Back
Home » ಬಾಲಿವುಡ್
ಬಾಲಿವುಡ್ ನಟಿ ಕಂಗನಾಗೆ ನಿಷೇದ ಹೇರಲು ಪತ್ರಕರ್ತರ ನಿರ್ಧಾರ
Oneindia | 10th Jul, 2019 01:45 PM

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಂದು ವಿವಾದದಲ್ಲಿ ಸಿಲುಕಿ ಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ವೀನ್ ನಟಿ ಸಿನಿಮಾಗಳಿಗಿಂದ ಹೆಚ್ಚಾಗಿ ವಿವಾದಗಳ ಮೂಲಕವೆ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಗನಾ ಪತ್ರಕರ್ತರ ಜೊತೆ ಜಗಳ ಮಾಡಿದ ಹಿನ್ನಲೆಯಲ್ಲಿ, ಕಂಗನಾ ಅವರಿಗೆ ಸಂಬಂದಿಸಿದ ಯಾವುದೆ ವೀಡಿಯಾ ಸುದ್ದಿಯನ್ನು ಕವರೇಜ್ ಮಾಡದಂತೆ ಎಂಟಟೈನ್ ಮೆಂಟ್ ಜರ್ನಲಿಸ್ಟ್ ಗಿಲ್ಟ್ ಆಫ್ ಇಂಡಿಯಾ ನಿಷೇದ ಹೇರಲು ನಿರ್ಧರಿಸಿದೆ.

ಕಂಗನಾ ಅಭಿನಯದ 'ಜಡ್ಜ್ ಮೆಂಟಲ್ ಹೈ ಕ್ಯಾ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಸಿನಿಮಾದ ಹಾಡುಗಳ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಕಂಗನಾ ಮತ್ತು ಪತ್ರಕರ್ತರ ನಡುವೆ ವಾಗ್ವಾದ ನಡೆದಿದೆ. ಪತ್ರಕರ್ತ ಜಸ್ಟಿನ್ ರಾವ್, ಕಂಗನಾ ಅವರಗೆ ಪ್ರಶ್ನೆ ಕೇಳಲು ಮುಂದಾದಾಗ ಕಂಗನಾ ಜಸ್ಟಿನ್ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಂಗನಾಗೆ ಭಯಪಟ್ಟು ಸಿನಿಮಾ ರಿಲೀಸ್ ಡೇಟ್ ಬದಲಾಯಿಸಿದ್ರಾ ಹೃತಿಕ್?

ಈ ಹಿಂದೆ ಕಂಗನಾ ಅಭಿನಯದ 'ಮಣಿಕರ್ಣಿಕ' ಸಿನಿಮಾದ ಸಮಯದಲ್ಲಿ ಪತ್ರಕರ್ತ ಜಸ್ಟಿನ್, ಕಂಗನಾ ವಿರುದ್ಧ ಸುದ್ದಿ ಪ್ರಕಟ ಮಾಡಿರುವ ಬಗ್ಗೆ ಕಂಗನಾ ಗರಂ ಆಗಿದ್ದಾರೆ. ಆ ಸಿನಿಮಾ ಅಷ್ಟು ಕೆಟ್ಟದಾಗಿದೆಯಾ, ರಾಷ್ಟ್ರೀಯತೆಯ ಬಗ್ಗೆ ಸಿನಿಮಾ ಮಾಡಿದ್ದೆ ತಪ್ಪಾ? ಎಂದು ಜಸ್ಟಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಂಗನಾ ಮಾತಿಗೆ ಪ್ರತಿಕ್ರಿಯಿಸಿದ ಜಸ್ಟಿನ್ ಪತ್ರಕರ್ತರ ಬಾಯಿ ಮುಚ್ಚಿಸಲು ಹೋಗಬೇಡಿ. ನೆಗೆಟಿವ್ ಸುದ್ದಿ ಮಾಡಿದ ಕಾರಣಕ್ಕೆ ನನ್ನ ಬಗ್ಗೆ ಅಪಪ್ರಚಾರದ ಅಭಿಯಾನ ಮಾಡಿದ್ದೀರಾ ಕಂಗನಾ ಅವರನ್ನು ಆರೋಪಿಸಿದ್ದಾರೆ. ಇಬ್ಬರ ಜಗಳ ತಾರಕ್ಕೇರಿ ಕೊನೆಗೆ ಕಂಗನಾ ಕ್ಷಮೆಯಾಚಿಸಬೇಕೆಂದು ಪತ್ರಕರ್ತರು ಪಟ್ಟು ಹಿಡಿದಿದ್ದಾರೆ. ಆದ್ರೆ ಕಂಗನಾ ಕ್ಷಮೆಯಾಚಿಸಲು ಒಪ್ಪಿಕೊಂಡಿಲ್ಲ. ಒಂದುವೇಳೆ ಕಂಗನಾ ಕ್ಷಮೆ ಕೇಳದಿದ್ದರೆ ಅವರಿಗೆ ಸಂಬಂದಿಸಿದ ಸುದ್ದಿಯನ್ನು ಕವರೇಜ್ ಮಾಡದಂತೆ ನಿರ್ಧಾರ ಮಾಡಿದ್ದಾರೆ ಪತ್ರಕರ್ತರು.

   
 
ಹೆಲ್ತ್