Back
Home » ಗಾಸಿಪ್
'ಕುರುಕ್ಷೇತ್ರ'ಗೆ 100 ಕೋಟಿ ? : ಬಜೆಟ್ ಬಗ್ಗೆಯೇ ದೊಡ್ಡ ಚರ್ಚೆ
Oneindia | 8th Jul, 2019 04:32 PM
  • 100 ಕೋಟಿ ಬಜೆಟ್ ಆಗಿದ್ಯಾ?

    'ಕುರುಕ್ಷೇತ್ರ' ಟ್ರೇಲರ್ ನಲ್ಲಿ ಸಿನಿಮಾದ ಎಲ್ಲ ವಿವರ ನೀಡಲಾಗಿದೆ. ಅದರಲ್ಲಿ ಬಜೆಟ್ 1 ಬಿಲಿಯನ್ (100 ಕೋಟಿ) ಎಂದು ಹಾಕಲಾಗಿದೆ. ಸಿನಿಮಾದ ಬಜೆಟ್ ಹೆಚ್ಚು ಎಂದು ಗೊತಿತ್ತೇ ವಿನಃ, ನೂರು ಕೋಟಿ ಬಜೆಟ್ ನಲ್ಲಿ ನಿರ್ಮಾಣ ಆಗುತ್ತಿದೆ ಎಂದು ತಿಳಿದಿರಲಿಲ್ಲ. ಹೀಗಾಗಿ, ಇದು ಅಚ್ಚರಿಗೆ ಕಾರಣವಾಗಿದ್ದು, ನಂಬಲು ಕಷ್ಟ ಆಗುತ್ತಿದೆ.


  • 150 ಕೋಟಿ ಅಂತಲೂ ಸುದ್ದಿಯಾಗಿದೆ

    ಕೆಲವು ಕಡೆ 'ಕುರುಕ್ಷೇತ್ರ' ಬಜೆಟ್ 150 ಕೋಟಿ ಅಂತಲೂ ಸುದ್ದಿಯಾಗಿದೆ. ಗೂಗಲ್ ನಲ್ಲಿ 'ಕುರುಕ್ಷೇತ್ರ' ಬಜೆಟ್ ಎಷ್ಟು ಎಂದು ನೋಡಿದರೆ 150 ಕೋಟಿ ಎಂದು ತೋರಿಸುತ್ತದೆ. ಹೀಗಾಗಿ, ಇದು ನೂರು ಕೋಟಿ ಸಿನಿಮಾನೋ ಅಥವಾ ನೂರೈವತ್ತು ಕೋಟಿ ಸಿನಿಮಾನೋ ಎನ್ನುವ ಗೊಂದಲ ಮೂಡಿದೆ.

    'ಕುರುಕ್ಷೇತ್ರ' ಡಬ್ಬಾ ಟ್ರೇಲರ್ ಎಂದು 'ಮುನಿ'ಸಿಕೊಂಡ ದರ್ಶನ್ ಫ್ಯಾನ್ಸ್!


  • ಬಜೆಟ್ ಜಾಸ್ತಿಯಾಗಲು ಕಾರಣ ಏನು?

    'ಕುರುಕ್ಷೇತ್ರ' ಒಂದು ಪೌರಾಣಿಕ ಸಿನಿಮಾವಾಗಿದ್ದು, ಚಿತ್ರದ ಬಜೆಟ್ ಹೆಚ್ಚಾಗುವುದು ಸಾಮಾನ್ಯ. ಎಲ್ಲ ಕಲಾವಿದರ ಸಂಭಾವನೆ, ರಾಮೋಜಿ ಫಿಲ್ಮ್ಸ್ ಸಿಟಿಯಲ್ಲಿ ಚಿತ್ರೀಕರಣ, ಅದ್ದೂರಿ ಸೆಟ್ ಗಳು, ಗ್ರಾಫಿಕ್ಸ್, 2D ಮತ್ತು 3D ಯಲ್ಲಿ ಶೂಟಿಂಗ್, ಪ್ರಮೋಷನ್ಸ್ ಹೀಗೆ ಈ ಕಾರಣಗಳಿಂದ ಸಿನಿಮಾದ ಬಜೆಟ್ ದೊಡ್ಡದಾಗಿದೆ.


  • 'ಕೆಜಿಎಫ್' ಗಿಂತ ದೊಡ್ಡ ಬಜೆಟ್

    ಇದುವರೆಗೆ ಕನ್ನಡದಲ್ಲಿ ಅತಿ ದೊಡ್ಡ ಸಿನಿಮಾ ಎಂದು ಕರೆಸಿಕೊಂಡಿದ್ದು, 'ಕೆಜಿಎಫ್'. ಆ ಸಿನಿಮಾಗೆ ವಿಜಯ್ ಕಿರಗಂದೂರು ಬಂಡವಾಳ ಹಾಕಿದ್ದು, 50 ರಿಂದ 80 ಕೋಟಿಯಲ್ಲಿ ಚಿತ್ರ ನಿರ್ಮಾಣ ಆಗಿದೆ ಎಂಬ ಲೆಕ್ಕಾಚಾರ ಇದೆ. ಆದರೆ, ಆ ಬಜೆಟ್ ಅನ್ನು 'ಕುರುಕ್ಷೇತ್ರ' ಹಿಂದೆ ಹಾಕಿದೆ. ಈ ಮೂಲಕ ಕನ್ನಡದ ಅತಿ ಹೆಚ್ಚು ಬಜೆಟ್ ನ ಸಿನಿಮಾ ಇದಾಗಿದೆ.

    ಅದ್ದೂರಿಯಾಗಿ ನೆರವೇರಿತು 'ಕುರುಕ್ಷೇತ್ರ' ಆಡಿಯೋ ಲಾಂಚ್


  • ಬಜೆಟ್ ಇದ್ದರೂ, ಭರವಸೆ ಮೂಡಿಸದ ಟ್ರೇಲರ್

    ಇಷ್ಟೊಂದು ದೊಡ್ಡ ಬಜೆಟ್ ಇದ್ದರೂ, ಸಿನಿಮಾ ಟ್ರೇಲರ್ ಗೆ ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ಸ್ ಜಾಸ್ತಿ ಬರುತ್ತಿವೆ. ದರ್ಶನ್ ಅಭಿಮಾನಿಗಳಿಗೆ ಸಿನಿಮಾ ಟ್ರೇಲರ್ ಇಷ್ಟ ಆಗಿಲ್ಲ. ನಿರೀಕ್ಷೆಗೆ ತಕ್ಕ ಹಾಗೆ ಟ್ರೇಲರ್ ಮೂಡಿ ಬಂದಿಲ್ಲ. ಹೀಗಾಗಿ, ಸಿನಿಮಾ ಭರವಸೆ ಮೂಡಿಸುವಲ್ಲಿ ಎಡವಿದೆ.
ನಿನ್ನೆ ಬಿಡುಗಡೆಯಾದ 'ಕುರುಕ್ಷೇತ್ರ' ಟ್ರೇಲರ್ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲಿಯೂ ಬಜೆಟ್ ಬಗ್ಗೆ ಎಲ್ಲರೂ ಮಾತನಾಡುವ ಹಾಗೆ ಆಗಿದೆ.

ಒಂದು ಸಿನಿಮಾದ ಬಜೆಟ್ ಎಷ್ಟು..? ಆ ಸಿನಿಮಾದಿಂದ ಬರುವ ಹಣ ಎಷ್ಟು ಎನ್ನುವುದು ಅಭಿಮಾನಿಗಳಲ್ಲಿ ಇರುವ ಸಾಮಾನ್ಯ ಕುತೂಹಲ. ಅದೇ ರೀತಿ 'ಕುರುಕ್ಷೇತ್ರ' ಸಿನಿಮಾದ ಬಂಡವಾಳ ಎಷ್ಟು ಎನ್ನುವ ಪ್ರಶ್ನೆ ಕೆಲವರಿಗೆ ಇತ್ತು.

ರಾಕ್ ಲೈನ್ ವೆಂಕಟೇಶ್ ಪಾಲಾದ ಕುರುಕ್ಷೇತ್ರ ವಿತರಣೆ ಹಕ್ಕು

'ಕುರುಕ್ಷೇತ್ರ' ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದ ನಿರ್ಮಾಪಕ ಮುನಿರತ್ನ ಅದರ ಮೊತ್ತವನ್ನು ಮಾತ್ರ ಬಹಿರಂಗ ಪಡಿಸಿರಲಿಲ್ಲ. ಆದರೆ, ಸಿನಿಮಾದ ಟ್ರೇಲರ್ ನೊಂದಿಗೆ ಬಜೆಟ್ ಮೊತ್ತವನ್ನು ಕೂಡ ಘೋಷಣೆ ಮಾಡಿದ್ದಾರೆ. ಆದರೆ, ಈಗ ಅದರ ಬಗ್ಗೆಯೇ ಚರ್ಚೆ ಶುರುವಾಗಿದೆ. ಮುಂದೆ ಓದಿ..

   
 
ಹೆಲ್ತ್