಲ್ಲಿ ಇದು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಮೂಳೆಗಳು ತುಂಬಾ ದುರ್ಬಲವಾದ ವೇಳೆ ಇದು ಲಕ್ಷಣಗಳನ್ನು ತೋರಿಸುವುದು.

•ಮೂಳೆಗಳು ಬೇಗನೆ ಮುರಿಯುವುದು

•ಬೆನ್ನು ನೋವು

•ದೇಹವು ಬಾಗಿದಂತೆ ಆಗುವುದು.

ಮಹಿಳೆಯರಲ್ಲಿ ಅಸ್ಥಿರಂಧ್ರತೆಗೆ ಕಾರಣಗಳು

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆಯು ಅತಿಯಾಗಿ ಕಂಡುಬರುವುದು. ಮೂಳೆಯ ಸಾಂದ್ರತೆ ಕಾಪಾಡುವಲ್ಲಿ ಒಸ್ಟ್ರೋಜನ್ ಎನ್ನುವ ಹಾರ್ಮೋನು ಪ್ರಮುಖ ಪಾತ್ರ ವಹಿಸುವುದು. ಆದರೆ ಮಹಿಳೆಯು ಋತುಬಂಧಕ್ಕೆ ಒಳಗಾದ ಬಳಿಕ ಇದು ಕುಗ್ಗಲು ಆರಂಭವಾಗುವುದು. ಒಸ್ಟ್ರೋಜನ್ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಕುಗ್ಗುವಿಕೆಯಿಂದಾಗಿ ಮೂಳೆ ಸಾಂದ್ರತೆಯು ಉಂಟಾಗುವುದು. ಇದುವೇ ಅಸ್ಥಿರಂಧ್ರತೆಗೆ ಕಾರಣವಾಗುವುದು.

ಇದಕ್ಕೆ ಹೊರತಾಗಿ ಮಹಿಳೆಯರಲ್ಲಿ ಅಸ್ಥಿರಂಧ್ರತೆಗೆ ಪ್ರಮುಖ ಕಾರಣಗಳೆಂದರೆ ಸ್ತನ ಕ್ಯಾನ್ಸರ್, ಕ್ಯಾಲ್ಸಿಯಂ ಕೊರತೆ, ಕಾರ್ಟಿಕೊಸ್ಟೆರಾಯ್ಡ್ ಚಿಕಿತ್ಸೆ, ತಿನ್ನುವ ಕಾಯಿಲೆ, ಅತಿಯಾದ ವ್ಯಾಯಾಮ, ಹೈಪೋಥೈರಾಯ್ಡಿಸಮ್, ಹೈಪೊಪಿಟ್ಯುಟರಿಸಂ ಮತ್ತು ವಿಟಮಿನ್ ಡಿ ಕೊರತೆ.

ಮಹಿಳೆಯರಲ್ಲಿ ಅಸ್ಥಿರಂಧ್ರತೆಯ ಅಪಾಯಗಳು

ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಅಸ್ಥಿರಂಧ್ರತೆಗೆ ಕಾರಣವಾಗುವ ಕೆಲವೊಂದು ಅಂಶಗಳು

•ವಯಸ್ಸಾಗುವುದು.

•ವರ್ಣ

•ಋತುಬಂಧ

•ದೇಹವು ತೆಳ್ಳಗಾಗುವುದು

•ಅನುವಂಶೀಯ ಪರಿಣಾಮ

•ಕೆಲವೊಂದು ಔಷಧಿಗಳು

•ಕೆಟ್ಟ ಆಹಾರ ಕ್ರಮ

•ಅಸಮತೋಲಿತ ಹಾರ್ಮೋನು ಮಟ್ಟ

•ಅತಿಯಾಗಿ ಆಲ್ಕೋಹಾಲ್ ಸೇವನೆ ಮತ್ತು ಧೂಮಪಾನ

ಕೆಲವೊಂದು ಅಪಾಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಇದರಲ್ಲಿ ಮುಖ್ಯವಾಗಿ ಲಿಂಗ, ವಯಸ್ಸು, ವರ್ಣ, ಕೌಟುಂಬಿಕ ಇತಿಹಾಸ ಮತ್ತು ದೇಹದ ವಿನ್ಯಾಸ. ಅದಾಗ್ಯೂ, ಕೆಲವೊಂದು ಅಂಶಗಳನ್ನು ಬದಲಾಯಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಆಹಾರದ ಕ್ರಮ, ಜೀವನಶೈಲಿ ಮತ್ತು ಔಷಧಿಗಳು.

ಈ ಕೆಳಗಿನ ವೈದ್ಯಕೀಯ ಸಮಸ್ಯೆಗೆ ಸಿಲುಕಿರುವಂತಹ ಮಹಿಳೆಯರಲ್ಲಿ ಅಸ್ಥಿರಂಧ್ರತೆ ಸಮಸ್ಯೆಯು ಕಂಡುಬರುವುದು.

•ಸಂಧಿವಾತ

•ಹೊಟ್ಟೆಯ ಉರಿಯೂತ ಸಮಸ್ಯೆ

•ಕಿಡ್ನಿ ಅಥವಾ ಯಕೃತ್ ಸಮಸ್ಯೆ

•ಉದರದ ಕಾಯಿಲೆ

•ಚರ್ಮದ ಕ್ಷಯ

•ಬಹು ಮೈಲೋಮಾಗಳು

•ಕ್ಯಾನ್ಸರ್

ಮಹಿಳೆಯರಲ್ಲಿ ಅಸ್ಥಿರಂಧ್ರತೆ ಪತ್ತೆ ಮಾಡುವುದು ಹೇಗೆ

ವೈದ್ಯರು ನಿಮ್ಮ ಕೌಟುಂಬಿಕ ಇತಿಹಾಸದ ಬಗ್ಗೆ ಕೇಳುವರು ಮತ್ತು ಇತರ ಕೆಲವೊಂದು ಅಂಶಗಳಾಗಿರುವಂತಹ ಆಹಾರ ಕ್ರಮ, ಜೀವನಶೈಲಿ ಮತ್ತು ಅಭ್ಯಾಸಗಳು.

ಅಸ್ಥಿರಂಧ್ತೆಯ ಸಂಶಯ ಬಂದರೆ ಆಗ ಸ್ಕ್ಯಾನಿಂಗ್ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು. ಇದರೊಂದಿಗೆ ಮೂಳೆಯ ಖನಿಜಾಂಶಗಳ ಮಾಪನ ಕೂಡ. ಮೂಳೆ ಸಾಂದ್ರತೆಯ ಸ್ಕ್ಯಾನಿಂಗ್ ಮಾಡುವ ವೇಳೆ ಡ್ಯುಯುಲ್ ಎನರ್ಜಿ ಎಕ್ಸ್ ರೇ ಅಬ್ಸಾರ್ಪ್ಟಿಯೊಮೆಟ್ರಿ(ಡಿಇಎಕ್ಸ್ ಎ) ಮತ್ತು ಮೂಳೆಯ ಡೆನ್ಸಿಟೋಮೆಟ್ರಿ ಬಳಸಲಾಗುವುದು. ಇದನ್ನು ಪತ್ತೆ ಮಾಡಲು ಎರಡು ಸಾಧನಗಳನ್ನು ಬಳಸಿಕೊಳ್ಳಲಾಗುತ್ತದೆ. ಮೊದಲಿಗೆ ಸೆಂಟ್ರಲ್ ಡಿವೈಸ್(ಆಸ್ಪತ್ರೆಯಲ್ಲಿ ಮಾಡುವ ಸ್ಕ್ಯಾನ್) ಮತ್ತು ಪೆರಿಫೆರಲ್ ಡಿವೈಸ್(ಮೊಬೈಲ್ ಮೆಷಿನ್)ನ್ನು ಬಳಸುವರು. ಡೆಕ್ಸಾ ಸ್ಕ್ಯಾನ್ ನ ವರದಿಯನ್ನು ಡೆಕ್ಸಾ ಟಿ ಸ್ಕೋರ್ ಅಥವಾ ಝಡ್ ಸ್ಕೋರ್ ಎಂದು ಹೇಳಲಾಗುತ್ತದೆ. ಈ ವರದಿಯಲ್ಲಿ ಹದಿಹರೆಯದವರ ಮೂಳೆ ದ್ರವ್ಯರಾಶಿಯ ಜತೆಗೆ ಹೋಲಿಕೆ ಮಾಡಲಾಗುತ್ತದೆ. ಟಿ ಸ್ಕೋರ್ 1.0 ಕ್ಕಿಂತ ಹೆಚ್ಚಾಗಿದ್ದರೆ ಅದು ಸಾಮಾನ್ಯ, -1.0-2.5 ಕ್ಕಿಂತ ಅದು ಸಣ್ಣ ಮಟ್ಟದ ಮೂಳೆ ನಾಶ ಮತ್ತು -2.5 ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಅದು ಅಸ್ಥಿರಂಧ್ರತೆ ಎಂದು ಹೇಳಬಹುದು.

ಮಹಿಳೆಯರಲ್ಲಿ ಅಸ್ಥಿರಂಧ್ರತೆಗೆ ಚಿಕಿತ್ಸೆಗಳು

ಅಸ್ಥಿರಂಧ್ರತೆಯು ತೀವ್ರವಾಗಿ ಇಲ್ಲದೆ ಇದ್ದರೆ ಅದಕ್ಕೆ ಯಾವುದೇ ರೀತಿಯ ಔಷಧಿಯು ಬೇಕೆಂದಿಲ್ಲ. ಆದರೆ ಇದನ್ನು ನಿಭಾಯಿಸಬೇಕು ಮತ್ತು ಅಪಾಯವನ್ನು ತಪ್ಪಿಸುವಲ್ಲಿ ಎಚ್ಚರಿಕೆ ವಹಿಸಬೇಕು. ಇದಕ್ಕೆ ಮೂಲ ಕಾರಣವನ್ನು ಹುಡುಕಿದರೆ, ಆಗ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

ಬಿಸ್ಫಾಸ್ಫೊನೇಟ್‌ಗಳು ಔಷಧಿಯನ್ನು ಹೆಚ್ಚಾಗಿ ನೀಡಲಾಗುತ್ತದೆ. ಇದರಿಂದ ಕೆಲವೊಂದು ಅಡ್ಡಪರಿಣಾಮಗಳಾಗಿರುವ ವಾಕರಿಕೆ, ಹೊಟ್ಟೆ ನೋವು ಮತ್ತು ಎದೆ ಉರಿ ಸಮಸ್ಯೆಯು ಕಾಣಿಸಬಹುದು. ಇದರ ಹೊರತಾಗಿ ಈಸ್ಟ್ರೋಜನ ಅಗೊನಿಸ್ಟ್ ಅಥವಾ ಅಂಟಗೋನಿಸ್ಟ್, ಇದನ್ನು ಈಸ್ಟ್ರೋಜನ್ ರೆಸೆಪ್ಟರ್ ಮೊಡ್ಯುಲೇಟರ್ (ಎಸ್ ಈಆರ್ ಎಂಎಸ್) ಎಂದೂ ಕರೆಯಲಾಗುವುದು. ಮಹಿಳೆಯರಿಗೆ ಕ್ಯಾಲ್ಸಿಟೋನಿನ್, ಪ್ಯಾರಾಥೈರಾಯ್ಡ್ ಹಾರ್ಮೋನ್ ಮತ್ತು ಮೊನೊಕ್ಲೋನಲ್ ಆಂಟಿಬಾಡಿಸ್ ಸೂಚಿಸಲಾಗುತ್ತದೆ.

ಈ ಪರಿಸ್ಥಿತಿಯನ್ನು ನಿಧಾನವಾಗಿಸುವುದೇ ಚಿಕಿತ್ಸೆಯ ಗುರಿಯಾಗಿರುವುದು. ಆರೋಗ್ಯಕಾರಿ ಮೂಳೆಯ ಖನಿಜ ಸಾಂದ್ರತೆ ಮತ್ತು ಮೂಳೆ ದ್ರವ್ಯರಾಶಿ, ಮುರಿತ ತಡೆಯವುದು ಮತ್ತು ನೋವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಮಹಿಳೆಯರಲ್ಲಿ ಅಸ್ಥಿರಂಧ್ರತೆ ತಡೆಯುವುದು ಹೇಗೆ

ಕೆಲವೊಂದು ಕ್ರಮಗಳನ್ನು ಅನುಸರಿಸಿಕೊಂಡು ಹೋದರೆ ಆಗ ಈ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿದೆ.

•ಧೂಮಪಾನ ತ್ಯಜಿಸಿ.

•ಅತಿಯಾಗಿ ಆಲ್ಕೋಹಾಲ್ ಸೇವಿಸೇಬೇಡಿ.

•ಬೀಳದಂತೆ ಎಚ್ಚರಿಕೆ ವಹಿಸಿ.

•ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಇರುವ ಆಹಾರ ಸೇವಿಸಿ.

•ತೂಕ ಕಳೆದುಕೊಳ್ಳುವ ವ್ಯಾಯಾಮ ಮಾಡಿ. ನಡೆಯಿರಿ.

•ಸಮತೋಲನ ಮತ್ತು ಸ್ಥಿತಿಸ್ಥಾಪಕತ್ವದ ವ್ಯಾಯಾಮವಾಗಿರುವ ಯೋಗ ಮಾಡಿ.

ಅಂತಿಮ ಮಾತು

ಅಸ್ಥಿರಂಧ್ರತೆ ಸಮಸ್ಯೆ ಎನ್ನುವುದು ಕೇವಲ ವಯಸ್ಸಾದ ಮಹಿಳೆಯರಲ್ಲಿ ಮಾತ್ರ ಕಂಡುಬರುವುದಿಲ್ಲ. ಇದು ಹದಿಹರೆಯದ ಮಹಿಳೆಯರಲ್ಲೂ ಬರಬಹುದು. ಋತುಬಂಧಕ್ಕೆ ಮೊದಲೇ ಇದು ಕಾಣಿಸಿಕೊಳ್ಳಬಹುದು. 20, 30 ಮತ್ತು 40ರ ಹರೆಯದ ಮಹಿಳೆಯರಲ್ಲಿ ಇದು ಕಾಣಿಸಿಕೊಳ್ಳಬಹುದು. ಕೆಲವು ಗರ್ಭಿಣಿಯರಲ್ಲಿ ತಾತ್ಕಾಲಿಕವಾದ ಅಸ್ಥಿರಂಧ್ರತೆ ಸಮಸ್ಯೆಯು ಕಾಣಿಸಬಹುದು. ಇದು ತುಂಬಾ ಅಪತೂಪದ ಸಮಸ್ಯೆ ಮತ್ತು ಹೆರಿಗೆ ಬಳಿಕ ಇದು ಮಾಯವಾಗುವುದು.

 
ಹೆಲ್ತ್