Back
Home » Business
ಎಸ್ಬಿಐ ಗ್ರಾಹಕರಿಗೆ ಗುಡ್ ನ್ಯೂಸ್!
Good Returns | 10th Jul, 2019 01:11 PM

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ನೀಡಿದೆ.

ಎಸ್ಬಿಐ ಗ್ರಾಹಕರಿಗೆ ಗೃಹ ಹಾಗು ವಾಹನ ಸೇರಿದಂತೆ ಎಲ್ಲ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 0.05 ರಷ್ಟು ಕಡಿತ ಮಾಡಿದೆ.

ಆರ್ಬಿಐ ನಿಗದಿಪಡಿಸಿದ ರೆಪೋ ದರಕ್ಕೆ ಅನುಗುಣವಾಗಿ ಬಡ್ಡಿ ದರವನ್ನು ನಿಗದಿಗೊಳಿಸುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿತ್ತು. ಅದರಂತೆ ಈಗ ಬಡ್ಡಿದರವನ್ನು ಕಡಿಮೆ ಮಾಡಿದೆ.

ಎಲ್ಲಾ ಅವಧಿಗಳ ಸಾಲಗಳ ಮೇಲಿನ ಬಡ್ಡಿದರ ಬುಧವಾರದಿಂದಲೇ ಜಾರಿ ಬರುವಂತೆ ಕಡಿಮೆ ಮಾಡಿದೆ. ಒಂದು ವರ್ಷದ ಅವಧಿಯ ಎಂಸಿಎಲ್ಆರ್ ಶೇ. 8.45-8.40ಕ್ಕೆ ಇಳಿಕೆಯಾಗಿದೆ.

ಆರ್ಬಿಐ ರೆಪೋ ದರ ಇಳಿಕೆ ಮಾಡಿದರೂ ಈ ಮೊದಲು ಬ್ಯಾಂಕುಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಆದರೆ ರೆಪೋ ದರ ಏರಿಕೆಯಾದಾಗ ಮಾತ್ರ ಬಡ್ಡಿ ದರ ಮಾತ್ರ ಏರಿಕೆ ಮಾಡುತ್ತಿದ್ದವು.

   
 
ಹೆಲ್ತ್