Back
Home » ಇತ್ತೀಚಿನ
ಅಗ್ಗದ ಬೆಲೆಯ 'ಇನ್‌ಫಿನಿಕ್ಸ್‌ ಹಾಟ್‌ 7' ಫೋನ್‌ ಸೇಲ್ ಡೇಟ್‌ ಫಿಕ್ಸ್‌!
Gizbot | 10th Jul, 2019 10:08 AM
 • ಡಿಸೈನ್‌ ಮತ್ತು ಡಿಸ್‌ಪ್ಲೇ

  ಈ ಸ್ಮಾರ್ಟ್‌ಫೋನ್‌ 720x1500 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.19 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇ ಅನುಪಾತವು 19:9 ಆಗಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯವು 271ppi ಆಗಿದ್ದು, ಶೇ. 83.5% ನಷ್ಟು ಡಿಸ್‌ಪ್ಲೇ ಟು ಬಾಹ್ಯ ಬಾಡಿ ನಡುವಿನ ಅಂತರ ಆಗಿದೆ. ಹಾಗೆಯೇ 157 x 75.7 x 8 mm ಸುತ್ತಳತೆಯನ್ನು ಹೊಂದಿದೆ.


 • ಪ್ರೊಸೆಸರ್‌ ಶಕ್ತಿ

  ಇನ್‌ಫಿನಿಕ್ಸ್‌ ಹಾಟ್‌ 7' ಸ್ಮಾರ್ಟ್‌ಫೋನ್‌ ಆಕ್ಟಾಕೋರ್ ಮೀಡಿಯಾ ಟೆಕ್‌ ಹಿಲಿಯೊ P25 ಪ್ರೊಸೆಸರ್‌ ಶಕ್ತಿಯನ್ನು ಹೊಂದಿದ್ದು, ಜೊತೆಗೆ ಆಂಡ್ರಾಯ್ಡ್‌ 9.0 ಪೈ ಓಎಸ್‌ ಇದರಲ್ಲಿ ಕಾರ್ಯ ನಿರ್ವಹಿಸಲಿದೆ. ಇದರೊಂದಿಗೆ 4 GB RAM ಸಾಮರ್ಥ್ಯವಿದ್ದು, 64 GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಪಡೆದಿದೆ. ಬಾಹ್ಯಾವಾಗಿ 256 GB ವರೆಗೂ ವಿಸ್ತರಿಸುವ ಅವಕಾಶವಿದೆ.


 • ಕ್ಯಾಮೆರಾ ಸ್ಪೆಷಲ್

  ಇನ್‌ಫಿನಿಕ್ಸ್‌ ಹಾಟ್‌ 7' ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸಾಮರ್ಥ್ಯದಲ್ಲಿದೆ ಮತ್ತು ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಸೆಲ್ಫಿಗಾಗಿ ಡ್ಯುಯಲ್‌ ಕ್ಯಾಮೆರಾ ನೀಡಲಾಗಿದ್ದು, ಅವುಗಳು ಕ್ರಮವಾಗಿ 13ಎಂಪಿ ಮತ್ತು 2ಎಂಪಿ ಸಾಮರ್ಥ್ಯದಲ್ಲಿವೆ.


 • ಬ್ಯಾಟರಿ ಪವರ್‌

  4000 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿರುವ ಇನ್‌ಫಿನಿಕ್ಸ್‌ ಹಾಟ್‌ 7' ಸ್ಮಾರ್ಟ್‌ಫೋನ್‌ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆ, ಬ್ಲೂಟೂತ್, Wi-Fi 802, ಹಾಟ್‌ಸ್ಪಾಟ್‌, GPS, ಯುಎಸ್‌ಬಿ, ಮೈಕ್ರೋಯುಎಸ್‌ಬಿ ಸೇರಿದಂತೆ ಅಗತ್ಯ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ.


 • ಲಭ್ಯತೆ ಮತ್ತು ಬೆಲೆ

  ಇನ್‌ಫಿನಿಕ್ಸ್‌ ಹಾಟ್‌ 7' ಸ್ಮಾರ್ಟ್‌ಫೋನ್‌ ಇದೇ ಜುಲೈ 15ರಂದು ಫ್ಲಿಪ್‌ಕಾರ್ಟ್‌ ಜಾಲತಾಣದಲ್ಲಿ ಖರೀದಿಗೆ ದೊರೆಯಲಿದ್ದು, ಒಟ್ಟು ಮೂರು ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೇ ಮಿಡ್‌ನೈಟ್‌ ಬ್ಲಾಕ್‌, ಆಕ್ವಾ ಬ್ಲೂ ಮತ್ತು ಮೋಚ್‌ ಬ್ರೌನ್‌ ಬಣ್ಣಗಳ ಆಯ್ಕೆ ಆಗಿದ್ದು, ಹಾಗೆಯೇ ಈ ಸ್ಮಾರ್ಟ್‌ಫೋನ್‌ ಬೆಲೆಯು 7,999ರೂ.ಗಳು ಆಗಿದೆ.
ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಅಗ್ಗದ ಸ್ಮಾರ್ಟ್‌ಫೋನ್‌ ಎಂಟ್ರಿ ಕೊಟ್ಟಿದ್ದು, ಈ ಲಿಸ್ಟ್‌ಗೆ ಈಗ 'ಇನ್‌ಫಿನಿಕ್ಸ್‌ ಹಾಟ್ 7' ಸ್ಮಾರ್ಟ್‌ಫೋನ್‌ ಸಹ ಸೇರ್ಪಡೆ ಆಗಲು ತಯಾರಾಗಿದೆ. ಫ್ಲಿಫ್‌ಕಾರ್ಟ್‌ ವೇದಿಕೆ ಸಜ್ಜಾಗಿದೆ. ಇದೇ ಜುಲೈ 15ರಂದು ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಆರಂಭವಾಗಲಿದ್ದು, ಬೆಲೆಯು ಕೇವಲ 7,999ರೂ.ಗಳು ಆಗಿದೆ.

ಹೌದು, ಇನ್‌ಫಿನಿಕ್ಸ್‌ ಕಂಪನಿಯು ಇತ್ತೀಚಿಗೆ 'ಇನ್‌ಫಿನಿಕ್ಸ್‌ ಹಾಟ್‌ 7' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ ಇದೇ ಜುಲೈ 15ರಂದು ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್ ಆರಂಭಿಸಲಿದೆ. 4GB RAM ಮತ್ತು 64GB ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಆಕ್ಟಾಕೋರ್ ಮೀಡಿಯಾ ಟೆಕ್‌ ಹಿಲಿಯೊ P25 ಪ್ರೊಸೆಸರ್‌ ಶಕ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದರೇ 'ಇನ್‌ಫಿನಿಕ್ಸ್‌ ಹಾಟ್‌ 7' ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಎಂಬುವುದನ್ನು ಮುಂದೆ ನೋಡೋಣ ಬನ್ನಿ.

ಓದಿರಿ : BSNLನಿಂದ ಬಂಪರ್ ಕೊಡುಗೆ : ಪ್ರತಿದಿನ 2.2GB ಡೇಟಾ ಉಚಿತ!

   
 
ಹೆಲ್ತ್