Back
Home » ಬಾಲಿವುಡ್
ಪತಿಯ ಕ್ಯಾಮರಾದಲ್ಲಿ ಸೆರೆಯಾದ ಹಾಟ್ ಹಾಟ್ ಪ್ರಿಯಾಂಕಾ ಚೋಪ್ರಾ
Oneindia | 8th Jul, 2019 01:56 PM

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಯು ಎಸ್ ಎ ಗಾಯಕ ನಿಕ್ ಜೋನಸ್ ಮದುವೆಯಾದ ಮೇಲೆ ಬಿ ಟೌನ್ ಕಡೇ ಮುಖ ಮಾಡಿಲ್ಲ. ಪತಿಯ ಜೊತೆ ಜಾಲಿ ಟ್ರಿಪ್ ಮಾಡುತ್ತ, ಎಂಜಾಯ್ ಮಾಡುತ್ತಿರುವ ಪ್ರಿಯಾಂಕಾ, ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಹಾಟ್ ಫೋಟೋಗಳನ್ನು ಹರಿ ಬಿಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಪ್ರಿಯಾಂಕಾ ಇತ್ತೀಚಿಗೆ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಸ್ವಿಮ್ ಸೂಟ್ ಧರಿಸಿ, ಕೈಯಲ್ಲಿ ಕಾಕ್ ಟೈಲ್ ಹಿಡಿದು, ಸ್ವಿಮಿಂಗ್ ಪೂಲ್ ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ಪಿಗ್ಗಿಯ ಮಾದಕ ಮೈ ಮಾಟದ ಫೋಟೋಗಳನ್ನು ಸೆರೆಹಿಡಿದಿದ್ದಾರೆ ಪತಿ ನಿಕ್ ಜೋನಸ್.

ಪ್ರಿಯಾಂಕಾ ಹೇರ್ ಸ್ಟೈಲ್ ಬಗ್ಗೆ ನಿಲ್ಲದ ಟ್ರೋಲ್, ವರ್ಮಾ ಹೇಳಿದ್ದೇನು?

ಪತಿ ಸೆರೆ ಹಿಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ ಪ್ರಿಯಾಂಕಾ. ಪ್ರಿಯಾಂಕಾರ ಈ ಅವತಾರ ಕಂಡು ನೆಟ್ಟಿಗರು ತರಹೇವಾರಿ ಕಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಪ್ರಿಯಾಂಕಾ ಸಖತ್ ಹಾಟ್ ಎಂದು ಹೇಳುತ್ತಿದ್ದರೆ ಇನ್ನು ಕೆಲವರು ಪಿಗ್ಗಿಯ ಕಾಲೆಯುತ್ತಿದ್ದಾರೆ.

ಪ್ರಿಯಾಂಕಾ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ರೆ ಪತಿ ನಿಕ್ ಜೋನಸ್ ಇಬ್ಬರು ಡಾನ್ಸ್ ಮಾಡುತ್ತಿರುವ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಸ್ಲೋ ಮೋಷನ್ ನಲ್ಲಿ ಹೆಜ್ಜೆ ಹಾಕುತ್ತ ಇಬ್ಬರು ತಬ್ಬಿಕೊಳ್ಳುವ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಿಯಾಂಕಾ ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿಲ್ಲವಾದ್ರು ಸಾಮಾಜಿಕ ಜಾಲತಾಣದ ಮೂಲಕ ಸದಾ ಸದ್ದು ಮಾಡುತ್ತಿದ್ದಾರೆ.

   
 
ಹೆಲ್ತ್